
ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2024 ಆಗಸ್ಟ್ 23) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಮಘಾ, ಮಾಸ: ಶ್ರಾವಣ, ಪಕ್ಷ: ಕೃಷ್ಣ, ವಾರ: ಶುಕ್ರ, ತಿಥಿ: ಚತುರ್ಥೀ, ನಿತ್ಯನಕ್ಷತ್ರ: ರೇವತೀ, ಯೋಗ: ಧೃತಿ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 20 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:49 ಗಂಟೆ, ರಾಹು ಕಾಲ ಬೆಳಿಗ್ಗೆ 11:02 ರಿಂದ ಮಧ್ಯಾಹ್ನ 12:35, ಯಮಘಂಡ ಕಾಲ ಮಧ್ಯಾಹ್ನ 03:42 ರಿಂದ ಸಂಜೆ 05:16ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 07:55 ರಿಂದ 09:28ರ ವರೆಗೆ.
ಧನು ರಾಶಿ: ಇಂದು ನೀವು ಹಾಕಿಕೊಂಡ ಯೋಜನೆಗೆ ಕುಟುಂಬದ ಸಹಾಯವು ಲಭ್ಯವಾಗಲಿದೆ. ದೈವಾನುಗ್ರಹಕ್ಕೆ ಕಠಿಣವಾದ ಕಾರ್ಯವನ್ನೂ ಮಾಡುವಿರಿ. ನಿಮ್ಮ ಆರೋಗ್ಯವನ್ನು ವಿಚಾರಿಸಲು ಬಂಧುಗಳು ಬರಬಹುದು. ಧಾರ್ಮಿಕ ಕಾರ್ಯದಲ್ಲಿ ನೀವು ಭಾಗಿಯಾಗಲಿದ್ದೀರಿ. ಪುಣ್ಯಸ್ಥಳಗಳಿಗೆ ನೀವು ಹೋಗುವ ಅವಕಾಶ ಸಿಗಲಿದೆ. ಎಷ್ಟೇ ಪ್ರಯತ್ನಿಸಿದರೂ ನಿಮಗೆ ಸಿಗುವುದು ಕಷ್ಟವಾದಾಗ ಅದನ್ನು ಬಿಟ್ಟು ಮುನ್ನಡೆಯುವುದು ಸೂಕ್ತ. ಉತ್ತಮ ಸಂಗತಿಗಳ ಕಡೆ ನಿಮ್ಮ ಗಮನವಿರಲಿ. ನಕಾರಾತ್ಮಕ ಚಿಂತನೆಯನ್ನು ನೀವು ನಿಧಾನವಾಗಿ ಕಡಿಮೆ ಮಾಡಿಕೊಳ್ಳಿ. ಕಾರ್ಯ ಸ್ಥಳದಲ್ಲಿ ನಿಮ್ಮ ವ್ಯವಸ್ಥಾಪಕರೊಂದಿಗೆ ನೀವು ಉತ್ತಮ ಬಾಂಧವ್ಯವನ್ನು ಹೊಂದುವಿರಿ. ನಿಮ್ಮ ಶ್ರಮದ ಲಾಭವನ್ನು ಮತ್ಯಾರಾದರೂ ಪಡೆಯಬಹುದು. ವ್ಯಾಪಾರದಲ್ಲಿ ಚಾಣಕ್ಷತೆಯಿಂದ ಲಾಭವನ್ನು ಪಡೆಯುವಿರಿ. ಸಹೋದರಿಯ ಜವಾಬ್ದಾರಿಯೂ ನಿಮಗೆ ಬರಲಿದ್ದು ನಿಮ್ಮ ಜವಾಬ್ದಾರಿ ಹೆಚ್ಚಾಗುವುದು.
ಮಕರ ರಾಶಿ; ಇಂದು ನಿಮ್ಮ ಆಲೋಚನಗಳಿಗೆ ಉತ್ತಮ ಪ್ರತಿಕ್ರಿಯೆ ಸಿಗಲಿದೆ. ಉದ್ಯೋಗಕ್ಕೆ ವಿದಾಯ ಹೇಳುವ ಸಂದರ್ಭವು ಬರಬಹುದು. ನಿಮ್ಮ ನೆಚ್ಚಿನವರ ಭೇಟಿಯಾಗುವ ಸಂದರ್ಭ ಬಂದರೂ ಕಾರಣಾಂತರಗಳಿಂದ ತಪ್ಪಿಹೋಗಬಹುದು. ನಿಮಗೆ ಸಹಕರಿಸಿದವರನ್ನು ಕೃತಜ್ಞತೆಯಿಂದ ಸ್ಮರಿಸಿ. ನಿಮಗೆ ನಿಮ್ಮ ವಂಶದ ಕಾರಣದಿಂದ ಗೌರವ ಸಿಗಬಹುದು. ಕೆಲಸಗಳಿಗೆ ಪ್ರಂಶಸೆ ಸಿಗಲಿದೆ. ನಿಮ್ಮ ಹಾಸ್ಯ ಸ್ವಭಾವವು ಕೆಲವರಿಗೆ ಕಷ್ಟವಾದೀತು. ಪ್ರಯಾಣವು ಅಗತ್ಯವಿದ್ದರಷ್ಟೇ ಮಾಡಿ. ಯಾರನ್ನೂ ಅವಲಂಬಿಸದೇ ನಿಮಗೆ ಬೇಗನೆ ಕೆಲಸ ಆಗಬಹುದು. ಕಛೇರಿಯಲ್ಲಿ ನಿಮ್ಮನ್ನು ಪ್ರಶಂಸಿಸಬಹುದು. ಅದನ್ನು ಸಮವಾಗಿ ತೆಗೆದುಕೊಳ್ಳಿ. ಅತಿಯಾದ ವೈಭವೀಕರಣದಿಂದ ನಿಮಗೆ ಕಷ್ಟವಾಗವುದು ಬೇಡ. ಶಿಸ್ತನ್ನು ಬಿಡದೇ ಪಾಲಿಸುವುದು ನಿಮಗೆ ಗೌರವವನ್ನು ತಂದು ಕೊಡುವುದು. ಅಪರಿಚಿತರು ನಿಮ್ಮನ್ನು ಅಳೆಯಬಹುದು. ಶಿಸ್ತುಬದ್ಧವಾದ ವ್ಯವಹಾರದಿಂದ ನಿಮಗೆ ಹೊಗಳಿಕೆ ಸಿಗುವುದು.
