Horoscope Today 09 February: ಇಂದು ಈ ರಾಶಿಯವರು ಅತಿಯಾದ ಸಂಕಟವನ್ನು ತೋರ್ಪಡಿಸಲಾರರು
Horoscope Today 09 February: ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ಶಿಶಿರ ಋತುವಿನ ಮಾಘ ಮಾಸ, ಕೃಷ್ಣ ಪಕ್ಷದ ಸಪ್ತಮೀ ತಿಥಿ, ಧನಿಷ್ಠಾ ಮಹಾನಕ್ಷತ್ರ, ಸೋಮವಾರ. ಮಕ್ತ ಮನಸ್ಸು, ಆಗಮನದ ನಿರೀಕ್ಷೆ, ಸಲುಗೆ, ದಾಖಲೆ ಅಸ್ತವ್ಯಸ್ತ, ಯೋಜನೆಯ ಕಾರ್ಯರೂಪ ಇವೆಲ್ಲಾ ಇಂದಿನ ವಿಶೇಷ.

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಚಾಂದ್ರಮಾಸ : ಮಾಘ, ಸೌರ ಮಾಸ : ಮಕರ, ಮಹಾನಕ್ಷತ್ರ : ಧನಿಷ್ಠಾ, ವಾರ : ಸೋಮ, ಪಕ್ಷ : ಕೃಷ್ಣ, ತಿಥಿ : ಸಪ್ತಮೀ, ನಿತ್ಯನಕ್ಷತ್ರ : ಅನುರಾಧಾ, ಯೋಗ : ಶೂಲಿ, ಕರಣ : ಭದ್ರ, ಸೂರ್ಯೋದಯ – 06 – 51 am, ಸೂರ್ಯಾಸ್ತ – 06 – 25 pm, ಇಂದಿನ ಶುಭಾಶುಭ ಕಾಲ : ರಾಹು 08:18 – 09:45, ಯಮಗಂಡ ಕಾಲ 11:12 – 12:39, ಗುಳಿಕ ಕಾಲ 14:05 – 15:32.
ಮೇಷ ರಾಶಿ: ಉತ್ಸಾಹವು ಎಷ್ಟೇ ಇದ್ದರೂ ನೆಮ್ಮದಿಯ ಮನಸ್ಸಿನಿಂದ ನಿರ್ಧಾರಿಸಿ. ಹಿರಿಯರಿಂದ ಉತ್ತಮ ವಿಚಾರಗಳನ್ನು ತಿಳಿಯುವಿರಿ. ಹಿರಿಯರ ಸೇವೆಯಲ್ಲಿ ನೀವು ಇರುವಿರಿ. ಸಾಲದಿಂದ ಮುಕ್ತರಾಗಲು ನೀವು ಧೈರ್ಯದಿಂದ ಹೆಜ್ಜೆ ಹಾಕಬೇಕಾದೀತು. ನಿಮ್ಮ ಪ್ರಗತಿಗೆ ಶತ್ರುಗಳು ಅಡ್ಡಗಾಲು ಹಾಕಬಹುದು. ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳುವಿರಿ. ಕೋಪವನ್ನು ಅಧಿಕಾರಿಗಳಿಂದ ನಿಯಂತ್ರವಿಟ್ಟು ಮಾಡನಾಡಬ ಮೆಚ್ಚುಗೆ ಗಳಿಸುವಿರಿ. ನಿಮ್ಮ ಮಕ್ಕಳ ಬಗ್ಗೆ ಗಮನ ಹೆಚ್ಚು ಬೇಕು. ತಿಳಿವಳಿಕೆ ಇಲ್ಲದವರ ಮುಂದೆ ನಿಮ್ಮ ಉದ್ಯೋಗವನ್ನು ಹೇಳಿಕೊಳ್ಳುವಿರಿ.
