AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Astrology: ನೀಡಿದ ಸಾಲ ನಿಮ್ಮ ಆತ್ಮೀಯತೆಯನ್ನು ಹಾಳುಮಾಡುವುದು

ರಾಶಿ ಭವಿಷ್ಯ ಭಾನುವಾರ (ಆ. 25): ನಿಮ್ಮ ರಾಶಿ ಧನು, ಮಕರ, ಕುಂಭ, ಮೀನ. ನೀವು ತೊಂದರೆಗೆ ಸಿಲುಕದಂತೆ ದಾಟಲು ನಿಮಗೆ ಯಾರಿಂದಲಾದರೂ ಸೂಚನೆ ಬರಬಹುದು. ಯಾವುದಾದರೂ ಜವಾಬ್ದಾರಿಯನ್ನು ಪಡೆದರೆ ಮುಂದಾಗುವ ಎಲ್ಲದೂ ನಿಮ್ಮ ಮೇಲೆ ಬರಬಲಿದೆ. ಹಾಗಾದರೆ ಆಗಸ್ಟ್​ 25ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Astrology: ನೀಡಿದ ಸಾಲ ನಿಮ್ಮ ಆತ್ಮೀಯತೆಯನ್ನು ಹಾಳುಮಾಡುವುದು
ನೀಡಿದ ಸಾಲ ನಿಮ್ಮ ಆತ್ಮೀಯತೆಯನ್ನು ಹಾಳುಮಾಡುವುದು
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Aug 25, 2024 | 12:20 AM

Share

ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2024 ಆಗಸ್ಟ್​ 25) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಮಘಾ, ಮಾಸ: ಶ್ರಾವಣ, ಪಕ್ಷ: ಕೃಷ್ಣ, ವಾರ: ಭಾನು, ತಿಥಿ: ಷಷ್ಠೀ, ನಿತ್ಯನಕ್ಷತ್ರ: ಭರಣೀ, ಯೋಗ: ಗಂಡ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 21 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:47 ಗಂಟೆ, ರಾಹು ಕಾಲ ಸಂಜೆ 05:15 ರಿಂದ 18:48, ಯಮಘಂಡ ಕಾಲ ಮಧ್ಯಾಹ್ನ 12:35 ರಿಂದ 02:08ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:41 ರಿಂದ ಸಂಜೆ 05:15ರ ವರೆಗೆ.

ಧನು ರಾಶಿ: ಇಂದು ಕಛೇರಿಯಲ್ಲಾಗಲಿ ನಿಮ್ಮ ಮಾತನ್ನು ಬೆಂಬಲಿಸತ್ತಾರೆ. ಎಲ್ಲವನ್ನೂ ಮರೆತು ಕುಳಿತುಕೊಳ್ಳಲು ಕಷ್ಟವಾಗುವುದು. ಇಂದು ನಿಮ್ಮ ಕೌಶಲದ ಬಗ್ಗೆ ಹಂಚಿಕೊಳ್ಳಿ. ನಿಮಗೆ ಮುಂದಿನ ಜೀವನೋಪಾಯಕ್ಕೆ ದಾರಿಯಾದೀತು. ಆರ್ಥಿಕವಾಗಿ ಸಬಲರಾಗುವ ಹಂಬಲವಿದ್ದರೂ ಆಲಸ್ಯದಿಂದ ಹೊರಬರದೇ ಇದು ಸಾಧ್ಯವಿಲ್ಲ. ಸಾಲವನ್ನು ಸ್ವಲ್ಪ ತೀರಿಸುವಿರಿ.‌ ಅಲ್ಪವೇ ಮಾತನಾಡಿದರೂ ಅದು ಸ್ಪಷ್ಟವಾಗಿ ಇರಲಿದೆ. ನಿಮ್ಮದಲ್ಲದ ವಸ್ತುವನ್ನು ನೀವು ಸ್ವೀಕರಿಸಿ ಅಪಮಾನವನ್ನು ಅನುಭವಿಸುವಿರಿ. ಸ್ತ್ರೀಯರ ಕುರಿತ ನಿಮ್ಮ ಕಾಳಜಿ ಅತಿಯಾದೀತು. ಕೆಲಸವಿಲ್ಲದೇ ಮನೆಯಲ್ಲಿ ಕುಳಿತಿರುವುದು ಹಿಂಸೆಯಾದೀತು. ಕಾನೂನಿಗೆ ವಿರುದ್ಧವಾದ ನಡೆಯು ನಿಮಗೆ ಅಪಾಯಕಾರಿ. ಆತುರಾತುರದಿಂದ ನೀವು ಮಾಡುವ ನಿರ್ಧಾರಗಳು ಮುಜುಗರ ಉಂಟುಮಾಡಲಿದೆ. ನಿಮಗೆ ಪ್ರಶಂಸೆಯು ಬಲವನ್ನು ಕೊಡುವುದು. ನಿಮ್ಮ ಕೆಲಸಕ್ಕೆ ಬೇಕಾದ ವಸ್ತುಗಳು ಕಣ್ಮರೆಯಾಗಬಹುದು.

