AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿನ ಭವಿಷ್ಯ: ಇಂದು ಈ ರಾಶಿಯವರ ಸ್ವಾವಲಂಬಿತನಕ್ಕೆ ಅನ್ಯರಿಂದ ವಿಡಂಬನೆ, ಸಾಧಿಸುವ ಛಲ…

ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ಶರತ್ ಋತುವಿನ ಆಶ್ವಯುಜ ಮಾಸದ ಶುಕ್ಲ ಪಕ್ಷದ ಚತುರ್ಥೀ ತಿಥಿಯ ಬುಧವಾರದಂದು ಅನುಚಿತ ವರ್ತನೆ, ದೃಢಸಂಕಲ್ಪ, ಅನಾರೋಗ್ಯ, ನಿಂದನೆ, ಕಲಹ, ಹಣಕಾಸು ಕೊರತೆ, ದೃಷ್ಟಿದೋಷ, ದೂರಪ್ರಯಾಣ, ಪ್ರಣಯ ಇವು ಈ ದಿನದ ವಿಶೇಷ.

ದಿನ ಭವಿಷ್ಯ: ಇಂದು ಈ ರಾಶಿಯವರ ಸ್ವಾವಲಂಬಿತನಕ್ಕೆ ಅನ್ಯರಿಂದ ವಿಡಂಬನೆ, ಸಾಧಿಸುವ ಛಲ...
ದಿನ ಭವಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Oct 14, 2026 | 12:36 AM

Share

ಶರನ್ನವರಾತ್ರದ ನಾಲ್ಕನೇ ದಿನ. ಜಗನ್ಮಾತೆಯ ಈ ಸುದಿನ ಎಲ್ಲರಿಗೂ ಶುಭವಾಗಲಿ. ಚಂದ್ರಘಂಟಯಾಗಿ ಸಕಲರ ಸಂಕಟವನ್ನೂ ಸಂಹರಿಸಿ, ಚಂದ್ರನಂತೆ ಎಲ್ಲರಿಗೂ ತಂಪನ್ನು ನೀಡಲಿ.

ಮೇಷ ರಾಶಿ:

ಆರ್ಥಿಕತೆಯ ಮೇಲೆ ಹಿಡಿತ ಸಾಧಿಸದಿದ್ದರೆ ಕಷ್ಟವಾಗುತ್ತಿತ್ತು. ವೈವಾಹಿಕ ಜೀವನವು ನೆಮ್ಮದಿಯಿಂದ ಇರುವುದು. ಅನಗತ್ಯ ವಿಚಾರಗಳನ್ನು ಚರ್ಚಿಸುವುದನ್ನು ಬಿಟ್ಟು ನಿಮ್ಮ ಕೆಲಸದಲ್ಲಿ ಮಗ್ನರಾಗುವುದು ಉತ್ತಮ. ಪ್ರಿಯಕರನ‌ ಜೊತೆ ಸುತ್ತಾಟ ಮಾಡುವಿರಿ. ಅನುರೂಪವಾದ ಸಂಗಾತಿಯು ನಿಮಗೆ ಸಿಗುವರು. ಹಳೆಯ ಹಣಕಾಸಿನ ವ್ಯವಹಾರವನ್ನು ನೀವು ತೀರಿಸಿಕೊಳ್ಳುವಿರಿ. ಎಲ್ಲ ಮೋಡಗಳೂ ನಿಮಗೆ ಮಳೆಯನ್ನು ಸುರಿಸದು.

ವೃಷಭ ರಾಶಿ:

ನೀವು ಸ್ತ್ರೀಯರ ವಿಚಾರದಲ್ಲಿ ಸೂಕ್ಷ್ಮಮತಿಗಳಾಗುವಿರಿ. ನಿಮ್ಮ ಭಾವನೆಗಳಿಗೆ ಬೆಲೆ ಕೊಡದಿರುವುದು ನಿಮಗೆ ಬೇಸರವನ್ನು ತರಿಸುವುದು. ಮಕ್ಕಳ‌ ಮುಂದಿನ ವಿದ್ಯಾಭ್ಯಾಸಕ್ಕೆ ಸರಿಯಾದ ಮಾರ್ಗವನ್ನು ಹಾಕಿಕೊಡುವಿರಿ. ಅಪೂರ್ಣವಾಗಿರುವ ಕಛೇರಿಯ ಕೆಲಸಗಳು ಇಂದು ಮುಗಿಸುವ ಕೆಲಸವನ್ನು ಮಾಡುವಿರಿ. ನೂತನ ವಸ್ತುಗಳ ಖರೀದಿಯಿಂದ ವಂಚಿತರಾಗುವಿರಿ. ನಿಮ್ಮ ವಿಶ್ರಾಂತ ಸ್ಥಿತಿಯನ್ನು ಇತರರು ಹಾಸ್ಯ ಮಾಡಬಹುದು.

