AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾರ ಭವಿಷ್ಯ: ಜುಲೈ 19 ರಿಂದ ಈ ರಾಶಿಯವರಿಗೆ ಅದೃಷ್ಟ: ಆದರೆ ಅಂದುಕೊಂಡ ಕಾರ್ಯಕ್ಕೆ ತೊಂದರೆಯಾಗುವ ಸಾಧ್ಯತೆ

Weekly Horoscope: ಜುಲೈ 19-28, 2026ರ ಈ ವಾರ ಗ್ರಹಗತಿಗಳ ಸಂಚಾರವು 12 ರಾಶಿಗಳ ಮೇಲೆ ಹಲವು ರೀತಿಯಲ್ಲಿ ಪ್ರಭಾವ ಬೀರಲಿದೆ. ಅಂದುಕೊಂಡ ಕಾರ್ಯಗಳಲ್ಲಿ ಸಣ್ಣ ತೊಂದರೆಗಳಾಗಬಹುದು, ಆದರೆ ಬೇಸರಿಸದೆ ಮುಂದುವರೆಯುವುದು ಮುಖ್ಯ. ಹಣಕಾಸು, ವೃತ್ತಿ ಮತ್ತು ಸಂಬಂಧಗಳಲ್ಲಿನ ಏರಿಳಿತಗಳನ್ನು ಗ್ರಹಗಳ ಸ್ಥಾನದ ಆಧಾರದ ಮೇಲೆ ವಿಶ್ಲೇಷಿಸಲಾಗಿದೆ. ಸವಾಲುಗಳನ್ನು ಎದುರಿಸಲು ಮತ್ತು ಅವಕಾಶಗಳನ್ನು ಬಳಸಿಕೊಳ್ಳಲು ಜ್ಯೋತಿಷ್ಯ ಸಲಹೆಗಳು ಇಲ್ಲಿವೆ. ನಿಮ್ಮ ರಾಶಿಗೆ ಏನಿದೆ ಎಂದು ತಿಳಿಯಿರಿ.

ವಾರ ಭವಿಷ್ಯ: ಜುಲೈ 19 ರಿಂದ ಈ ರಾಶಿಯವರಿಗೆ ಅದೃಷ್ಟ: ಆದರೆ ಅಂದುಕೊಂಡ ಕಾರ್ಯಕ್ಕೆ ತೊಂದರೆಯಾಗುವ ಸಾಧ್ಯತೆ
ಸಾಂದರ್ಭಿಕ ಚಿತ್ರ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Jul 17, 2026 | 9:50 PM

Share

ಜುಲೈ 19ರಿಂದ 28, 2026ರ ವರೆಗೆ ​ಗ್ರಹಗತಿಗಳ ಸಂಚಾರ ಮತ್ತು ಸಂಯೋಗದ ಆಧಾರ ಮೇಲೆ ಅಂದುಕೊಂಡ ಕಾರ್ಯಕ್ಕೆ ಸಣ್ಣ ತೊಂದರೆ, ಬೇಸರಿಸದೇ ಮುಂದೆ ಸಾಗುವುದು, ಬೆನ್ನ ಹಿಂದೆ ಕುಚೋದ್ಯ, ಪ್ರಾಮಾಣಿಕತೆ ಪ್ರಶ್ನೆ, ಲಾಭ ನಷ್ಟದ ಲೆಕ್ಕಾಚಾರ ಮುಂತಾದವು ಇವೆಲ್ಲ ಈ ವಾರದಲ್ಲಿ ಕಾಣಿಸಿಕೊಳ್ಳಲಿದೆ ​ ಮೇಷ ರಾಶಿ :