ಮಕರ ರಾಶಿ: ಇಂದು ನಿಮಗೆ ಸೇವೆಯಲ್ಲಿ ಸಂತೋಷ ಸಿಗಲಿದೆ. ನೀವು ತೊಂದರೆಗೆ ಸಿಲುಕದಂತೆ ದಾಟಲು ನಿಮಗೆ ಯಾರಿಂದಲಾದರೂ ಸೂಚನೆ ಬರಬಹುದು. ಯಾವುದಾದರೂ ಜವಾಬ್ದಾರಿಯನ್ನು ಪಡೆದರೆ ಮುಂದಾಗುವ ಎಲ್ಲದೂ ನಿಮ್ಮ ಮೇಲೆ ಬರಬಲಿದೆ. ಕಛೇರಿಯಲ್ಲಿ ಕೆಲಸ ಮಾಡುವವರು ಒತ್ತಡದಿಂದ ಬೇಯಲಿದ್ದೀರಿ. ಭೂಮಿಯ ವ್ಯವಹಾರವನ್ನು ತೆಗೆದುಕೊಳ್ಳಲು ಹಿಂಜರಿಯಬಹುದು. ನಿಮ್ಮ ಮಾತನ್ನು ಕೇಳುತ್ತಾರೆಂದು ಏನನ್ನಾದರೂ ಹೇಳಿ ಇನ್ನೊಬ್ಬರ ಕೆಂಗಣ್ಣಿಗೆ ಗುರಿಯಾಗಬೇಡಿ. ನಿಮ್ಮ ಅತಿಕೋಪವು ಸಂಬಂಧವನ್ನು ಕೆಡಿಸಬಹುದು. ಆಕಸ್ಮಿಕ ವಾರ್ತೆಯಿಂದ ದುಃಖವು ಉಂಟಾಗಬಹುದು. ನಿರ್ಲಕ್ಷ್ಯದ‌ ಮನೋಭಾವವು ನಿಮಗೆ ಹಿಡಿಸಿದ್ದಲ್ಲ. ಎಲ್ಲ ಸುದ್ದಿಗಳನ್ನೂ ಕೇಳುವ ಮನಃಸ್ಥಿತಿಯನ್ನು ಬಿಡಿಬೇಕಾದೀತು. ಪಾಲುದಾರಿಕೆಯು ಬಳಕೆ ಇಲ್ಲದೇ ತಪ್ಪಿಹೋಗುವುದು. ಉದ್ಯೋಗದಲ್ಲಿ ನಿಮ್ಮ ಕಣ್ತಪ್ಪಿನಿಂದ ಆದ ತಪ್ಪಿಗೆ ನೀವೇ ಜವಾಬ್ದಾರಿ ಆಗಿರುವಿರಿ. ಭೂಮಿಯ ವ್ಯವಹಾರದಲ್ಲಿ ಸುಮ್ಮನೆ ಕೆಲವನ್ನು ನಿಮ್ಮ ಮೇಲೆ ಬರುವಂತೆ ಮಾಡಿಕೊಳ್ಳುವಿರಿ.