ಮಿಥುನ ರಾಶಿ:

ನಕಾರಾತ್ಮಕ ಯೋಚನೆಗಳು ನಿಮ್ಮನ್ನು ಸುಮ್ಮನಿರಲು ಬಿಡದು. ನಿಮ್ಮವರ ಭಾವನೆಗಳಿಗೆ ಬೆಲೆ ಕೊಡಿ. ದೂರ ಪ್ರಯಾಣವು ಸುಖಕರವಾಗುವುದು. ನ್ಯಾಯಾಲಯದಲ್ಲಿ ನಿಮ್ಮ ಕಾರ್ಯಗಳು ಸಲೀಸಾಗಿ ಮುಗಿಯುವುದು. ಕೃಷಿಯಲ್ಲಿ ತೊಡಗಿಕೊಂಡವರು ಹೊಸ ಆವಿಷ್ಕಾರವನ್ನು ಮಾಡುವರು. ನಿಮ್ಮ ವಿಶ್ವಾಸಕ್ಕೆ ಸರಿಯಾದ ಫಲಿತಾಂಶವು ಸಿಗುವುದು. ಇನ್ನೊಬ್ಬರನ್ನು ದೂರುವ ಅಭ್ಯಾಸವನ್ನು ಬಿಡುವುದು ಒಳ್ಳೆಯದು. ನಿಮ್ಮ ಮಾತುಗಳೇ ತಿರುಗಿಬರಬಹುದು. ಶ್ರಮಕ್ಕೆ ಯೋಗ್ಯವಾದ ಫಲವು ಲಭಿಸುವುದು.

ಕರ್ಕಾಟಕ ರಾಶಿ:

ನೀವು ಇಂದು ಏನನ್ನು ಕೊಡುವುದಿದ್ದರೂ ಮನಃಪೂರ್ವಕವಾಗಿ ಕೊಡುವುದು ಉತ್ತಮ. ಕಲಾವಿದರಿಗೆ ವೃತ್ತಿಯಲ್ಲಿ ಗೌರವ ಸಿಗುವುದು. ಆರ್ಥಿಕ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ಕೊಡುವಿರಿ. ಕಛೇರಿಯ ಒತ್ತಡದ ಕೆಲವು ನಿಮಗೆ ಕಷ್ಟವಾದೀತು. ಗೆಲುವು ನಿಮ್ಮದಾದರೂ ಗೆಲ್ಲುವ ದಾರಿ ನಿಮ್ಮದಲ್ಲ. ಗೌರವವನ್ನು ಸಂಪಾದಿಸುವ ಪ್ರಯತ್ನದಲ್ಲಿ ಇರುವಿರಿ. ತಪ್ಪು ಮಾರ್ಗವನ್ನು ನೀವು ಅರಿವಿಲ್ಲದೇ ಪ್ರವೇಶಿಸುವುರಿ.

ಸಿಂಹ ರಾಶಿ:

ನಿಮ್ಮ ಪ್ರತಿಷ್ಠೆಗಳಿಂದ ಯಾರಿಗೂ ತೊಂದರೆಯಾಗದು. ನೀವು ಉಢಾಫೆ ಮಾಡುವ ಸಂಗತಿಗಳೇ ನಿಮಗೆ ಅಂಟಿಕೊಳ್ಳುವುದು. ನಿಮ್ಮ ಯೋಜನೆಯ ಕೆಲಸಗಳಿಗೆ ವಿಘ್ನಗಳು ಬರುವುದು. ಸರಿಯಾದ ಮಾಹಿತಿಯ ಕೊರತೆ ಕಾಣುವುದು. ಪ್ರಭಾವೀ ವ್ಯಕ್ತಿಗಳ ಸಹಾಯವನ್ನು ಪಡೆದುಕೊಳ್ಳುವ ಸಂದರ್ಭವು ನಿಮಗೆ ಬರಬಹುದು. ಕೆಲವನ್ನು ಹೊಂದಿಸಿಕೊಂಡು ಹೋಗುವುದು ಅನಿವಾರ್ಯ. ವಾಹನವನ್ನು ಬದಲಾಯಿಸಿ ಹೊಸ ವಾಹನವನ್ನು ಖರೀದಿಸುವಿರಿ.