ವೃಷಭ ರಾಶಿ: ದೇವತಾಕಾರ್ಯಗಳಲ್ಲಿ ಆಸಕ್ತಿ, ಶ್ರದ್ಧೆಯಿಂದ ಭಾಗವಹಿಸುವಿರಿ. ಕಛೇರಿಯಲ್ಲಿ ಅಧಿಕಾರಿಗಳು ನಿಮ್ಮ ಕಾರ್ಯಕ್ಕೆ ಸಂಬಂಧಿಸಿದಂತೆ ವಾಗ್ವಾದ ಮಾಡಬಹುದು. ಯಾರಿಗೂ ಸಾಲವನ್ನು ಕೊಡುವುದು ಬೇಡ. ನಿಮಗೆ ಸಲ್ಲಬೇಕಾದುದರ ಬಗ್ಗೆ ಮಾತ್ರ ಗಮನವಿರಲಿ. ನಿಮ್ಮ ಸಂಬಂಧಗಳನ್ನು ಬಳಸದೇ ದೂರವಾಗುವುದು. ದೂರದೃಷ್ಟಿಯಿಂದ ಮುಂಬರುವ ತೊಂದರೆಯನ್ನು ಸರಿಮಾಡಿಕೊಳ್ಳುವಿರಿ. ಭವಿಷ್ಯದ ಬಗ್ಗೆ ಅಸ್ಪಷ್ಟವಾದ ಚಿಂತೆಯು ಬೇಡ.
ಮಿಥುನ ರಾಶಿ: ನಿಮ್ಮ ಮನಸ್ಸಿನ ಉತ್ಸಾಹವನ್ನು ಶರೀರ ತಡೆದುಕೊಳ್ಳಲಾಗದು. ನಿಮ್ಮ ವಿದ್ಯಾಭ್ಯಾಸಕ್ಕೆ ಯೋಗ್ಯವಾದ ಕೆಲಸದ ಅನ್ವೇಷಣೆಯಲ್ಲಿ ತೊಡಗುವಿರಿ. ನಿಮ್ಮ ಉದ್ಯೋಗದ ಸ್ಥಳವನ್ನು ನೀವು ಬದಲಾಯಿಸುವಿರಿ. ಉತ್ಪಾದನೆಯ ಖರ್ಚನ್ನು ಹೆಚ್ಚು ಮಾಡಿ ಮಾರಾಟ ಮಾಡಬೇಕಾಗಬಹುದು. ಪ್ರಾಮಾಣಿಕತೆಯಿಂದ ನಿಮಗೆ ಉನ್ನತ ಸ್ಥಾನವನ್ನು ನಿರೀಕ್ಷಿಸುವಿರಿ. ದಾನವಾಗಿ ಕೊಡುವ ಅಭ್ಯಾಸವನ್ನು ಬೆಳೆಸಿಕೊಳ್ಳಿ. ಮಹಿಳೆಯರು ಉನ್ನತ ಅಧಿಕಾರವನ್ನು ಪಡೆದು ಅಹಂಕಾರ ಮಡುವುದು ಬೇಡ.
ಕರ್ಕಾಟಕ ರಾಶಿ: ಚರಾಸ್ತಿಯಲ್ಲಿ ಗೊಂದಲ ಇರುವುದು. ಮನೆಯ ಸ್ವಚ್ಛತೆಯ ಬಗ್ಗೆ ಕಾಳಜಿ ಇರಲಿದೆ. ಪ್ರಯತ್ನಿಸಿದ ಕಾರ್ಯಕ್ಕೆ ಫಲವನ್ನು ನಿರ್ದಿಷ್ಟ ಮಾಡಿಕೊಳ್ಳುವಿರಿ. ತಾಯಿಯ ಪ್ರೀತಿ ಸಿಗುವಲಿದೆ. ಅಸೂಯೆಯಿಂದ ನಿಮ್ಮ ಇತರ ಕೆಲಸಗಳನ್ನು ಹಾಳುಮಾಡಿಕೊಳ್ಳುವಿರಿ. ಎಲ್ಲವನ್ನೂ ತಿಳಿದುಕೊಂಡರೂ ಹಿಂದೆ ಸರಿಯುವಿರಿ. ಹಲವು ವರ್ಷಗಳ ಅನಂತರ ನಿಮ್ಮ ವಾಸಸ್ಥಾನ ಬದಲಾಯಿಸುವಿರಿ. ಅನ್ಯಾನ್ಯ ಮಾರ್ಗಗಳಿಂದ ಹಣವು ಬರಬಹುದು. ಕಳೆದಕೊಂಡ ವಸ್ತುವಿಗೆ ತೀವ್ರ ಹುಡುಕಾಟ ಇರುವುದು.
