Horoscope 12 Nov: ದಿನಭವಿಷ್ಯ, ನಕಾರಾತ್ಮಕ ಮಾತುಗಳಿಂದ ನಿಮಗೆ ಬೇಸರ, ಆಡಿದ ಮಾತಿಗೆ ಕ್ಷಮೆ ಕೇಳಬೇಕಾದೀತು
ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹಾಗಾದರೆ ಇಂದಿನ (2023 ನವೆಂಬರ್ 12) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ಇಂದಿನ ರಾಶಿ ಭವಿಷ್ಯ (Horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ನವೆಂಬರ್ 12) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ತುಲಾ ಮಾಸ, ಮಹಾನಕ್ಷತ್ರ: ವಿಶಾಖಾ, ಮಾಸ: ಆಶ್ವಯುಜ, ಪಕ್ಷ: ಕೃಷ್ಣ, ವಾರ: ಭಾನು, ತಿಥಿ: ಚತುರ್ದಶೀ, ನಿತ್ಯನಕ್ಷತ್ರ: ಸ್ವಾತೀ, ಯೋಗ: ಆಯುಷ್ಮಾನ್, ಕರಣ: ಚತುಷ್ಪಾತ್, ಸೂರ್ಯೋದಯ ಬೆಳಗ್ಗೆ 06 ಗಂಟೆ 33 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ. ರಾಹು ಕಾಲ ಮಧ್ಯಾಹ್ನ 04:34 ರಿಂದ 06:00, ಯಮಘಂಡ ಕಾಲ ಮಧ್ಯಾಹ್ನ 12:17 ರಿಂದ 01:43ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:08 ರಿಂದ 04:34ರ ವರೆಗೆ.
ಮೇಷ ರಾಶಿ: ಪಾಲುದಾರಿಕೆಯ ಮಾತುಕತೆಗಳನ್ನು ಮುಂದೂಡಿ. ಸಾಲಕ್ಕಾಗಿ ಯಾರಾದರೂ ಪ್ರೇರೇಪಿಸಬಹುದು. ಸಂದರ್ಭೋಚಿತ ಮಾತುಗಳಿಂದ ಗೆಲುವುದು ಸಿಗಬಹುದು. ನಂಬಿಕೆ ದ್ರೋಹಹವು ನಿಮಗಾಗಲಿದೆ. ಇಷ್ಟಪಟ್ಟವರನ್ನು ದೂರ ಮಾಡಿಕೊಳ್ಳುವಿರಿ. ಅನ್ಯರ ವಿಚಾರದಲ್ಲಿ ನಿಮಗೆ ಆಸಕ್ತಿಯು ಕಡಿಮೆ ಆಗುವುದು. ಸರ್ಕಾರದ ಕೆಲಸಕ್ಕಾಗಿ ಅಧಿಕ ಓಡಾಟವಾಗುವುದು. ಆರ್ಥಿಕ ನೆರವನ್ನು ಯಾರಿಂದಲಾದರೂ ನೀವು ಬಯಸುವಿರಿ. ಸಮಾಧನ ಚಿತ್ತದಿಂದ ಇರುವಿರಿ. ವ್ಯವಹಾರದ ವಿಷಯದಲ್ಲಿ ನಿಮಗೆ ಯಾವುದೇ ಔದಾರ್ಯ ಬೇಡ. ನಿಮ್ಮ ಸ್ವಭಾವದಿಂದ ದಾಂಪತ್ಯದಲ್ಲಿ ಕೆಲವು ಮಾತುಗಳು ಕೇಳಿಬರಬಹುದು. ಅನ್ಯರಿಗೆ ಅಸಾಧ್ಯವಾದ ಕೆಲಸವು ನಿಮ್ಮಿಂದ ಸಾಧ್ಯವಾಗಬಹುದು. ನೇರ ಮಾತಿನಿಂದ ನಿಮ್ಮ ಅಭಿಪ್ರಾಯವನ್ನು ತಿಳಿಸಿ.