ಕನ್ಯಾ ರಾಶಿ:

ಮಹಿಳೆಯರ ಜೊತೆ ಕೆಲಸ ಮಾಡುವುದು ಕಷ್ಟವಾಗುವುದು. ಮಕ್ಕಳ ವಿವಾಹಕ್ಕೆ ನೀವು ತಿರುಗಾಟ ಮಾಡಬೇಕಾಗಬಹುದು. ನಿಮ್ಮ ಶಿಸ್ತಿನ ಕೆಲಸಕ್ಕೆ ಹೆಚ್ಚಿನ ಜವಾಬ್ದಾರಿಗಳು ಬರಬಹುದು. ಹಣದ ಖರ್ಚಿಲ್ಲದೇ ಪ್ರಯಾಣ ಮಾಡಿ ಸಿಕ್ಕಿಬೀಳುವಿರಿ. ಕೆಲವರಿಂದ ನಿಮ್ಮ ವಿದ್ಯಾರ್ಜನೆಯ ದಿಕ್ಕನ್ನು ತಪ್ಪಿಸುವ ಪ್ರಯತ್ನ ನಡೆಯುವುದು. ಅಪರಿಚಿತರ ಜೊತೆ ಮಾತುಕತೆಗಳು ಮಿತಿಯಲ್ಲಿ ಇರಲಿ. ಈ ಕಾರಣಕ್ಕೆ ನಿಮಗೆ ಕೆಲಸದ ಪ್ರದೇಶದಲ್ಲಿ ಅಸ್ಥಿರತೆ ಇರುತ್ತದೆ.

ತುಲಾ ರಾಶಿ:

ನಿಮ್ಮ ಇಂದಿನ ಕಾರ್ಯವು ತಾರ್ಕಿಕ ಅಂತ್ಯವನ್ನು ಕಾಣದೇ ಹೋಗಬಹುದು. ರಾಜಕೀಯವನ್ನೇ ತಮ್ಮ ಕಾರ್ಯಕ್ಷೇತ್ರವನ್ನು ಮಾಡಿಕೊಂಡವರಿಗೆ ಸ್ವಲ್ಪ ಹಿನ್ನಡೆಯಾಗಬಹುದು. ಎಲ್ಲವನ್ನೂ ನಿಮ್ಮ ಪರವಾಗಿ ಮಾಡಿಕೊಳ್ಳಲು ಪ್ರಯತ್ನಿಸಿದರೂ ಅಲ್ಪ ಲಾಭವಾಗುವುದು. ಆಡಳಿತದ ಠೀವಿಯನ್ನು ಹೊಸದರಲ್ಲಿಯೇ ಇಟ್ಟುಕೊಳ್ಳಬೇಕು. ನಿಮ್ಮ ಪರಿಶ್ರಮದ ಕೆಲಸಗಳು ನಿರರ್ಥಕವಾಗುವುದು. ಪ್ರಶಂಸೆಯೂ ಸಿಗದೇ ಇರುವುದು ನಿಮಗೆ ಬೇಸರವನ್ನು ತಂದೀತು.

ವೃಶ್ಚಿಕ ರಾಶಿ:

ನಿಮಗೆ ಸಿಕ್ಕ ಜವಾಬ್ದಾರಿಗಳು ಅಸಮಾಧಾನವನ್ನು ಉಂಟುಮಾಡುವುದು. ಯಾರ ಜೊತೆಯೂ ಬೆರೆಯುವ ಮನಸ್ಸಾಗದು. ಸಂಗಾತಿಯನ್ನು ಅರ್ಥಮಾಡಿಕೊಳ್ಳಲು ನಿಮಗೆ ಸಮಯ ಬೇಕಾಗುವುದು. ನಿಮ್ಮ ನೆಮ್ಮದಿಯನ್ನು ಕಂಡು ಇತರರು ಅಪರೋಕ್ಷವಾಗಿ ತೊಂದರೆ ಕೊಡುವರು. ಯಾರದೋ ಮಾತಿಗೆ ಉದ್ವೇಗಕ್ಕೆ ಒಳಗಾಗುವಿರಿ. ನಿಮ್ಮ ಕುಶಲಕಾರ್ಯಗಳು ಎಲ್ಲರಿಗೂ ಇಷ್ಟವಾದೀತು. ತಂದೆಯ ಮಾತನ್ನು ಗೌರವಿಸುವಿರಿ.

