AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾರಿಗೆ ಇಲಾಖೆಯಲ್ಲಿ ಬಗೆದಷ್ಟು ಬಯಲಾಗ್ತಿದೆ ಕರ್ಮಕಾಂಡ: ಆರ್​​ಟಿಓಗಳ ಬಗೆ ಬಗೆಯ ಲಂಚಾವತಾರಗಳು

ಕರ್ನಾಟಕ ಸಾರಿಗೆ ಇಲಾಖೆಯಲ್ಲಿಮ ಕರ್ಮಕಾಂಡ ಬಗೆದಷ್ಟು ಬಯಲಾಗುತ್ತಿದೆ. ಇತ್ತೀಚೆಗಷ್ಟೇ ಕೋರಮಂಗಲ ಆರ್ಟಿಓ ಕಚೇರಿ ಕರ್ಮಕಾಂಡವನ್ನು ಟಿವಿ9 ಬಯಲೆಗೆಳೆದಿತ್ತು. ಈ ಘಟನೆ ಮಾಸುವ ಮುನ್ನವೇ ಆರ್ಟಿಓ ಇನ್ಸ್ ಪೆಕ್ಟರ್ ಗಳ ಚೇಲಾಗಳು ಗೂಗಲ್ ಪೇ, ಫೋನ್ ಪೇ ಮೂಲಕ ಲಂಚ ವಸೂಲಿ ಮಾಡ್ತಿರೋದು ಬೆಳಕಿಗೆ ಬಂದಿದೆ. ಅದೂ ಕೂಡ ತೆರಿಗೆ ಕಟ್ಟದೇ ರಾಜ್ಯಕ್ಕೆ ಬರ್ತಿರೋ ಅನ್ಯರಾಜ್ಯ ನೋಂದಣಿ ಬಸ್ ಗಳಿಂದ.

ಸಾರಿಗೆ ಇಲಾಖೆಯಲ್ಲಿ ಬಗೆದಷ್ಟು ಬಯಲಾಗ್ತಿದೆ ಕರ್ಮಕಾಂಡ: ಆರ್​​ಟಿಓಗಳ ಬಗೆ ಬಗೆಯ ಲಂಚಾವತಾರಗಳು
ಪ್ರಾತಿನಿಧಿಕ ಚಿತ್ರ
ಕಿರಣ್​ ಸೂರ್ಯ
| Edited By: |

Updated on: Oct 13, 2026 | 10:00 PM

Share

ಬೆಂಗಳೂರು, (ಅಕ್ಟೋಬರ್ 13): ರಾಜ್ಯ ಸಾರಿಗೆ ಇಲಾಖೆಯಲ್ಲಿ ಬಗೆದಷ್ಟು ಹೊರಬರ್ತಿದೆ ಲಂಚಾವತಾರದ ಸರಮಾಲೆ. ಹೌದು.. ಬೇರೆ ರಾಜ್ಯದ ಬಸ್‌ಗಳು ಕರ್ನಾಟಕಕ್ಕೆ ಬರಬೇಕಂದ್ರೆ ಆರ್​​ಟಿಓ ಅಧಿಕಾರಿಗಳ ಕೈ ಬಿಸಿ ಮಾಡಲೇಬೇಕು. ಅದೂ ಬೈ ಹ್ಯಾಂಡ್ ಅಲ್ಲ ಏನಿದ್ರೂ ಡಿಜಿಟಲ್. ಫೋನ್ ಪೇ , ಗೂಗಲ್ ಪೇ ಮೂಲಕ ಮಾತ್ರ. ಹೀಗಂತ ಅಲಿಖಿತ ನಿಯಮವನ್ನ RTO ಅಧಿಕಾರಿಯ ಬಾಮೈದ ಮಾಡಿದ್ದು, ತೆರಿಗೆ ಕಟ್ಟದ ಒಂದೊಂದು ಬಸ್ ತಿಂಗಳಿಗೆ 30 ಸಾವಿರ ಫಿಕ್ಸ್ ಮಾಡಲಾಗಿದೆ. ಈ ಕುರಿತ ಆಡಿಯೋ ಹಾಗೂ ವಾಟ್ಸ್ ಅಫ್ ಚಾಟ್ ಹಲ್ ಚಲ್ ಎಬ್ಬಿಸಿದ್ದು, ದಾಖಲೆಗಳ ಸಮೇತ ಸಾರಿಗೆ ಆಯುಕ್ತರಿಗೆ ದೂರು ಸಲ್ಲಿಕೆಯಾಗಿದೆ.

ಯಾವ್ಯಾವ ಆರ್​​ಟಿಓಗೆ ಎಷ್ಟು ಕಪ್ಪ ಕಾಣಿಕೆ ಗೊತ್ತಾ?

