AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿನ ಭವಿಷ್ಯ: ಇಂದು ಈ ರಾಶಿಯವರು ಆರ್ಥಿಕ ವ್ಯವಹಾರದ ಮಧ್ಯ ಸಿಕ್ಕಿ ಒದ್ದಾಡುವರು…

ಅಕ್ಟೋಬರ್ 13ರ ಇಂದಿನ ರಾಶಿ ಭವಿಷ್ಯದ ಪ್ರಕಾರ, ಕೆಲವು ರಾಶಿಗಳಾದ ಧನು, ವೃಷಭ ಮತ್ತು ಮಿಥುನ ರಾಶಿಯವರು ಆರ್ಥಿಕ ವ್ಯವಹಾರಗಳು, ಸಂಬಂಧಗಳು ಮತ್ತು ವೈಯಕ್ತಿಕ ಸವಾಲುಗಳನ್ನು ಎದುರಿಸಬೇಕಾಗಬಹುದು. ಮಕರ ರಾಶಿಗೆ ಲಾಭವಿರಲಿದ್ದು, ಸಿಂಹ ರಾಶಿಗೆ ಸಾಮಾಜಿಕ ಗೌರವ ಸಿಗಲಿದೆ. ಪ್ರೀತಿ, ವೃತ್ತಿ ಮತ್ತು ಕುಟುಂಬದ ಕುರಿತಾದ ನಿಖರ ಭವಿಷ್ಯವನ್ನು ಇಲ್ಲಿ ತಿಳಿಯಿರಿ.

ದಿನ ಭವಿಷ್ಯ: ಇಂದು ಈ ರಾಶಿಯವರು ಆರ್ಥಿಕ ವ್ಯವಹಾರದ ಮಧ್ಯ ಸಿಕ್ಕಿ ಒದ್ದಾಡುವರು...
Image Credit source: Google
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Oct 13, 2026 | 3:18 AM

Share

ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ಶರತ್ ಋತುವಿನ ಆಶ್ವಯುಜ ಮಾಸದ ಶುಕ್ಲ ಪಕ್ಷದ ತೃತೀಯಾ ತಿಥಿಯ ಮಂಗಳವಾರದಂದು ಪ್ರತೀಕಾರ, ಅನುಕರಣೆ, ಆರ್ಥಿಕ ಸೋಲು, ಧ್ಯಾನ, ಬೇಸರ, ಕಳೆದುಕೊಳ್ಳುವ ಆತಂಕ ಎಲ್ಲವೂ ಇಂದು ಇರಲಿದೆ.

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ಶರತ್, ಚಾಂದ್ರಮಾಸ : ಆಶ್ವಯುಜ, ಸೌರ ಮಾಸ : ಕನ್ಯಾ, ಮಹಾನಕ್ಷತ್ರ : ಚಿತ್ರಾ, ವಾರ : ಮಂಗಳ, ಪಕ್ಷ : ಶುಕ್ಲ, ತಿಥಿ : ತೃತೀಯಾ, ನಿತ್ಯನಕ್ಷತ್ರ : ವಿಶಾಖಾ, ಯೋಗ : ಪ್ರೀತಿ, ಕರಣ : ಗರಜ, ಸೂರ್ಯೋದಯ – 06 – 10 am, ಸೂರ್ಯಾಸ್ತ – 06 – 00 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:03 – 16:32, ಯಮಗಂಡ ಕಾಲ 09:08 – 10:37, ಗುಳಿಕ ಕಾಲ 12:06 – 13:35

ಶರನ್ನವರಾತ್ರದ ಎರಡನೇ ದಿನ. ಜಗನ್ಮಾತೆಯ ಈ ಸುದಿನ ಎಲ್ಲರಿಗೂ ಶುಭವಾಗಲಿ. ಚಂದ್ರಘಂಟಯಾಗಿ ಸಕಲರ ಸಂಕಟವನ್ನೂ ಸಂಹರಿಸಿ, ಚಂದ್ರನಂತೆ ಎಲ್ಲರಿಗೂ ತಂಪನ್ನು ನೀಡಲಿ.

