ನಿತ್ಯ ಭವಿಷ್ಯ : ಇಂದು ಈ ರಾಶಿಯವರು ಯಾರ ಮಾತಿಗೂ ಮನಸ್ಸು ಬದಲಿಸಿಕೊಳ್ಳರು…

ಶಾಲಿವಾಹನ ಶಕ 1949, ಶ್ರಾವಣ ಮಾಸದ ಕೃಷ್ಣ ಪಕ್ಷದ ದ್ವಾದಶಿ ಮಂಗಳವಾರದ ನಿತ್ಯ ಭವಿಷ್ಯ ಇಲ್ಲಿದೆ. ಇಂದು ಹಣಕಾಸಿನ ಸಮಸ್ಯೆಗಳು, ಸಂತೋಷದ ವಾತಾವರಣ, ಉದ್ಯೋಗಿಗಳಿಗೆ ಕಳಂಕ, ಹಾಗೂ ವಿವಾಹಕ್ಕೆ ಒಪ್ಪಿಗೆಯಂತಹ ವಿಶೇಷ ಸಂಗತಿಗಳು ಕೆಲವು ರಾಶಿಗಳಿಗಿವೆ. ಈ ಲೇಖನದಲ್ಲಿ ನಿಮ್ಮ ರಾಶಿ ಚಿಹ್ನೆಯ ಆಧಾರದ ಮೇಲೆ ದೈನಂದಿನ ಅದೃಷ್ಟ, ಪ್ರೀತಿ, ವೃತ್ತಿ ಮತ್ತು ಆರೋಗ್ಯದ ಕುರಿತು ವಿವರವಾದ ಮಾಹಿತಿಯನ್ನು ಪಡೆಯಿರಿ.

ನಿತ್ಯ ಭವಿಷ್ಯ : ಇಂದು ಈ ರಾಶಿಯವರು ಯಾರ ಮಾತಿಗೂ ಮನಸ್ಸು ಬದಲಿಸಿಕೊಳ್ಳರು...
ಸಾಂದರ್ಭಿಕ ಚಿತ್ರ
Image Credit source: Tv9 kannada
Edited By:

Updated on: Sep 08, 2026 | 3:16 AM

ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಶ್ರಾವಣ ಮಾಸದ ಕೃಷ್ಣ ಪಕ್ಷದ ದ್ವಾದಶೀ ತಿಥಿಯ ಮಂಗಳವಾರದಂದು ಹಣಕಾಸಿನ ಸಮಸ್ಯೆ ಊರ್ಜಿತ, ಆನಂದದ ವಾತಾವರಣ, ಇಬ್ಬಗೆಯ ಮನಃಸ್ಥಿತಿ, ಉದ್ಯೋಗಿಗಳಿಗೆ ಕಳಂಕ, ವಿವಾಹಕ್ಕೆ ಒಪ್ಪಿಗೆ ಇವೆಲ್ಲ ಇಂದಿನ ವಿಶೇಷ.

ಶಾಲಿವಾಹನ ಶಕೆ 1949ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರಮಾಸ : ಶ್ರಾವಣ, ಸೌರ ಮಾಸ : ಸಿಂಹ, ಮಹಾನಕ್ಷತ್ರ : ಪೂರ್ವಾಫಲ್ಗುಣೀ, ವಾರ : ಮಂಗಳ, ಪಕ್ಷ : ಕೃಷ್ಣ, ತಿಥಿ : ದ್ವಾದಶೀ, ನಿತ್ಯನಕ್ಷತ್ರ : ಆರ್ದ್ರಾ, ಯೋಗ : ವರಿಯಾನ್, ಕರಣ : ಕೌಲವ, ಸೂರ್ಯೋದಯ – 06 – 09 am, ಸೂರ್ಯಾಸ್ತ – 06 – 24 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:21 – 16:53, ಯಮಗಂಡ ಕಾಲ 09:13 – 10:45, ಗುಳಿಕ ಕಾಲ 12:17 – 13:49