ಧನು ರಾಶಿ:

ದೂರದೃಷ್ಟಿಯಿಂದ ನಿಮ್ಮ ಗುರಿ ಬದಲಾಗುವುದು. ನಿರುದ್ಯೋಗಿಗಳಿಗೆ ಸ್ನೇಹಿತರಿಂದ ಸಹಕಾರವು ಸಿಗುವುದು. ಸ್ತ್ರೀಯರ ವಿಷಯದಲ್ಲಿ ನೀವು ಬಹಳ ಜಾಗರೂಕತೆಯಿಂದ ವ್ಯವಹರಿಸುವುದು ಉತ್ತಮ. ನಿಮಗೆ ಬರಬೇಕಾದ ಹಣವು ಬಾರದೇ ಹೋಗಬಹುದು. ಅತಿಥಿ ಸತ್ಕಾರವನ್ನು ಬಹಳ ಪ್ರೀತಿಯಿಂದ ಮಾಡಿ. ನಿಮಗೆ ಸಾಧಿಸುವ ಛಲವಿದ್ದರೆ ಮಾತ್ರ ಉಪಕರಣಗಳು ನಿಮ್ಮ ಕೈ ಸೇರುವುದು. ಉದ್ಯಮಕ್ಕೆ ಸಂಬಂಧಿಸಿದ ನಿಮ್ಮ ಆಲೋಚನೆಯನ್ನು ಇತರರು ತಳ್ಳಿಹಾಕಬಹುದು.

ಮಕರ ರಾಶಿ:

ನಿಮ್ಮ ಯೋಜನೆಯನ್ನು ಕಾರ್ಯಗತಗೊಳಿಸಲು ನೀವು ಸಫಲರಾಗುವಿರಿ. ಸ್ನೇಹಿತರ ಜೊತೆ ಅನೌಪಚಾರಿಕ ಮಾತುಗಳನ್ನು ಆಡುವಿರಿ. ಸಹವಾಸದೋಷದಿಂದ ಹೊರಬರಲು ಆಗದು. ಹಳೆಯ ವಸ್ತುಗಳಿಂದ ದುರಸ್ತಿಗೆ ಖರ್ಚು ಮಾಡಲೇಬೇಕಾಗುವುದು. ದುಃಖದ ಸನ್ನಿವೇಶಗಳನ್ನು ನೀವು ಸಂತೋಷದ ಸಂದರ್ಭವಾಗಿ ಪರಿವರ್ತಿಸುವಿರಿ. ಇಷ್ಟದ ಜನರನ್ನು ಭೇಟಿಯಾಗಲು ಹೋಗಬಹುದು. ನಿಮ್ಮಿಂದ ಆಗಬೇಕಾದ ಕಾರ್ಯಗಳನ್ನು ತಿಳಿದುಕೊಳ್ಳಿ.

ಕುಂಭ ರಾಶಿ:

ಆತುರದಲ್ಲಿ ಏನನ್ನಾದರೂ ಮಾಡಿಕೊಳ್ಳುವ ಸಾಧ್ಯತೆ ಇದೆ. ಇಂದು ಸಂಭ್ರಮದ ವಾತಾವರಣದಲ್ಲಿ ಸಮಯವನ್ನು ಕಳೆಯುವಿರಿ. ಅನಗತ್ಯ ಮಧ್ಯಪ್ರವೇಶದಿಂದ ಗೌರವ ಕಡಿಮೆಯಾಗುವುದು. ಮನೆಯ ಕೆಲಸವು ಅಧಿಕವಾಗಿ ಆಯಾಸವಾಗಬಹುದು. ನಿಮ್ಮ ಬಯಕೆಗಳನ್ನು ಪೂರೈಸಲಿಕೊಳ್ಳಲು ಇತರರ ಸಹಾಯವನ್ನು ಕೇಳುವಿರಿ. ಭವಿಷ್ಯದ ಬಗ್ಗೆ ಅನಗತ್ಯವಾದ ಆಲೋಚನೆಗಳು ಬರಬಹುದು. ಸ್ತ್ರೀಯರ ಸಹಾಯದಿಂದ ನಿಮ್ಮ ಕಛೇರಿಯ ಕಾರ್ಯವು ಸರಿಯಾಗುವುದು.

ಮೀನ ರಾಶಿ:

ಗೊಂದಲದ ಕಾರಣದಿಂದ ಯಾವುದನ್ನೂ ಪೂರ್ಣವಾಗಿ ನಿರ್ಧಾರ ಮಾಡಲಾಗಸು. ನೀವು ಸ್ಥಾನಮಾನದ ಪ್ರಾಪ್ತಿಗಾಗಿ ಯಾರನ್ನಾದರೂ ದೂರವಿರಿ. ಶೋಧಕವರ್ಗಕ್ಕೆ ಉತ್ತಮ ಪ್ರಶಂಸೆಯು ಸಿಗಬಹುದು. ಪುಣ್ಯಕ್ಷೇತ್ರ ದರ್ಶನಕ್ಕೆ ಸ್ನೇಹಿತರ ಜೊತೆ ಹೋಗುವ ಮನಸ್ಸಾಗುವುದು. ಆರ್ಥಿಕವಾಗಿ ಸಬಲರಾಗಲು ಗೌಪ್ಯ ವ್ಯಾಪಾರವನ್ನು ನಡೆಸಬಹುದು. ನಿಮಗೆ ಸಿಗದಿರುವ ವಸ್ತುವು ಯಾರಿಗೂ ಸಿಗಬಾರದು ಎಂಬ ಹಠದ ಸ್ವಭಾವವನ್ನು ಬೆಳೆಸಿಕೊಳ್ಳುವಿರಿ.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ಶರತ್, ಚಾಂದ್ರಮಾಸ : ಆಶ್ವಯುಜ, ಸೌರ ಮಾಸ : ಕನ್ಯಾ, ಮಹಾನಕ್ಷತ್ರ : ಚಿತ್ರಾ, ವಾರ : ಬುಧ, ಪಕ್ಷ : ಶುಕ್ಲ, ತಿಥಿ : ಚತುರ್ಥೀ, ನಿತ್ಯನಕ್ಷತ್ರ : ಅನೂರಾಧಾ, ಯೋಗ : ಆಯುಷ್ಮಾನ್, ಕರಣ : ಭದ್ರ, ಸೂರ್ಯೋದಯ – 06 – 10 am, ಸೂರ್ಯಾಸ್ತ – 06 – 00 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 12:06 – 13:34, ಯಮಗಂಡ ಕಾಲ 07:39 – 09:08, ಗುಳಿಕ ಕಾಲ 10:37 – 12:06

-ಲೋಹಿತ್ ಹೆಬ್ಬಾರ್ – 8762924271 (what’s app only)

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಲೋಹಿತ ಹೆಬ್ಬಾರ್​, ಇಡುವಾಣಿ
ಲೋಹಿತ ಹೆಬ್ಬಾರ್​, ಇಡುವಾಣಿ

