Horoscope: ಇಂದು ಹೆಚ್ವಿನ ಸಮಯವನ್ನು ಆಟ, ಓಟಗಳಲ್ಲಿ ಕಳೆಯುವಿರಿ
ಆಗಸ್ಟ್ 23, 2024ರ ನಿಮ್ಮ ರಾಶಿಭವಿಷ್ಯ: ನಿಮ್ಮ ಸಾಮರ್ಥ್ಯವನ್ನು ಅಳೆಯುವ ಸಮಯ ಇಂದು ಬರಬಹುದು. ಧಾರ್ಮಿಕ ವಿಚಾರವನ್ನು ನೀವು ತಿಳಿದವರ ಬಳಿ ಮಾತನಾಡಬಹುದು. ಹಣವನ್ನು ವಿನಾಕಾರಣ ಕಳೆದುಕೊಳ್ಳುವ ಸಾಧ್ಯತೆ ಇದೆ. ಅಧಿಕ ಮಾತು ನಿಮ್ಮವರಿಗೆ ಇಷ್ಟವಾಗದು. ಹಾಗಾದರೆ ಆಗಸ್ಟ್ 23ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

ಜ್ಯೋತಿಷ್ಯದಿಂದ ಮಾನವ ವ್ಯವಹಾರಗಳು ಮತ್ತು ಭೂಮಂಡಲದ ಸಂಗತಿಗಳನ್ನು ತಿಳಿಯಬಹುದಾಗಿದೆ. ಜಾತಕವನ್ನು ಸಾಮಾನ್ಯವಾಗಿ ಹನ್ನೆರಡು ಜ್ಯೋತಿಷ್ಯ ರಾಶಿಗಳನ್ನು ಹೊಂದಿದೆ. ಪ್ರತಿಯೊಂದೂ ವ್ಯಕ್ತಿಯ ಜೀವನ ಮತ್ತು ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಮಘಾ, ಮಾಸ: ಶ್ರಾವಣ, ಪಕ್ಷ: ಕೃಷ್ಣ, ವಾರ: ಶುಕ್ರ, ತಿಥಿ: ಚತುರ್ಥೀ, ನಿತ್ಯನಕ್ಷತ್ರ: ರೇವತೀ, ಯೋಗ: ಧೃತಿ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 20 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:49 ಗಂಟೆ, ರಾಹು ಕಾಲ ಬೆಳಿಗ್ಗೆ 11:02 ರಿಂದ ಮಧ್ಯಾಹ್ನ 12:35, ಯಮಘಂಡ ಕಾಲ ಮಧ್ಯಾಹ್ನ 03:42 ರಿಂದ ಸಂಜೆ 05:16ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 07:55 ರಿಂದ 09:28ರ ವರೆಗೆ.
ಮೇಷ ರಾಶಿ: ನಿಮ್ಮಲ್ಲಿರುವ ಆರೋಗ್ಯವೇ ನಿಮ್ಮ ದೊಡ್ಡ ಸಂಪತ್ತು. ನಿಮ್ಮ ನೋವನ್ನು ಶತ್ರುಗಳು ಸಕಾರಾತ್ಮಕವಾಗಿ ತೆಗೆದುಕೊಳ್ಳಬಹುದು. ಸಾಮಾಜಿಕವಾಗಿ ಮನ್ನಣೆ ಸಿಗುವ ದಿನ. ನಿಮಗೆ ಮರಣಭೀತಿ ಕಾಡುವ ಸಾಧ್ಯತೆ ಇದೆ. ಬೇಕಾದುದನ್ನು ಪಡೆಯಲು ದಾಕ್ಷಿಣ್ಯವು ನಿಮಗೆ ಅಡ್ಡ ಬರಬಹುದು. ಇದ್ದಕಿದ್ದಂತೇ ಏನನ್ನಾದರೂ ಆಲೋಚಿಸಲಿದ್ದೀರಿ. ಮನಸ್ಸಿನ ತೀರ್ಮಾನಕ್ಕೆ ತಕ್ಕಂತೆ ನಿಮ್ಮ ನಡೆ ಇರಲಿದೆ. ಒಳ್ಳೆಯ ವಿಚಾರಕ್ಕೆ ನೀವು ಹೆಚ್ಚಿನ ಒತ್ತುಕೊಡಲಿದ್ದೀರಿ. ಒಳ್ಳೆಯದೇ ಆದರೂ ಮಿತಿಯಲ್ಲಿ ಇದ್ದರೆ ಒಳ್ಳೆಯದು. ಸರಳವಾಗಿರಲು ನೀವು ಇಚ್ಛಿಸುವಿರಿ. ಯಾರಿಗಾದೂ ಸಾಲವನ್ನು ಕೊಡಲು ಮುಂದಾಗುವಿರಿ. ಮಂದಗತಿಯಲ್ಲಿ ನಿಮ್ಮ ಇಂದಿನ ಕೆಲಸಗಳು ಸಾಗಬಹುದು. ಹೂಡಿಕೆಯ ಬಗ್ಗೆ ತಜ್ಞರಿಂದ ಮಾಹಿತಿ ಪಡೆದು ಮುಂದುವರಿಯಿರಿ. ಜಯದಿಂದ ಬೀಗುವುದು ಬೇಡ. ಸಾಮಾಜಿಕ ಮುಖಂಡರು ಸಂಘಟನೆಯಲ್ಲಿ ತೊಡಗುವರು. ತಂತ್ರಜ್ಞಾನವನ್ನು ನೀವು ಅತಿಯಾಗಿ ಬಳಸುವಿರಿ.