ಕುಂಭ ರಾಶಿ: ಆತುರದಲ್ಲಿ ಏನಾದರೂ ನಿರ್ಧಾರವನ್ನು ತೆಗದುಕೊಳ್ಳಬೇಡಿ. ಸಾಲವು ನಿಮ್ಮ ಆತ್ಮೀಯತೆಯನ್ನು ಹಾಳುಮಾಡುವುದು. ಇಂದು ನೀವು ಸಣ್ಣ ವಿಷಯಗಳಿಗೂ ಕೋಪ ಮಾಡಿಕೊಳ್ಳುವಿರಿ. ನಿಮ್ಮದೇ ತೀರ್ಮನದಿಂದ‌ ಹೊರಬರಲು ಪ್ರಯತ್ನಿಸಿ. ಸಹೋದರರ ಜೊತೆ ವಾಗ್ವಾದವು ಹೆಚ್ಚಾಗಲಿದೆ. ಒಂದು‌ ವಿಷಯಕ್ಕೆ ಅನೇಕ ಮುಖಗಳು ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕಾಗಿದೆ. ನಿಮಗೆ ದೈವಬಲವು ಕಡಿಮೆ‌ ಇದ್ದು ಏನಾದರೂ ತೊಂದರೆಯಾದೀತು.‌ ಶ್ರದ್ಧೆಯಿಂದ ಕುಲದೇವರನ್ನು ಆರಾಧಿಸಿ.‌ ಇಂದಿನ‌‌ ನಿಮ್ಮ ಕೆಲಸಗಳು ಆತಂಕವಿಲ್ಲದೇ ನಡೆಯುವುದು. ಗ್ರಾಹಕರನ್ನು ಚನ್ನಾಗಿ ಇಟ್ಟುಕೊಂಡು ವ್ಯಾಪಾರದಲ್ಲಿ ಲಾಭವನ್ನು ಪಡೆಯಿರಿ. ಆರ್ಥಿಕ ಸಂಕಷ್ಟದಿಂದ ಬುದ್ಧಿಗೆ ಏನೂ ಸೂಚಿಸದೇ ಇರಬಹುದು. ಅಪಹಾಸ್ಯಕ್ಕೆ ಸಿಕ್ಕಿಕೊಳ್ಳುವ ಸಾಧ್ಯತೆಬಿದೆ. ನಿಮಗೆ ಸಿಗುವ ಸೂಚನೆಗಳನ್ನು ಗಮನಿಸಿಕೊಂಡು ವ್ಯವಹಾರಾದಿಗಳನ್ನು ಮಾಡಿ. ಸ್ನೇಹವು ಬೇರೆಯಾಗಲಿದೆ.

ಮೀನ ರಾಶಿ: ಇಂದು ನಿಮಗೆ ಧಾರ್ಮಿಕ ಕಾರ್ಯಗಳಿಂದ ನಿಮ್ಮ ಹಣದ‌ ಸಂಪಾದನೆಯಾಗಲಿದೆ. ಹಿರಿಯರ ಬೇಸರವೇ ನಿಮಗೆ ಶಾಪದಂತೆ ಆಗಬಹುದು. ಇದು ನಿಮ್ಮ ಮನಸ್ಸಿಗೆ ಇಂದು‌ ನೀವು ಶುಭದಿನದ ನಿರೀಕ್ಷೆಯಲ್ಲಿ ಇರುವಿರಿ. ನಿಮ್ಮ ಸಾಮರ್ಥ್ಯ ಅನಾವರಣಕ್ಕೆ ಇಂದು ಶುಭದಿನವಾಗಲಿದೆ. ಪ್ರೀತಿಯಲ್ಲಿ ಬಿದ್ದು ನೀವು ಒದ್ದಾಡುವ ಸ್ಥಿತಿ ಎದುರಾಗಬಹುದು. ಸಂಗಾತಿಗೆ ಅನಿರೀಕ್ಷಿತ ಉಡುಗೊರೆಯನ್ನು ನೀಡಿ. ಅನಾರೋಗ್ಯದವಿದ್ದರೂ ಕೆಲಸವನ್ನು ಮಾಡಬೇಕಾಗುವುದು. ಅತಿಯಾದ ಪ್ರೀತಿಯನ್ನು ಮಕ್ಕಳ‌ಮೇಲೆ ತೋರಿಸಬೇಡಿ.‌ ಅವಶ್ಯಕತೆ ಇದ್ದಷ್ಟೇ ಇರಲಿ‌. ಇಂದು‌ ಮನೆಯ ಕೆಲಸದಲ್ಲಿ ಮಗ್ನರಾಗುವಿರಿ. ಮಕ್ಕಳು ನಿಮಗೆ ಸಹಾಯ ಮಾಡಿಯಾರು. ಒಳ್ಳೆಯ ಭೋಜನವನ್ನು ಸ್ವೀಕರಿಸುವಿರಿ. ಮಾತನಾಡುವ ಇಚ್ಛೆ ಇಂದು‌ ಕಡಿಮೆ ಇರಲಿದೆ. ವಸ್ತುಗಳು ಕಾಣೆಯಾಗಬಹುದು. ಎಲ್ಲವನ್ನೂ ನಿಮ್ಮ ಮೇಲೆ‌ ಹೇರಬಹುದು. ನಿಮ್ಮ ಪ್ರಾಮಾಣಿಕತೆಯ ಮಾರ್ಗವನ್ನು ಬಿಡುವುದು ಬೇಡ. ನಿಮಗೆ ಕೊಟ್ಟ ಜವಾಬ್ದಾರಿಯನ್ನು ಪೂರ್ಣ ಮಾಡಿಕೊಡಿ.

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