ವೃಷಭ ರಾಶಿ: ರಹಸ್ಯ ವಿಚಾರವನ್ನು ನೀವು ಅರಿವಿಲ್ಲದೇ ಹೇಳುವಿರಿ. ಕೆಲವು ಸಂದರ್ಭಗಳನ್ನು ನಿಭಾಯಿಸುವುದು ಕಷ್ಟಕರವೆನಿಸುವುದು. ಚಾಂಚಲ್ಯದ ಮನಸ್ಸಿನಿಂದ ಕೆಲವು ನಿರ್ಧಾರಗಳನ್ನು ಗಟ್ಟಿಯಾಗಿಸಲು ಕಷ್ಟವಾದೀತು. ನಿಮ್ಮ ಪುಟ್ಟ ಪ್ರಪಂಚದಿಂದ ಹೊರಬರಲು ತಯಾರಾಗುವಿರಿ. ಬಂಧುಗಳ ನಕಾರಾತ್ಮಕ ಮಾತುಗಳಿಂದ ನಿಮಗೆ ಬೇಸರವಾದೀತು. ಆಡಿದ ಮಾತಿಗೆ ಕ್ಷಮೆಯನ್ನು ಕೇಳಬೇಕಾದೀತು. ನಿಮ್ಮ ಸುರಕ್ಷತೆಯಲ್ಲಿ ನೀವಿರುವುದು ಉತ್ತಮ. ಪತ್ನಿಯ ಬಗ್ಗೆ ದಾಮದೃಷ್ಟಿಯು ಬೇರೆ ವಿದೇಶದ ಸಂಪರ್ಕದಿಂದ ನಿಮಗೆ ಅನನುಕೂಲವಾಗಲಿದೆ. ನಿಮ್ಮ ಗೌಪ್ಯ ವಿಚಾರವನ್ನು ಮುಚ್ಚಿಡಲು ಪ್ರಯತ್ನಿಸುವಿರಿ. ನಿಮ್ಮ ನಿಲುವು ಕೆಲವರಿಗೆ ಇಷ್ಟವಾಗುವುದು. ಹಬ್ಬದ ವಾತಾವರಣದಿಂದ ನೋವನ್ನು ಮರೆಯುವಿರಿ.
ಮಿಥುನ ರಾಶಿ: ನೂತನ ಉದ್ಯೋಗಕ್ಕೆ ಪ್ರಯತ್ನಿಸುತ್ತಿದ್ದರೆ ಪ್ರಾಪ್ತವಾಗುವುದು. ಬಂಧುಗಳ ವಿಚಾರದಲ್ಲಿ ತೃಪ್ತಿ ಇರದು. ತಾತ್ಕಾಲಿಕವಾಗಿ ನಿಮ್ಮ ಸಮಸ್ಯೆಗಳು ನಿವಾರಣೆಯಾಗಲಿದ್ದು ಸ್ವಲ್ಪ ಉಸಿರಾಡುವುದಕ್ಕೆ ಅನುವುಮಾಡಿಕೊಳ್ಳುವಿರಿ. ಉದ್ಯೋಗದಲ್ಲಿ ಭಡ್ತಿಗಾಗಿ ಕಾಯುತ್ತಿದ್ದು ಇಂದು ಸಿಗಬಹುದು. ಸ್ನೇಹಿರಿಂದ ನಿಮಗೆ ಬಹುಮಾನ ಸಿಗಬಹುದು. ದೂರದ ಊರಿಗೆ ಒಬ್ಬರೇ ವಾಹನ ಚಾಲಾಯಿಸುವಿರಿ. ವ್ಯಾಪರದಲ್ಲಿ ಮಧ್ಯವರ್ತಿಗಳಿಂದ ನಿಮ್ಮ ವ್ಯಾಪಾರವು ಕುಂಠಿತವಾಗುವುದು. ಮೋಸದ ಜಾಲಕ್ಕೆ ಸಿಕ್ಕಬಹುದು, ಸಾಧ್ಯತೆ ಇದೆ. ಆಭರಣ ಖರೀದಿಯಿಂದ ಮುಂದಕ್ಕೆ ಬಳಕೆಯಾಗಬಹುದು. ಉತ್ತಮ ಆಹಾರವನ್ನು ಪಡೆಯಲು ಯತ್ನಿಸಿ. ಅಪರಿಚಿತರ ಪರಿಚಯ ಮಾತ್ರದಿಂದ ಎಲ್ಲವನ್ನೂ ತಿಳಿಸುವವರೆಗೂ ಮುಂದುವರಿಯುವುದು ಬೇಡ.
