Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 10ರ ದಿನಭವಿಷ್ಯ
Numerology Prediction Daily Horoscope ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 10 ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು (Numerology Daily Horoscope ) ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಈಗಾಗಲೇ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 10ರ ಶನಿವಾರದ ದಿನ ಭವಿಷ್ಯ (Daily Horoscope) ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: December 2022 Horoscope: ಮಾಸ ಭವಿಷ್ಯ; ಡಿಸೆಂಬರ್ ತಿಂಗಳು ಯಾವ ರಾಶಿಗೆ ಏನು ಫಲ?
ಜನ್ಮಸಂಖ್ಯೆ 1
ಬೇರೆಯವರ ಅವಸರಕ್ಕಾಗಿ ಡೆಡ್‌ಲೈನ್ ಇಟ್ಟುಕೊಂಡು ಕೆಲಸ ಮಾಡುವುದಕ್ಕೆ ಹೊರಡಬೇಡಿ. ಇದರಿಂದ ನಿಮ್ಮ ಕೆಲಸದ ಗುಣಮಟ್ಟ ಹಾಗೂ ನಿಮಗಿರುವ ಹೆಸರು ಹಾಳಾಗುತ್ತದೆ. ಇನ್ನು ನಿಮ್ಮ ಪೈಕಿ ಕೆಲವರ ಪೈಕಿ ಕೆಲವರಿಗೆ ಕಣ್ಣಿಗೆ ಸಂಬಂಧಪಟ್ಟಂತೆ ಸಮಸ್ಯೆಗಳು ಎದುರಾಗಬಹುದು. ಎಲ್ಲಿಂದಲೋ ಹಣ ಬರಬಹುದು ಎಂಬ ನಿರೀಕ್ಷೆಯಿಟ್ಟುಕೊಂಡು ಬೇರೆಯವರಿಗೆ ಮಾತು ನೀಡಬೇಡಿ.
ಜನ್ಮಸಂಖ್ಯೆ 2
ಎಲ್ಲರೂ ಒಪ್ಪಿಬಿಟ್ಟರು ಅಥವಾ ಹೇಳಿದರು ಎಂಬ ಕಾರಣಕ್ಕೆ ಅದಕ್ಕೆ ನೀವು ತಲೆ ಆಡಿಸಲೇಬೇಕು ಎಂದೇನಿಲ್ಲ. ಈ ದಿನ ಬೇರೆಯವರು ನಿಮ್ಮ ಮೇಲೆ ಪ್ರಭಾವ ಬೀರದಂತೆ ನೋಡಿಕೊಳ್ಳಿ. ಸಾರ್ವಜನಿಕ ಜೀವನದಲ್ಲಿ ಇರುವವರಿಗೆ ಸವಾಲಿನ ದಿನವಾಗಿರುತ್ತದೆ. ಸಣ್ಣ- ಪುಟ್ಟ ವಿಚಾರ ಎಂದು ಯಾವುದನ್ನೂ ನಿರ್ಲಕ್ಷ್ಯ ಮಾಡಬೇಡಿ.
ಜನ್ಮಸಂಖ್ಯೆ 3
ಸಂಗೀತಗಾರರು, ವಾದನಗಳನ್ನು ನುಡಿಸುವವರು, ಬ್ಯಾಂಕಿಂಗ್ ವೃತ್ತಿಯಲ್ಲಿ ಇರುವವರು ತಮ್ಮ ಕಾಂಟ್ಯಾಕ್ಟ್ ವಿಸ್ತರಿಸಿಕೊಳ್ಳುವ ಸಮಯ ಇದಾಗಿರುತ್ತದೆ. ಡಿಜಿಟಲ್ ಸ್ವತ್ತುಗಳ ಮೇಲೆ ಹೂಡಿಕೆ ಮಾಡಿರುವವರಿಗೆ ಪರಿಸ್ಥಿತಿ ಅನುಕೂಲ ಆಗಿರುವುದಿಲ್ಲ. ಹೊಸ ವಸ್ತ್ರಾಭರಣ ಖರೀದಿಗೆ ಹಣ ಖರ್ಚಾಗಲಿದೆ.
ಜನ್ಮಸಂಖ್ಯೆ 4
ಬದಲಾಗುತ್ತಿರುವ ಸ್ಥಿತಿ ಮತ್ತು ಅಗತ್ಯಕ್ಕೆ ತಕ್ಕಂತೆ ಅಪ್‌ಡೇಟ್ ಆಗುವುದರ ಅನಿವಾರ್ಯ ನಿಮಗೆ ಈ ದಿನ ಆಗಲಿದೆ. ಹಳೆಯ ಆಲೋಚನೆ, ವಿಚಾರ, ನೆನಪು, ಭಾರವಾಗಿ ಪರಿಣಮಿಸುತ್ತದೆ. ನೀವು ಈ ದಿನ ಸ್ವಲ್ಪ ಸಮಯವಾದರೂ ಧ್ಯಾನಕ್ಕಾಗಿ ಸಮಯವನ್ನು ಮೀಸಲಿಡಿ .ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ದೊರೆಯಲಿದೆ.