ಸಿಂಹ ರಾಶಿ: ನಿಮಗೆ ಸಿಗದೇ ಇರುವುದು ನಿಮ್ಮದಲ್ಲ ಎಂಬ ಸಮಾಧಾನ ಇರಲಿ. ನಿಮ್ಮ ಯೋಚನೆಯ ಕ್ರಮವನ್ನು ಬದಲಿಸಿಕೊಳ್ಳಲು ಸೂಕ್ತ. ಸಂಗಾತಿಯನ್ನು ದೂರ ಮಾಡಿಕೊಂಡು ಮನೆಯಲ್ಲಿ ಕಷ್ಟವಾದೀತು. ಧಾರ್ಮಿಕ ನಂಬಿಕೆಯನ್ನು ಕಳೆದುಕೊಳ್ಳುವ ಸಂದರ್ಭ ಬರಬಹುದು. ಸ್ಥಾನಚ್ಯುತಿಯ ಭಯವು ಇರುವುದು. ಮನೆಯ ಪರಿಸ್ಥಿತಿಯನ್ನು ನೆನೆದು ಸಂಕಟವಾಗುವುದು. ದಿನದ ಆರಂಭವು ಬಹಳ ಉತ್ಸಾಹದಿಂದ ಇರುವುದು. ಅಧಿಕಾರಿಗಳು ಹೆಚ್ಚು ಒತ್ತಡದಿಂದ ಇರುವರು. ನೇರ ನಡೆಗೆ ನೀವು ಪ್ರಸಿದ್ಧರಾಗಿರುವಿರಿ.
ಕನ್ಯಾ ರಾಶಿ; ವ್ಯವಹಾರಕ್ಕೆ ಸಂಬಂಧಪಟ್ಟಂತೆ ಮಾತುಗಳು ನಿಖರವಾಗಿ ಇರಲಿ. ಸುಳ್ಳು ಲೆಕ್ಕಾಚಾರವನ್ನು ನೀವು ಹೊರತೆಗೆಯುವಿರಿ. ಖರ್ಚಿನ ನಿಯಂತ್ರಣವನ್ನು ಮಾಡುವುದು ಕಷ್ಟವಾದೀತು. ವಿದ್ಯಾರ್ಥಿಗಳು ಅಧ್ಯಯನಕ್ಕಾಗಿ ನಿಯಮಗಳನ್ನು ಹಾಕಿಕೊಳ್ಳುವುದು ಉತ್ತಮ. ಸಹೋದ್ಯೋಗಿಗಳ ಜೊತೆ ಸಲುಗೆಯಿಂದ ಇರುವಿರಿ. ಸಮಾಜಮುಖೀ ಕಾರ್ಯಗಳಿಗೆ ಕುಟುಂಬದ ಬೆಂಬಲವು ಸಿಗುವುದು. ಬಂಧುಗಳಿಂದ ನಿಮಗೆ ಇಂದು ಆಲಸ್ಯದ ಪಟ್ಟವು ಸಿಗಬಹುದು. ಉದ್ಯಮದ ವೀಕ್ಷಣೆಗೆ ಹೊರಡುವಿರಿ.
