Horoscope Today 02 January: ಇಂದು ಈ ರಾಶಿಯವರ ಮೇಲೆ ಸಕಾರಣದಿಂದ ಒತ್ತಡ ಹೇರುವರು
2026 ರ ಹೊಸ ವರ್ಷದ ಉದಯವಾಗಿದೆ. ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಹೇಮಂತ ಋತುವಿನ ಪೌಷ ಮಾಸ ಶುಕ್ಲ ಪಕ್ಷದ ತ್ರಯೋದಶೀ ತಿಥಿ ಶುಕ್ರವಾರ ಅಪವಾದ, ಕಾರ್ಯಾಸಕ್ತಿ, ವಿದ್ಯಾರ್ಜನೆ, ಮನಸ್ತಾಪ, ಏಕಾಂತ, ದುರಸ್ತಿ, ನಿರ್ಮಾಣ, ನೈರಂತರ್ಯ, ನಿಷ್ಠುರ ಇವೆಲ್ಲ ಇಂದಿನ ಭವಿಷ್ಯ.

ಮೇಷ ರಾಶಿ:
ಅಪವಾದದ ಸಾಧ್ಯತೆ ಇರುವುದರಿಂದ ಮಾತಿನಲ್ಲಿ ಮೌನ ಪಾಲಿಸಿ. ಕೆಲಸಗಳಲ್ಲಿ ಆಸಕ್ತಿ ಕಡಿಮೆಯಾಗಬಹುದು. ಹಣ ಹಾಗೂ ವಸ್ತು ನಷ್ಟದ ಸೂಚನೆ. ವಾಹನದ ದುರಸ್ತಿ ಕಾರ್ಯಗಳಿಗೆ ಖರ್ಚು. ಮಕ್ಕಳ ವರ್ತನೆಗಳು ನಿಮಗೆ ಕಷ್ಟಕೊಡಬಹುದು. ಸ್ನೇಹಸಂಬಂಧ ಗಟ್ಟಿಮಾಡಿಕೊಳ್ಳಲು ಇಷ್ಟವಾಗುವುದು. ಮಕ್ಕಳ ವಿವಾಹದ ಬಗ್ಗೆ ಒಂದೊಂದೇ ಚಿಂತೆ ಆರಂಭವಾಗುವುದು. ಇಂದಿನ ನಿಮ್ಮ ಅಜಾಗರೂಕತೆಯಿಂದ ಹಣವನ್ನು ಕಳೆದುಕೊಳ್ಳುವಿರಿ. ಅನಿವಾರ್ಯ ಕಾರಣದಿಂದ ನೀವು ಅಧಿಕಾರವನ್ನು ವಹಿಸಿಕೊಳ್ಳಬೇಕಾಗಬಹುದು. ದುಃಸ್ವಪ್ನದಿಂದ ಭಯಗೊಳ್ಳುವಿರಿ. ದೂರಪ್ರಯಾಣದಿಂದ ಆಯಾಸ. ಬೋಧನೆ, ಮಾರ್ಗದರ್ಶನದಲ್ಲಿ ಜನರ ವಿಶ್ವಾಸ ಸಿಗುತ್ತದೆ. ಆದಾಯ ಹಂಚಿಕೆಯಲ್ಲಿ ನ್ಯಾಯ ಮತ್ತು ಸಹನೆ ಅಗತ್ಯ. ಆಸಕ್ತಿಯು ಇಲ್ಲದಿದ್ದರೂ ಒತ್ತಾಯಕ್ಕೆ ಧಾರ್ಮಿಕ ಕಾರ್ಯಗಳಲ್ಲಿ ತೊಡಗುವಿರಿ. ಆಪತ್ತಿನಲ್ಲಿ ಇರುವ ನಿಮಗೆ ಸ್ನೇಹಿತರ ಸಣ್ಣ ಸಹಾಯವೂ ನಿಮಗೆ ಧೈರ್ಯ ತಂದುಕೊಡುವುದು. ಪ್ರೀತಿಯಲ್ಲಿ ನಿಮಗೆ ಸೋಲಾಗಬಹುದು. ಮನೋರಂಜನೆಯಿಂದ ಒತ್ತಡ ಕಡಿಮೆಯಗುವುದು.