ಜನ್ಮಸಂಖ್ಯೆ 5
ಸ್ವಂತ ವಿಚಾರಗಳಲ್ಲಿ ಇತರರು ಮೂಗು ತೂರಿಸದಂತೆ ನೋಡಿಕೊಳ್ಳಿ. ಸಲಹೆ ನೀಡುವುದು ಬೇರೆ, ಹಿಡಿತ ಸಾಧಿಸುವುದಕ್ಕೆ ಅವಕಾಶ ನೀಡಬೇಡಿ. ಇನ್ನು ನಿಮಗಿಂತ ಕಿರಿಯ ವಯಸ್ಸಿನವರ ಜತೆಗೆ ಮಾತುಕತೆ ನಡೆಸುವಾಗ ಒಂಚೂರು ಎಚ್ಚರವಿರಲಿ. ನಿಮ್ಮ ಮಾತಿಗೆ ಬೇರೆ ಅರ್ಥ ಕಲ್ಪಿಸುವ ಸಾಧ್ಯತೆ ಇದೆ.
ಜನ್ಮಸಂಖ್ಯೆ 6
ರಾಜಕಾರಣದಲ್ಲಿ ಇರುವವರಿಗೆ, ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಹೊಸ ಕಾಂಟ್ಯಾಕ್ಟ್‌ಗಳನ್ನು ಬೆಳೆಸುವುದಕ್ಕೆ ಅನುಕೂಲ ಆಗಲಿದೆ. ಇನ್ನು ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳುವುದು ಮುಖ್ಯ. ಹತ್ತಿರದ ಸ್ಥಳಕ್ಕಾದರೂ ಕುಟುಂಬದವರ ಜತೆಗೆ ಪ್ರವಾಸ ಮಾಡುವಂಥ ಯೋಗ ಇದು.
ಜನ್ಮಸಂಖ್ಯೆ 7
ಮನೆಯಲ್ಲಿ ನಡೆಯಲಿರುವ ಶುಭ ಕಾರ್ಯದ ನೇತೃತ್ವವನ್ನು ನೀವು ವಹಿಸಬೇಕಾಗಬಹುದು. ಆದಾಯದ ಮೂಲವನ್ನು ಒಂದಕ್ಕೆ ಹಲವು ಬಾರಿಗೆ ಆಲೋಚನೆ ಮಾಡಿ, ಯೋಜನೆಯನ್ನು ರೂಪಿಸಿಕೊಳ್ಳಿ. ನಿಮ್ಮ ಅಂದಾಜಿನಂತೆಯೇ ಕೆಲವು ಖರ್ಚುಗಳು ಬರಲಿವೆ. ಸಮಯಕ್ಕೆ ಒದಗಿಬರುವ ಸ್ನೇಹಿತರಿಗೆ ಹೇಗೆ ನೀವು ನೆರವಾಗಬಹುದು ಯೋಚಿಸಿ.
ಜನ್ಮಸಂಖ್ಯೆ 8
ನಿಮ್ಮದಲ್ಲದ ತಪ್ಪಿಗೆ, ನಿರ್ಧಾರಕ್ಕೆ ಟೀಕೆಗೆ ಗುರಿ ಆಗುತ್ತೀರಿ. ಯಾರನ್ನೋ ರಕ್ಷಿಸುವ ಉದ್ದೇಶದಲ್ಲಿ ನೀವು ಸಮಸ್ಯೆಗೆ ಸಿಲುಕಿಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ನೀವು ಯಾರಿಗಾಗಿ ಈ ತ್ಯಾಗಕ್ಕೆ ಮುಂದಾಗುತ್ತಿದ್ದೀರಿ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ. ತಾಯಿಯ ಸಲುವಾಗಿ ಈ ದಿನ ಒಂದಿಷ್ಟು ಹಣವನ್ನು ಎತ್ತಿಡಲಿದ್ದೀರಿ ಅಥವಾ ಏನನ್ನಾದರೂ ಕೊಡಿಸಲಿದ್ದೀರಿ.
ಜನ್ಮಸಂಖ್ಯೆ 9
ಬಂದಷ್ಟು ಬರಲಿ ಎಂಬಂತೆ ನಿಮ್ಮ ಆಸ್ತಿ, ವಸ್ತುಗಳನ್ನು ಮಾರಾಟಕ್ಕೆ ಮುಂದಾಗಲಿದ್ದೀರಿ. ಆದರೆ ಈಗ ನಿಮ್ಮ ಅಗತ್ಯಕ್ಕೆ ಮಾರಿ, ಆ ನಂತರ ಚಿಂತೆ ಮಾಡಬೇಕಾಗುತ್ತದೆ. ಆದರೆ ಇದನ್ನು ತಡೆಯುವುದಕ್ಕೆ ಸಾಧ್ಯವಿಲ್ಲ. ಇನ್ನು ದಿನದ ಕೊನೆ ಹೊತ್ತಿಗೆ ಭವಿಷ್ಯದ ಮಹತ್ವ ತೀರ್ಮಾನವೊಂದನ್ನು ತೆಗೆದುಕೊಳ್ಳಬೇಕಾಗುತ್ತದೆ. ಲೇಖನ- ಎನ್.ಕೆ.ಸ್ವಾತಿ
ಇನ್ನಷ್ಟು ಭವಿಷ್ಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