AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಸಂತೋಷವನ್ನು ಸಂಪತ್ತಿನಿಂದ ನೀಡಬೇಕಾಗುವುದು…

ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಭಾದ್ರಪದ ಮಾಸದ ಶುಕ್ಲ ಪಕ್ಷದ ದ್ವಿತೀಯಾ ತಿಥಿಯ ಭಾನುವಾರದಂದು ಶಕ್ತಿ ಪ್ರದರ್ಶನ, ಪದೋನ್ನತಿ ಅಡ್ಡಿ, ಕಾಮಗಾರಿಯ ವರದಿ, ಉದ್ಯೋಗದಲ್ಲಿ ಹರಟೆಯಿಂದ ಕಾಲಹರಣ, ಕಾರ್ಯದ ಮರೆವು, ನಿಶ್ಚಿತ ಕಾರ್ಯಕ್ಕೆ ತಡೆ, ವೇತನದ ಕಡಿತ ಇವೆಲ್ಲ ಇಂದಿನ ವಿಶೇಷ.

ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಸಂತೋಷವನ್ನು ಸಂಪತ್ತಿನಿಂದ ನೀಡಬೇಕಾಗುವುದು...
ದಿನ ಭವಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Sep 13, 2026 | 12:40 AM

Share

ಮೇಷ ರಾಶಿ:

ಸ್ನೇಹಿತರು ದೂರವಾದ್ದರಿಂದ ನಿಮಗೂ ನೆಮ್ಮದಿ ಸಿಗುವುದು. ಆದಾಯದ ಮೂಲವನ್ನು ಹೆಚ್ಚುಮಾಡಿಕೊಳ್ಳುವಿರಿ. ಸ್ತ್ರೀಯರಿಂದ ಇಂದು ನಿಮಗೆ ಧನ ಸಿಗಬಹುದು. ವಿವೇಚನಾತ್ಮಕ ವಿಚಾರಕ್ಕೆ ಸಮಯವನ್ನು ಪಡೆಯುವುದು ಒಳ್ಳೆಯದು. ಆರ್ಥಿಕವಾಗಿ ನೀವು ಸಬಲರಾಗುವುದು ನಿಮ್ಮ ನಡತೆಯಲ್ಲಿ ಕಾಣುವುದು. ಪ್ರಸಿದ್ಧಿಯು ನಿಮ್ಮನ್ನು ಹುಡುಕಿಕೊಂಡು ಬರಲಿದ್ದು, ವಿನಮ್ರವಾಗಿ ಅದನ್ನು ಸ್ವೀಕರಿಸುವ ಸ್ವಭಾವ ಇರಲಿ.

ವೃಷಭ ರಾಶಿ:

ಸಮಾರಂಭಗಳಲ್ಲಿ ನೀವು ಹೇಳಿದ ಮಾತು ವಿವಾದವಾಗಬಹುದು. ನಿಮ್ಮನ್ನು ಯಾರೂ ಸೇರಿಸಿಕೊಳ್ಳದಿದ್ದರೆ ಬೇಸರವಿಲ್ಲ. ಸ್ನೇಹಿತರನ್ನೂ ನಿಮ್ಮಿಂದ ದೂರವಿಡುವಿರಿ. ಅಮೂಲ್ಯ ವಸ್ತುವನ್ನು ಕೊಟ್ಟು ಆರ್ಥಿಕ ಸಂಕಷ್ಟವನ್ನು ತಂದುಕೊಳ್ಳುವಿರಿ. ನಿಮ್ಮ‌ ನೌಕರರನ್ನು ಬಹಳ ಕೆಳಮಟ್ಟದಲ್ಲಿ ನೋಡುವಿರಿ. ಯಾವುದನ್ನೂ ಪೂರ್ವದಲ್ಲಿ ಖಚಿತಪಡಿಸಿಕೊಳ್ಳದೇ ಮುಂದುವರಿಯುವುದು ಬೇಡ.