ವೃಷಭ ರಾಶಿ:
ಮಾನಸಿಕ ಅಶಾಂತಿ ಹಾಗೂ ಅನಾಸಕ್ತಿ ಇಂದು ಕಾಡಬಹುದು. ವಾಗ್ವಾದ ತಪ್ಪಿಸಿದರೆ ಸಮಸ್ಯೆ ಕಡಿಮೆ. ಹಣ ವ್ಯಯ ಹೆಚ್ಚಾಗುವ ಸೂಚನೆ. ವಸ್ತು ನಷ್ಟವನ್ನು ತಪ್ಪಿಸಲು ಎಚ್ಚರಿಕೆ ಅಗತ್ಯ. ಬಹಳ ಶ್ರಮದಿಂದ ಭೂಮಿಯ ಮಾರಟವನ್ನು ಮಾಡುವಿರಿ. ವೃತ್ತಿಯಿಂದ ನೀವು ವಿದೇಶ ಪ್ರಯಾಣವನ್ನು ಮಾಡಬೇಕಾಗಬಹುದು. ಬಂಧುಗಳು ನಿಮ್ಮ ಬಳಿ ಬಂದು ನೋವನ್ನು ಹೇಳಿಕೊಳ್ಳುವರು. ಸ್ನೇಹಿತರ ಜೊತೆ ಪ್ರವಾಸಕ್ಕೆ ಹೋಗಲು ಮನೆಯಿಂದ ಒಪ್ಪಿಗೆಯನ್ನು ನಿರಾಕರಿಸಬಹುದು. ಇಂದು ನೀವು ಕೋಪವನ್ನು ಮಾಡಿಕೊಳ್ಳಲು ಕಾರಣವೇ ಬೇಕಾಗದು. ನೌಕರರಿಂದ ನಿಮಗೆ ಸರಿಯಾದ ಪ್ರತಿಕ್ರಿಯೆ ಸಿಗದು. ದೂರಪ್ರಯಾಣ ಆಯಾಸ, ಲಘು ವಿಶ್ರಾಂತಿಯಿಂದ ದೂರ. ಬೋಧನೆ, ಸಲಹೆಯಿಂದ ಗೌರವ ಹಾಗೂ ತೃಪ್ತಿಯೂ ಆಗುವುದು. ನಿಮ್ಮ ಪ್ರತಿಭೆಯನ್ನು ತೋರಿಸಲು ಅವಕಾಶಗಳು ಸಿಗುವುದು. ಎಲ್ಲ ಸಂದರ್ಭಗಳೂ ಆಸ್ವಾದನೀಯವಾಗಿ ಇರುವಂತೆ ಮಾಡುವಿರಿ. ಇಂದು ನೀವು ಮಕ್ಕಳಲ್ಲಿ ಸ್ಪರ್ಧೆಯ ಮನೋಭಾವವನ್ನು ಹೆಚ್ಚಿಸುವಿರಿ.
ಮಿಥುನ ರಾಶಿ:
ಕೆಲಸದ ಒತ್ತಡದಿಂದ ಮನಸ್ಸು ಬೇಸರಗೊಳ್ಳಬಹುದು. ಮಾತಿನ ತಪ್ಪಿನಿಂದ ಅಪವಾದ ಸಂಭವಿಸಬಹುದು. ಹಣ ಹಾಗೂ ವಸ್ತು ನಷ್ಟದ ಸಾಧ್ಯತೆ ಇದೆ. ದುರಸ್ತಿ ಕಾರ್ಯಗಳು ಅನಿವಾರ್ಯ. ದೂರಪ್ರಯಾಣ ಆಯಾಸ ನೀಡುತ್ತದೆ. ಉತ್ತಮ ವಿಶ್ವಾಸಿಗಳನ್ನು ಕಳೆದುಕೊಳ್ಳುವಿರಿ. ಸಂಗಾತಿಯ ಜೊತೆ ಬಹಳ ಸಂಯೋಷದ ಕ್ಷಣವನ್ನು ಕಳೆಯುವಿರಿ. ಉದ್ಯೋಗದ ಸ್ಥಳದಲ್ಲಿ ಉಂಟಾದ ಪಕ್ಷಪಾತದಿಂದ ದ್ವೇಷಭಾವವು ಉಂಟಾಗಬಹುದು. ಕಲಾವಿದರು ಅವಕಾಶವನ್ನು ಹುಡುಕಿಕೊಂಡು ಹೋಗಬೇಕಾಗಬಹುದು. ಸಾಲದ ವಿಚಾರವಾಗಿ ಕುಟುಂಬದ ಜೊತೆ ಬಿಸಿ ಚರ್ಚೆಯಾಗಬಹುದು. ಆಸ್ತಿಯ ಹಂಚಿಕೆಯಲ್ಲಿ ನಿಮಗೆ ಸಮಾಧಾನ ಇರದು. ಬೋಧನೆ ಅಥವಾ ಮಾರ್ಗದರ್ಶನದಿಂದ ಸಾಮಾಜಿಕ ಮಾನ್ಯತೆ ಸಾಧ್ಯ. ಆದಾಯ ಹಂಚಿಕೆಯಲ್ಲಿ ಜಾಗ್ರತೆ ಮತ್ತು ನ್ಯಾಯ ಮುಖ್ಯ. ಶತ್ರುಗಳು ನಿಮ್ಮ ಸ್ಥಿತಿಯನ್ನು ಕಂಡು ಸಂತೋಷಪಡಬಹುದು. ಯೋಜನೆಯನ್ನು ಯಾರಿಗೂ ಹೇಳದೇ ನಿಮ್ಮಷ್ಟಕ್ಕೇ ಮಾಡಿ. ಸ್ವಯಂ ಕೃತ ಅಪರಾಧವೇ ನಿಮಗೆ ಮುಳುವಾಗಬಹುದು. ಆಕಸ್ಮಿಕವಾಗಿ ಬರುವ ಲಾಭದ ನಿರೀಕ್ಷೆಯಲ್ಲಿ ನೀವು ಇರುವಿರಿ.