ವೃಷಭ ರಾಶಿ: ಇಂದು ನೀವು ಸಾಲಗಾರರ ಕಾಟದಿಂದ ನೀವು ಮುಕ್ತರಾಗುವಿರಿ. ಅನಿರೀಕ್ಷಿತ ಧನಲಾಭವು ನಿಮ್ಮ ನಿಶ್ಚಿಂತೆಗೆ ಕಾರಣವಾಗಲಿದೆ. ನಿಮಗೆ ಸುರಕ್ಷಿತ ಸ್ಥಳದಲ್ಲಿ ಇದ್ದು ಬೇಸರವಾಗಬಹುದು. ಉದ್ಯೋಗಕ್ಕೆ ಸೇರಲು ಬೇಕಾದ ತಯಾರಿಯಲ್ಲಿ ನೀವು ಇರುವಿರಿ. ಏಕಾಂತವನ್ನು ಬಯಸಿದರೂ ಇರಲು ನಿಮಗೆ ಅಸಾಧ್ಯವಾದೀತು. ಎಲ್ಲರ ಜೊತೆ ಬೆರೆಯುವ ಅಭ್ಯಾಸ ಉತ್ತಮ. ಯಾರದೋ ಮಾತನ್ನು ನಂಬಿ ಬಂಧುಗಳನ್ನು ದೂರ ಮಾಡಿಕೊಳ್ಳಬೇಕಾಗುವುದು. ಯಾರನ್ನಾದರೂ ಕುಟುಕುತ್ತ ಇರುವುದು ನಿಮಗೆ ದುರಭ್ಯಾಸವಾಗುವುದು. ಯಾರ ಜೊತೆಗಾದರೂ ಸುಮ್ಮನೇ ಚರ್ಚೆಗಿಳಿದು ಸೋಲಬೇಕಾದೀತು. ಸಣ್ಣ ವಿಚಾರಕ್ಕೆ ಪತ್ನಿಯ ಜೊತೆ ವಾಗ್ವಾದ ಬೇಡ. ಏನೇ ಹೇಳಿದರೂ ಕೇಳಿಸಿಕೊಂಡು ಬನ್ನಿ. ಕುಟುಂಬವು ನಿಮಗೆ ಕೊಡುವ ಕಿಮ್ಮತ್ತು ಕಡಿಮೆ ಆಗಿದೆ ಎಂದು ಅನ್ನಿಸುವುದು. ಸಂಗಾತಿಯ ನೋವಿಗೆ ಸ್ಪಂದಿಸುವುದು ಕಷ್ಟವಾದೀತು.