ಕೇರಳ, ತಮಿಳುನಾಡು ಬಸ್ ಮಾಲೀಕರಿಂದ ಗುರು ವಸೂಲಿ ಮಾಡುವ ಹಣ ಎಷ್ಟು ಎಂದು ನೋಡುವುದಾದರೆ, ಅತ್ತಿಬೆಲೆ ಆರ್ಟಿಓ ಗೆ ಒಂದು ಬಸ್ಸಿನಿಂದ 5 ಸಾವಿರ ರೂ, ಎಲೆಕ್ಟ್ರಾನಿಕ್ ಸಿಟಿ ಆರ್ಟಿಓ ಗೆ 5 ಸಾವಿರ ರೂ, ಕೋರಮಂಗಲ ಆರ್ಟಿಓಗೆ 5 ಸಾವಿರ ರೂ, ರಾಜಾಜಿನಗರ ಆರ್ಟಿಓ ಗೆ 5 ಸಾವಿರ ರೂ, ದೇವನಹಳ್ಳಿ ಆರ್ಟಿಓ ಗೆ 7 ಸಾವಿರ ರೂ. ಉಳಿದಿದ್ದು ಬ್ರೋಕರ್ ಗಳ ಜೇಬಿಗೆ ಬೀಳುತ್ತದೆ. ಹೀಗೆ ಒಟ್ಟು ಒಂದು ಬಸ್ಸಿನಿಂದ ಮೂವತ್ತು ಸಾವಿರ ರುಪಾಯಿ ವಸೂಲಿ ಹಂಚಿಕೆ ಮಾಡಲಾಗುತ್ತದೆ.

ಇದನ್ನೂ ಓದಿ: ಕರ್ನಾಟಕ ಸಾರಿಗೆ ನಿಗಮಗಳ ನೌಕರರಿಗೆ ಪಿಎಫ್​​​ ಸಂಕಷ್ಟ! ಎರಡುವರೆ ಸಾವಿರ ಕೋಟಿ ಹಣ ಎಲ್ಲೋಯ್ತು?

ಎಲೆಕ್ಟ್ರಾನಿಕ್ ಸಿಟಿ ಆರ್ಟಿಓ ಸಂಬಂಧಿ ಗುರು ಎನ್ನುವವರ ವಿರುದ್ಧ ಲಂಚದ ಆರೋಪ‌ಕೇಳಿ ಬಂದಿದೆ. ಕೇರಳ, ತಮಿಳುನಾಡು ನೋಂದಣಿ ಬಸ್ ಗಳು ರಾಜ್ಯದ ತೆರಿಗೆ ಕಟ್ಟದೆ ರಾಜ್ಯ ಪ್ರವೇಶಿಸುವಂತಿಲ್ಲ.ಆದ್ರೆ ಅತ್ತಿಬೆಲೆಯಿಂದ ದೇವನಹಳ್ಳಿ ಟೋಲ್‌ವರೆಗೂ ಬಸ್ ಗಳು ತೆರಿಗೆ ಕಟ್ಟದೇ ಇದ್ರೂ ಬೆಂಗಳೂರು ಮೂಲಕ ಹಾದು ಹೋಗಬಹುದಂತೆ. ಅದೂ ಗುರು ಎನ್ನುವ ವ್ಯಕ್ತಿಗೆ ಲಂಚದ ರೂಪದಲ್ಲಿ 30 ಸಾವಿರ ಲಂಚ ಕೊಟ್ರೆ ಮಾತ್ರ. ಹೀಗೆ ಪ್ರತಿ ದಿನ 600 ರಿಂದ 650 ಬಸ್ ಗಳು ಓಡಾಟ ಮಾಡ್ತಿದ್ದು, ಪ್ರತಿ ನಿತ್ಯ ಕೋಟ್ಯಾಂತರ ರೂ ಲಂಚ ಸಂಗ್ರಹವಾಗ್ತಿದೆಯಂತೆ. ಈ ವಿಚಾರವನ್ನ ಸಾರಿಗೆ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಕೂಡಲೇ ತನಿಖೆ ನಡೆಸಿ ಕ್ರಮಕೈಗೊಳ್ಳುವುದಾಗಿ ಹೇಳಿದೆ.

ಒಟ್ಟಿನಲ್ಲಿ ಒಂದು ಬಸ್ ತ್ರೈಮಾಸಿಕವಾಗಿ ತೆರಿಗೆ ರೂಪದಲ್ಲಿ 1 ಲಕ್ಷದ 20 ಸಾವಿರ ಕಟ್ಟಬೇಕು. ಆದ್ರೆ 30 ಸಾವಿರ ಲಂಚದ ರೂಪದಲ್ಲಿ ನೀಡ್ತಿರೋದ್ರಿಂದ ಬೊಕ್ಕಸಕ್ಕೆ ಸಾಕಷ್ಟು ನಷ್ಟವಾಗ್ತಿದೆ. ಈ ವಿಚಾರದ ಬಗ್ಗೆ ಇಲಾಖೆ ಯಾವ ರೀತಿ ತನಿಖೆ ನಡೆಸುತ್ತೆ. ತಪ್ಪಿತಸ್ಥರ ವಿರುದ್ಧ ಯಾವ ಕ್ರಮ ಕೈಗೊಳ್ಳುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಕಿರಣ್​ ಸೂರ್ಯ
ಕಿರಣ್​ ಸೂರ್ಯ

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More