ಮಿಥುನ ರಾಶಿ:

ಮೇಲಧಿಕಾರಿಗಳ ಜೊತೆ ನಿಮಗೆ ಆಪ್ತತೆ ಇರಲಿದೆ. ಸಂಗಾತಿಯ ಮನಃಸ್ಥಿತಿಯನ್ನು ಬದಲಿಸಲು ಪ್ರಯತ್ನಿಸುವಿರಿ. ರಾಜಕಾರಣಿಗಳ ಇಬ್ಬಗೆಯ ವರ್ತನೆಯು ಬೇಸರ ತರಿಸಬಹುದು. ನೀವು ಸ್ಥಿರಾಸ್ತಿಯನ್ನು ಮಾರಾಟ ಮಾಡುವ ಅನಿವಾರ್ಯತೆ ಬರಬಹುದು. ಕಛೇರಿಯಲ್ಲಿ ನಿಮ್ಮ ಮಾತನ್ನು ಪಾಲಿಸುವರು. ವಿದೇಶೀ ವಿನಿಮಯದಿಂದ ಲಾಭವಾಗಲಿದೆ. ನಿಮ್ಮ ಅನುಪಸ್ಥಿತಿಯಲ್ಲಿ ಕೆಲಸವನ್ನು ಬೇರೆಯವರು ಮಾಡುವರು.

ಕರ್ಕಾಟಕ ರಾಶಿ:

ಕೋಪದಲ್ಲಿ ಏನನ್ನಾದರೂ ಹೇಳುವಿರಿ. ಕಠಿಣ ಕೆಲಸವನ್ನು ಸರಳ ಮಾಡಿಕೊಳ್ಳುವ ವಿಧಾನವು ಗೊತ್ತಿರಲಿ. ನಿಮ್ಮ ಕಾರ್ಯದ ಉದ್ದೇಶವೇ ಮರೆತುಹೋಗಬಹುದು. ಇಂದು ನೋವು ಅತಿಯಾಗಬಹುದು. ಸ್ನೇಹಿತರ ಜೊತೆ ಸೇರಿ ಸಮಯವನ್ನು ಕಳೆಯಲು ಆಗದು. ಸದಾ ಕಾಲ ಹೊಸತನ್ನು ಅಪೇಕ್ಷಿಸುವಿರಿ. ವೈಯಕ್ತಿಕ ನಿಲುವನ್ನು ಯಾರ ಮೇಲೂ ಹೇರಿಕೆ ಮಾಡಬೇಡಿ. ನಿಮ್ಮ ವಸ್ತುವನ್ನು ಅನ್ಯರಿಗೆ ಕೊಟ್ಟು ಕಳೆದುಕೊಂಡು ಸಂಕಟಪಡುವಿರಿ.

ಸಿಂಹ ರಾಶಿ:

ಆರ್ಥಿಕ ವ್ಯವಹಾರದಲ್ಲಿ ನೀವು ಇಂದು ದುರ್ಬಲರಾಗುವಿರಿ. ಹೊಸ ಕಾರ್ಯದಲ್ಲಿ ಹುಮ್ಮಸ್ಸು ಅತಿಯಾಗುವುದು. ವಸ್ತುವನ್ನು ಕಳೆದುಕೊಂಡು ಚಿಂತಿತರಾಗುವಿರಿ. ಸಿದ್ಧತೆ ಇಲ್ಲದೇ ಪ್ರಯತ್ನಿಸಿ ಹಣದ ಅಪಾಯಕ್ಕೆ ಬೀಳುವಿರಿ. ಪಕ್ಕದವರು ಎಂತಹವರು ಎನ್ನುವುದನ್ನು ನೋಡಿ ಮಾತನಾಡಿ. ಅನುಮಾನಗಳ ಸುತ್ತ ಇರುವ ನಿಮ್ಮ ಮನಸ್ಸಿಗೆ ಸರಿಯಾದ ಮಾಹಿತಿ ಸಿಗಕಿದೆ. ಅಹಂಕಾರವನ್ನು ಎಲ್ಲರೆದುರು ಪ್ರದರ್ಶನ ಮಾಡಲು ಹೋಗುವುದು ಬೇಡ.