ಮೇಷ ರಾಶಿ :
ನೀವು ಅಂದುಕೊಂಡಂತೆ ಆಗಲಿದ್ದು ಅನುಕೂಲವೆನಿಸುವುದು. ಕುಟುಂಬದ ಜೊತೆ ಸಂತೋಷದಿಂದ ದಿನ ಕಳೆಯುವಿರಿ. ವಾಹನ ಖರೀದಿಯನ್ನು ಮಾಡಲು ತೆರಳುವಿರಿ. ಸ್ತ್ರೀಯರಿಂದ ನಿಮಗೆ ಅನೇಕ ಸಹಾಯವು ಆಗಬಹುದು. ಪ್ರತ್ಯಕ್ಷವಾಗಿ ಇಲ್ಲದ ಕಾರಣ ತಪ್ಪುಗಳನ್ನು ನಿಮ್ಮ‌ ಮೇಲೇ ಹಾಕುವವರಿದ್ದಾರೆ. ಪತ್ನಿಯನ್ನು ದ್ವೇಷಿಸುವ ಮಾನಸಿಕತೆ ಉಂಟಾಗಲಿದೆ. ಹಣವನ್ನು ಕೊಟ್ಟು ಕಳೆದುಕೊಳ್ಳುವಿರಿ. ಸೂಕ್ಷ್ಮ ವ್ಯವಹಾರವನ್ನು ನಿರ್ವಹಿಸಲು ಸುಲಭವಾಗಿ ಸಾಧ್ಯ.

ವೃಷಭ ರಾಶಿ :
ನಿಮಗೆ ಹೊಸ ಉತ್ಪನ್ನಗಳ ಅವಶ್ಯಕತೆ ಇದ್ದರೆ ಮಾತ್ರ ಖರೀದಿಸಿ. ಆಹಾರದ ವ್ಯತ್ಯಾಸವು ಅನಾರೋಗ್ಯಕ್ಕೆ ಕಾರಣವಾಗಬಹುದು. ಮಾತಿನ ಮೇಲೆ ನಿಮಗೆ ಹಿಡಿತವಿರಲಿ. ಕಲಾವಿದರು ಅವಕಾಶಗಳನ್ನು ಕೇಳಿ ಪಡೆಯಬೇಕಾದೀತು. ಶತ್ರುಗಳ ಕಾಟವು ಬೇರೆ ಕೆಲಸವನ್ನು ನಿಧಾನ ಮಾಡಬಹುದು. ನಿಮ್ಮವರೇ ನಿಮ್ಮ‌ ಬಗ್ಗೆ ಆಪಾದನೆಯನ್ನು ಮಾಡುವರು. ನಿಮ್ಮ ಮಾತಿನಲ್ಲಿ ಇರುವ ಸುಳ್ಳು ಇತರರಿಗೂ ಗೊತ್ತಾಗುವುದು. ಏನನ್ನಾದರೂ ಹೇಳಿ ಅವಮಾನ ಮಾಡಿಕೊಳ್ಳುವ ಸಾಧ್ಯತೆ ಇದೆ.

 

ಮಿಥುನ ರಾಶಿ :
ವೈಷಮ್ಯಗಳಿಂದ ನಿಮಗೆ ಮಾನಸಿಕವಾಗಿ ಕಷ್ಟವಾಗಬಹುದು. ವೈವಾಹಿಕ ಜೀವನದಲ್ಲಿ ಸಂಗಾತಿಯಿಂದ ಒತ್ತಡ ಇರುವುದು. ಆರ್ಥಿಕತೆಯಿಂದ ಬೀಗುವುದು ಬೇಡ. ಮನಸ್ಸಿನಲ್ಲಿ ನಾನಾತರಹದ ಆಲೋಚನೆಗಳು ಬರಬಹುದು. ದೂರ ಪ್ರಯಾಣ ಮಾಡಲಿದ್ದು ಇಷ್ಟದೇವರನ್ನು ಸ್ಮರಿಸಿಕೊಂಡು ಹೋಗುವುದು ಉತ್ತಮ. ನಿಮ್ಮ ಅಸಹಜ ನಡೆಯಿಂದ ಬೇರೆಯವರಿಗೆ ಬೇಸರವಾದೀತು. ಕೆಲಸ ಕೊಡಿಸುವುವಲದಾಗಿ ನಿಮ್ಮನ್ನು ನಂಬಿಸುವರು. ಆಪ್ತರಿಗೆ ನಿಮ್ಮ ಒಡಲಾಳವನ್ನು ಹೇಳಿಕೊಳ್ಳುವಿರಿ.