ಕರ್ಕಾಟಕ ರಾಶಿ:
ಇಂದು ವಾಗ್ವಾದಗಳಿಂದ ದೂರವಿರುವುದು ಒಳಿತು. ಕೆಲಸಗಳಲ್ಲಿ ಆಸಕ್ತಿ ಕಡಿಮೆಯಾಗಬಹುದು. ಹಣ ವ್ಯವಹಾರದಲ್ಲಿ ನಷ್ಟದ ಸೂಚನೆ. ಹೂಡಿಕೆಯಿಂದ ಸ್ವಲ್ಪ ನಷ್ಟವಾದಂತೆ ಕಾಣಬಹುದು. ಕಛೇರಿಯಲ್ಲಿ ಯಾರದೋ ತಪ್ಪಿಗೆ ನೀವು ತಲೆ ತಗ್ಗಿಸಬೇಕಾಗಬಹುದು. ಪ್ರಾಣಿಗಳ ಮೇಲೆ ಪ್ರೀತಿ ತೋರಿಸುವಿರಿ. ನಿಮ್ಮ ಕಾರ್ಯದಲ್ಲಿ ನಿಮಗೆ ತಪ್ಪು ಕಾಣಿಸುವುದು. ಹೊಗಳಿಕೆಯಿಂದ ನಿಮಗೆ ಸಂಕೋಚ ಉಂಟಾಗಬಹುದು. ನಿಮ್ಮ ಬಯಕೆಗಳಿಗೆ ಇನ್ಮೊಬ್ಬರು ಪ್ರೇರಣೆ ಆಗಬಹುದು. ಪ್ರೀತಿಯ ಕಾರಣಕ್ಕೆ ಮನಸ್ಸಿನ ಚಾಂಚಲ್ಯವನ್ನು ನಿಯಂತ್ರಿಸುವುದು ಕಷ್ಟವಾದೀತು. ನಿಮ್ಮ ಅಮೂಲ್ಯ ವಸ್ತುಗಳ ರಕ್ಷಣೆಯ ಬಗ್ಗೆ ಎಚ್ಚರಿಕೆ ಇರಲಿ. ದೂರಪ್ರಯಾಣ ವಿಳಂಬ ತರಬಹುದು. ದುರಸ್ತಿ ವೆಚ್ಚಗಳು ಎದುರಾಗುತ್ತವೆ. ಬೋಧನೆಯ ಸಲಹೆಗಳಿಂದ ಲಾಭ. ನಿಮ್ಮ ಮಾತು ಇನ್ನೊಬ್ಬರಿಗೆ ನೋವನ್ನು ಕೊಡಬಹುದು. ಕೋಪವನ್ನು ಬಲವಂತವಾಗಿ ತಡೆಯುವಿರಿ. ನಿಮ್ಮ ಒಳ ಮನಸ್ಸು ಹೇಳುವುದನ್ನು ಕೇಳಿಸಿಕೊಂಡರೆ ಒಳ್ಳೆಯದು.