ತುಲಾ ರಾಶಿ: ಏನೂ ಲಾಭವಿಲ್ಲದೇ ಪ್ರಯಾಣವು ನಿಮಗೆ ಬೇಸರ ಎನಿಸುವುದು. ಇಂದು ನಿಮಗೆ ಪ್ರಶಂಸೆಯಿಂದ ಜವಾಬ್ದಾರಿಗಳೂ ಹೆಚ್ಚುವುದು. ಸ್ತ್ರೀಯರ ಜೊತೆ ಕಲಹವಾಗಲಿದೆ. ನಿಮ್ಮ ಪಾಲಿನದ್ದಷ್ಟನ್ನು ಜೋಪಾನವಾಗಿ ಇರಿಸಿಕೊಳ್ಳಿ. ನಿಮ್ಮ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ನೌಕರರು ಒಪ್ಪುವುದಿಲ್ಲ. ಅನಿರೀಕ್ಷಿತ ದೂರ ಪ್ರಯಾಣವನ್ನು ಮಾಡಲಿದ್ದೀರಿ. ಸಣ್ಣ ವಿಚಾರಗಳಿಗೂ ಕೋಪದಿಂದ ಜೊತೆಗಾರರಿಗೂ ನಿರಾಸಕ್ತಿ. ಇಂದು ಹಣದ ವಿಚಾರದಲ್ಲಿ ನಿಮಗೆ ಹಿನ್ನಡೆಯಾಗುವುದು.
ವೃಶ್ಚಿಕ ರಾಶಿ: ಬರಬೇಕಾದುದು ಬಾರದಿದ್ದರೆ, ಇಲ್ಲವೇ ಇಲ್ಲ ಎಂದು ಕಾಣಿಸುವುದು. ಆಲಸ್ಯದಿಂದ ಮುಖ್ಯ ಕೆಲಸವನ್ನೇ ಮರೆಯುವಿರಿ. ದಾಂಪತ್ಯವನ್ನು ಹಿರಿಯರೇ ಬಂದು ಸರಿಮಾಡಬೇಕಾಗವುದು. ಸ್ವಂತ ಉದ್ಯೋಗಸ್ಥರು ಲಾಭ ಗಳಿಸುವರು. ಹೊಸತನ್ನು ಕಲಿಯುವ ಅವಕಾಶವನ್ನು ಹುಡುಕಿಕೊಳ್ಳುವಿರಿ. ಉದ್ಯೋಗದಲ್ಲಿ ದಿಕ್ಕು ತಪ್ಪುವ ಸಂಭವ ಬರಬಹುದು. ನಿಮಗೆ ಕೊಟ್ಟ ಕೆಲಸವನ್ನು ಹಂಚಿಕೊಂಡು ಕೆಲಸವನ್ನು ಮಾಡಿ. ಉದ್ಯಮದ ಬೆಳವಣಿಗೆಗೆ ಉತ್ತಮ ಅವಕಾಶವನ್ನು ಕಾಯುತ್ತಿರುವಿರಿ.
ಧನು ರಾಶಿ: ಹಿರಿಯ ಮಕ್ಕಳು ನಿಮ್ಮ ಮಾತಿಗೆ ಸ್ಪಂದಿಸುವನು. ಆಸ್ತಿಯ ಖರೀದಿಗೆ ಬೇಕಾದ ನಿಶ್ಚಲತೆ ಇರದು. ನೀವು ಹೇಳಬೇಕಾದ ವಿಷಯಗಳನ್ನು ಇನ್ನೊಬ್ಬರಿಗೆ ಹೇಳುವಿರಿ. ಯಾವುದೋ ಯೋಚನೆಯಲ್ಲಿ ಮುಖ್ಯ ಕಾರ್ಯಗಳು ಮರೆತುಹೋಗಬಹುದು. ಭೂಮಿಯ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವು ಕಾನೂನಾತ್ಮಕ ತೊಂದರೆ ಬರುವುದು. ಒಂದು ಪೈಸೆಯನ್ನೂ ಸುಮ್ಮನೇ ಖರ್ಚಾಗಲು ಬಿಡುವುದಿಲ್ಲ ಮತ್ತು ಮಾಡಿದ್ದರ ಪೂರ್ಣ ಲೆಕ್ಕ ಇಡುವಿರಿ. ಪ್ರಯತ್ನಿಸಿದ ಕಾರ್ಯಗಳು ನಿಮಗೆ ಬಹುಪಾಲು ಉತ್ತಮ ಫಲಿತಾಂಶವು ಕೊಡುವುದು.