​ದ್ವಿತೀಯದಲ್ಲಿ ಮಂಗಳ ಹಾಗೂ ಅಷ್ಟಮದಲ್ಲಿ ಚಂದ್ರನ ಸಂಚಾರವಿರುವುದರಿಂದ ಈ ವಾರ ಮಾತಿನ ಮೇಲೆ ನಿಯಂತ್ರಣವಿರಲಿ. ಹಣಕಾಸಿನ ಹರಿವು ಚೆನ್ನಾಗಿದ್ದರೂ ಆಕಸ್ಮಿಕ ಖರ್ಚುಗಳು ಎದುರಾಗಬಹುದು. ಹಳೆಯ ಹೂಡಿಕೆಗಳು ಕೈ ಹಿಡಿಯಲಿವೆ. ಸವಾಲುಗಳನ್ನು ಬುದ್ಧಿವಂತಿಕೆಯಿಂದ ಎದುರಿಸುವಿರಿ. ​ ವೃಷಭ ರಾಶಿ :

​ನಿಮ್ಮದೇ ರಾಶಿಯಲ್ಲಿ ಮಂಗಳನಿದ್ದು, ಸಪ್ತಮದಲ್ಲಿ ಚಂದ್ರನಿದ್ದಾನೆ. ನಿಮ್ಮ ಆಲೋಚನೆಗಳಲ್ಲಿ ಸ್ಪಷ್ಟತೆ ಇರಲಿದೆ. ವೃತ್ತಿ ಕ್ಷೇತ್ರದಲ್ಲಿ ನಿಮ್ಮ ನಾಯಕತ್ವಕ್ಕೆ ಮನ್ನಣೆ ಸಿಗಲಿದೆ. ಸಂಗಾತಿಯೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಬರಬಹುದು, ತಾಳ್ಮೆ ಅಗತ್ಯ. ಹೊಸ ಉದ್ಯೋಗಾವಕಾಶಗಳು ಹುಡುಕಿಕೊಂಡು ಬರಲಿವೆ. ​ ಮಿಥುನ ರಾಶಿ :

​ನಿಮ್ಮ ರಾಶ್ಯಾಧಿಪತಿ ಬುಧ ಸ್ವಕ್ಷೇತ್ರದಲ್ಲಿದ್ದಾನೆ. ನಿಮ್ಮ ಬುದ್ಧಿವಂತಿಕೆ ಹಾಗೂ ಸಂವಹನ ಕಲೆ ಈ ವಾರ ಅದ್ಭುತವಾಗಿ ಕೆಲಸ ಮಾಡಲಿದೆ. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ಸಕಾಲ. ಕೋರ್ಟ್ ಕಚೇರಿ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಆರೋಗ್ಯದ ಕಡೆಗೆ ಸ್ವಲ್ಪ ಗಮನ ಹರಿಸಿ. ​ ಕರ್ಕಾಟಕ ರಾಶಿ :

​ನಿಮ್ಮ ರಾಶಿಯಲ್ಲಿ ಸೂರ್ಯ ಮತ್ತು ಗುರುಗಳ ಯುತಿ ಇದೆ. ಸಮಾಜದಲ್ಲಿ ಗೌರವ, ಕೀರ್ತಿ ಹೆಚ್ಚಾಗಲಿದೆ. ಆದರೆ ಗುರು ಅಸ್ತನಾಗಿರುವುದರಿಂದ ಅತಿಯಾದ ಆತ್ಮವಿಶ್ವಾಸ ಬೇಡ. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ​ ಸಿಂಹ ರಾಶಿ :

​ನಿಮ್ಮ ರಾಶಿಯಲ್ಲಿ ಶುಕ್ರ ಮತ್ತು ಕೇತುಗಳಿರುವುದರಿಂದ ಸೃಜನಶೀಲ ಕೆಲಸಗಳಿಗೆ ಉತ್ತಮ ವೇದಿಕೆ ಸಿಗಲಿದೆ. ಹೊಸ ಒಪ್ಪಂದಗಳಿಗೆ ಸಹಿ ಹಾಕುವ ಮುನ್ನ ಯೋಚಿಸಿ. ವಿದೇಶಿ ಮೂಲಗಳಿಂದ ಲಾಭವಾಗುವ ಸಾಧ್ಯತೆ ಇದೆ. ಕುಟುಂಬದ ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ​ ಕನ್ಯಾ ರಾಶಿ :