ಮೇಷ ರಾಶಿ : ನಿಮಗೆ ಸಹಾಯದ ಮನೋಭಾವವು ಅಧಿಕವಾಗಲಿದೆ. ಸಮಯಕ್ಕೆ ಸರಿಯಾಗಿ ಕೆಲಸ ಮಾಡದೇ ಮನೆಯಲ್ಲಿ ನಿಂದನೆ ಸಿಗುವುದು. ಅತಿಯಾದ ಪ್ರೇಮವು ನಿಮಗೆ ಸಾಕೆನಿಸಬಹುದು. ವಾಹನದಿಂದ ಅಪಘಾತವಾಗುವ ಸಾಧ್ಯತೆ ಇದೆ. ಇಂದು ಮೃದು ಮಾತಿನಿಂದ ಹೆಚ್ಚು ಪ್ರಯೋಜನ ಆಗಬಹುದು. ಹೊಸ ಉದ್ಯೋಗವು ಸುಲಭಕ್ಕೆ ಸಿಕ್ಕುವುದು. ನೀವು ಕ್ರೋಧಕ್ಕೆ ವಶವಾದಂತೆ ತೋರಬಹುದು.

ವೃಷಭ ರಾಶಿ : ಬಂಧುಗಳ ನಾನಾ‌ ಪ್ರಶ್ನೆ ತರದ ಪ್ರಶ್ನೆಗಳಿಗೆ ಉತ್ತರಿಸಿ ಸಾಕೆನಿಸುವುದು. ಎಷ್ಟೇ ಪ್ರಯತ್ನಿಸದರೂ ಕೆಲಸವು ಅಡೆತಡೆಗಳಿಂದ ಇದ್ದರೆ ಅದನ್ನು ಬಿಡುವುದು ಉತ್ತಮ. ಮನೆಯ ಕೆಲಸಗಳನ್ನು ನಿರಾಸಕ್ತಿಯು ಇರುವುದು. ಇಂದಿನ ನಿಮ್ಮ ಮಾತು ಅಗೌರವವನ್ನು ಕೊಡುವಂತಹದ್ದೇ ಆಗಿದೆ. ಬಂದಷ್ಟು ಆದಾಯವನ್ನು ಪ್ರೀತಿಯಿಂದ ಸ್ವೀಕರಿಸಿ. ನಿಮ್ಮವರಿಗಾಗಿ ಅಲ್ಪ ಸಮಯವನ್ನಾದರೂ ಕೊಡಬೇಕು ಅನಿಸಬಹುದು.

ಮಿಥುನ ರಾಶಿ : ದಾಂಪತ್ಯದ ವಿರಸವು ಸಾಮರಸ್ಯವಾಗಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗದು. ಸ್ವಪ್ರತಿಷ್ಠೆಯನ್ನು ಎಲ್ಲ ಬಿಡಿವುದು ಉತ್ತಮ. ವ್ಯಾಪಾರದಲ್ಲಿ ಯಾರ ಹಸ್ತಕ್ಷೇಪವನ್ನು ಸಹಿಸಲಾರಿರಿ. ತಂದೆಯ ವಿಚಾರದಲ್ಲಿ ನಿಮಗೆ ಬೇಸರವಾಗಬಹುದು. ನೀವು ನಿರೀಕ್ಷಿಸಿದ ಕೆಲಸದಿಂದ ಯಶಸ್ಸು ಸಿಗಲಿದೆ. ಮಾತನ್ನು ಸರಿಯಾಗಿ ಆಡಿದರೆ ಗೌರವವು ಪ್ರಾಪ್ತವಾಗಬಹುದು. ಭೋಗದ ಕಾರಣಕ್ಕೆ ಹಣವು ಖರ್ಚಾಗುವುದು.

ಕರ್ಕಾಟಕ ರಾಶಿ : ಮಕ್ಕಳಿಂದ ನಿಮಗೆ ಆರ್ಥಿಕ ನೆರವು ಸಿಗಲಿದೆ. ದುರಭ್ಯಾಸವನ್ನು ಬಿಡಲು ಒಬ್ಬೊಬ್ಬರಾಗಿ ಹೇಳಬಹುದು. ನಿಕೃಷ್ಟವಾಗಿಯೂ ನೋಡಲಿದ್ದು ಅಂತಹ ಅಪಮಾನವಾಗುವ ಸಂದರ್ಭದಲ್ಲಿ ನೀವು ಇರಲಾರಿರಿ. ನಿಮ್ಮ ಉತ್ಸಾಹದ ಕೆಲಸವು ಮಾದರಿಯಾಗುವುದು. ಆತ್ಮಾಭಿಮಾನವೇ ಎಲ್ಲದಕ್ಕೂ ಅಡ್ಡಿ ಮಾಡುವುದು. ಸಹೋದರಿಯ ಜೊತೆ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳುವಿರಿ.