ಕನ್ಯಾ ರಾಶಿ:

ಸಾಲ ಹೆಚ್ಚಾಗುವ ಭೀತಿಯು ಇರುವುದು. ಸಂಗಾತಿಯ ಪರವಾಗಿ ನೀವು ಮಾತನಾಡುವುದು ಅಚ್ಚರಿಯಾದೀತು. ನಿಮ್ಮವರಿಗೆ ಆದ ಅಪಮಾನದಿಂದ ನೀವು ಕೋಪಗೊಳ್ಳುವಿರಿ. ನಿಮ್ಮ ಸಂಕುಚಿತ ಬುದ್ಧಿಯಿಂದ ಎಷ್ಟೇ ಆಲೋಚಿಸಿದರೂ ಸಮಸ್ಯೆಗೆ ಪರಿಹಾರ ಸಿಗದು. ಕಾನೂನು ಸಮರದಲ್ಲಿ ಸೋಲುಣ್ಣಬೇಕಾಗುವುದು. ನಿಮ್ಮ ವ್ಯಕ್ತಿತ್ವದ ನಿರ್ಮಾಣವು ಇನ್ನಷ್ಟು ಆಗಬೇಕಿದೆ. ನಿಮ್ಮ‌ ಮೇಲೆ ಯಾರಾದರೂ ಆರೋಪವನ್ನು ಮಾಡಬಹುದು.

ತುಲಾ ರಾಶಿ:

ಪ್ರಣಯದಲ್ಲಿ ಆಸಕ್ತಿಯು ಹೆಚ್ಚು ಇರುವುದು. ಮನಸ್ಸು ಉದ್ವೇಗದಿಂದ ಹೊರಬರಲು ಮನಸ್ಸು ಮಾರ್ಗವನ್ನು ಹುಡುಕುವುದು.‌ ಒತ್ತಾಯ ಪೂರ್ವಕವಾಗಿ ಆಹಾರವನ್ನು ಸೇವಿಸಿ ಆರೋಗ್ಯ ಕೆಡಬಹುದು. ಸಣ್ಣ ಹೆಜ್ಜೆಯೂ ದೊಡ್ಡ ಗುರಿಗೆ ಕಾರಣವಾಗುವುದು. ಮನೆಯಲ್ಲಿ ಅನ್ಯರಿದ್ದರೂ ನೀವೇ ಪತ್ರವ್ಯವಹಾರವನ್ನು ಮಾಡಬೇಕಾಗುವುದು. ನಿಮ್ಮ ಸಹಜ ವರ್ತನೆಯೂ ತೋರಿಕೆಯಂತೆ ಕಾಣಬಹುದು. ತಾಯಿಯ ಜೊತೆ ಕಲಹವಾಡಿ ಅವರನ್ನು ಬೇಸರಿಸುವಿರಿ.

ವೃಶ್ಚಿಕ ರಾಶಿ:

ನಿಮ್ಮವರ ಇಂಗಿತವನ್ನು ಅರ್ಥಮಾಡಿಕೊಳ್ಳುವಲ್ಲಿ ಸೋಲುವಿರಿ. ಸಾಹಿತ್ಯಾಸಕ್ತರಿಗೆ ಅನುಕೂಲಕರವಾದ ಸನ್ನಿವೇಶಗಳು ಬರಬಹುದು. ಸಂಕಷ್ಟಗಳ ನಿವಾರಣೆಗೆ ದೈವದ ಮೊರೆ ಹೋಗುವಿರಿ. ಅಂತಸ್ತನ್ನು ತೋರಿಸಿದರೆ ನಿಮ್ಮನ್ನು ದೊಡ್ಡವರನ್ನಾಗಿ ಮಾಡಲಾರರು. ನಿಮ್ಮ ಯೋಜನೆಯನ್ನು ಸುಲಭ ಮಾಡಿಕೊಂಡು ಖರ್ಚನ್ನು ಕಡಿತಗೊಳಿಸಿ. ಉದ್ಯಮದ ಆದಾಯವನ್ನು ಹೆಚ್ಚು ಮಾಡಿಕೊಳ್ಳುವಿರಿ. ನಿಮ್ಮ ಕಾರ್ಯದ ಒತ್ತಡವನ್ನು ತಗ್ಗಿಸಿಕೊಳ್ಳಲು ಕೆಲಸವನ್ನು ಹಂಚುವುದು ಉತ್ತಮ.