ಸಿಂಹ ರಾಶಿ:
ಅನಾಸಕ್ತಿ ಹಾಗೂ ಒಳಗೊಳ್ಳುವ ಒತ್ತಡ ಕಾಣಿಸಬಹುದು. ಮಾತಿನ ಕಠಿಣತೆ ಅಪವಾದಕ್ಕೆ ಕಾರಣವಾಗಬಹುದು. ಹಣಕಾಸಿನಲ್ಲಿ ಎಚ್ಚರಿಕೆ ವಹಿಸಿ. ವಸ್ತು ನಷ್ಟದ ಸಾಧ್ಯತೆ. ಮನೆಯ ತುರ್ತು ಕಾರ್ಯಗಳನ್ನು ಮಾಡಲು ಆಗದು. ಅನಿವಾರ್ಯವಿದ್ದರೂ ಧನವ್ಯಯದ ಕಾರಣ ಖರೀದಿಯನ್ನು ಮುಂದೂಡುವಿರಿ. ಸಾಮಾಜಿಕ ಗೌರವವನ್ನು ಪಡೆಯಲು ಆಸೆ ಇರುವುದು. ತಾಯಿಯ ಪ್ರೀತಿಯಿಂದ ವಂಚಿತರಾಗಬಹುದು. ವಾಹನದಿಂದ ನಿಮಗೆ ಆದಾಯ ಸಿಗುವುದು. ಉದ್ಯೋಗದ ಕಾರಣಕ್ಕೆ ದೂರದ ಊರಿಗೆ ಹೋಗಬೇಕಾಗಬಹುದು. ಪ್ರಯಾಣದ ಮುಂಜಾಗ್ರತೆಯ ಕ್ರಮವಿರಲಿ. ಗೊತ್ತಿಲ್ಲದ ಪ್ರದೇಶಕ್ಕೆ ಒಂಟಿಯಾಗಿ ಹೋಗಬೇಕಾಗಬಹುದು. ದುರಸ್ತಿ ಕಾರ್ಯಗಳಿಗೆ ಸಮಯ, ಹಣ ವ್ಯಯ. ದೂರಪ್ರಯಾಣದಿಂದ ಆಯಾಸ ಅಧಿಕ. ಬೋಧನೆ ಹಾಗೂ ಅನುಭವದ ಹಂಚಿಕೆಯಿಂದ ಗೌರವ ಸಿಗುತ್ತದೆ. ದಾಂಪತ್ಯದಲ್ಲಿನ ಒಡಕು ಎಲ್ಲರಿಗೂ ಗೊತ್ತಾಗುವ ಮೊದಲೇ ಸರಿ ಮಾಡಿಕೊಳ್ಳಿ. ಮಕ್ಕಳಿಲ್ಲದೇ ಬೇಸರವಾಗಲಿದೆ. ಏಕಾಂಗಿಯಾಗಿ ಇರುವುದು ಕಷ್ಟವಾಗುವುದು. ಅಚಾನಕ್ ತಿರುಗಾಟ ಮಾಡಬೇಕಾಗುವುದು.
ಕನ್ಯಾ ರಾಶಿ:
ಇಂದು ಹಣ ಹಾಗೂ ವಸ್ತು ನಷ್ಟದ ಸೂಚನೆ ಇದೆ. ಅನಾವಶ್ಯಕ ವಾಗ್ವಾದ ತಪ್ಪಿಸಿ. ಅಪವಾದದಿಂದ ಮಾನಸಿಕ ಒತ್ತಡ ಸಾಧ್ಯ. ದುರಸ್ತಿ ಕಾರ್ಯಗಳು ಹೆಚ್ಚಾಗಬಹುದು. ದೂರಪ್ರಯಾಣ ನಿರಾಸೆ ತರಬಹುದು. ನಿಮ್ಮ ಅಂದುಕೊಂಡ ಕಾರ್ಯವು ವೇಗವನ್ನು ಪಡೆಯದೇ ಇರಲು ಹಿತಶತ್ರುಗಳೇ ಕಾರಣವಾಗುವರು. ಮೃದುಸ್ವಭಾವದಿಂದ ಉಪಯೋಗವಾಗದು. ನಿಮ್ಮನ್ನು ಎದುರಿಗೆ ಮಾತ್ರ ಹೊಗಳುವರು. ಅಜಾಗರೂಕತೆಯಿಂದ ಬಿದ್ದು ಗಾಯ ಮಾಡಿಕೊಳ್ಳಬಹುದು. ಕೈಗೊಂಡ ಕಾರ್ಯಗಳಲ್ಲಿ ಪೂರ್ಣ ಜಯವು ಪ್ರಾಪ್ತವಾಗುವುದು. ಪ್ರಾಮಾಣಿಕತೆಗೆ ಸಿಕ್ಕ ಪ್ರಶಂಸೆಯಿಂದ ಇನ್ನಷ್ಟು ಉತ್ಸಾಹ ಇರುವುದು. ಬೋಧನೆ ಅಥವಾ ಮಾರ್ಗದರ್ಶನದಲ್ಲಿ ಯಶಸ್ಸು. ಯಾವ ಹಂಚಿಕೆಯಲ್ಲೂ ಸಮನ್ವಯ ಹಾಗೂ ವಿವೇಕ ಅಗತ್ಯ. ನಿಮ್ಮ ಮಾತುಗಳು ಹಾಸ್ಯದಿಂದ ಕೂಡಿರಲಿದೆ. ಹಠದ ಸ್ವಭಾವದಿಂದ ಸುಲಭವಾಗಿ ಸಿಗುವುದನ್ನು ಕಳೆದುಕೊಳ್ಳುವಿರಿ. ವ್ಯಾಪಾರದ ನಷ್ಟವನ್ನು ಹೇಗಾದರೂ ತೂಗಿಸಿಕೊಳ್ಳುವಿರಿ. ಹಣಕಾಸಿನ ವಿಚಾರಕ್ಕೆ ಅಪವಾದ ಬರಬಹುದು.
ತುಲಾ ರಾಶಿ:
ಕೆಲಸದ ಮೇಲಿನ ಗಮನ ಕಡಿಮೆಯಾಗುವ ಸಾಧ್ಯತೆ. ಮಾತಿನ ಸಂಘರ್ಷ ತಪ್ಪಿಸಿ. ಹಣಕಾಸು ವ್ಯವಹಾರಗಳಲ್ಲಿ ಎಚ್ಚರಿಕೆ ಅಗತ್ಯ. ದೂರಪ್ರಯಾಣದಿಂದ ದೇಹಾಯಾಸ. ದುರಸ್ತಿ ಕೆಲಸಗಳು ತಲೆನೋವು ತರಬಹುದು. ಪೂರ್ವಾಪರ ಯೋಚನೆ ಇಲ್ಲದೇ ಒಂದು ಕೆಟ್ಟ ನಿರ್ಧಾರವನ್ನು ತೆಗೆಸುಕೊಳ್ಳುವಿರಿ. ಮಕ್ಕಳ ವಿಷಯದಲ್ಲಿ ನಿರ್ಲಕ್ಷ್ಯ ಬೇಡ. ತಾಯಿ ಆರೋಗ್ಯದಲ್ಲಿ ವ್ಯತ್ಯಾಸವು ಕಾಣಿಸಿಕೊಳ್ಳಬಹುದು. ನಿಮಗೆ ಇಷ್ಟವಾಗದ ಕಾರ್ಯವನ್ನು ಮಾಡಬೇಕಾಗಬಹುದು. ಉದ್ಯೋಗವನ್ನು ನಿರೀಕ್ಷಿತ ಹಂತಕ್ಕೆ ಕೊಂಡೊಯ್ಯಲು ಅಧಿಕ ಶ್ರಮಿಸುವಿರಿ. ವಾತದೋಷದಿಂದ ನಿಮಗೆ ಕಷ್ಟವಾಗುವುದು. ನಿಮಗೆ ಕೊಟ್ಟ ಜವಾಬ್ದಾರಿಯು ಹಸ್ತಾಂತರ ಆಗಬಹುದು. ಬೋಧನೆ ಹಾಗೂ ಸಲಹೆಗಳಿಂದ ಉತ್ತಮ ಹೆಸರು. ಹಣಕಾಸಿನ ಹಂಚಿಕೆಯಲ್ಲಿ ಲೆಕ್ಕಾಚಾರ ಸ್ಪಷ್ಟವಾಗಿರಲಿ. ಅಧ್ಯಾತ್ಮದಲ್ಲಿ ಮನಸ್ಸು ಹೆಚ್ಚಿರುವುದು. ವಿವಾಹವನ್ನು ತಿರಸ್ಕರಿಸುವಿರಿ. ನಿಮ್ಮನ್ನು ಚುಚ್ಚುವ ಹಾಗೆ ನಿಮ್ಮವರು ಮಾತನಾಡುವರು. ಸಂಗಾತಿಯ ಜೊತೆ ನಿಮಗಾದ ಸುಖ ಹಾಗೂ ದುಃಖವನ್ನು ಹಂಚಿಕೊಳ್ಳುವಿರಿ. ಅಮೂಲ್ಯ ವಸ್ತುಗಳ ಸಂಪಾದನೆ ನಿಮ್ಮ ಕನಸಾಗಲಿದೆ.
ವೃಶ್ಚಿಕ ರಾಶಿ:
ಅಪವಾದ ಅಥವಾ ತಪ್ಪು ಮಾತುಗಳಿಂದ ಬೇಸರ ಸಾಧ್ಯ. ವಾಗ್ವಾದಗಳಿಂದ ದೂರವಿರಿ. ಆರ್ಥಿಕವಾಗಿ ಅಚಾತುರ್ಯದಿಂದ ನಷ್ಟ ಸಂಭವಿಸಬಹುದು. ವಸ್ತುಗಳ ಬಗ್ಗೆ ಎಚ್ಚರಿಕೆ ಅಗತ್ಯ. ದುರಸ್ತಿ ವೆಚ್ಚ ಊಹೆಗಿಂತ ಅತಿಯಾಗಬಹುದು. ಅಪರಿಚಿತರ ಜೊತೆ ಸಲುಗೆ ಬೆಳೆಯಬಹುದು. ಯಾರ ಬಗ್ಗೆಯೂ ಹಗುರಾದ ಮಾತುಗಳನ್ನು ಆಡುವುದು ಬೇಡ. ನಿಮ್ಮದಲ್ಲದ ವಸ್ತುವನ್ನು ಬಳಸಿಕೊಂಡು ಹಾಳು ಮಾಡುವಿರಿ. ಹಳೆಯ ಪ್ರೇಮವು ಬೆಳಕಿಗೆ ಬಂದು ಮುಜುಗರ ಉಂಟಾದೀತು. ಉದ್ಯೋಗದಲ್ಲಿ ಒತ್ತಡ ಸ್ವೀಕರಿಸುವುದು ಅಭ್ಯಾಸವಾಗಿ ಹೋಗುವುದು. ಯಾವುದೇ ಪ್ರಭಾವಕ್ಕೆ ಸಿಕ್ಕಿ ನಿಮ್ಮನ್ನು ಬದಲಿಸಿಕೊಳ್ಳಬೇಕಾಗಬಹುದು. ಬೋಧನೆ, ಮಾರ್ಗದರ್ಶನದಿಂದ ಗೌರವ ಹೆಚ್ಚುತ್ತದೆ. ಆದಾಯ ಹಂಚಿಕೆಯಲ್ಲಿ ನ್ಯಾಯ ಹಾಗೂ ಸಮಾಧಾನ ಇರಲಿ. ಆಸ್ತಿಯನ್ನು ಉಳಿಸಿಕೊಳ್ಳುವುದೇ ತಲೆನೋವಾಗಬಹುದು. ಮನೆಯಿಂದ ದೂರವಿದ್ದವರು ಹತ್ತಿರವಾಗಬೇಕು ಎನಿಸಬಹುದು. ಅಧಿಕಾರಿಗಳು ನಿಮಗೆ ತೊಂದರೆ ಕೊಡಬಹುದು. ಯಾರನ್ನೋ ಹಿಮ್ಮೆಟ್ಟಿಸುವ ಆಸ್ತೆಯಿಂದ ಕೆಲಸ ಮಾಡುವಿರಿ.