ಸಿಂಹ ರಾಶಿ : ನಿದ್ರೆಯು ಸರಿಯಾಗಿ‌ ಆಗದೇ ಎಲ್ಲ ಕಾರ್ಯವೂ ಕಿರಿಕಿರಿ ತರಬಹುದು. ಎಲ್ಲರ ಮೇಲೂ ಕೋಪಗೊಳ್ಳುವಿರಿ. ಮಕ್ಕಳ ಕುರಿತು ನಿಮಗೆ ದೂರುಗಳು ಬರಬಹುದು. ಹಿತಶತ್ರುಗಳಿಂದ ದೂರವಿರುವುದು ಉತ್ತಮ. ಸಾಮಾಜಿಕ ವ್ಯವಸ್ಥೆಯಲ್ಲಿ ತೊಡಗಲು ಅವಕಾಶವು ಸಿಗುವುದು. ನಿಮ್ಮ ಹೆಸರನ್ನು ಬಳಿಸಿಕೊಳ್ಳಲು ಯಾರಿಗೂ ಬಿಡಲಾರಿರಿ. ರಾಜಕಾರಣಿಗಳು ಸಮಾಜದಿಂದ ಗೌರವವನ್ನು ಪಡೆದು ಸಂತೋಷಿಸುವಿರಿ.

ಕನ್ಯಾ ರಾಶಿ : ಸ್ಥಿರಾಸ್ತಿಯ ವಿಕ್ರಯದ ವಿಚಾರದಲ್ಲಿ ಏಕಮುಖವಾದ ಅಭಿಪ್ರಾಯವು ಒಳ್ಳೆಯದಲ್ಲ. ಸ್ನೇಹಿತರು ನಿಮ್ಮ ಮಾರ್ಗವನ್ನು ತಪ್ಪಿಸುವರು. ಶಿಕ್ಷಣ ಕ್ಷೇತ್ರದಲ್ಲಿ ನೀವು ಸಾಧನೆ ಮಾಡಲು, ನಿಮ್ಮ‌ ಕಾರ್ಯವನ್ನು ಗುರುತಿಸಲು ಸಕಾಲ. ನಿಮಗೆ ಬಂದ‌ ಅಪವಾದವನ್ನು ಜಾಣ್ಮೆಯಿಂದ ತಪ್ಪಿಸಿಕೊಳ್ಳುವಿರಿ.‌ ಇಂದು ಪ್ರಭಾವೀ ಜನರ‌ ಜೊತೆ ಅಂತರವನ್ನು ಇಟ್ಟುಕೊಳ್ಳಿ.‌ ಮನೆಯವರ ವರ್ತನೆಗೆ ನಿಮಗೆ ಸಿಟ್ಟು ಬರಬಹುದು. ಸಂಗಾತಿಯ ವಿಚಾರದಲ್ಲಿ ನಿಮಗೆ ಅಸಮಾಧವು ಆಗಬಹುದು.

ತುಲಾ ರಾಶಿ : ಏನನ್ನಾದರೂ ಕಳೆದುಕೊಂಡಲ್ಲಿಯೇ ಹುಡುಕಿದರೆ ಸಿಗಬಹುದು. ನಿಮ್ಮನ್ನು ಗೌರವಿಸಿಲ್ಲ ಎಂಬ ಅಳುಕು ಕಾಣಿಸುಬಹುದು. ಮನಸ್ಸಿಗೆ ಹಿಡಿಸದ ಕೆಲಸವನ್ನು ಮಾಡಲು ಹಿಂಜರಿಯುವಿರಿ. ಕುಟುಂಬದ ಜೊತೆ ಪುಣ್ಯ ಸ್ಥಳಗಳಿಗೆ ಹೋಗುವಿರಿ. ವಿವಾಹದ ಮಾತುಕತೆಯು ನಿಮಗೆ ಸಂತೋಷವನ್ನು ನೀಡದು. ನೆರೆ ಹೊರೆಯ ಜೊತೆ ಕಲಹವಾಗುವುದು. ಮಕ್ಕಳ‌ ಭವಿಷ್ಯದ ಬಗ್ಗೆ ಚಿಂತೆ ಇರುವುದು. ಬೇರೆಯವರ ಬಗ್ಗೆ ನಿಮಗೆ ಅಸೂಯೆ ಬರಬಹುದು.