ಧನು ರಾಶಿ:

ಯಾಂತ್ರಿಕ ಕಾರ್ಯದಲ್ಲಿ ಹೆಚ್ಚು ಸಫಲತೆ ಸಿಗಲಿದೆ. ಸ್ವಂತ ಉದ್ಯಮಕ್ಕೆ ವೇಗವನ್ನು ಕೊಡುವ ಕಾರ್ಯವು ಆಗಬೇಕಿದೆ. ತಂದೆಯಿಂದ ಸಂಪತ್ತನ್ನು ಪಡೆಯುವಿರಿ. ಹಿಂಸಾತ್ಮಕವಾಗಿ ಹೋಗದೇ ಸಮಾಧಾನ ಚಿತ್ತದಿಂದ ಸಮಸ್ಯೆಯನ್ನು ಮಾರ್ಗವನ್ನು ಕಂಡುಕೊಳ್ಳುವಿರಿ. ಇಂದು ಅಸಾಧ್ಯ ಕಾರ್ಯದಲ್ಲು ದುಸ್ಸಾಹಸ ಮಾಡುವುದು ಬೇಡ. ಸಂಗಾತಿ ದುರಭ್ಯಾಸದಿಂದ ನಿಮ್ಮ ಮೇಲೂ ದುಷ್ಪರಿಣಾಮ ಬೀರುವುದು ಸಕಾರಾತ್ಮಕ ಚಿಂತನೆಯ ಬಗ್ಗೆ ಹೆಚ್ಚು ಗಮನವಿರಲಿ.

ಮಕರ ರಾಶಿ:

ನಿಮ್ಮದನ್ನಾಗಿ ಮಾಡಿಕೊಂಡಿದ್ದು ಸ್ವಲ್ಪ ಭೂಮಿಯು ಪರರ ಪಾಲಾಗಬಹುದು. ನೀವು ಇಂದು ಬೇಸರದಿಂದ ಯಾರ ಸಹಾಯವನ್ನೂ ಇಚ್ಛಿಸುವುದಿಲ್ಲ. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಲು ಶ್ರಮ. ಮನೋರಂಜನೆಯನ್ನು ಪಡೆಯಲು ಪೂರಕ ವಾತಾವರಣವನ್ನು ಹುಡುಕುವಿರಿ. ಹಿತಶತ್ರುಗಳನ್ನು ದೂರವಿಟ್ಟು ಕೆಲಸವನ್ನು ಸಾಧಿಸಿಕೊಳ್ಳಬೇಕಾಗಿದೆ. ಜೀವನ ಸಂಗಾತಿಯ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ಸಾಮಾಜಿಕ ಕೆಲಸಗಳು ಗೌರವವನ್ನು ಕೊಡುವುವು.