​ದಶಮದಲ್ಲಿ ಬುಧನ ಸ್ಥಾನ ಇರುವುದರಿಂದ ಉದ್ಯೋಗ ರಂಗದಲ್ಲಿ ದೊಡ್ಡ ಮಟ್ಟದ ಬದಲಾವಣೆಗಳನ್ನು ಕಾಣುವಿರಿ. ನಿಮ್ಮ ಕಾರ್ಯಕ್ಷಮತೆಗೆ ಮೇಲಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ. ಆರ್ಥಿಕವಾಗಿ ಲಾಭದಾಯಕ ವಾರವಿದು. ಸ್ನೇಹಿತರಿಂದ ನಿರೀಕ್ಷಿತ ಸಹಾಯ ದೊರೆಯಲಿದೆ. ​ ತುಲಾ ರಾಶಿ :

​ಲಾಭ ಸ್ಥಾನದಲ್ಲಿ ಶುಕ್ರನ ಇಡುವಿಕೆಯಿಂದಾಗಿ ಆದಾಯದ ಮೂಲಗಳು ಹೆಚ್ಚಾಗಲಿವೆ. ನಿಮ್ಮ ಆಸೆ ಆಕಾಂಕ್ಷೆಗಳು ಈಡೇರುವ ಸಮಯ ಹತ್ತಿರ ಬಂದಿದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಮೂಡಲಿದೆ. ಉದ್ಯೋಗದಲ್ಲಿ ವರ್ಗಾವಣೆ ಬಯಸುವವರಿಗೆ ಶುಭ ವಾರ್ತೆ ಸಿಗಲಿದೆ. ​ ವೃಶ್ಚಿಕ ರಾಶಿ :

​ಚಂದ್ರನ ಸಂಚಾರ ನಿಮ್ಮ ರಾಶಿಯಲ್ಲೇ ಇರುವುದರಿಂದ ವಾರದ ಆರಂಭದಲ್ಲಿ ಮನಸ್ಸು ಸ್ವಲ್ಪ ಚಂಚಲವಾಗಬಹುದು. ಆದರೆ ದಶಮದ ಶುಕ್ರ ನಿಮ್ಮ ಕೈ ಹಿಡಿಯಲಿದ್ದಾನೆ. ವೃತ್ತಿ ಜೀವನದಲ್ಲಿ ಹೊಸ ಜವಾಬ್ದಾರಿಗಳು ಹೆಗಲೇರಲಿವೆ. ಸಂಗಾತಿಯ ಬೆಂಬಲ ಮಾನಸಿಕ ಸ್ಥಿರತೆ ನೀಡಲಿದೆ. ​ ಧನು ರಾಶಿ :

​ಭಾಗ್ಯ ಸ್ಥಾನದ ಗ್ರಹಬಲ ಚೆನ್ನಾಗಿದೆ. ಆಧ್ಯಾತ್ಮಿಕ ಚಿಂತನೆಗಳು ಹೆಚ್ಚಾಗಲಿವೆ. ದೂರದ ಪ್ರಯಾಣದಿಂದ ಲಾಭವಾಗಲಿದೆ. ತಂದೆಯವರ ಕಡೆಯಿಂದ ಆಸ್ತಿ ಅಥವಾ ಹಣಕಾಸಿನ ನೆರವು ಸಿಗುವ ಸಾಧ್ಯತೆ ಇದೆ. ಹಠಾತ್ ಅದೃಷ್ಟ ನಿಮ್ಮದಾಗಬಹುದು. ​ ಮಕರ ರಾಶಿ :

