Numerology Predictions: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 25ರ ದಿನಭವಿಷ್ಯ
ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 25ರ ಭಾನುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ (Birth Number)ಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಈಗಾಗಲೇ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 25ರ ಭಾನುವಾರದ ದಿನ ಭವಿಷ್ಯ (Horoscope) ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1: ಗುರಿಯ ಕಡೆಗೆ ಸಾಗುವ ನಿಟ್ಟಿನಲ್ಲಿ ಮಹತ್ವದ ಚರ್ಚೆ ನಡೆಸುತ್ತೀರಿ. ಸ್ನೇಹಿತರು ದೊಡ್ಡ ಮಟ್ಟದ ಬೆಂಬಲ ವ್ಯಕ್ತಪಡಿಸಲಿದ್ದಾರೆ. ದೇವತಾ ಕಾರ್ಯಗಳಿಗಾಗಿ ಸಮಯ ಮೀಸಲಿಡಲಿದ್ದೀರಿ. ಇದರಿಂದ ಮಾನಸಿಕವಾಗಿ ನೆಮ್ಮದಿ ದೊರೆಯಲಿದೆ. ಪುಷ್ಕಳವಾದ ಭೋಜನ ಸವಿಯುವ ಯೋಗ ಇದೆ.
ಜನ್ಮಸಂಖ್ಯೆ 2: ಸ್ವಂತ ವ್ಯಾಪಾರ- ವ್ಯವಹಾರ ಮಾಡಿಕೊಂಡಿರುವವರಿಗೆ ಮುಖ್ಯವಾದ ತೀರ್ಮಾನ ಕೈಗೊಳ್ಳಲೇಬೇಕಾಗುತ್ತದೆ. ಎಲ್ಲರಿಗೂ ಒಳ್ಳೆಯವರಾಗಿ ಇರಲು ಸಾಧ್ಯವಿಲ್ಲವಾದ್ದರಿಂದ ನಿಮ್ಮ ನಿರ್ಧಾರಗಳು ಕೆಲವರಿಗೆ ಬೇಸರ ಉಂಟು ಮಾಡಲಿವೆ. ಆಪ್ತರು ನೀಡುವ ಸಲಹೆ- ಸೂಚನೆಗಳನ್ನು ಗಂಭೀರವಾಗಿ ಪರಿಗಣಿಸಿ.
ಜನ್ಮಸಂಖ್ಯೆ 3: ಭಾರೀ ಹೂಡಿಕೆಯೊಂದಕ್ಕೆ ಸಂಬಂಧಿಸಿದಂತೆ ನಿಮ್ಮ ಸಲಹೆ- ಸೂಚನೆಗಳಿಗೆ ಇತರರು ಬೆಲೆ ನೀಡುತ್ತಾರೆ. ನಿಮ್ಮ ಮಾತಿಗೆ ಬೆಲೆ ಕೊಟ್ಟು ಕೆಲವು ಕೆಲಸಗಳು ಆಗುವ ಸೂಚನೆ ಇದ್ದು, ರಾಜಕಾರಣಿಗಳು ಹೆಚ್ಚು ಪ್ರಭಾವಿಗಳಾಗುವ ಲಕ್ಷಣಗಳು ಗೋಚರಿಸುತ್ತವೆ. ಧಾರ್ಮಿಕ ಕಾರ್ಯಕ್ರಮಗಳಿಗಾಗಿ ಹಣ ಮೀಸಲಿಡಲಿದ್ದೀರಿ.
ಜನ್ಮಸಂಖ್ಯೆ 4: ಒಪ್ಪಂದದಂತೆ ನಡೆದುಕೊಳ್ಳಲು ಪ್ರಯತ್ನಿಸಿ. ಒಂದು ವೇಳೆ ನಿಮ್ಮಿಂದ ಅದರಂತೆ ನಡೆದುಕೊಳ್ಳಲು ಸಾಧ್ಯವಾಗದಿದ್ದಲ್ಲಿ ವಾಸ್ತವ ಸ್ಥಿತಿಯನ್ನು ತಿಳಿಸಿ, ಇನ್ನೂ ಸ್ವಲ್ಪ ಸಮಯ ಕೇಳಿ ಪಡೆಯಿರಿ. ಆದರೆ ಸುಳ್ಳು ಹೇಳುವ ಪ್ರಯತ್ನ ಮಾತ್ರ ಬೇಡ. ರಾಜಕೀಯ ನಾಯಕರಿಗೆ ಹೊಸ ಜವಾಬ್ದಾರಿ ತೆಗೆದುಕೊಳ್ಳಬೇಕಾಗುತ್ತದೆ.