ಕುಂಭ ರಾಶಿ:

ಪುಣ್ಯಕ್ಷೇತ್ರಗಳ ದರ್ಶನಭಾಗ್ಯವು ಸಿಗಲಿದೆ‌. ಆರೋಗ್ಯದ ಸಮಸ್ಯೆಯು ದೂರವಾಗಲು ಯೋಗ್ಯವಾದ ಆಹಾರವನ್ನು ಸೇವಿಸಿ. ಬಂಧುಗಳ ಭೇಟಿಯಿಂದ ಉತ್ಸಾಹವಿರಲಿದೆ‌. ಅನೇಕ ಜನರ ನಡುವೆ ನೀವು ಮುಂದಡಿ ಇಡುವಿರಿ. ಕಾರ್ಯದಲ್ಲಿ ಮನಸ್ಸು ದುರ್ಬಲವಾದಂತೆ ತೋರುವುದು. ನೀವು ಇಂದು ಕಛೇರಿಯ ಚಿಂತೆಯಲ್ಲಿ ಇರುವ ಕಾರಣ ಎಲ್ಲರ ಮೇಲೂ ಸಿಟ್ಟುಗೊಳ್ಳುವಿರಿ. ನಿಮ್ಮ ಸ್ತುತಿಯನ್ನು ನೀವೇ ಆದಷ್ಟು ಕಡಿಮೆ ಮಾಡಿಕೊಳ್ಳಿ.

ಮೀನ ರಾಶಿ:

ಕುಟುಂಬ ನಿಮ್ಮ ಮಾರ್ಗದರ್ಶನವನ್ನು ಅಪೇಕ್ಷಿಸುತ್ತದೆ. ಸಭೆಗೆ ಅತಿಥಿಯಾಗಿ ಭಾಗವಹಿಸುವಿರಿ. ಅಸ್ತಿ ಹಂಚಿಕೆಯ ವಿಚಾರವು ಇಂದು ಮುನ್ನೆಲೆಗೆ ಬರಬಹುದು‌. ನಿಮ್ಮ ಕೆಲಸಗಳಿಗೆ ತಾತ್ಕಾಲಿಕ ತೊಂದರೆಯು ಬರಬಹುದು. ನಿಮ್ಮವರ ಮೇಲಿದ್ದ ನಿಮ್ಮ ಅಭಿಪ್ರಾಯವು ಬದಲಾಗಬಹುದು. ನಿಮ್ಮ ನಿರೀಕ್ಷೆಯು ಇಂದು ಕಡಿಮೆಯಾಗಲಿದೆ. ನಿಮ್ಮವರ ಪ್ರೀತಿಯನ್ನೂ ನೀವು ಕಳೆದುಕೊಳ್ಳುವಿರಿ.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರಮಾಸ : ಭಾದ್ರಪದ, ಸೌರ ಮಾಸ : ಸಿಂಹ, ಮಹಾನಕ್ಷತ್ರ : ಪೂರ್ವಾಫಲ್ಗುಣೀ, ವಾರ : ಭಾನು, ಪಕ್ಷ : ಶುಕ್ಲ, ತಿಥಿ : ದ್ವಿತೀಯಾ, ನಿತ್ಯನಕ್ಷತ್ರ : ಹಸ್ತಾ, ಯೋಗ : ಶುಕ್ಲ, ಕರಣ : ಕೌಲವ, ಸೂರ್ಯೋದಯ – 06 – 09 am, ಸೂರ್ಯಾಸ್ತ – 06 – 21 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 16:50 – 18:21, ಯಮಗಂಡ ಕಾಲ 12:15 – 13:42, ಗುಳಿಕ ಕಾಲ 15:18 – 16:50

– ಲೋಹಿತ್ ಹೆಬ್ಬಾರ್ 8762924271 (what’s app only)

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ​

Follow Us
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಗೇಪಲ್ಲಿ ಕಾರು ಚಾಲಕನ ಹತ್ಯೆ ಮಾಡಿದ ಆರೋಪಿಗೆ ಪೊಲೀಸರ ತೀವ್ರ ಶೋಧ
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬಾಲ್ಯದಲ್ಲೇ ನಟಿಸುವ ಆಸೆಯಿತ್ತು, ಅಪ್ಪ ಬೇಡ ಅಂದಿದ್ರು: ಮೋನಿಷಾ ವಿಜಯ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಬೆಂಗಳೂರಿಗೆ ಬಂದ ಇಡಿ ನಿರ್ದೇಶಕ ರಾಹುಲ್ ನವೀನ್
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