​ಪಂಚಮದಲ್ಲಿ ಮಂಗಳ ಹಾಗೂ ಅಷ್ಟಮದಲ್ಲಿ ಶುಕ್ರನ ಸ್ಥಾನ ಇರುವುದರಿಂದ ಆರೋಗ್ಯದಲ್ಲಿ ಏರುಪೇರಾಗದಂತೆ ನೋಡಿಕೊಳ್ಳಿ. ಶತ್ರುಗಳ ತಂತ್ರಗಳು ಧೂಳೀಪಟವಾಗಲಿವೆ. ರಹಸ್ಯ ಮೂಲಗಳಿಂದ ಧನಲಾಭವಾಗುವ ಯೋಗವಿದೆ. ಆತುರದ ಹೂಡಿಕೆಗಳನ್ನು ತಡೆಯಿರಿ. ​ ಕುಂಭ ರಾಶಿ :

​ನಿಮ್ಮ ರಾಶಿಯಲ್ಲಿ ರಾಹು ಮತ್ತು ಲಗ್ನ ಇರುವುದರಿಂದ ನಿಮ್ಮ ವ್ಯಕ್ತಿತ್ವದಲ್ಲಿ ಹೊಸ ಆಕರ್ಷಣೆ ಮೂಡಲಿದೆ. ಸಪ್ತಮದ ಶುಕ್ರ ವೈವಾಹಿಕ ಜೀವನದಲ್ಲಿ ಮಧುರತೆಯನ್ನು ತರಲಿದ್ದಾನೆ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭಾಂಶ ಹೆಚ್ಚಾಗಲಿದೆ. ಸಾರ್ವಜನಿಕ ರಂಗದಲ್ಲಿ ಮನ್ನಣೆ ಸಿಗಲಿದೆ.

ಇದನ್ನೂ ಓದಿ: ಜಗನ್ನಾಥ ರಥಯಾತ್ರೆ ಆರಂಭ; ರಥಯಾತ್ರೆಯ ಮಾರ್ಗವನ್ನು ಚಿನ್ನದ ಪೊರಕೆಯಿಂದ ಗುಡಿಸುವ ಸಂಪ್ರದಾಯದ ಬಗ್ಗೆ ನಿಮಗೆ ಗೊತ್ತಾ? ​ ಮೀನ ರಾಶಿ :

​ನಿಮ್ಮ ರಾಶಿಯಲ್ಲಿ ಶನಿಯ ಸಂಚಾರವಿದ್ದು, ಆರನೇ ಮನೆಯಲ್ಲಿ ಗ್ರಹಬಲವಿದೆ. ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ತಡವಾಗಿ ಸಿಕ್ಕರೂ ಖಂಡಿತ ಸಿಗಲಿದೆ. ಹಳೆಯ ಸಾಲಗಳಿಂದ ಮುಕ್ತಿ ದೊರೆಯುವ ಹಾದಿ ಸುಲಭವಾಗಲಿದೆ. ಉದ್ಯೋಗಿಗಳಿಗೆ ಸಹೋದ್ಯೋಗಿಗಳಿಂದ ಉತ್ತಮ ಸಹಕಾರ ದೊರೆಯಲಿದೆ.