ಕುಂಭ ರಾಶಿ; ಇಂದು ನಿಮ್ಮ ಕಾರ್ಯಗಳು ನಿಧಾನಗತಿಯಲ್ಲಿ ಇರಲಿದೆ. ಕುಟುಂಬದವರಿಗೆ ಸಮಯ ಕೊಡುವುದು ಕಷ್ಟವಾದೀತು. ಆರ್ಥಿಕವಾಗಿ ನೀವು ಸುಧಾರಣೆ ಕಾಣಬೇಕು ಎಂದಿದ್ದರೂ ನೀವು ಆಲಸ್ಯದಿಂದ ಹೊರಬರಬೇಕಾದೀತು. ಉತ್ಸಾಹದ ಕೊರತೆ ಅತಿಯಾಗಿ ತೋರುವುದು. ಸಹನೆಯನ್ನು ನಿಯಂತ್ರಿಸಲು ಸಾಧ್ಯವಾಗದು. ಅಧಿಕಾರದ ಮಾತು ಇಂದು ನಡೆಯದೇ ಇದ್ದೀತು. ವೇತನವನ್ನು ಹೆಚ್ಚಿಸಲು ನೀವು ವಿನಂತಿ ಮಾಡಿಕೊಳ್ಳಬಹುದು. ಪಾಂಡಿತ್ಯ ಪ್ರದರ್ಶನದಿಂದ ಮೂರ್ಖರಾಗುವ ಸಾಧ್ಯತೆ ಇದೆ. ಸಂಗಾತಿಯ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ಸ್ನೇಹಿತರ ಭೇಟಿಯಾಗಲು ಇಂದು ಬಹಳ ಸಮಯ ಕಾಯುವಿರಿ. ಯಾರನ್ನಾದರೂ ನಂಬಲು ನಿಮ್ಮ ಮನಸ್ಸು ಸಿದ್ಧವಿರದು. ಸಜ್ಜನರಿಗೆ ಭೋಜನವನ್ನು ಹಾಕಿಸಿ. ದೂರದ ಊರಿಗೆ ಹೋದಾಗ ಉತ್ತಮ ವ್ಯವಸ್ಥೆ ಆಗಲಿದೆ. ಅಗ್ನಿಯಿಂದ ನಿಮಗೆ ಭಯವು ಕಾಡುವುದು. ನಿಮ್ಮನ್ನು ಮಕ್ಕಳು ನೋಡುವರು.
ಮೀನ ರಾಶಿ: ಇಂದು ನಿಮ್ಮ ಸ್ವಂತ ಉದ್ಯಮದಲ್ಲಿ ನಿಮಗೆ ಲಾಭವಿದೆ. ಹೂಡಿಕೆಯ ಹಣವೇ ನಿಮಗೆ ಧೈರ್ಯವನ್ನು ಕೊಡುತ್ತದೆ. ನಿಮ್ಮ ಅತಿಯಾದ ಉತ್ಸಾಹವು ಯಾರಾದರೂ ನೋಡಿ ಆಡಿಕೊಳ್ಳಬಹುದು. ನಿಮ್ಮ ಕಾರ್ಯಕೌಶಲವು ಸಹೋದ್ಯೋಗಿಗಳಿಗೆ ತಿಳಿಯಬಹುದು. ಮಿತ್ರರಿಗೋಸ್ಕರ ಸ್ವಲ್ಪವನ್ನು ತ್ಯಾಗಮಾಡುವಿರಿ. ನಿಮ್ಮ ಅಂದಾಜಿಗೆ ತಕ್ಕಂತೆ ನಡೆಯದೇ ಇರುವುದು ಬೇಸರವನ್ನು ಉಂಟುಮಾಡೀತು. ಸ್ತ್ರೀಯರ ಜೊತೆ ಹೆಚ್ಚಿನ ಸಮಯವನ್ನು ಕಳೆಯುವಿರಿ. ನಿಮ್ಮ ಮಾತುಗಳು ಇತರರಿಗೆ ಹೆಚ್ಚಾದಂತೆ ತೋರೀತು. ದಿನ ನಿತ್ಯದ ವಸ್ತುಗಳೇ ನಿಮಗೆ ಬಹಳ ಹೆಚ್ಚಾದಂತೆ ಅನ್ನಿಸುವುದು. ಯಾರನ್ನೂ ನಂಬುವ ಸ್ಥಿತಿಯಲ್ಲಿ ಇಂದು ನೀವಿರುವುದಿಲ್ಲ. ಅದಷ್ಟು ಕಡಿಮೆ ಮಾತನಾಡಿ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ. ಅವರ ಆರೋಗ್ಯವೂ ಚೇತರಿಕೆ ಕಾಣುವುದು. ಇಂದು ನಿಮ್ಮ ಆದಾಯವನ್ನು ಇಮ್ಮಡಿಗೊಳಿಸಿಕೊಳ್ಳಬಹುದು.