ಕಟಕ ರಾಶಿ: ತಂದೆಯ ಆರೋಗ್ಯವು ಕ್ಷೀಣಿಸಬಹುದು. ದುಷ್ಕೃತ್ಯದಲ್ಲಿ ಮನಸ್ಸು ಇರಲಿದೆ. ಆಹಾರ ಉದ್ಯಮದಿಂದ ಉತ್ತಮ ಆದಾಯ ಸಿಗಬಹುದು. ಯಾರ ಬಳಿಯೂ ಸಹಾಯ ಹಸ್ತವನ್ನು ಚಾಚದೇ ಸ್ವಂತ ಬಲದ ಮೇಲೆ ಬರುವ ಆಸೆ ಇರಲಿದೆ. ನಿಮ್ಮ ನಿಷ್ಕಾಳಜಿಯಿಂದ ಅನಾಯಾಸವಾಗಿ ಬರುವ ಆದಾಯವು ಸಿಗದೇ ಹೋಗುವುದು. ಸಂಗಾತಿಯಿಂದ ಅವಮಾನವಾಗುವುದು. ಆರ್ಥಿಕಸ್ಥಿತಿಯು ನಿಮಗೆ ಖುಷಿಯನ್ನು ಕೊಟ್ಟರೂ ನೆಮ್ಮದಿ ಮಾತ್ರ ಇರದು. ಚಂಚಲ ಸ್ವಭಾವವು ತಾನಾಗಿಯೇ ಕಡಿಮೆಯಾಗಿದ್ದು ಅಚ್ಚರಿ ಆಗಬಹುದು. ವೃತ್ತಿಯಲ್ಲಿ ಬಂದ ಮಾತಿನಿಂದ ನೀವು ಉದ್ವೇಗಗೊಳ್ಳುವ ಅವಶ್ಯಕತೆ ಇರುವುದಿಲ್ಲ. ಕೆಲವರ ವಿಚಾರದಲ್ಲಿ ನಿಮ್ಮ ದೃಷ್ಟಿಯನ್ನು ಬದಲಿಸಿಕೊಳ್ಳುವುದೇ ಯೋಗ್ಯವಾದುದು. ಮಿತವಾದ ಮಾತು ಇರಲಿ.
ಸಿಂಹ ರಾಶಿ: ನಂಬಿಕೆಯನ್ನು ಉಳಿಸಿಕೊಳ್ಳುವ ಪ್ರಯತ್ನವನ್ನು ಮಾಡುವಿರಿ. ಮನೆಯ ಕೆಲಸದಲ್ಲಿ ಆಲಸ್ಯವನ್ನು ತೋರಿಸುವಿರಿ. ಅನಿರೀಕ್ಷಿತ ಮಾತುಗಳನ್ನು ಕೇಳಬೇಕಾದ ಸ್ಥಿತಿಯು ಬರಬಹುದು. ಸಣ್ಣ ಆರೋಗ್ಯದ ತೊಂದರೆಯೂ ನಿಮ್ಮ ಮನಸ್ಸಿಗೆ ಕಿರಿಕಿರಿಯನ್ನು ಉಂಟುಮಾಡುವುದು. ಕಾರ್ಯದಲ್ಲಿ ವೇಗವು ಕುಂಠಿತವಾಗುವುದು. ಸರ್ಕಾರದ ಸೌಲಭ್ಯವು ನಿಮಗೆ ಸಿಗದೇ ಹೋಗಬಹುದು. ನಿಮ್ಮ ಕೆಲಸವು ಸಂದೇಹಕ್ಕೆ ಆಸ್ಪದ ಕೊಡುವುದು ಬೇಡ. ಯಶಸ್ಸನ್ನು ಪಡೆಯುವ ಹಂಬಲವಿರಲಿದೆ. ನೀವು ನೋಡಿದ್ದೇ ಸತ್ಯ ಎಂದು ತಿಳಿದುಕೊಳ್ಳುವುದು ಬೇಡ. ಯಾರಿಗೂ ನಿಮ್ಮ ಅವಶ್ಯಕತೆ ಇಲ್ಲದೇ ಹೋಗಬಹುದು. ಸ್ನೇಹಿತರಿಗೆ ಸಾಲವಾಗಿ ಹಣವನ್ನು ಪುನಃ ಬರುವ ನಿರೀಕ್ಷೆ ಇಲ್ಲದೇ ಕೊಡುವಿರಿ. ಸಾಮಾಜಿಕ ತಾಣದಿಂದ ಪ್ರೇಮವು ಉಂಟಾಗಬಹುದು. ಉಡುಗೊರೆಯನ್ನು ಮನೆಯವರಿಗೆ ನೀಡುವಿರಿ.
ಕನ್ಯಾ ರಾಶಿ: ನಿಮ್ಮ ಸ್ವಪ್ರತಿಷ್ಠೆಯಿಂದ ಜನರನ್ನು ಕಳೆದುಕೊಳ್ಳುವಿರಿ. ರಾಜಕೀಯ ಹಿತಾಸಕ್ತಿಯನ್ನು ಬಯಸುವಿರಿ. ಶತ್ರುಗಳ ಕಾರಣದಿಂದ ಖರ್ಚುನ್ನು ಮಾಡಬೇಕಾದ ಸ್ಥಿತಿಯು ಬರಲಿದೆ. ಮನಶ್ಶಾಂತಿಗಾಗಿ ಧಾರ್ಮಿಕ ಕಾರ್ಯಗಳನ್ನು ಮಾಡಿಸುವಿರಿ. ಅಕಾಲದಲ್ಲಿ ಸೇವಿಸಿದ ಆಹಾರದಿಂದ ನಿಮಗೆ ಆರೋಗ್ಯವು ಹಾಳಾಗುವುದು. ಮನೆಯಲ್ಲಿ ನೌಕರರ ಕಾರಣಕ್ಕೆ ಸಿಟ್ಟಾಗುವಿರಿ. ಹೊಸ ಸಂಬಂಧದ ಕಡೆ ನಿಮ್ಮ ಚಿತ್ತವು ಇರಲಿದೆ. ನಿರಂತರ ಕೆಲಸವನ್ನು ಮಾಡುವುದು ಇಷ್ಟವಾಗಲಿದೆ. ಸಂಗಾತಿಯ ಭಾವನೆಗೆ ಬೆಲೆ ಕೊಟ್ಟು ಸಂತೋಷಪಡಿಸುವಿರಿ. ವೈವಾಹಿಕ ಸಂಬಂಧವನ್ನು ಸರಿಯಾಗಿ ಇಟ್ಟುಕೊಳ್ಳಿ. ಗೃಹನಿರ್ಮಾಣವು ಕಾರಣಾಂತರಗಳಿಂದ ಮುಂದೆ ಹೋಗುವುದು. ನಿಮಗೆ ಬೇಕಾದ ಅವಕಾಶವು ಸಿಗದೇ ಒದ್ದಾಡುವಿರಿ.
ತುಲಾ ರಾಶಿ: ಅನಿವಾರ್ಯವಾಗಿ ಕಛೇರಿಯ ಕಾರ್ಯವನ್ನು ಮಾಡಬೇಕಾಗುವುದು. ಮಕ್ಕಳ ಕಾರ್ಯದಿಂದ ನಿಮಗೆ ಅಪ್ರಶಂಸೆಯು ಬರಬಹುದು. ಸ್ತ್ರೀಯರ ಉಪಸ್ಥಿತಿಯು ನಿಮಗೆ ಬಲವನ್ನು ತಂದುಕೊಡುವುದು. ವಿದೇಶದ ಮಿತ್ರರ ಸಹಾಯದಿಂದ ನೀವು ಉದ್ಯಮವು ವಿಸ್ತಾರವಾಗಬಹುದು. ಅಧಿಕ ಓಡಾಟದಿಂದ ನೀವು ಆಯಾಸಗೊಳ್ಳುವಿರಿ. ಇಂದು ಹಣದ ಹರಿವು ಅಲ್ಪವಾಗಿ ಇರುವುದು. ಆಪ್ತರನ್ನು ಕಳೆದುಕೊಂಡು ಬೇಸರಿಸುವಿರಿ. ವ್ಯಾಪಾರದ ನಷ್ಟವನ್ನು ನಿಮಗೆ ಅರಗಿಸಿಕೊಳ್ಳಲಾಗದು. ನಿದ್ರೆಯು ಕಡಿಮೆಯಾದ ಕಾರಣ ಕಾರ್ಯದಲ್ಲಿ ಉತ್ಸಾಹ ಕಡಿಮೆ ಇರಲಿದೆ. ಪ್ರೇಮಿಯ ಜೊತೆ ಹರಟೆ ಹೊಡೆಯುತ್ತ ದಿನವನ್ನು ಕಳೆಯುವಿರಿ. ಸ್ತ್ರೀಸಂಬಂಧದ ವಿಷಯದಲ್ಲಿ ಆರೋಪವು ಕೇಳಿಬರಬಹುದು.