– ಲೋಹಿತ್ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಬಿಡದಿ ಟೌನ್‌ಶಿಪ್ ಯೋಜನೆ ಪರ ರೈತರಿಂದ ಭೂ ಪರಿಹಾರಕ್ಕೆ ಅರ್ಜಿ ಸಲ್ಲಿಕೆ
ಬಿಡದಿ ಟೌನ್‌ಶಿಪ್ ಯೋಜನೆ ಪರ ರೈತರಿಂದ ಭೂ ಪರಿಹಾರಕ್ಕೆ ಅರ್ಜಿ ಸಲ್ಲಿಕೆ
ಉಳ್ಳಾಲ ಕಡಲತೀರಕ್ಕೆ ಅಪ್ಪಳಿಸಿದ ಲಕ್ಷಾಂತರ ಬೂತಾಯಿ ಮೀನಿನ ರಾಶಿ
ಉಳ್ಳಾಲ ಕಡಲತೀರಕ್ಕೆ ಅಪ್ಪಳಿಸಿದ ಲಕ್ಷಾಂತರ ಬೂತಾಯಿ ಮೀನಿನ ರಾಶಿ
ಬೀದಿಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಕರ್ತವ್ಯ
ಬೀದಿಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಕರ್ತವ್ಯ
ದೇವೇಗೌಡರ ಪತ್ನಿ ಚೆನ್ನಮ್ಮ ಸ್ಥಿತಿ ಗಂಭೀರ: ಆಸ್ಪತ್ರೆಗೆ ಧಾವಿಸಿದ HDK
ದೇವೇಗೌಡರ ಪತ್ನಿ ಚೆನ್ನಮ್ಮ ಸ್ಥಿತಿ ಗಂಭೀರ: ಆಸ್ಪತ್ರೆಗೆ ಧಾವಿಸಿದ HDK
SIR ಮುಗಿದ ತಕ್ಷಣ ಜಿಬಿಎ ಎಲೆಕ್ಷನ್ ಎಂದ ಕೃಷ್ಣಬೈರೇಗೌಡ
SIR ಮುಗಿದ ತಕ್ಷಣ ಜಿಬಿಎ ಎಲೆಕ್ಷನ್ ಎಂದ ಕೃಷ್ಣಬೈರೇಗೌಡ
ಡಿಕೆಶಿ ಸಚಿವ ಸಂಪುಟ ವಿಸ್ತರಣೆ: ಹೊಸ ಮುಖಗಳಿಗೆ ಹೈಕಮಾಂಡ್​​ ಮಣೆ?
ಡಿಕೆಶಿ ಸಚಿವ ಸಂಪುಟ ವಿಸ್ತರಣೆ: ಹೊಸ ಮುಖಗಳಿಗೆ ಹೈಕಮಾಂಡ್​​ ಮಣೆ?
ಮುಗಿಲು ಮುಟ್ಟಿದ ಲಾವಣ್ಯ ತಾಯಿಯ ಆಕ್ರಂದನ
ಮುಗಿಲು ಮುಟ್ಟಿದ ಲಾವಣ್ಯ ತಾಯಿಯ ಆಕ್ರಂದನ
ಚಿತ್ರೀಕರಣದಲ್ಲಿ ಆದ ಕಷ್ಟಗಳನ್ನು ವಿವರಿಸಿದ ನಟ ತಬಲಾ ನಾಣಿ: ವಿಡಿಯೋ
ಚಿತ್ರೀಕರಣದಲ್ಲಿ ಆದ ಕಷ್ಟಗಳನ್ನು ವಿವರಿಸಿದ ನಟ ತಬಲಾ ನಾಣಿ: ವಿಡಿಯೋ
ಅರಬ್ಬಿ ಸಮುದ್ರದಲ್ಲಿ ಮಗುಚಿದ ನಾಡದೋಣಿ: ನಾಲ್ವರು ಮೀನುಗಾರರು ಪಾರು
ಅರಬ್ಬಿ ಸಮುದ್ರದಲ್ಲಿ ಮಗುಚಿದ ನಾಡದೋಣಿ: ನಾಲ್ವರು ಮೀನುಗಾರರು ಪಾರು
ಸದ್ಯಕ್ಕಿಲ್ಲ ಜಿಬಿಎ ಚುನಾವಣೆ: ಡಿ. 31ರ ಡೆಡ್​ಲೈನ್ ನಿಗದಿಪಡಿಸಿದ ಸುಪ್ರೀಂ
ಸದ್ಯಕ್ಕಿಲ್ಲ ಜಿಬಿಎ ಚುನಾವಣೆ: ಡಿ. 31ರ ಡೆಡ್​ಲೈನ್ ನಿಗದಿಪಡಿಸಿದ ಸುಪ್ರೀಂ