ಧನು ರಾಶಿ:
ಇಂದು ಮನಸ್ಸಿಗೆ ಅಶಾಂತಿ. ಕೆಲಸಗಳಲ್ಲಿ ಆಸಕ್ತಿ ಕಡಿಮೆಯಾಗಬಹುದು. ದೂರಪ್ರಯಾಣದಿಂದ ಲಾಭಕ್ಕಿಂತ ತೊಂದರೆ. ವಸ್ತು ಅಥವಾ ಹಣ ನಷ್ಟದ ಭೀತಿ ಇದೆ. ದುರಸ್ತಿ ಕಾರ್ಯಗಳಿಗೆ ಹಣ ಖರ್ಚಾಗಬಹುದು. ವೃತ್ತಿಯಲ್ಲಿ ನೀವು ತುಂಬಾ ನಿಧಾನದಿಂದ ಕೆಲಸ ಮಾಡುವಿರಿ. ದೂರ ಬಂಧುಗಳ ಭೇಟಿಯಿಂದ ವಿವಾಹ ನಿಶ್ಚಯವಾಗಬಹುದುದು. ಪ್ರೇಮವು ಹೊಸ ತಿರುವನ್ನು ಪಡೆಯಬಹುದು. ಮನಸ್ಸು ಕೆಡಿಸಿಕೊಂಡು ಏನೂ ಮಾಡಲಾಗದು. ಶಾಂತವಾಗಿ, ಸಮಾಧಾನ ಚಿತ್ತದಿಂದ ಮುಂದುವರಿಯಿರಿ. ವಸ್ತುಗಳನ್ನು ಕಳೆದುಹೋಗಿದ್ದು ವಿಳಂಬವಾಗಿ ಬೆಳಕಿಗೆ ಬಂದೀತು. ಹಿರಿಯ ಮಾತನ್ನು ಅಸಡ್ಡೆ ಮಾಡುವಿರಿ. ಬೋಧನೆ ಅಥವಾ ಅನುಭವ ಹಂಚಿಕೆಯಿಂದ ಗೌರವ. ಆಸ್ತಿಯ ಹಂಚಿಕೆಯಲ್ಲಿ ಕುಟುಂಬದ ಸಲಹೆ ಉಪಯುಕ್ತ. ಭವಿಷ್ಯದ ಅನೇಕ ದ್ವಂದ್ವಗಳು ಇರಬಹುದು. ಸಂಗಾತಿಯ ಜೊತೆ ಮುನಿಸು ಕಡಿಮೆ ಮಾಡಿಕೊಳ್ಳಿ. ಪ್ರೇಮಕ್ಕಾಗಿ ಹೆಚ್ಚು ಖರ್ಚನ್ನು ಮಾಡಬೇಕಾದೀತು. ಹಿತಶತ್ರುಗಳ ಬಗ್ಗೆ ನಿಮ್ಮ ಊಹೆಯು ಸುಳ್ಳಾಗಬಹುದು.