ವೃಶ್ಚಿಕ ರಾಶಿ : ಹಣವನ್ನು ಹೊಂದಿಸಲು ನಿಮಗೆ ಕಷ್ಟವಾದೀತು. ಸ್ಥಿರಾಸ್ತಿಗಳು ನಿಮಗೆ ಲಾಭವನ್ನು ಕೊಟ್ಟಾವು. ಇಂದಿನ ಆಯಾಸವು ವಿಶ್ರಾಂತಿಯನ್ನು ಕೊಟ್ಟೀತು. ಇನ್ನೊಬ್ಬರಿಂದ ಏನನ್ನಾದರೂ ನಿರೀಕ್ಷಿಸಿ ಅನಂತರ ಬೇಸರಗೊಳ್ಳುವಿರಿ. ನಿಮ್ಮ ಉದ್ಯಮಕ್ಕೆ ಬೇಕಾದವರನ್ನು ಇಂದೇ ಪಡೆಯುವರು.‌ ಮನೆಯಲ್ಲಿ ನಿಮ್ಮ ಸಹಕಾರವು ಪ್ರಶಂಸೆಗೆ ಪಾತ್ರವಾಗುವುದು. ಬಂಧುಗಳ‌ ಬಗ್ಗೆ ನಿಮಗೆ ಪ್ರೀತಿ ಇರುವುದು. ಅಪರಿಚಿತರು ನಿಮ್ಮ ಎಲ್ಲ‌ ವಿಚಾರಗಳನ್ನು ಚರ್ಚಿಸುವರು.

ಧನು ರಾಶಿ : ತಪ್ಪು ತಿಳಿವಳಿಕೆಯಿಂದ ಸಂಬಂಧವು ದೂರಾಗುವ ಸಾಧ್ಯತೆ ಇದೆ. ನಿಮ್ಮ ಆತ್ಮಗೌರವಕ್ಕೆ ತೊಂದರೆ ಆಗುವ ಕಡೆ ನೀವು ಹೋಗಲಾರಿರಿ. ನಿಮಗೆ ನಿಶ್ಚಯಾತ್ಮಕ ಬುದ್ಧಿಯು ಇಂದು ಇರಲಾರದು. ವಿದ್ಯಾರ್ಥಿಗಳಿಗೆ ಓದಿನಲ್ಲಿ ಮನಸ್ಸಿಡಲು ಕಷ್ಟವಾದೀತು. ಅಮೂಲ್ಯ ವಸ್ತುಗಳನ್ನು ನೀವು ಕಳೆದುಕೊಂಡು ಸಂಕಟಪಡುವಿರಿ. ಯಂತ್ರೋಪಕರಣಕ್ಕೆ ಹಣವನ್ನು ಖರ್ಚುಮಾಡುವಿರಿ. ಹಿರಿಯರ ಮೇಲೆ ಗೌರವ ಇರಲಿ. ಗೌರವವನ್ನು ಕೇಳಿಪಡೆಯುವುದಲ್ಲ, ಅದಾಗಿಯೇ ಬರುವಂತೆ ಇರಲಿ.

ಮಕರ ರಾಶಿ : ಅನ್ಯತರ ಮಾತು ಬಹಳ ಹಿತವೆನಿಸದು. ಕಲಾವಿದರು ತಮ್ಮ ಇಂದಿನ‌ ದಿನವನ್ನು ಸಂತೋಷದಿಂದ ಕಳೆಯುವರು. ಆರ್ಥಿಕಲಾಭವು ಇರಲಿದೆ. ವ್ಯಾಪಾರಕ್ಕೆ ಸಂಬಂಧಿಸಿದಂತೆ ತಪ್ಪು ನಿರ್ಧಾರವನ್ನು ತೆಗೆದುಕೊಳ್ಳುವಿರಿ. ತಂಡದಲ್ಲಿ ಉತ್ಸಾಹವು ಇಂದು ಎಲ್ಲರಿಗಿಂತ ಹೆಚ್ಚಿರಲಿದೆ. ಸುಳ್ಳಾಡಲು ಹೋಗಿ ಸಿಕ್ಕಿಕೊಳ್ಳುವಿರಿ. ಪ್ರಾಮಾಣಿಕತೆಯು ನಿಮಗೆ ವರವಾಗಲಿದೆ. ಮರೆವು ಅತಿಯಾದಂತೆ ತೋರುವುದು.