ವೃಶ್ಚಿಕ ರಾಶಿ: ಆತುರದಲ್ಲಿ ಇಂದು ಇರುವಿರಿ. ಸಮಾಧಾನ ಚಿತ್ತದಿಂದ ಇರುವುದು ಒಳ್ಳೆಯದು. ತಂದೆಗೆ ಬೇಕಾದ ಧನಸಹಾಯವನ್ನು ನೀವು ಮಾಡುವಿರಿ. ಬಂದ ಹಣವನ್ನು ಸಂಗ್ರಹಿಸಲು ಪ್ರಯತ್ನಿಸಿ. ಇಲ್ಲವಾದರೆ ಸಂಪತ್ತನ್ನು ಉಳಿಸಿಕೊಳ್ಳುವುದು ಕಷ್ಟವಾದೀತು. ಅಸಾಧ್ಯವನ್ನು ಸಾಧಿಸುವ ಹಠವು ಬೇಡವಾದೀತು. ಸಾಹೋದರ್ಯದಲ್ಲಿ ಅನಗತ್ಯ ಮಾತುಗಳು ಬರಬಹುದು. ಉದ್ಯಮದಲ್ಲಿ ಹಿನ್ನಡೆಯಾಗುವುದು ನಿಮಗೆ ಮೊದಲೇ ಗೊತ್ತಿದ್ದೂ ಪ್ರಯತ್ನಿಸುವಿರಿ. ಸಂಸ್ಥೆಯ ಮುಖಗಯಸ್ಥರಾಗಲು ಆಹ್ವಾನವು ಬರಬಹುದು. ಅನಪೇಕ್ಷಿಯ ವಿಚಾರವನ್ನು ಪ್ರಸ್ತಾಪಿಸಿಕೊಂಡು ಕಾಲಹರಣ ಮಾಡುವಿರಿ. ತಾಯಿಯ ವಿಚಾರದಲ್ಲಿ ನೀವು ಇಂದು ಕೋಪಗೊಳ್ಳುವ ಸಾಧ್ಯತೆ ಇದೆ. ಹೂಡಿಕೆಯನ್ನು ಸರಿಯಾದ ಕಡೆ ಇರಲಿದೆ.