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More
ಮುಖ್ಯರಸ್ತೆಗೆ ವೈದ್ಯಕೀಯ ತ್ಯಾಜ್ಯ ಸುರಿದ ಕ್ಲಿನಿಕ್‌ಗೆ 15 ಸಾವಿರ ರೂ.ದಂಡ
ಮುಖ್ಯರಸ್ತೆಗೆ ವೈದ್ಯಕೀಯ ತ್ಯಾಜ್ಯ ಸುರಿದ ಕ್ಲಿನಿಕ್‌ಗೆ 15 ಸಾವಿರ ರೂ.ದಂಡ
ಹನಿಟ್ರ್ಯಾಪ್ ವಿಡಿಯೋ ಭೀತಿ: ಮಾಧ್ಯಮಗಳ ವಿರುದ್ಧ ಮಾಜಿ ಸಿಎಂ ನಿರ್ಬಂಧಕಾಜ್ಞೆ
ಹನಿಟ್ರ್ಯಾಪ್ ವಿಡಿಯೋ ಭೀತಿ: ಮಾಧ್ಯಮಗಳ ವಿರುದ್ಧ ಮಾಜಿ ಸಿಎಂ ನಿರ್ಬಂಧಕಾಜ್ಞೆ
ಚಿತ್ರದುರ್ಗಕ್ಕೆ ಸುದೀಪ್ ಭೇಟಿ: ಚಪ್ಪಲಿ ಧರಿಸದೇ ನಡೆದುಬಂದ ನಟ
ಚಿತ್ರದುರ್ಗಕ್ಕೆ ಸುದೀಪ್ ಭೇಟಿ: ಚಪ್ಪಲಿ ಧರಿಸದೇ ನಡೆದುಬಂದ ನಟ
ಸೌಜನ್ಯ ಪ್ರಕರಣ ಮರು ತನಿಖೆ ಬಗ್ಗೆ ಎಸ್​​ಐಟಿಯಿಂದ ಹೈವೋಲ್ಟೇಜ್ ಸಭೆ
ಸೌಜನ್ಯ ಪ್ರಕರಣ ಮರು ತನಿಖೆ ಬಗ್ಗೆ ಎಸ್​​ಐಟಿಯಿಂದ ಹೈವೋಲ್ಟೇಜ್ ಸಭೆ
ಗಗನ್ ಬಳಿ ಕ್ಷಮೆ ಕೇಳಿದ ಗಾನವಿ, ಇಬ್ಬರ ನಡುವೆ ಭಾವುಕ ಚರ್ಚೆ: ವಿಡಿಯೋ
ಗಗನ್ ಬಳಿ ಕ್ಷಮೆ ಕೇಳಿದ ಗಾನವಿ, ಇಬ್ಬರ ನಡುವೆ ಭಾವುಕ ಚರ್ಚೆ: ವಿಡಿಯೋ
ಸುದೀಪ್ ಅನ್ನೇ ಎಳೆದಾಡಲು ಅಭಿಮಾನಿಗಳು: ವಿಡಿಯೋ ನೋಡಿ
ಸುದೀಪ್ ಅನ್ನೇ ಎಳೆದಾಡಲು ಅಭಿಮಾನಿಗಳು: ವಿಡಿಯೋ ನೋಡಿ
ಗಮನಸೆಳೆದ ಮೈ ಹೋಮ್ ವ್ಯೋಮ: ಅಪಾರ್ಟ್​​​ಮೆಂಟ್​​ ಖರೀದಿಗೆ ಮುಗಿಬಿದ್ದ ಜನ
ಗಮನಸೆಳೆದ ಮೈ ಹೋಮ್ ವ್ಯೋಮ: ಅಪಾರ್ಟ್​​​ಮೆಂಟ್​​ ಖರೀದಿಗೆ ಮುಗಿಬಿದ್ದ ಜನ
ತುಮಕೂರು ಯುವ ದಸರಾ: ಮಕ್ಕಳ ಪ್ರತಿಭೆಗೆ ಅದ್ದೂರಿ ವೇದಿಕೆ
ತುಮಕೂರು ಯುವ ದಸರಾ: ಮಕ್ಕಳ ಪ್ರತಿಭೆಗೆ ಅದ್ದೂರಿ ವೇದಿಕೆ
ಹಾಸನಾಂಬೆ ಉತ್ಸವದಲ್ಲಿ ಕೋಟಿ ಕೋಟಿ ಅವ್ಯವಹಾರ ಆರೋಪ
ಹಾಸನಾಂಬೆ ಉತ್ಸವದಲ್ಲಿ ಕೋಟಿ ಕೋಟಿ ಅವ್ಯವಹಾರ ಆರೋಪ
ಕಬ್ಬು ಬೆಳೆಗಾರರ ಪ್ರತಿಭಟನೆ: ಹಿರೇಬಾಗೇವಾಡಿ ಟೋಲ್​​ ಬಂದ್ ಮಾಡಿ ಆಕ್ರೋಶ
ಕಬ್ಬು ಬೆಳೆಗಾರರ ಪ್ರತಿಭಟನೆ: ಹಿರೇಬಾಗೇವಾಡಿ ಟೋಲ್​​ ಬಂದ್ ಮಾಡಿ ಆಕ್ರೋಶ