ಜನ್ಮಸಂಖ್ಯೆ 5: ಮದ್ಯಪಾನ- ಧೂಮಪಾನದ ವ್ಯಸನ ಇರುವವರಿಗೆ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಬಹುದು. ಸಂಗಾತಿಯ ಒತ್ತಡಕ್ಕೆ ಮಣಿದು, ಈ ಹಿಂದೆ ಯಾರ ಜತೆ ಜಗಳ ಮಾಡಿಕೊಂಡಿದ್ದರೋ ಅಂಥವರ ಜತೆಗೆ ರಾಜೀ ಸಂಧಾನ ಮಾಡಿಕೊಳ್ಳಬೇಕಾಗುತ್ತದೆ. ಆದರೆ ಈ ಕಾರಣಕ್ಕೆ ಬೇಸರ ಮಾಡಿಕೊಳ್ಳುವ ಅಗತ್ಯ ಇಲ್ಲ.
ಜನ್ಮಸಂಖ್ಯೆ 6: ಸಣ್ಣ ಕೆಲಸ ಎಂದು ಯಾವುದನ್ನೂ ನಿರ್ಲಕ್ಷ್ಯ ಮಾಡುವಂತಿಲ್ಲ. ಆದಾಯ ಹೆಚ್ಚಿಸಿಕೊಳ್ಳಬೇಕು ಎಂಬ ಏಕೈಕ ಕಾರಣಕ್ಕೆ ಅಪಾಯಕರ ಸಂಗತಿಗಳನ್ನು ಮೈ ಮೇಲೆ ಎಳೆದುಕೊಳ್ಳಬೇಡಿ. ವದಂತಿ ಬಂದಿದೆ ಎಂದು ನಿರ್ಲಕ್ಷ್ಯ ಮಾಡಿದ್ದ ಸಂಗತಿಯೊಂದಕ್ಕೆ ದಿಢೀರನೇ ಪ್ರಾಮುಖ್ಯ ಬರುತ್ತದೆ. ಜನ್ಮಸಂಖ್ಯೆ 7: ನೀವೇ ಆರಂಭಿಸಿದ ಆಟವೊಂದನ್ನು ಮುಗಿಸಬೇಕಾಗುತ್ತದೆ. ಇಲ್ಲದ ಆತ್ಮವಿಶ್ವಾಸವನ್ನು ತುಂಬಿ, ಇಷ್ಟು ಸಮಯ ತೆಗೆದುಕೊಂಡ ಅನುಕೂಲವನ್ನು ನಿಲ್ಲಿಸಿಬಿಡಿ. ನೇರವಾಗಿ, ಪ್ರಾಮಾಣಿಕತೆಯಿಂದ ಮಾತನಾಡಲು ಪ್ರಯತ್ನಿಸಿ. ಉಳಿತಾಯದ ಹಣವನ್ನು ಬಳಸಿಕೊಳ್ಳಲೇಬೇಕಾದ ಅನಿವಾರ್ಯ ಸೃಷ್ಟಿಯಾಗುತ್ತದೆ.
ಜನ್ಮಸಂಖ್ಯೆ 8: ನಿಮ್ಮ ಅನುಮಾನದ ಸ್ವಭಾವದಿಂದ ದೊಡ್ಡ ಪ್ರಯೋಜನ ಆಗಲಿದೆ. ಮೇಲ್ನೋಟಕ್ಕೆ ಇತರರು ನಿಮ್ಮ ಬಗ್ಗೆ ಯಾವ ಕಾರಣಕ್ಕೆ ಬೇಸರ ವ್ಯಕ್ತಪಡಿಸಿದ್ದರೋ ಆ ನಂತರ ಅದಕ್ಕೆ ಪಶ್ಚಾತಾಪ ಪಡಲಿದ್ದಾರೆ. ಮುಖ್ಯ ಕಾಗದ- ದಾಖಲೆ, ಪತ್ರಗಳಗಳನ್ನು ಜವಾಬ್ದಾರಿಯಿಂದ ನೋಡಿಕೊಳ್ಳಿ.
ಜನ್ಮಸಂಖ್ಯೆ 9: ನಿಮ್ಮ ನಿರ್ದಾಕ್ಷಿಣ್ಯ ಮಾತುಗಳಿಂದ ಸಂಬಂಧಿಕರಲ್ಲಿ, ಕುಟುಂಬ ವರ್ಗದವರಲ್ಲಿ ಸಿಟ್ಟಿಗೆ ಕಾರಣರಾಗಲಿದ್ದೀರಿ. ಆದ್ದರಿಂದ ಸಣ್ಣ- ಪುಟ್ಟ ಸಂಗತಿಗಳನ್ನು ದೊಡ್ಡದು ಮಾಡಿ, ಯಾರ ಜತೆಗೂ ವಾಗ್ವಾದಕ್ಕೆ ಇಳಿಯಬೇಡಿ. ಸಾಂಸಾರಿಕ ವಿಚಾರಗಳನ್ನು ಹೊಸಬರ ಜತೆಗೆ ಹಂಚಿಕೊಳ್ಳಬೇಡಿ.
ಲೇಖನ: ಎನ್.ಕೆ.ಸ್ವಾತಿ
ಇಂತಹ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:08 am, Sun, 25 December 22