ಧನು ರಾಶಿ: ಹಣಕಾಸನಲ್ಲಿ ವಂಚನೆಯಾಗಿರುವುದು ಬಹಳ ದಿನಗಳ ಅನಂತರ ಗೊತ್ತಾಗಿ ಬೇಸರವಾಗುವುದು. ಮಾತನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ. ನಿಮ್ಮನ್ನು ದುರುಪಯೋಗ ಮಾಡಿಕೊಳ್ಳುವ ಸಂಭವಿದೆ. ನೀವು ಆಯ್ಕೆ ಆಗಿದ್ದು ಯಾವುದಕ್ಕೋ ಕೆಲಸವು ಮತ್ಯಾವುದೋ ಆಗಲಿದೆ. ಅನಾರೋಗ್ಯವು ಚಿಕಿತ್ಸೆಯಾಗಿ ಪರಿಣಮಿಸಬಹುದು. ಉತ್ತಮ ಭೂಮಿಯ ಲಾಭವನ್ನು ಪಡೆಯುವಿರಿ. ಅಪಾಯಯಕ್ಕೆ ಸಿಕ್ಕಿಕೊಳ್ಳುವ ಸಂಭವವಿತ್ತು. ಧನವ್ಯಯವನ್ನು ನಿಮ್ಮ ಜಾಣ್ಮೆಯಿಂದ ತಪ್ಪಿಸಿಕೊಳ್ಳುವಿರಿ. ಸ್ತ್ರೀಯರಿಂದ ಕೆಲವು ಸಮಸ್ಯೆಯು ಬರಲಿದೆ. ಅಪರಿಚಿತರಿಗೆ ಇಂದು ಅಲ್ಪ ಧನಸಹಾಯವನ್ನು ಮಾಡಬೇಕಾಗುವುದು. ಕೋಪದ ನಿಯಂತ್ರಣವು ಕಷ್ಟವಾದೀತು. ಸಂಸಾರದಲ್ಲಿ ನಿರಾಸಕ್ತಿಯು ಹೆಚ್ಚಾಗುವುದು. ದಾಂಪತ್ಯದ ವಿರಸವು ದೂರವಾಗುವುದು.
ಮಕರ ರಾಶಿ: ಇಂದು ಪ್ರಯಾಣದ ಆಯಾಸವು ಇರಲಿದೆ. ಶತ್ರುಗಳನ್ನು ಕ್ಷಮಿಸಿ, ಅವರ ಮೇಲೆ ನಿಮ್ಮ ದೃಷ್ಟಿಯು ಬೇಕಾಗುವುದು. ಪಾಲುದಾರಿಕೆಯಲ್ಲಿ ನಿಮ್ಮ ಪಾಲೇ ಅಧಿಕವಾಗಿರುವುದು. ಶತ್ರುವಿನ ಮೇಲೆ ಸೇಡು ತೀರಿಸಿಕೊಳ್ಳಲು ಅಧಿಕ ಖರ್ಚನ್ನು ಮಾಡಬೇಕಾದೀತು. ಉದ್ಯಮಿಗಳಿಗೆ ನೌಕರರ ಕಲಹವನ್ನು ಸರಿ ಮಾಡುವುದೇ ಹೆಚ್ಚಾಗುವುದು. ಸ್ನೇಹಿತರ ಸಹಕಾರದಿಂದ ಸ್ಥಿರಾಸ್ತಿಯನ್ನು ಖರೀದಿಸುವಿರಿ. ಪ್ರೀತಿಯಲ್ಲಿ ನಿಮಗೆ ಮೋಸವಾಗುವುದು. ಉದ್ಯಮಕ್ಕೆ ಬೇಕಾದ ವಿವರಗಳನ್ನು ಅನುಭವಿಗಳಿಂದ ಪಡೆಯಿರಿ. ಸ್ನೇಹಿತನ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳುವಿರಿ. ಅಸಂಬದ್ಧ ಮಾತುಗಳ ನಿಮ್ಮನ್ನು ವ್ಯಕ್ತಿತ್ವವನ್ನು ತಿಳಿಸುವುದು. ಪ್ರಭಾವೀ ವ್ಯಕ್ತಿಗಳ ಭೇಟಿಯು ನಿಮ್ಮ ಜೀವನೋತ್ಸಾಹವನ್ನು ಹೆಚ್ಚಿಸುವುದು. ಮಾತನಾಡುವ ವೇಗದಲ್ಲಿ ಏನನ್ನಾದರೂ ಹೇಳಿಬಿಡುವಿರಿ.