 

ಕರ್ಕಾಟಕ ರಾಶಿ :
ಯಾರದೋ ಕೆಳಗೆ ಕೆಲಸ ಮಾಡುವ ಮನಸ್ಸು ಹೋಗುವುದು. ಭೂಮಿಯಿಂದ ಲಾಭ ಪಡೆಯುವ ತಂತ್ರವನ್ನು ಮಾಡುವಿರಿ. ಒಳಗೆ ಕ್ರೂರ ಹೊರಗೆ ಸೌಮ್ಯವಾದ ಮುಖವಾಡ ಧರಿಸುವಿರಿ. ಮಕ್ಕಳ ವಿವಾಹದ ಚಿಂತೆ ನಿಮಗಿರಲಿದೆ. ನಿಮಗೆ ಕೆಲವು ವಿಚಾರಗಳನ್ನು ಮನವರಿಕೆ ಮಾಡಿಸುವುದು ಕಷ್ಟ. ಹಳೆಯ ರೋಗವು ಪುನಃ ಕಾಣಿಸಿಕೊಳ್ಳಬಹುದು. ನಿಮ್ಮ ತಮಾಷೆಯು ಅತಿರೇಕವಾದೀತು. ಎಲ್ಲವನ್ನೂ ಬದಲಿಸುತ್ತೇನೆ ಎಂಬ ಅಧಿಕಾರದ ಮಾತು ವ್ಯರ್ಥವಾಗಬಹುದು.

ಸಿಂಹ ರಾಶಿ :
ಇಂದಿನ‌ ಕೆಲಸದಲ್ಲಿ ಹೆಚ್ಚಿನ ಮುನ್ನಡೆಯಾಗಲಿದ್ದು ನಿಮ್ಮ ಪ್ರಯತ್ನದ ಬಗ್ಗೆ ವಿಶ್ವಾಸವು ಮೂಡುವುದು. ಯಾರಾದರೂ ಸುಳ್ಳು ಹೇಳಿ ಸರಳವಾಗಿ ನಿಮ್ಮನ್ನು ನಂಬಿಸುವರು. ಆಕಸ್ಮಿಕವಾದ ವಿಷಯಗಳು ನಿಮಗೆ ಕ್ಲೇಶವನ್ನು ಕೊಡಬಹುದು. ಅಶಿಸ್ತಿನ ಜೀವನವು ನಿಮಗೆ ಅಸಮಾಧನಾವನ್ನು ಕೊಡಬಹುದು. ನಿಮ್ಮ ಪ್ರಾರ್ಥನೆ ಫಲಿ ಕೊಟ್ಟಿದ್ದು ಅಚ್ಚರಿಯಾಗಲಿದೆ. ಅನ್ಯರಿಂದ ಸಂತೋಷವನ್ನು ಪಡೆಯುವಿರಿ. ಉದ್ಯೋಗಕ್ಕೆ ವಿದೇಶದತ್ತ ಗಮನವಿರುವುದು. ಇನ್ನೊಬ್ಬರ ಮೇಲಿನ ದ್ವೇಷವನ್ನು ನಿಲ್ಲಿಸಲಾಗದು.

ಕನ್ಯಾ ರಾಶಿ :
ಆರೋಪವನ್ನೂ ಅಪವಾದವನ್ನೂ ಧೈರ್ಯದಿಂದ ಎದುರಿಸುವಿರಿ. ನಿಮ್ಮ ಉದ್ಯಮಕ್ಕೆ ಸಲಹೆಗಾರರನ್ನು ನಿಯಮಿಸಿಕೊಳ್ಳುವ ಸಾಧ್ಯತೆ ಇದೆ. ತಾಯಿಯ ಕಡೆಯಿಂದ ಲಾಭವನ್ನು ನೀವು ನಿರೀಕ್ಷಿಸುವಿರಿ. ಯಾರಾದರೂ ನಿಮ್ಮ ಮೇಲೆ ಅಧಿಕಾರವನ್ನು ಚಲಾಯಿಸಬಹುದು. ಹಲವು ದಿನಗಳಿಂದ‌ ಕುಂಟುತ್ತಿದ್ದ ನಿಮ್ಮ ವಿವಾಹವು ನಿಶ್ಚಯವಾಗುವ ಸಾಧ್ಯತೆ ಇದೆ. ಆಹಾರವನ್ನು ಸಮಯಕ್ಕೆ ಸರಿಯಾಗಿ ಸೇವಿಸಿ. ಎಲ್ಲವನ್ನೂ ಬಲ್ಲವರಂತೆ ತೋರಿಸಿಕೊಳ್ಳುವಿರಿ.

