AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ಆಮಿಷಕ್ಕೆ ಒಳಗಾಗಿ ಕೆಟ್ಟದ್ದನ್ನು ಮಾಡಬಹುದು ಎಚ್ಚರವಾಗಿರಿ

ಆಗಸ್ಟ್​ 25,​ 2024ರ​​ ನಿಮ್ಮ ರಾಶಿಭವಿಷ್ಯ: ಕಳೆದುಹೋದ ವಸ್ತುವಿನ ಬಗ್ಗೆ ನಿಮಗೆ ಅತಿಯಾದ ಮೋಹ ಉಂಟಾಗುವ ಸಾಧ್ಯತೆ ಇದೆ. ಕುಟುಂಬ ಕಾರಣದಿಂದ ನಿಮಗೆ ಗೌರವ ಸಿಗಬಹುದು. ಮಾತಾನ್ನು ಮಿತವಾಗಿ ಆಡಿ. ಇನ್ನೊಬ್ಬರ ವಸ್ತುವನ್ನು ಉಪಯೋಗಕ್ಕೆ ಪಡೆಯುವುದು ಸ್ವಾಭಿಮಾನಕ್ಕೆ ತೊಂದರೆ ಕೊಟ್ಟೀತು. ಹಾಗಾದರೆ ಆಗಸ್ಟ್​ 25ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Horoscope: ಆಮಿಷಕ್ಕೆ ಒಳಗಾಗಿ ಕೆಟ್ಟದ್ದನ್ನು ಮಾಡಬಹುದು ಎಚ್ಚರವಾಗಿರಿ
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Aug 25, 2024 | 12:10 AM

Share

ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2024 ಆಗಸ್ಟ್​ 25) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಮಘಾ, ಮಾಸ: ಶ್ರಾವಣ, ಪಕ್ಷ: ಕೃಷ್ಣ, ವಾರ: ಭಾನು, ತಿಥಿ: ಷಷ್ಠೀ, ನಿತ್ಯನಕ್ಷತ್ರ: ಭರಣೀ, ಯೋಗ: ಗಂಡ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 21 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06:47 ಗಂಟೆ, ರಾಹು ಕಾಲ ಸಂಜೆ 05:15 ರಿಂದ 18:48, ಯಮಘಂಡ ಕಾಲ ಮಧ್ಯಾಹ್ನ 12:35 ರಿಂದ 02:08ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:41 ರಿಂದ ಸಂಜೆ 05:15ರ ವರೆಗೆ.

ಮೇಷ ರಾಶಿ: ಇಂದು ನಿಮಗೆ ಗೊತ್ತಿಲ್ಲದೇ ಪುಣ್ಯವು ನಿಮ್ಮನ್ನು ಸೇರಿಸುವ ಸ್ಥಳಕ್ಕೆ ತಂದುಬಿಡುವುದು. ಪ್ರಶಂಸೆಯಿಂದ ನಿಮಗೆ ಮುಜುಗರವಾಗುವುದು. ವ್ಯಾಪಾರಸ್ಥರು ಪ್ರಾಮಾಣಿಕತೆಯಿಂದಲೂ ಸೋಲುವರು. ನಿಮ್ಮ ಜವಾಬ್ದಾರಿಯನ್ನು ಸರಿಯಾಗಿ ಸಮಯಕ್ಕೆ ಪೂರೈಸುವಿರಿ. ತಾಯಿಯ ಕಡೆಯ ಬಂಧುಗಳು ನಿಮಗೆ ಆಪ್ತರಾಗುವರು. ಇಂದು ನೀವು ಸುಳ್ಳು ಹೇಳಿ ಸಿಕ್ಕಿಬೀಳುವ ಸಾಧ್ಯತೆ ಇದೆ.‌ ನೆರೆಹೊರೆಯರಲ್ಲಿ ಸ್ನೇಹದಿಂದ ಮಾತನಾಡುವಿರಿ. ಆಸಕ್ತಿ ಇಲ್ಲದಿದ್ದರೂ ನೀವು ಅದನ್ನು ಮಾಡಬೇಕಾದೀತು. ನಿಮ್ಮನ್ನು ಇನ್ನೊಬ್ಬರಿಗೆ ಹೋಲಿಸಿಕೊಳ್ಳುತ್ತ ಇರುವಿರಿ. ಪ್ರೀತಿಯಲ್ಲಿ ನಿಮಗೆ ಬಯಸಿದ್ದು ಸಿಗದೇಹೋಗಬಹುದು. ಪ್ರಾಮಾಣಿಕವಾದ‌ ಪ್ರಯತ್ನವು ಇರಲಿ. ಸುಲಭವಾದ ಕಾರ್ಯವನ್ನು ಮೊದಲು ಮಾಡಿ ಮುಗಿಸಿ. ಫಲವೂ ಉತ್ತಮವಾದುದೇ ಸಿಗುವುದು.

