Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಜನವರಿ 24ರ ದಿನಭವಿಷ್ಯ
ಜನ್ಮಸಂಖ್ಯೆ 4, 5, 6ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಜನವರಿ 25ರ ಭಾನುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ನಿಮ್ಮ ಜನ್ಮಸಂಖ್ಯೆ ಆಧಾರಿತ ಈ ಭವಿಷ್ಯವು ದಿನದ ಸವಾಲುಗಳು ಮತ್ತು ಅವಕಾಶಗಳನ್ನು ಎದುರಿಸಲು ನಿಮಗೆ ಸಹಾಯಕವಾಗಲಿದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):
ದಿನವಿಡೀ ಪ್ರೊಡಕ್ಟಿವ್ ಆದಂಥ ಕೆಲಸ- ಕಾರ್ಯ, ಚಟುವಟಿಕೆಯಲ್ಲಿ ತೊಡಗಿಕೊಂಡಿರುತ್ತೀರಿ. ಸಂಬಂಧ- ಸ್ನೇಹದಲ್ಲಿ ಈ ಹಿಂದೆ ಯಾರಿಗೆ ಸಮಯ ನೀಡುವುದಕ್ಕೆ ಸಾಧ್ಯವಾಗಿಲ್ಲ ಎಂದು ನಿಮಗೆ ಅನಿಸಿರುತ್ತದೋ ಅಂಥವರ ಜತೆಗೆ ಕಾಲ ಕಳೆಯಲಿದ್ದೀರಿ. ಕೃಷಿ ಉತ್ಪನ್ನಗಳ ಮಾರ್ಕೆಟಿಂಗ್ ನಲ್ಲಿ ತೊಡಗಿಕೊಂಡಿದ್ದೀರಿ ಅಂತಾದಲ್ಲಿ ಆದಾಯದಲ್ಲಿ ಹೆಚ್ಚಳ ಆಗಲಿದೆ. ಇನ್ನು ಕೃಷಿಕರು ಕೆಲವು ಯಂತ್ರ- ಉಪಕರಣಗಳ ಖರೀದಿಗಾಗಿ ವಿಚಾರಣೆ ನಡೆಸಲಿದ್ದೀರಿ, ಅದಕ್ಕಾಗಿ ಕೊಟೇಷನ್ ಪಡೆದುಕೊಳ್ಳುವ ಸಾಧ್ಯತೆ ಸಹ ಇದೆ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):
ನಿಮ್ಮ ಕಾರ್ಯ ವೈಖರಿಯಲ್ಲಿ ದೊಡ್ಡ ಬದಲಾವಣೆ ಮಾಡಿಕೊಳ್ಳಲಿದ್ದೀರಿ. ಕೆಲಸ ಪೂರ್ತಿ ಆಗುವ ಮುನ್ನ ಅದರ ಬಗ್ಗೆ ಯಾರ ಜತೆಗೂ ಚರ್ಚೆ ಮಾಡಬಾರದು ಎಂಬ ತೀರ್ಮಾನ ಕೈಗೊಳ್ಳಲಿದ್ದೀರಿ. ಯಾವುದಕ್ಕೂ ಇರಲಿ ಎಂದುಕೊಂಡು, ಕಳೆದ ಕೆಲ ಸಮಯದಿಂದ ಕೂಡಿಡುತ್ತಾ ಬಂದಿದ್ದ ಆಪತ್ ಕಾಲದ ಮೊತ್ತವೊಂದು ಈ ದಿನ ಸಹಾಯಕ್ಕೆ ಬರಲಿದೆ. ತಕ್ಷಣಕ್ಕೆ ಹೊಂದಾಣಿಕೆ ಮಾಡಬೇಕು ಎಂಬಂಥ ವಸ್ತು, ಹಣ ಅಥವಾ ವ್ಯಕ್ತಿಗಳನ್ನು ಶ್ರದ್ಧೆಯಿಂದ ಮಾಡಲಿದ್ದೀರಿ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):
ತಲೆಮಾರಿನ ಅಂತರ, ಅಂದರೆ ಜನರೇಷನ್ ಗ್ಯಾಪ್ ಅಂತಾರಲ್ಲ ಈ ದಿನ ನಿಮ್ಮ ಅನುಭವಕ್ಕೆ ಬರಲಿದೆ. ಹಣಕಾಸಿನ ನಿರ್ಧಾರದ ವಿಷಯಕ್ಕೆ ಯಾರಿಗೂ ಸಲಹೆ ನೀಡುವುದಕ್ಕೋ ಅಥವಾ ಹೀಗೇ ನಡೆದುಕೊಳ್ಳಿ ಎನ್ನುವುದಕ್ಕೋ ಹೋಗಬೇಡಿ. ನಿಮ್ಮ ಸಲಹೆಗಳು ಉಪಯುಕ್ತ ಅಲ್ಲ ಎಂಬುದನ್ನು ನೇರವಾಗಿಯೇ ಹೇಳಿ, ಅದನ್ನು ಸಾಬೀತು ಸಹ ಮಾಡಿಬಿಡುವ ಅಪಾಯ ಇದೆ. ಹೀಗಾದಲ್ಲಿ ನಿಮ್ಮ ಆತ್ಮವಿಶ್ವಾಸ ಕುಗ್ಗಿ ಹೋಗುತ್ತದೆ. ನಿಮ್ಮಲ್ಲಿ ಕೆಲವರಿಗೆ ಸೀಸನಲ್ ವ್ಯವಹಾರದ ಅವಕಾಶವೊಂದು ದೊರೆಯಲಿದೆ. ಒಂದೆರಡು ತಿಂಗಳ ಮಟ್ಟಿಗೆ ಮಾತ್ರ ಆದಾಯ ತಂದುಕೊಡುವಂಥವು.
ಲೇಖನ- ಸ್ವಾತಿ ಎನ್.ಕೆ.