ಮಕರ ರಾಶಿ:
ಮಾನಸಿಕ ಚಂಚಲತೆ ಹಾಗೂ ಅನಾಸಕ್ತಿ ಕಾಣಿಸಬಹುದು. ವಾಗ್ವಾದ ತಪ್ಪಿಸಿದರೆ ನೆಮ್ಮದಿ. ಹಣ ವ್ಯವಹಾರದಲ್ಲಿ ನಷ್ಟದ ಸೂಚನೆ ಇರುವುದರಿಂದ ಜಾಗೃತಿ ಅಗತ್ಯ. ದುರಸ್ತಿ ವೆಚ್ಚಗಳು ಹೆಚ್ಚಾಗಬಹುದು. ಕಛೇರಿಯಲ್ಲಿ ನಿಮಗೆ ತಪ್ಪಿತಸ್ಥ ಭಾವವು ಬರಬಹುದು. ಸರ್ಕಾರಿ ಕೆಲಸಕ್ಕಾಗಿ ಹಣವನ್ನು ಕೊಡುವಿರಿ. ಯಾರಿಗೂ ಎತ್ತರದ ದನಿಯನ್ನು ಮಾಡುವುದು ಬೇಡ. ನಿಮ್ಮ ಬಗ್ಗೆ ತಪ್ಪು ಕಲ್ಪನೆಯು ಬರಬಹುದು. ಅನಾರೋಗ್ಯವನ್ನು ಬಹಳವಾಗಿ ನಿರ್ಲಕ್ಷಿಸುವಿರಿ. ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಕಷ್ಟವಾದೀತು. ಆದರೂ ಮಾತಿಗೆ ತಪ್ಪಲಾರಿರಿ. ಹಣದಲ್ಲಿ ಮೋಸವಾಗಬಹುದು. ಉನ್ನತ ಹುದ್ದೆಗೆ ಹೋಗಲು ಅವಕಾಶವಿದ್ದರೂ ನಿಮಗೆ ನಾನಾ ಕಾರಣಗಳಿಂದ ಬೇಡವೆನಿಸುವುದು. ದೂರಪ್ರಯಾಣದಿಂದ ಆಯಾಸ. ಬೋಧನೆ, ಸಲಹೆಗಳಿಂದ ಜನರ ಒಪ್ಪಿಗೆ ಸಿಗುತ್ತದೆ. ಲಾಭದ ಹಂಚಿಕೆಯಲ್ಲಿ ಸಮತೋಲನ ಕಾಯ್ದುಕೊಳ್ಳಿ. ಪ್ರಾಮಾಣಿಕತೆಯಿಂದ ನಿಮಗೇ ಕಷ್ಟವಾಗುವುದು. ಶತ್ರುಗಳನ್ನು ಸೋಲಿಸುವುದಕ್ಕಿಂತ ಶತ್ರುಗಳೇ ಇಲ್ಲದಂತೆ ಮಾಡಿಕೊಳ್ಳುವಿರಿ.
ಕುಂಭ ರಾಶಿ:
ಮಾತಿನ ತಪ್ಪಿನಿಂದ ಅಪವಾದ ಸಂಭವಿಸಬಹುದು. ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ಅಗತ್ಯ. ವಸ್ತುಗಳ ಸಂರಕ್ಷಣೆಗೆ ಗಮನ ಕೊಡಿ. ದುರಸ್ತಿ ಕೆಲಸಗಳು ವಿಳಂಬ ತರಬಹುದು. ದೂರಪ್ರಯಾಣ ಅನಿವಾರ್ಯವಾದರೂ ಲಾಭ ಕಡಿಮೆ. ಬೇಸರವನ್ನು ಯಾರ ಬಳಿಯಾದರೂ ಹೇಳಿಕೊಳ್ಳಬೇಕೆನಿಸದು. ಏನನ್ನಾದರೂ ಬಳಸುವ ಮೊದಲು ಪರೀಕ್ಷಿಸಿಕೊಳ್ಳಿ. ಮಕ್ಕಳಲ್ಲಿ ಬದಲಾವಣೆಯನ್ನು ನೀವು ಕಾಣಬಹುದು. ಮೃದುವಾದ ಮಾತನ್ನು ನೀವು ಅಭ್ಯಾಸ ಮಾಡಿಕೊಳ್ಳಬೇಕಾದೀತು. ನಿಮ್ಮ ಕಾರ್ಯದಲ್ಲಿ ಮಗ್ನರಾಗಿ ಎಲ್ಲರನ್ನೂ ಮರೆಯುವಿರಿ. ಬಂಧುಗಳ ಜೊತೆ ದೂರ ಪ್ರಯಾಣವನ್ನು ಮಾಡಲಿದ್ದೀರಿ. ಬೋಧನೆ ಅಥವಾ ಮಾರ್ಗದರ್ಶನ ಕಾರ್ಯದಲ್ಲಿ ಮಾನ್ಯತೆ ದೊರೆಯುತ್ತದೆ. ಆದಾಯ ಹಂಚಿಕೆಯಲ್ಲಿ ಪಾರದರ್ಶಕತೆ ಮುಖ್ಯ. ಕೆಲವು ಸಂಬಂಧಗಳು ಮತ್ತಷ್ಟು ಹತ್ತಿರವಾಗಬಹುದು. ಕುಲಕ್ಕೆ ಯೋಗ್ಯವಾದ ಕಾರ್ಯವನ್ನು ಮಾಡಿದ್ದಕ್ಕೆ ಪ್ರಶಂಸೆಯು ಸಿಗುವುದು. ವಿದ್ಯಾಭ್ಯಾಸಕ್ಕೆ ಪ್ರೇರಣೆ ಸಿಗಬಹುದು. ಆಪ್ತರೆಂದು ಮಾತಿನಲ್ಲಿ ಹಿಡಿತವಿಲ್ಲದೇ ಏನನ್ನಾದರೂ ಹೇಳುವಿರಿ.