ವೃಷಭ ರಾಶಿ: ಮನಸ್ಸಿನ ನಿಯಂತ್ರಣದಿಂದ ಇಂದಿನ ಎಲ್ಲ ಒತ್ತಡವನ್ನೂ ಸರಿಮಾಡಿಕೊಳ್ಳುವಿರಿ. ಇಂದು ನಿಮಗೆ ಒಳ್ಳೆಯ ವಾರ್ತೆ ಸಿಗಬಹುದು. ನಿಮ್ಮ ವೈಯಕ್ತಿಕ ಯೋಜನೆಗಳಿಗೆ ಯಾರೂ ಅಡ್ಡಿ ಮಾಡಲಾರರು. ಲಾಭ‌ವನ್ನು ಪಡೆಯಲು ಹೊಸ ಮಾರ್ಗಗಳು ಗೊತ್ತಾಗಬಹುದು. ಆಮಿಷಕ್ಕೆ ಒಳಗಾಗಿ ಕೆಟ್ಟದ್ದನ್ನು ಮಾಡಬಹುದು. ನೀವು ಆಸ್ತಿಯ ವಿಷಯದ ಬಗ್ಗೆ ನಿಮ್ಮವರಿಗೆ ಹೆಮ್ಮೆಯಾಗಲಿದೆ. ನಿಮ್ಮ ಸ್ವಾತಂತ್ರ್ಯವೇ ನಿಮಗೆ ತೊಂದರೆ ಕೊಟ್ಟೀತು. ಬಹಳ ದಿನಗಳಿಂದ ಮಂದಗತಿಯಲ್ಲಿ ಸಾಗುತ್ತಿದ್ದ ಕೆಲಸಕ್ಕೆ ವೇಗ ಸಿಗಲಿದೆ. ನಿಮ್ಮ ಅಮೂಲ್ಯವಾದ ವಸ್ತುವನ್ನು ರಕ್ಷಣೆ ಮಾಡಿಕೊಳ್ಳಿ. ಕುಟುಂಬದಲ್ಲಿ ಒಡಕು ಬರುವಂತೆ ಕಾಣಬಹುದು. ಫಲಾಪೇಕ್ಷೆ ಇಲ್ಲದೇ ನಿಮಗೆ ಕಾರ್ಯವನ್ನು ಮಾಡಲು ಬಾರದು. ಆರಂಭಿಸುವ ಕೆಲಸದ ಬಗ್ಗೆ ಪೂರ್ಣ ಮಾಹಿತಿ ಇರಲಿ. ಮಕ್ಕಳಿಗೆ ಬೇಕಾದ ವಸ್ತುಗಳನ್ನು ಕೊಡಿಸುವಿರಿ. ಅಧಿಕ ಓಡಾಟದಿಂದ ದಣಿವಾಗಲಿದೆ.