ಇದನ್ನೂ ಓದಿ: ಸಿಂಹ ರಾಶಿಯಲ್ಲಿ ಗುರು-ಕೇತು ಸಂಯೋಗ: ಯಾವ ರಾಶಿಗೆ ಶುಭ, ಯಾರಿಗೆ ಅಶುಭ?

ಕುಂಭ ರಾಶಿ : ಮಿತ್ರರ ಜೊತೆ ನೀವು ಪಾಲುದಾರಿಕೆಯಲ್ಲಿ ಒಪ್ಪಂದವನ್ನು ಮಾಡಿಕೊಳ್ಳುವಿರಿ. ನಿಮ್ಮವರ ಬಗ್ಗೆ ನಿಮಗೆ ಪ್ರೀತಿ ಇರದು. ಸಂಬಂಧದಲ್ಲಿ ವ್ಯವಹಾರವು ಬೇಡ. ನಿಮ್ಮ ಶತ್ರುಗಳು ನಿಮ್ಮಿಂದ ಇಂದು ಅಪ್ರತ್ಯಕ್ಷವಾಗಿ ಪ್ರಯೋಜನವನ್ನು ಪಡೆವರು. ಸಂಗಾತಿಯ ಮಾತುಗಳಿಗೆ ನಿಮ್ಮ ವಿರೋಧವು ಉಚಿತವಾಗಿರುವುದು. ನೀವು ಉಪಾಯದ ಜೊತೆ ಅಪಾಯವನ್ನು ಯೋಜನೆಯಲ್ಲಿ ಚಿಂತಿಸುವ ಅಗತ್ಯ ಬರುವುದು. ಕುಟುಂಬದಲ್ಲಿ ಎಲ್ಲರನ್ನೂ ಸಮಾಧಾನ ಮಾಡಲಾಗದು.

ಮೀನ ರಾಶಿ : ಹೊಸ ಜವಾಬ್ದಾರಿಗಳನ್ನು ನಿರ್ವಹಿಸುವ ಉತ್ಸಾಹದಲ್ಲಿ‌ ಇರುವಿರಿ. ವ್ಯವಹಾರದ ವಿಚಾರದಲ್ಲಿ ಪೂರ್ವಾಪರ‌ ವಿವೇಚನೆಯಿಂದ ಮುಂದುವರಿಯುವುದು ಉತ್ತಮ. ಸ್ತ್ರೀಯರಿಂದ ಅಪಮಾನವಾಗಬಹುದು. ಆಪ್ತರನ್ನು ದೂರ ಮಾಡಿಕೊಳ್ಳುವಿರಿ. ತಾಯಿಯ ಜೊತೆ ವಾಗ್ವಾದ ಮಾಡಬಹುದು. ತಾಪತ್ರಯದ ಕಾರಣಕ್ಕಾಗಿ ದೇವತಾರಾಧನೆಯನ್ನು ಮಾಡುವಿರಿ. ಇಂದು ಹೆಚ್ಚಿನ ಸಮಯವನ್ನು ನೀವು ಭಕ್ತಿಗಾಗಿ ಮೀಸಲಿಡುವಿರಿ.

– ಲೋಹಿತ್ ಹೆಬ್ಬಾರ್ – 8762924271 (what’s app only)

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಲೋಹಿತ ಹೆಬ್ಬಾರ್​, ಇಡುವಾಣಿ
ಲೋಹಿತ ಹೆಬ್ಬಾರ್​, ಇಡುವಾಣಿ

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More
ಅವಧಿಗೂ ಮುನ್ನ SIR ಅಂತ್ಯ: 2.01 ಲಕ್ಷ ಮತದಾರರ ಹೆಸರು ಡಿಲೀಟ್​
ಅವಧಿಗೂ ಮುನ್ನ SIR ಅಂತ್ಯ: 2.01 ಲಕ್ಷ ಮತದಾರರ ಹೆಸರು ಡಿಲೀಟ್​
ಕಾಂಗ್ರೆಸ್​​​ನ 25 ಶಾಸಕರು ಬಿಜೆಪಿ ಸೇರಲು ರೆಡಿ ಇದ್ದಾರೆ: ವಿಜಯೇಂದ್ರ
ಕಾಂಗ್ರೆಸ್​​​ನ 25 ಶಾಸಕರು ಬಿಜೆಪಿ ಸೇರಲು ರೆಡಿ ಇದ್ದಾರೆ: ವಿಜಯೇಂದ್ರ
ಹಿಂಡಲಗಾ ಜೈಲಿಗೆ ಹೋಗ್ತಿದ್ದ ಪ್ರಜ್ವಲ್ ಇದ್ದ ವಾಹನ ಅರ್ಧಕ್ಕೆ ವಾಪಸ್
ಹಿಂಡಲಗಾ ಜೈಲಿಗೆ ಹೋಗ್ತಿದ್ದ ಪ್ರಜ್ವಲ್ ಇದ್ದ ವಾಹನ ಅರ್ಧಕ್ಕೆ ವಾಪಸ್
ಬೃಹತ್ ಪ್ರತಿಭಟನೆ ಬಳಿಕ ಸುಪ್ರೀಂ ಕೋರ್ಟ್ ತಲುಪಿದ ರಾಹುಲ್ ಗಾಂಧಿ, ಖರ್ಗೆ
ಬೃಹತ್ ಪ್ರತಿಭಟನೆ ಬಳಿಕ ಸುಪ್ರೀಂ ಕೋರ್ಟ್ ತಲುಪಿದ ರಾಹುಲ್ ಗಾಂಧಿ, ಖರ್ಗೆ
ಮಂಜನಿಗೆ ಮುಂದೆ ಒಳ್ಳೆಯ ಭವಿಷ್ಯ ಇದೆ: ಸಂಗೀತಾ ಭಟ್ ಅಚ್ಚರಿಯ ಹೇಳಿಕೆ
ಮಂಜನಿಗೆ ಮುಂದೆ ಒಳ್ಳೆಯ ಭವಿಷ್ಯ ಇದೆ: ಸಂಗೀತಾ ಭಟ್ ಅಚ್ಚರಿಯ ಹೇಳಿಕೆ
ಸಿಎಂ ಡಿಕೆಶಿ​​ ಕುರ್ತಾ ಹಿಡಿದು ತಳ್ಳಿದ ರಾಹುಲ್ ಗಾಂಧಿ! ಕನ್ನಡಿಗರ ಆಕ್ರೋಶ
ಸಿಎಂ ಡಿಕೆಶಿ​​ ಕುರ್ತಾ ಹಿಡಿದು ತಳ್ಳಿದ ರಾಹುಲ್ ಗಾಂಧಿ! ಕನ್ನಡಿಗರ ಆಕ್ರೋಶ
ಕಿತ್ತೂರು ರಾಜಗುರುಗಳ ವಂಶಸ್ಥರಿಂದ ತಲೆಮಾರುಗಳ ಪರಂಪರೆ ಮುಂದುವರಿಕೆ
ಕಿತ್ತೂರು ರಾಜಗುರುಗಳ ವಂಶಸ್ಥರಿಂದ ತಲೆಮಾರುಗಳ ಪರಂಪರೆ ಮುಂದುವರಿಕೆ
ಪ್ರತಿಭಟನೆ ವೇಳೆ ಎಬಿವಿಪಿ ಕಾರ್ಯಕರ್ತನಿಗೆ ಎಸಿಪಿ ಕಪಾಳಮೋಕ್ಷ
ಪ್ರತಿಭಟನೆ ವೇಳೆ ಎಬಿವಿಪಿ ಕಾರ್ಯಕರ್ತನಿಗೆ ಎಸಿಪಿ ಕಪಾಳಮೋಕ್ಷ
ಬಿಗ್ ಬಾಸ್: ಸಂಗೀತಾ ಭಟ್ ಆರೋಗ್ಯ ಕೈಕೊಟ್ಟಿದ್ದಕ್ಕೆ ಇಲ್ಲಿದೆ ಅಸಲಿ ಕಾರಣ
ಬಿಗ್ ಬಾಸ್: ಸಂಗೀತಾ ಭಟ್ ಆರೋಗ್ಯ ಕೈಕೊಟ್ಟಿದ್ದಕ್ಕೆ ಇಲ್ಲಿದೆ ಅಸಲಿ ಕಾರಣ
ಕಳೆದ 10 ವರ್ಷಗಳಿಂದ ಹದಗೆಟ್ಟಿದ್ದ ಪೀಣ್ಯ ಔಟರ್ ರಿಂಗ್ ರಸ್ತೆಗೆ ಡಾಂಬರ್ ಭಾಗ
ಕಳೆದ 10 ವರ್ಷಗಳಿಂದ ಹದಗೆಟ್ಟಿದ್ದ ಪೀಣ್ಯ ಔಟರ್ ರಿಂಗ್ ರಸ್ತೆಗೆ ಡಾಂಬರ್ ಭಾಗ