ಮಕರ ರಾಶಿ: ಜ್ಞಾನಸಂಪಾದನೆಗೆ ಬೇಕಾದ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುವಿರಿ. ಕೆಲವನ್ನು ನೀವಾಗಿಯೇ ತಂದುಕೊಳ್ಳುವಿರಿ. ವೃತ್ತಿಯಲ್ಲಿ ನಿಮಗೆ ತಪ್ಪಿನ ಭಯವು ಕಾಡಲಿದ್ದು ಯಾರ ಬಳಿಯಾದರೂ ಹೇಳಿಕೊಳ್ಳಿ. ನಿಮ್ಮ ಸಾಮರ್ಥ್ಯವು ಇಂದು ಕಾಣಿಸಿಕೊಳ್ಳದು. ಒತ್ತಡವನ್ನು ನಿಭಾಯಿಸಕೊಳ್ಳಲು ಕಷ್ಟವಾದೀತು. ಸಹೋದ್ಯೋಗಿಗಳ ಜೊತೆ ಮನಸ್ತಾಪ ಬಂದು ಜಗಳವಾಡುವಿರಿ. ಮೇಲಧಿಕಾರಿಗಳ ಜೊತೆ ವಿನಾಕಾರಣ ವಾಗ್ವಾದ ಬೇಡ. ಎಷ್ಟೋ ಕೆಲಸಗಳು ನಿಮ್ಮ ಬಳಿಯೇ ಬಾಕಿ ಇರುವುದು.
ಕುಂಭ ರಾಶಿ: ಆರ್ಥಿಕತೆಯು ನಿಮ್ಮನ್ನು ಚಿಂತೆಗೀಡುಮಾಡುವುದು. ನಿಮ್ಮ ತಪ್ಪುಗಳೇ ಫಲಿತಾಂಶದಲ್ಲಿ ಬರುವುದು. ಯುವಕರಿಗೆ ಸರಿಯಾದ ಮಾರ್ಗದರ್ಶನ ಸಿಗುವುದು. ವಾಹನ ಖರೀದಿಯ ವ್ಯವಹಾರವು ನಿಮಗೆ ಸರಿಯಾಗದು. ಮಂದಗತಿಯ ಕಾರ್ಯಕ್ಕೆ ನಿಮ್ಮನ್ನು ಯಾರಾದರೂ ಹೀಯಾಳಿಸಬಹುದು. ಸಾಮಾಜಿಕ ಕಾರ್ಯಗಳು ನಿಮಗೆ ಯಶಸ್ಸನ್ನು ತಂದುಕೊಡುವುದು. ಇರುವ ಸಮಯವನ್ನು ವ್ಯರ್ಥ ಮಾಡಿಕೊಳ್ಳದೇ ಸದುಪಯೋಗ ಆಗುವಂತೆ ಮಾಡಿ.
ಮೀನ ರಾಶಿ: ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮವನ್ನು ಹಾಕುವಿರಿ. ಇಂದು ಪರೋಪಕಾರಕ್ಕೆ ನಿಮ್ಮ ಮನಸ್ಸು ಕರಗುವುದು. ಸ್ತ್ರೀಯರು ಈ ದಿನವನ್ನು ಬಹಳ ಉತ್ಸಾಹದಿಂದ ಕಳೆಯುವರು. ಅನುಭವಸ್ಥರ ಮಾರ್ಗದರ್ಶವನ್ನು ನೀವು ಪಡೆಯುವಿರಿ. ಕುಟುಂಬದ ಸೌಖ್ಯದಲ್ಲಿ ನೀವು ಭಾಗಿಯಾಗುವಿರಿ. ಸ್ಥಿರಾಸ್ತಿಗೆ ಸಂಬಂಧಿಸಿದಂತೆ ಕೆಲವು ದಾಖಲೆಗಳನ್ನು ಮಾಡಿಕೊಳ್ಳುವಿರಿ. ಮಕ್ಕಳಿಂದ ಆಗುವ ಅಸಮಾಧಾನವನ್ನು ಸಹಿಸಲಾರಿರಿ. ವಿರೋಧಿಗಳ ಮಾತನ್ನು ನೀವು ನಿರ್ಲಕ್ಷಿಸುವಿರಿ.
ಲೋಹಿತ ಹೆಬ್ಬಾರ್ – 8762924271 (what’s app only)