ತುಲಾ ರಾಶಿ :
ನಿಮ್ಮ ಮನಸ್ಸಿನಲ್ಲಿ ಅವ್ಯಕ್ತವಾಗಿ ಆತಂಕವು ಮನೆ ಮಾಡಬಹುದು. ಇಂದು ಕೈಗೊಂಡ ಪ್ರವಾಸದಲ್ಲಿ ನಿಮಗೆ ಅಸಮಾಧನ ಇರಲಿದೆ. ಮನೆಯಲ್ಲಿ ನಡೆಯುವ ಶುಭಕಾರ್ಯಗಳು ಮುಂದಕ್ಕೆ ಹೋಗಬಹುದು. ಸಹನೆಯಿಂದ ಆಗುವ ಲಾಭವು ಅನುಭವವೇದ್ಯವಾಗಿರಲಿದೆ. ಮಕ್ಕಳು ನಿಮ್ಮ ಮಾತನ್ನು ಕೇಳದೇ ಸ್ವೇಚ್ಛೆಯಿಂದ ನಡೆದುಕೊಳ್ಳುವರು.‌ ಕಲಾವಿದರು ವಿದೇಶಗಳಿಗೆ ಹೋಗುವ ಅವಕಾಶ ಇರುವುದು. ನಿಮ್ಮ ಬಗ್ಗೆ ನೀವೇ ಹೇಳಿಕೊಳ್ಳಬೇಕಾಗುವುದು.

ವೃಶ್ಚಿಕ ರಾಶಿ :
ನೀವು ಎಲ್ಲವೂ ದೈವಾನುಗ್ರದಂತೆ ಆಗುತ್ತದೆ ಎಂದು ಸುಮ್ಮನಿರದೇ ಪ್ರಯತ್ನವನ್ನೂ ಮಾಡಿ. ಪ್ರಯೋಜನಕ್ಕೆ ಬಾರದ ಸಂಗತಿಗಳನ್ನು ಮಾತನಾಡಿ ಸಮಯ ಹಾಳು ಮಾಡುವಿರಿ. ಸಂಗಾತಿಯ ಮೌನವು ನಿಮ್ಮಲ್ಲಿ ಆತಂಕವನ್ನು ಹುಟ್ಟಿಸಬಹುದು. ಸ್ವೇಚ್ಛೆಯಿಂದ ವಾಹನ ಸಂಚಾರ ಮಾಡಿ, ದಂಡವನ್ನು ವಿಧಿಸಿಕೊಳ್ಳಬೇಕಾಗುವುದು. ಮನಸ್ಸಿನಲ್ಲಿ ಅಧಿಕ ಚಿಂತೆಗಳು ಸುಳಿದಾಡುವುದು. ನಿಮ್ಮನ್ನು ಅಪರಿಚಿತರು ಭೇಟಿ ಮಾಡಬಹುದು. ಅವಶ್ಯಕತೆಗೆ ಇದ್ದಷ್ಟನ್ನು ಮಾತ್ರ ಹೇಳಿ.

ಧನು ರಾಶಿ :
ಸರ್ಕಾರಿ ಉದ್ಯೋಗವು ಕಿರಿಕಿರಿ ಎನಿಸಿದರೂ ನೀವು ಅದನ್ನು ಬಿಡಲಾರಿರಿ. ನಿಮಗೆ ಶತ್ರುಗಳು ಪಾಠಕಲಿಸುವರು. ನಿಮ್ಮನ್ನು ವ್ಯಕ್ತಪಡಿಸಲಾಗದ ಸಮಸ್ಯೆಯೊಂದು ಕಾಡುತ್ತಿದ್ದು ಅದನ್ನು ಪರಿಹಾರ ಮಾಡಿಕೊಳ್ಳುವಿರಿ. ಒತ್ತಡದಿಂದ ನಿಮಗೆ ಕೆಲಸಗಳು ಸೂಚಿಸದೇ ಹೋಗಬಹುದು. ಬಂಧುಗಳನ್ನು ಕಳೆದುಕೊಳ್ಳುವಿರಿ. ಸಂಗಾತಿಯ ಇಚ್ಛೆಗೆ ಅನುಸಾರವಾಗಿ ನಡೆದುಕೊಳ್ಳುವಿರಿ. ಹಿರಿಯರಿಂದ ನಿಮಗೆ ಸರಿಯಾದ ಮಾರ್ಗದರ್ಶನ ಸಿಗದು.

ಮಕರ ರಾಶಿ :
ನಿಮ್ಮ ವ್ಯಕ್ತಿತ್ವವನ್ನು ಬದಲಿಸಿಕೊಳ್ಳುವ ಬಗ್ಗೆ ಆಲೋಚಿಸುವಿರಿ. ಆರ್ಥಿಕ ಕ್ಷೇತ್ರದ ಜನರಿಗೆ ತೊಂದರೆ ಬಾರದೇ ಕಾರ್ಯಗಳು ಮುಗಿಯುವುದು. ಅನಿರೀಕ್ಷಿತ ದ್ರವ್ಯದ ಲಾಭದಿಂದ ನಿಮಗೆ ಸಂತೋಷವಾಗಲಿದೆ. ಫಲಿತಾಂಶಕ್ಕೆ ಮೊದಲೇ ನಿಮಗೆ ಉದ್ಯೋಗ ಪ್ರಾಪ್ತಿಯಾಗಲಿದೆ. ಸಂತೋಷಕ್ಕಾಗಿ ಯಾರನ್ನೋ ಅವಲಂಬಿಸಬೇಕಿಲ್ಲ. ದಾಂಪತ್ಯದಲ್ಲಿ ಪರಸ್ಪರ‌ ವೈರಿಗಳಂತೆ ಕಚ್ಚಾಡುವುದು ಬೇಡ. ದೂರ ಪ್ರಯಾಣವು ನಿಮಗೆ ಇಂದು ಅನಿವಾರ್ಯವಾದೀತು.

ಕುಂಭ ರಾಶಿ :
ನಿಮ್ಮ ಪರಿಧಿಯನ್ನು ಮೀರಿ ವರ್ತಿಸುವಿರಿ. ಮನಸ್ಸಿನ ನೆಮ್ಮದಿಯನ್ನು ನೀವು ಹಾಳುಮಾಡಿಕೊಳ್ಳಲಿದ್ದೀರಿ. ಸಂಗಾತಿಯಿಂದ ಸಿಗುವ ಸುಖದಿಂದ ನೀವು ವಂಚಿತರಾಗಬಹುದು. ದೀರ್ಘಕಾಲದ ಕಾರ್ಯಕ್ಕೆ ಅಲ್ಪವಿರಾಮ ಬೇಕಾಗುವುದು. ನಿಮ್ಮ ನಿರೀಕ್ಷೆಯು ಹುಸಿಯಾಗಬಹುದು. ಉತ್ತಮವಾದ ಆಯ್ಕೆಯಲ್ಲಿ ನೀವು ಸೋಲುವಿರಿ. ಮನಸ್ಸನ್ನು ಖಾಲಿ ಬಿಡದೇ ಏನನ್ನಾದರೂ ಆಲೋಚಿಸಿ. ಕುಟುಂಬದ ಭೇದವನ್ನು ಬಹಿರಂಗಪಡಿಸುವುದು ಬೇಡ.

ಇದನ್ನೂ ಓದಿ: ವಾರ ಭವಿಷ್ಯ: ನಿಮ್ಮ ರಾಶಿಗನುಗುಣವಾಗಿ ಸಪ್ಟೆಂಬರ್ ತಿಂಗಳ ಎರಡನೇ ವಾರದ ಭವಿಷ್ಯ ತಿಳಿಯಿರಿ

ಮೀನ ರಾಶಿ :
ಆದಾಯವೂ ಎಣಿಸದ್ದಕ್ಕಿಂತ ಅಧಿಕವಾಗಲಿದೆ. ದಾಂಪತ್ಯದ ಸುಖವು ನಿಮಗೆ ಹೆಚ್ಚು ಇಷ್ಟವಾದೀತು. ಮನಸ್ಸಿನಲ್ಲಿ ಸಂಯಮವಿರಲಿ. ವೈವಾಹಿಕ ಜೀವನಕ್ಕೆ ಬಂಧುಗಳಿಂದ ಒತ್ತಡ ಬರಬಹುದು. ಆತುರದಿಂದ ಏನ್ನಾದರೂ ಮಾಡಿಕೊಳ್ಳಬಹುದು. ಹಣವನ್ನು ಕೊಟ್ಟು ಕಳೆದುಕೊಳ್ಳಲು ಹೋಗಬೇಡಿ. ದೂರ ಪ್ರಯಾಣದಲ್ಲಿ ದಾರಿ ತಪ್ಪಬಹುದು. ಇನ್ನೊಬ್ಬರ ಬಗ್ಗೆ ಇಂದು ನಿಮಗೆ ಹೆಚ್ಚು ಕುತೂಹಲ ಇರಲಿದೆ. ಅನಪೇಕ್ಷಿತ ಚರ್ಚೆಯಿಂದ ನೀವು ದೂರವಿರುವಿರಿ.

-ಲೋಹಿತ್ ಹೆಬ್ಬಾರ್ – 8762924271 (what’s app only)

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us