ಮಿಥುನ ರಾಶಿ: ವಿದ್ಯಾರ್ಥಿಗಳು ಶ್ರದ್ಧೆಯಿಂದ ಅಭ್ಯಾಸದ ಕಡೆ ಗಮನವಿಡಿ. ಅದೇ ಉತ್ತರವಾಗಲಿದೆ. ಅವಿವಾಹಿತರ ನಿರೀಕ್ಷೆ ಅಧಿಕವಾಗಿರುವುದು. ಬಹಳ ದಿನಗಳ ಅನಂತರ ಕುಟುಂಬದ ಸಂಬಂಧಗಳು ಬಲಗೊಳ್ಳುವುದು. ನೀವು ಯಶಸ್ಸನ್ನು ಸಾಧಿಸಲು ಹಂಬಲಿಸುವಿರಿ. ಒಂದೇ ವಿಚಾರವನ್ನು ಮತ್ತೆ ಮತ್ತೆ ಹೇಳಿ ಇತರರಿಂದ ದೂರಾಗಬಹುದು. ಬೇಕಾದಷ್ಟನ್ನು ಪಡೆದರೆ ಕೊಟ್ಟವರಿಗೂ ಪಡೆದವರಿಗೂ ಒಳ್ಳೆಯದು. ಹೂಡಿಕೆ ಲಯ ಹಣವು ನಿಮ್ಮ ಇಂದಿನ ಆಪತ್ಕಾಲಕ್ಕೆ ನೆರವಾಗುವುದು.‌ ನಿಮಗೆ ನಿರ್ಣಯವನ್ನು ಅಂತಿಮ‌ಗೊಳಿಸಲು ಸಮಯವನ್ನು ತೆಗೆದುಕೊಳ್ಳುವಿರಿ. ನಿಮ್ಮ‌ ವ್ಯವಹಾರದಲ್ಲಿ ಶುದ್ಧತೆ‌ ಇರುವುದು. ಹೊರಗಡೆ ಪ್ರಯಾಣವನ್ನು ಮಾಡುವಿರಿ. ಯಾವುದನ್ನೂ ಅತಿಯಾಗಿ ಬಳಸಲಾರಿರಿ. ಯಾವ ಕಾರಣಕ್ಕೂ ಸಾಲವನ್ನು ಮಾಡಲು ಹೋಗುವುದು ಬೇಡ. ನೀವು ಕಾರ್ಯದಲ್ಲಿ ಮಗ್ನರಾಗಿದ್ದು ಯಾವ ವಿಷಯಕ್ಕೂ ಭಾಗಿಯಾಗಲಾರಿರಿ. ವಾಹನದ ಚಿಂತೆಯೇ ನಿಮ್ಮನ್ನು ಕುಗ್ಗಿಸುವುದು.

ಕರ್ಕಾಟಕ ರಾಶಿ: ಇಂದು ನೀವು ಬಹಳ ದಿನಗಳ ಅನಂತರ ಸಂಗಾತಿಯ ಜೊತೆ ದೂರದ ಊರಿಗೆ‌ ಪ್ರಯಾಣ ಮಾಡುವಿರಿ. ಹಣವು ನಿಮ್ಮ ತುರ್ತು ಅವಶ್ಯಕತೆಯಾದ ಕಾರಣ ಅದನ್ನು ಗಳಿಸುವ ವಿಧಾನವನ್ನು ಯೋಚಿಸುವಿರಿ. ಇಂದಿನ‌ ನಿಮ್ಮ ಅಭಿಪ್ರಾಯವನ್ನು ಕುಟುಂಬ ಗೌರವಿಸುವುದು. ಕಳೆದುಹೋದ ವಸ್ತುವಿನ ಬಗ್ಗೆ ನಿಮಗೆ ಅತಿಯಾದ ಮೋಹ ಉಂಟಾಗುವ ಸಾಧ್ಯತೆ ಇದೆ. ಕುಟುಂಬ ಕಾರಣದಿಂದ ನಿಮಗೆ ಗೌರವ ಸಿಗಬಹುದು. ಮಾತಾನ್ನು ಮಿತವಾಗಿ ಆಡಿ. ಇನ್ನೊಬ್ಬರ ವಸ್ತುವನ್ನು ಉಪಯೋಗಕ್ಕೆ ಪಡೆಯುವುದು ಸ್ವಾಭಿಮಾನಕ್ಕೆ ತೊಂದರೆ ಕೊಟ್ಟೀತು. ಅಧಿಕ ಸುಟ್ಟಾದಿಂದ ಆಯಾಸವಾಗಬಹುದು. ಸ್ತ್ರೀಯರಿಂದ‌ ಅಪಮಾನ ಆಗಬಹುದು. ಸಾಲಬಾಧೆಯು ನಿಮಗೆ ಎಲ್ಲರಿಂದ ದೂರವಿರುವಂತೆ ಮಾಡೀತು. ಕುಟುಂಬ ಮೇಲೆ ಬೇಸರ ಬರಬಹುದು. ನಿಮ್ಮ ಭಾವವನ್ನು ಬಂಧಿಸಿಟ್ಟರೂ ಅದು ಗೊತ್ತಾಗುವುದು. ಇಂದು ಕಡಿಮೆ ಕಾರ್ಯದಲ್ಲಿ ಹೆಚ್ಚು ಲಾಭವನ್ನು ನಿರೀಕ್ಷಿಸುವಿರಿ.

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!