ಕುಂಭ ರಾಶಿ: ಇನ್ನೊಬ್ಬರ ಸಮಸ್ಯೆಯನ್ನು ಪರಿಹರಿಸಲು ಹೋಗು ನೀವು ಸಮಸ್ಯೆಯಲ್ಲಿ ಸಿಕ್ಕಿಕೊಳ್ಳಬೇಕಾದೀತು. ನಿಮ್ಮ ಸಮ್ಮುಖದಲ್ಲಿ ಕುಟುಂಬದ ಸಮಸ್ಯೆಗಳು ಬಗೆಹರಿಯಬಹುದು. ಆಸ್ತಿಯ ವಿಚಾರ ಬಂದಾಗ ಮೌನ ತಾಳುವಿರಿ. ಬಹಳ ದಿನಗಳ ಅನಂತರ ಸಾರ್ವಜನಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವಿರಿ. ಉತ್ಸಾಹವೂ ಇರಲಿದೆ. ನಿಮ್ಮ ನಿರುದ್ಯೋಗದ ಸ್ಥಿತಿಯು ದಾಯಾದಿಗಳಿಗೆ ಸಂತಸವಗುವುದು. ಸಕಾರಾತ್ಮಕ ಆಲೋಚನೆಗಳನ್ನು ನೀವು ಆಪ್ತರ ಜೊತೆ ಹಂಚಿಕೊಳ್ಳುವಿರಿ. ನಿಮ್ಮ ಯೋಜನೆಗೆ ಬೆನ್ನೆಲುಬಾಗಿ ನಿಲ್ಲುವವರು ಬೇಕಾಗಿದ್ದರೆ. ಅಧಿಕ ಖರ್ಚನ್ನು ಇಂದು ಮಾಡಬೇಕಾಗುವುದು. ಸಾಲಬಾಧೆಯು ನಿಮ್ಮನ್ನು ತೀವ್ರವಾಗಿ ಕಾಡುವುದು. ನಿಮ್ಮ ದುರಭ್ಯಾಸವನ್ನು ಇನ್ನೊಬ್ಬರಿಗೂ ಹಿಡಿಸುವ ಸಾಧ್ಯತೆ ಇದೆ. ಭವಿಷ್ಯದ ಆಗುಹೋಗುಗಳ ಬಗ್ಗೆ ಅತಿಯಾದ ಚಿಂತೆ ಇರಲಿದೆ.
ಮೀನ ರಾಶಿ: ಕುಟುಂಬಕ್ಕೆ ಗೌರವವು ಬರುವಂತೆ ನೋಡಿಕೊಳ್ಳುವಿರಿ. ಮಕ್ಕಳ ಜೊತೆ ಸಾಮರಸ್ಯದ ಮಾತನಾಡಿ. ಸಾಲದ ಮರುಪಾವತಿಗೆ ಸೂಕ್ತ ಕ್ರಮದ ಅಗತ್ಯವಿರಲಿದೆ. ಆಲಸ್ಯದಿಂದ ಕಛೇರಿಯ ಕೆಲಸಗಳು ವಿಳಂಬವಾಗುವುದು. ನಿಮ್ಮ ಬಗ್ಗೆ ಪ್ರಶಂಸೆಯ ನುಡಿಗಳು ಕೇಳಿಬರಬಹುದು. ವಿದ್ಯಾರ್ಥಿಗಳಿಗೆ ಓದಲು ಸಮಯವನ್ನು ಇಂದು ಹೊಂದಿಕೆಯಾಗದು. ಪೂರಕ ವಾತಾವರಣದಲ್ಲಿ ಕೊರತೆ ಇರುವುದು. ಸುಮ್ಮನೇ ಆಪ್ತರ ಮೇಲೆ ಸಂಶಯವನ್ನು ಇಟ್ಟುಕೊಳ್ಳುವುದು ಬೇಡ. ಹೂಡಿಕೆಯ ವಿಚಾರದಲ್ಲಿ ಇಂದು ಸಕಾರಾತ್ಮಕ ಆಲೋಚನೆಯು ಇರದು. ಉದ್ವೇಗದಲ್ಲಿ ಇದ್ದರೂ ಸಮಾಧಾನಿಗಳಂತೆ ತೋರುವಿರಿ. ಪುಣ್ಯದ ಫಲವು ಇಂದು ಸಿಗುವುದು. ಸಹೋದ್ಯೋಗಿಗಳ ವರ್ತನೆಯು ನಿಮಗೆ ಆಚ್ಚರಿಗೊಳ್ಳುವಿರಿ. ಪ್ರೇಮದ ವಿರೋಧವನ್ನು ನೀವು ಎದುರಿಸಬೇಕಾದೀತು.
ಲೋಹಿತಶರ್ಮಾ – 8762924271 (what’s app only)