ಮಿಥುನ ರಾಶಿ: ನಿಮ್ಮಲ್ಲಿರವ ದುರ್ಗುಣಗಳು ನಿಮಗೆ ಅರ್ಥವಾಗಿ ಅವುಗಳನ್ನು ಸರಿಮಾಡಿಕೊಳ್ಳುವಿರಿ. ಸಿದ್ಧ ವಸ್ತುಗಳ ವ್ಯಾಪರದಿಂದ ಲಾಭ. ನಿಮ್ಮ ಸಾಮರ್ಥ್ಯವನ್ನು ಅಳೆಯುವ ಸಮಯ ಇಂದು ಬರಬಹುದು. ಧಾರ್ಮಿಕ ವಿಚಾರವನ್ನು ನೀವು ತಿಳಿದವರ ಬಳಿ ಮಾತನಾಡಬಹುದು. ಹಣವನ್ನು ವಿನಾಕಾರಣ ಕಳೆದುಕೊಳ್ಳುವ ಸಾಧ್ಯತೆ ಇದೆ. ಅಧಿಕ ಮಾತು ನಿಮ್ಮವರಿಗೆ ಇಷ್ಟವಾಗದು. ನಿಮಗೆ ಸಿಗಬೇಕಾದ ಸಂಪತ್ತು ಸರಿಯಾದ ಸಮಯಕ್ಕೆ ಸಿಗದೇ ಸ್ನೇಹಿತರ ಬಳಿ ಸಾಲಮಾಡಬೇಕಾದೀತು. ನೋವಿಗೆ ಪ್ರತಿಯಾಗಿ ನೋವನ್ನು ಕೊಡುವ ನಿರ್ಧಾರ ಮಾಡುವಿರಿ. ಕಛೇರಿಯಲ್ಲಿ ನೀವು ಯಾರನ್ನೋ ಮೆಚ್ಚಿಸಲು ಹೋಗಿ ಅಪಹಾಸ್ಯಕ್ಕೆ ಸಿಕ್ಕಿಕೊಳ್ಳಬಹುದು. ವೇತನವು ಹೆಚ್ಚಾಗುವ ಸಾಧ್ಯತೆ ಇದೆ. ನಿಮ್ಮ ಆರ್ಥಿಕತೆ ಬಹಳ ಕೆಳಮಟ್ಟಕ್ಕೆ ಹೋಗಬಹುದು.
ಕರ್ಕಾಟಕ ರಾಶಿ: ಇಂದು ಹೆಚ್ವಿನ ಸಮಯವನ್ನು ಆಟ, ಓಟಗಳಲ್ಲಿ ಕಳೆಯುವಿರಿ. ಯಾವುದೇ ಆಮಿಷಕ್ಕೂ ಸುಲಭವಾಗಿ ಒಪ್ಪಲಾರಿರಿ. ಆರ್ಥಿಕತೆಯು ಸ್ವಲ್ಪ ಸುಧಾರಿಸಿದಂತೆ ಕಂಡರೂ ಮಕ್ಕಳ ವಿದ್ಯಾಭ್ಯಾಸಕ್ಕೆ ಹಣವನ್ನು ಹೊಂದಿಸಬೇಕಾಗಬಹುದು. ಸಂಗಾತಿಯ ಮಾತು ನಿಮಗೆ ಕೋಪವನ್ನು ತರುವ ಸಾಧ್ಯತೆ ಇದೆ. ಭೂಮಿಯ ವ್ಯವಹಾರದಲ್ಲಿ ನಿಮಗೆ ಅಧಿಕ ಲಾಭವನ್ನು ಪಡೆಯಬಹುದು. ಬಂಧುಗಳು ನಿಮ್ಮ ಸಂಪತ್ತನ್ನು ಬಯಸುವರು. ಕೃಷಿಯಲ್ಲಿ ಹೆಚ್ಚಿನ ಆದಾಯವನ್ನು ಗಳಿಸುವ ಯೋಜನೆಯನ್ನು ಸಿದ್ಧಪಡಿಸುವಿರಿ. ಮಕ್ಕಳ ಜೊತೆಗೆ ಇಂದು ಕಳೆದು ಸಂತೋಷವನ್ನು ಪಡೆಯುವಿರಿ. ಕಲಾವಿದರು ಹೆಚ್ಚಿನ ಪ್ರಸಿದ್ಧಿಗೆ ಶ್ರಮಿಸುವರು. ನಿರಂತರ ಸುತ್ತಾಟದಿಂದ ಬೇಸತ್ತ ನಿಮಗೆ ಇಂದು ಹಾಯೆನಿಸಬಹುದು. ನಿಮ್ಮವರ ಕಷ್ಟಗಳ ಮುಂದೆ ನಿಮ್ಮ ಕಷ್ಟ ಅಲದಪವೆನಿಸಬಹುದು. ನಿಮ್ಮ ಗುಪ್ತ ಆಲೋಚನೆಗಳು ಬಯಲಾಗಬಹುದು. ಹಳೆಯ ವಾಹನ ಖರೀದಿಗೆ ಮನಸ್ಸು ಮಾಡುವಿರಿ. ಬಂಧುಗಳ ಆಗಮನವು ನಿಮಗೆ ಸಂತೋಷವನ್ನು ಕೊಡುವುದು.