ಮೀನ ರಾಶಿ:
ಇಂದು ವಾಗ್ವಾದಗಳಿಂದ ದೂರವಿರುವುದು ಒಳಿತು. ಕೆಲಸಗಳಲ್ಲಿ ಅನಾಸಕ್ತಿ ಕಂಡರೂ ಜವಾಬ್ದಾರಿ ತಪ್ಪಿಸಬೇಡಿ. ದೂರಪ್ರಯಾಣ ಆಯಾಸ ನೀಡಬಹುದು. ವಸ್ತು ಅಥವಾ ಹಣ ನಷ್ಟದ ಸಾಧ್ಯತೆ ಇದೆ. ಸಹೋದರರ ಜೊತೆ ಆಪ್ತ ಸಮಾಲೋಚನೆ ಮಾಡುವಿರಿ. ಸಾಮಾಜಿಕ ಕೆಲಸದಲ್ಲಿ ಇರುವಷ್ಟು ಶ್ರದ್ಧೆ ಮನೆಯ ಕೆಲಸದಲ್ಲಿ ಬರದೇ ಇರಬಹುದು. ಕೆಲವನ್ನು ಮರೆತು ಮುಂದೆ ಸಾಗುವುದು ನಿಮಗೆ ಉತ್ತಮ. ನಿಮ್ಮ ಬಳಿಯ ಹಣವನ್ನು ಕೇಳಿಕೊಂಡು ಬರಬಹುದು. ಹೊಸ ಉದ್ಯೋಗಕ್ಕೆ ವಿವರಗಳನ್ನು ಕೇಳಿ ಪಡೆಯುವಿರಿ. ನಿಮ್ಮ ಮಕ್ಕಳಿಗೆ ಬೇಕಾದ ವಸ್ತುಗಳನ್ನು ಕೊಡಿಸಿ ಸಂತೋಷಿಸುವಿರಿ. ದುರಸ್ತಿ ಸಂಬಂಧಿತ ವೆಚ್ಚಗಳು ಎದುರಾಗಬಹುದು. ಬೋಧನೆ, ಸಲಹೆಗಳಿಂದ ಗೌರವ ಸಿಗುತ್ತದೆ. ಆದಾಯ ಹಂಚಿಕೆಯಲ್ಲಿ ಆತುರ ಬೇಡ, ವಿವೇಕದಿಂದ ನಿರ್ಧಾರ ಮಾಡಿ. ಕೆಲವರ ನಂಬಿಕಗೆ ಘಾಸಿಯನ್ನು ಉಂಟುಮಾಡುವಿರಿ. ಗೃಹ ಬಳಕೆಯ ವಸ್ತುಗಳು ಹೆಚ್ಚು ಮಾರಾಟವಾಗುವುವು. ಭವಿಷ್ಯದ ನಾಳೆಯ ಕುರಿತು ಅತಿಯಾದ ಯೋಚನೆ ಬೇಕಾಗಿಲ್ಲ. ಖುಷಿಯಿಂದ ಸ್ವೀಕರಿಸಿ ಎಲ್ಲವನ್ನೂ.
ಜನವರಿ 02 2026ರ ಪಂಚಾಂಗ:
ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಹೇಮಂತ, ಚಾಂದ್ರ ಮಾಸ : ಪೌಷ, ಸೌರ ಮಾಸ : ಧನು, ಮಹಾನಕ್ಷತ್ರ : ಶ್ರವಣ, ವಾರ : ಶುಕ್ರ, ಪಕ್ಷ : ಶುಕ್ಲ, ತಿಥಿ : ತ್ರಯೋದಶೀ ನಿತ್ಯನಕ್ಷತ್ರ : ರೋಹಿಣೀ ಯೋಗ : ವಿಷ್ಕಂಭ, ಕರಣ : ತೈತಿಲ, ಸೂರ್ಯೋದಯ – 06 – 50 am, ಸೂರ್ಯಾಸ್ತ – 06 – 06 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 11:04 – 12:28, ಯಮಗಂಡ ಕಾಲ 15:17 – 16:42, ಗುಳಿಕ ಕಾಲ 15:39 – 09:39
-ಲೋಹಿತ ಹೆಬ್ಬಾರ್ – 8762924271 (what’s app only)




