AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಏಪ್ರಿಲ್ 19ರ ದಿನಭವಿಷ್ಯ

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಬದುಕಿನಲ್ಲಿ ಆಗುವಂಥ ಕೆಲವು ಬದಲಾವಣೆಗಳಿಂದ ನೀವೇ ಅಂಥದ್ದೊಂದು ತೀರ್ಮಾನವನ್ನು ಮಾಡಲಿದ್ದೀರಿ. ಜನ್ಮಸಂಖ್ಯೆಯ ಆಧಾರದಲ್ಲಿ ಏಪ್ರಿಲ್ 19ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಏಪ್ರಿಲ್ 19ರ ದಿನಭವಿಷ್ಯ
ಸಂಖ್ಯಾಶಾಸ್ತ್ರ
Follow us
ಸ್ವಾತಿ ಎನ್​ಕೆ
| Updated By: ಗಂಗಾಧರ​ ಬ. ಸಾಬೋಜಿ

Updated on: Apr 19, 2025 | 7:52 AM

ಬೆಂಗಳೂರು, ಏಪ್ರಿಲ್​ 19: ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಏಪ್ರಿಲ್ 19ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ನಿಮ್ಮ ಸಮಯ, ಶ್ರಮ, ಹಣ, ಪ್ರಯತ್ನ ಹೀಗೆ ಮುಖ್ಯವಾದದ್ದನ್ನು ತಮ್ಮ ಅನುಕೂಲಕ್ಕಾಗಿ ಇತರರು ಬಳಸಿಕೊಳ್ಳುತ್ತಿದ್ದಾರೆ ಎಂದು ಪ್ರಬಲವಾಗಿ ನಿಮಗೆ ಅನಿಸುವುದಕ್ಕೆ ಶುರುವಾಗಲಿದೆ. ನಿಮ್ಮಲ್ಲಿ ಯಾರು ಟ್ಯೂಷನ್ ಹೇಳಿಕೊಡುವುದರ ಮೂಲಕ ಆದಾಯವನ್ನು ಗಳಿಸುತ್ತಿದ್ದೀರೋ ಅಂಥವರಿಗೆ ಕೆಲವು ಸಮಯ ಪಾಠ ಮಾಡುವುದು ಅಸಾಧ್ಯ ಎಂಬ ಸನ್ನಿವೇಶ ನಿರ್ಮಾಣ ಆಗಲಿದೆ. ಒಂದೋ ಅಕ್ಕಪಕ್ಕದ ಮನೆಯವರು ಆಕ್ಷೇಪ ವ್ಯಕ್ತಪಡಿಸಬಹುದು ಅಥವಾ ನಿಮ್ಮದೇ ಬದುಕಿನಲ್ಲಿ ಆಗುವಂಥ ಕೆಲವು ಬದಲಾವಣೆಗಳಿಂದ ನೀವೇ ಅಂಥದ್ದೊಂದು ತೀರ್ಮಾನವನ್ನು ಮಾಡಲಿದ್ದೀರಿ. ಆನ್ ಲೈನ್ ಮೂಲಕ ಖರೀದಿ ಮಾಡಿದ್ದ ವಸ್ತುಗಳು ಕೆಲವನ್ನು ಕಳಪೆ ಗುಣಮಟ್ಟ ಎಂಬ ಕಾರಣಕ್ಕೋ ಅಥವಾ ಮನಸ್ಸಿಗೆ ಹಿಡಿಸಲಿಲ್ಲ ಎಂಬ ಕಾರಣಕ್ಕೋ ಹಿಂತಿರುಗಿಸುವುದಕ್ಕೆ ನಿರ್ಧರಿಸುವ ಸಾಧ್ಯತೆಗಳು ಹೆಚ್ಚಿವೆ. ಇನ್ನು ನಿಮ್ಮಲ್ಲಿ ಯಾರಿಗೆ ಈಗಾಗಲೇ ಗ್ಯಾಸ್ಟ್ರಿಕ್ ಸಮಸ್ಯೆ ಇದೆಯೋ ಅಂಥವರಿಗೆ ತೊಂದರೆ ಉಲ್ಬಣಿಸಲಿದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಬಂಡವಾಳ ಹೂಡಿಕೆ ಮಾಡಬೇಕು ಎಂದು ಆಲೋಚಿಸುತ್ತಿರುವವರಿಗೆ ಎಲ್ಲಿ ಮಾಡಬೇಕು ಹಾಗೂ ಯಾರನ್ನು ಜತೆಗೆ ಸೇರಿಸಿಕೊಳ್ಳಬೇಕು ಎಂಬಿತ್ಯಾದಿ ವಿಚಾರಗಳನ್ನು ಈ ದಿನ ಆಖೈರು ಮಾಡಿಕೊಳ್ಳುವ ಸಾಧ್ಯತೆಗಳು ಇವೆ. ಸಿನಿಮಾ ಅಥವಾ ಧಾರಾವಾಹಿಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ದೀರ್ಘಾವಧಿಗೆ ಪ್ರಾಜೆಕ್ಟ್ ಒಂದು ನಿಮ್ಮನ್ನು ಹುಡುಕಿಕೊಂಡು ಬರಲಿದೆ. ಜ್ಯೋತಿಷ್ಯ, ಪೌರೋಹಿತ್ಯ, ಅಧ್ಯಾತ್ಮ ಪ್ರವಚನ ಇವುಗಳನ್ನು ವೃತ್ತಿಯಾಗಿ ಸ್ವೀಕರಿಸಿದ್ದಾರೋ ಅಂಥವರಿಗೆ ಆದಾಯದಲ್ಲಿ ಏರಿಕೆ ಆಗಲಿದೆ. ಇದರ ಜೊತೆಗೆ ಇವುಗಳಿಗಾಗಿಯೇ ಒಂದು ಸ್ಥಳವನ್ನು ರೂಪಿಸಬೇಕು ಎಂದು ಯೋಜನೆಯನ್ನು ರೂಪಿಸುವ ಸಾಧ್ಯತೆ ಸಹ ಇದೆ. ಈ ದಿನ ನೀವು ಎಚ್ಚರಿಕೆ ಅಂತ ವಹಿಸಬೇಕಾಗಿರುವುದು ಕಣ್ಣಿನ ಬಗ್ಗೆ. ಕಣ್ಣಿನ ಪವರ್ ಸಮಸ್ಯೆ ಉದ್ಭವಿಸಬಹುದು ಅಥವಾ ಈಗಾಗಲೇ ಇದ್ದಲ್ಲಿ ಅದು ಉಲ್ಬಣಿಸುವ ಸಾಧ್ಯತೆಗಳಿವೆ. ಹೊಸ ಬಟ್ಟೆ ಅಥವಾ ಬ್ರ್ಯಾಂಡೆಡ್ ವಸ್ತುಗಳನ್ನು ಖರೀದಿಸುತ್ತೀರಿ ಎಂದಾದಲ್ಲಿ ಬಜೆಟ್ ಮೇಲೆ ಗಮನವಿಟ್ಟುಕೊಳ್ಳಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ನಿರೀಕ್ಷಿತವಾದ ಆದಾಯಗಳು ಈ ದಿನ ನಿಮ್ಮ ಕೈ ಸೇರಲಿವೆ. ಮನಸ್ಸಿಗೆ ಒಂದು ಬಗೆಯ ಸಮಾಧಾನ- ಸಂತೋಷ ಇರಲಿದ್ದು, ನಿಮ್ಮಲ್ಲಿ ಕೆಲವರು ಪ್ರೀತಿಯನ್ನು ನಿವೇದಿಸಿಕೊಳ್ಳುವಂಥ ಅವಕಾಶಗಳಿವೆ. ಹಣ್ಣು- ತರಕಾರಿಗಳ ಹೋಲ್ ಸೇಲ್ ವ್ಯಾಪಾರ ಮಾಡುವವರಿಗೆ ಆದಾಯದಲ್ಲಿ ಹೆಚ್ಚಳ ನಿರೀಕ್ಷೆ ಮಾಡಬಹುದು. ಒಂದು ವೇಳೆ ವಾಹನ ಸ್ವಂತಕ್ಕೆ ಇಟ್ಟುಕೊಂಡು, ಚಾಲನೆಯನ್ನೂ ಮಾಡುತ್ತಿರುವವರು ಒಂದೋ ಹೊಸ ವಾಹನವನ್ನು ಖರೀದಿಸಬಹುದು ಅಥವಾ ಈಗಿರುವುದರ ಜೊತೆಗೆ ಇನ್ನೊಂದನ್ನು ಖರೀದಿಸಿ, ಬಾಡಿಗೆಗೆ ಬಿಡುವ ಬಗ್ಗೆ ಆಲೋಚಿಸಬಹುದು. ತುಂಬ ಆತುರವಾಗಿ ಮಾಡಿ ಮುಗಿಸಬೇಕಾದ ಕೆಲಸವೊಂದು ಕಾರ್ಪೆಂಟರ್ ಗಳು, ರೇಲಿಂಗ್, ಪೇಂಟಿಂಗ್ ಅಥವಾ ಎಲೆಕ್ಟ್ರಿಕ್ ಕೆಲಸ ಮಾಡುವಂಥವರನ್ನು ಹುಡುಕಿಕೊಂಡು ಬರುವ ಸಾಧ್ಯತೆಗಳು ಹೆಚ್ಚಿವೆ. ಇದರಿಂದ ಖಂಡಿತವಾಗಿ ಒಳ್ಳೆಯ ಆದಾಯವಂತೂ ಬರಲಿದೆ. ಆದರೆ ಈಗಿರುವ ಗ್ರಾಹಕರನ್ನು ಕಳೆದುಕೊಳ್ಳುವಂತೆ ಮಾಡಿಕೊಳ್ಳಬೇಡಿ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಈ ದಿನ ಕೆಲಸ- ಕಾರ್ಯಗಳಲ್ಲಿ ಒಂದು ಬಗೆಯ ನಿರಾಸಕ್ತಿಯನ್ನು ಕಾಡಲಿದೆ. ಇನ್ನೂ ನಿರ್ದಿಷ್ಟವಾಗಿ ಹೇಳಬೇಕು ಅಂದರೆ ವೈರಾಗ್ಯವು ನಿಮ್ಮನ್ನು ಆವರಿಸಲಿದೆ. ಕೃಷಿ ವೃತ್ತಿಯಲ್ಲಿ ತೊಡಗಿಕೊಂಡವರಿಗೆ ಆದಾಯದಲ್ಲಿ ಇಳಿಕೆ ಆಗುವ ಸೂಚನೆ ಸಿಗಬಹುದು. ಅಥವಾ ಈಗಾಗಲೇ ಮೊತ್ತವನ್ನು ಅಂತಿಮ ಮಾಡಿಕೊಂಡು ಹೋದವರು ಅಷ್ಟು ಹಣವನ್ನು ನೀಡುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಬಹುದು. ಆದರೆ ನಿಮಗೆ ಯಾವುದೇ ಪರ್ಯಾಯ ಸಹ ದೊರೆಯದೆ ಗೊಂದಲಕ್ಕೆ ಬೀಳುತ್ತೀರಿ. ಈ ದಿನ ಸಾಧ್ಯವಾದಲ್ಲಿ ಗಣಪತಿ ಅಥರ್ವಶೀರ್ಷವನ್ನು ಕೇಳಿಸಿಕೊಳ್ಳಿ ಅಥವಾ ನಿಮ್ಮಿಂದ ಪಠಣ ಮಾಡುವುದಕ್ಕೆ ಸಾಧ್ಯವಾದಲ್ಲಿ ಪಠಣ ಮಾಡಿ. ದೂರ ಪ್ರಯಾಣದ ಬಗ್ಗೆ ಯೋಜನೆ ಹಾಕಿಕೊಂಡವರು ಕೊನೆ ಕ್ಷಣದಲ್ಲಿ ಪ್ರಯಾಣವನ್ನು ರದ್ದು ಮಾಡಬೇಕಾದ ಸನ್ನಿವೇಶ ಎದುರಾಗಬಹುದು. ಬೇರೆಯವರನ್ನು ಜೊತೆಗೆ ಬರಲೇಬೇಕೆಂದು ಒತ್ತಡ ಹಾಕಿ, ಕೊನೆ ಕ್ಷಣದಲ್ಲಿ ನೀವೇ ತೆರಳದಿದ್ದರೆ ಹೇಗಾಗಬಹುದು ಎಂಬ ಬಗ್ಗೆ ಮೊದಲೇ ಆಲೋಚನೆ ಮಾಡುವುದು ಉತ್ತಮ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಮನೆಯ ಕೆಲಸಗಳನ್ನು ಮಾಡಿಸುತ್ತಿರುವವರಿಗೆ ಬಹಳ ಸಂತೋಷ- ಸಮಾಧಾನ ದೊರೆಯುವಂತಹ ದಿನ ಇದಾಗಿರುತ್ತದೆ. ಹೋಮ್ ಥಿಯೇಟರ್, ಇಂಟಿರೀಯರ್ ಸೇರಿದಂತೆ ನೀವು ಬಹಳ ಸಮಯದಿಂದ ಬಯಸುತ್ತಿದ್ದ ಕೆಲವು ಕೆಲಸಗಳನ್ನು ಮಾಡಿಸಿದ್ದಲ್ಲಿ ಅದರಿಂದ ಖುಷಿ ಪಡಲಿದ್ದೀರಿ. ಇನ್ನು ನಿಮ್ಮ ಸೋದರ- ಸೋದರಿಯರ ಜತೆಗೆ ಇರುವಂಥ ಭಿನ್ನಾಭಿಪ್ರಾಯವನ್ನು ದೂರ ಮಾಡಿಕೊಳ್ಳುವ ಸಾಧ್ಯತೆ ಇದೆ. ಅಂಥದ್ದೊಂದು ವೇದಿಕೆ ಸಿಕ್ಕಾಗ ಅದನ್ನು ಸದುಪಯೋಗ ಮಾಡಿಕೊಳ್ಳುವುದಕ್ಕೆ ಆಲೋಚಿಸಿ. ನಿಮ್ಮಲ್ಲಿ ಯಾರಿಗೆ ಬೆನ್ನು ನೋವು, ಮಧುಮೇಹ ಅಥವಾ ಹೊಟ್ಟೆಗೆ ಸಂಬಂಧಿಸಿದ ಅನಾರೋಗ್ಯವು ಕಾಡುತ್ತಿದ್ದಲ್ಲಿ ಅದಕ್ಕೆ ಸೂಕ್ತ ವೈದ್ಯೋಪಚಾರಗಳು ದೊರೆಯಲಿವೆ. ಯೂಟ್ಯೂಬರ್ ಗಳು ಇದ್ದಲ್ಲಿ ವೃತ್ತಿಗೆ ಬೇಕಾದಂಥ ಸಲಕರಣೆಗಳನ್ನು ಖರೀದಿ ಮಾಡಲಿಕ್ಕಾಗಿ ಹಣವನ್ನು ಹೊಂದಿಸಿಕೊಳ್ಳಲಿದ್ದೀರಿ ಅಥವಾ ನಿಮ್ಮಲ್ಲಿ ಕೆಲವರು ಖರೀದಿಯನ್ನೇ ಮಾಡುವ ಎಲ್ಲ ಸಾಧ್ಯತೆಗಳು ಇವೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ನಿಮ್ಮ ಒಳಗೆ ಒಂದು ಯೋಚನೆ ಇದ್ದು, ಅದನ್ನು ಬಹಳ ಸಮಯದಿಂದ ಸಂಬಂಧಪಟ್ಟವರ ಎದುರಿಗೆ ಚರ್ಚೆಯನ್ನೇ ಮಾಡಿಲ್ಲ ಅಂತಾದಲ್ಲಿ ಈ ದಿನ ಅದಕ್ಕೊಂದು ಅವಕಾಶ ದೊರೆಯಲಿದೆ. ನಿಮ್ಮಲ್ಲಿ ಯಾರಾದರೂ ಫ್ರಾಂಚೈಸಿ ಅಥವಾ ಡಿಸ್ಟ್ರಿಬ್ಯೂಷನ್ ಪಡೆದುಕೊಳ್ಳುವ ಸಲುವಾಗಿ ಯೋಚನೆ ಮಾಡುತ್ತಿದ್ದಲ್ಲಿ ಅದಕ್ಕೆ ಬೇಕಾದಂಥ ಬೆಂಬಲ, ಹಣಕಾಸಿನ ಅನುಕೂಲ ಮೊದಲಾದವು ದೊರೆಯುವ ಸಾಧ್ಯತೆ ಹೆಚ್ಚಿದೆ. ಈ ದಿನ ಏನನ್ನು ಕೇಳುವುದಕ್ಕೂ ಹಿಂಜರಿಕೆ ಇಟ್ಟುಕೊಳ್ಳಬೇಡಿ. ನಿರ್ದಿಷ್ಟ ವ್ಯಕ್ತಿಯಿಂದ ಇಂಥದ್ದೊಂದು ನೆರವು ದೊರೆಯಬಹುದು ಎಂದೆನಿಸಿದಲ್ಲಿ ಅದನ್ನು ಬಾಯಿ ಬಿಟ್ಟು ಕೇಳಿ. ಮಕ್ಕಳ ಶಿಕ್ಷಣದ ಸಲುವಾಗಿ ನಿಮ್ಮಲ್ಲಿ ಕೆಲವರು ಹೂಡಿಕೆ ಅಥವಾ ಉಳಿತಾಯವನ್ನು ಆರಂಭಿಸುವ ಸಾಧ್ಯತೆಗಳಿವೆ. ಇನ್ನು ನಿಮ್ಮ ತಂದೆ- ತಾಯಿ ಅಥವಾ ಮನೆಯಲ್ಲಿ ಹಿರಿಯರು ಯಾರಾದರೂ ಇರಬಹುದು, ಅವರಿಗಾಗಿಯೇ ಆರೋಗ್ಯ ವಿಮೆ ಖರೀದಿಸಬೇಕು ಎಂದು ನಿರ್ಧಾರವನ್ನು ಮಾಡಲಿದ್ದೀರಿ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಕುಟುಂಬ ಸದಸ್ಯರ ಒತ್ತಾಯದ ಮೇಲೆ ಇಎಂಐನಲ್ಲಿ ಕೆಲವು ವಸ್ತುಗಳನ್ನು ಖರೀದಿ ಮಾಡುವಂಥ ಸನ್ನಿವೇಶ ಎದುರಾಗುತ್ತದೆ. ಭವಿಷ್ಯದಲ್ಲಿ ಕೈಗೊಳ್ಳಬೇಕಾದ ಮುಖ್ಯ ಯೋಜನೆಯೊಂದರ ಬಗ್ಗೆ ಆಪ್ತರು- ಸ್ನೇಹಿತರ ಜೊತೆಗೆ ಚರ್ಚೆಯನ್ನು ನಡೆಸಲಿದ್ದೀರಿ. ನಿಮ್ಮಲ್ಲಿ ಕೆಲವರು ವಾಹನಗಳ ಚಾಲನೆ ಕಲಿಯುವುದಕ್ಕಾಗಿ ಡ್ರೈವಿಂಗ್ ಕ್ಲಾಸ್ ಸೇರುವ ಬಗ್ಗೆ ಅಂತಿಮ ತೀರ್ಮಾನವನ್ನು ಕೈಗೊಳ್ಳುವ ಸಾಧ್ಯತೆಗಳಿವೆ. ಪ್ರಾಣಾಯಾಮ- ಯೋಗ ಇಂಥದ್ದರ ತರಗತಿಯನ್ನು ನಡೆಸುತ್ತಿರುವವರಿಗೆ ದೂರದ ಪ್ರದೇಶಗಳಿಂದ ಆಹ್ವಾನ ದೊರೆಯುವ ಯೋಗ ಇದೆ. ಇನ್ನೂ ಮುಂದುವರಿದು ಹೇಳಬೇಕು ಅಂದರೆ, ಅಲ್ಪಾವಧಿಗಾದರೂ ವಿದೇಶಗಳಿಗೆ ತೆರಳುವಂಥ ಸಾಧ್ಯತೆಯನ್ನು ಸಹ ತಳ್ಳಿ ಹಾಕುವಂತಿಲ್ಲ. ಸಾಮಾಜಿಕವಾಗಿ ಬಹಳ ಮುಖ್ಯವಾದ ವಿಚಾರವೊಂದರ ಪರವಾಗಿ ಪ್ರಚಾರ ಅಥವಾ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಕೊಳ್ಳುವ ಸನ್ನಿವೇಶಗಳು ಎದುರಾಗಲಿವೆ. ಅಬಲಾಶ್ರಮ- ಅನಾಥಾಶ್ರಮಗಳಲ್ಲಿ ಕೆಲಸ ಮಾಡುವವರಿಗೆ ಜವಾಬ್ದಾರಿ ಹೆಚ್ಚಲಿದೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಫ್ಲ್ಯಾಟ್, ವಿಲ್ಲಾ ಅಥವಾ ಗೇಟೆಡ್ ಕಮ್ಯುನಿಟಿಯಲ್ಲಿ ಕಟ್ಟಿರುವ ಮನೆಯನ್ನು ಖರೀದಿ ಮಾಡುವ ಸಲುವಾಗಿ ಹುಡುಕಾಟ ನಡೆಸುತ್ತಿರುವವರಿಗೆ ಈ ದಿನ ಅಂಥದ್ದೊಂದು ಸಿಗುವ ಸಾಧ್ಯತೆಗಳು ಹೆಚ್ಚಿವೆ. ಸಂಗಾತಿಯ ಜೊತೆಗೆ ತೆರಳಬೇಕು ಎಂದು ಬಹಳ ಸಮಯದಿಂದ ಅಂದುಕೊಂಡ ಸ್ಥಳ ಯಾವುದಾದರೂ ಇದ್ದಲ್ಲಿ ಈ ದಿನ ಅಲ್ಲಿಗೆ ಹೋಗುವಂಥ ಯೋಗ ಇದೆ. ನಿಮ್ಮಲ್ಲಿ ಕೆಲವರು ದಾನ- ಧರ್ಮದಲ್ಲಿ ತೊಡಗಿಕೊಳ್ಳುವ ಸಾಧ್ಯತೆಗಳು ಸಹ ಕಂಡುಬರುತ್ತಿದೆ. ಹೊದಿಕೆ, ಸ್ವೆಟರ್, ಶಾಲು ಇಂಥವುಗಳನ್ನು ಅಶಕ್ತರಿಗೆ ನೀಡಲಿದ್ದೀರಿ. ಕಾರ್ಪೊರೇಟ್ ವಲಯದಲ್ಲಿ ಕೆಲಸ ನಿರ್ವಹಿಸುವವರಿಗೆ ತಂಡವನ್ನು ರೆಸಾರ್ಟ್, ರೆಸ್ಟೋರೆಂಟ್ ಅಥವಾ ಇನ್ಯಾವುದೇ ಚಟುವಟಿಕೆಗಾಗಿ ಕರೆದುಕೊಂಡು ಹೋಗುವುದಕ್ಕೆ ಯೋಜನೆ ರೂಪಿಸುವುದಕ್ಕೆ ನಿಮಗೇ ಜವಾಬ್ದಾರಿಯನ್ನು ವಹಿಸಬಹುದು. ಇನ್ನು ಮುಂದೆ ನಿಮಗೆ ಸಿಗಬಹುದಾದ ಬಡ್ತಿ ಅಥವಾ ಹುದ್ದೆಯ ಬಗ್ಗೆ ಸುಳಿವನ್ನು ಸಹ ಬಿಟ್ಟುಕೊಡಬಹುದು. ಆದ್ದರಿಂದ ಮಾತುಕತೆಯ ವೇಳೆ ಎಚ್ಚರ ವಹಿಸಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ನಿಮ್ಮಿಂದ ಹಲವರಿಗೆ ಈ ದಿನ ಅನುಕೂಲ- ಸಹಾಯ ಒದಗಿಬರಲಿದೆ. ಉದ್ಯೋಗಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ವ್ಯಕ್ತಿಯೊಬ್ಬರ ಬಳಿ ಶಿಫಾರಸು ಮಾಡಿದರೆ ತನಗೆ ಕೆಲಸ ಸಿಗುವ ಸಾಧ್ಯತೆ ಹೆಚ್ಚಿದೆ ಎಂದು ನಿಮ್ಮನ್ನು ಹುಡುಕಿಕೊಂಡು ಬಂದು ಸಹಾಯ ಕೇಳಬಹುದು. ಅಥವಾ ಇದೊಂದು ವಿಚಾರವನ್ನು ಹೇಳಬೇಡಿ ಎಂದು ಮನವಿ ಮಾಡುವ ಸಾಧ್ಯತೆ ಕೂಡ ಇದೆ. ಸಾಮಾಜಿಕ ಮಾಧ್ಯಮಗಳಲ್ಲಿ ಬರುವಂಥ ಜಾಹೀರಾತು ನೋಡಿ, ಯಾವುದೇ ವಸ್ತುವನ್ನು ಖರೀದಿ ಮಾಡಬೇಡಿ. ಏಕೆಂದರೆ ಆ ನಂತರ ಪರಿತಪಿಸುವಂತೆ ಆಗುತ್ತದೆ. ಇನ್ನು ನವ ವಿವಾಹಿತರಿದ್ದಲ್ಲಿ ಹಣಕಾಸು ವಿಷಯಗಳಲ್ಲಿ ಪಾರದರ್ಶಕವಾಗಿ ಇರುವುದು ಬಹಳ ಉತ್ತಮ ಹಾಗೂ ಕ್ಷೇಮ. ತಾತ್ಕಾಲಿಕವಾಗಿ ಅಂದುಕೊಂಡಿದ್ದ ಜವಾಬ್ದಾರಿಯೊಂದು ಕಾಯಂ ಆಗಿ ನಿಮ್ಮ ಮೇಲೇ ಬರುವ ಎಲ್ಲ ಅವಕಾಶಗಳು ಇವೆ. ಈಗಿರುವ ಕೆಲಸದ ಜೊತೆಗೆ ಇದನ್ನೂ ಮಾಡಬೇಕಾ ಎಂದು ನಿಮಗೆ ಸಿಟ್ಟು ಸಹ ಬರಬಹುದು. ಆದರೆ ಅದರಿಂದ ತಪ್ಪಿಸಿಕೊಳ್ಳಲು ಆಗಲ್ಲ.

ಲೇಖನ- ಎನ್‌.ಕೆ.ಸ್ವಾತಿ

ಚಾರ್ಮಾಡಿಯಲ್ಲಿ ಕಾಡಾನೆ ಜತೆ ಸೆಲ್ಫೀ ಕ್ಲಿಕ್ಕಿಸಲು ಮುಂದಾದ ಪ್ರಯಾಣಿಕ
ಚಾರ್ಮಾಡಿಯಲ್ಲಿ ಕಾಡಾನೆ ಜತೆ ಸೆಲ್ಫೀ ಕ್ಲಿಕ್ಕಿಸಲು ಮುಂದಾದ ಪ್ರಯಾಣಿಕ
ಮಂಗಳೂರು: ಅಬ್ಬರಿಸುತ್ತಿದೆ ಅರಬ್ಬೀ ಸಮುದ್ರ, ಕಡಲ್ಕೊರೆತ ಭೀತಿ ಹೆಚ್ಚಳ
ಮಂಗಳೂರು: ಅಬ್ಬರಿಸುತ್ತಿದೆ ಅರಬ್ಬೀ ಸಮುದ್ರ, ಕಡಲ್ಕೊರೆತ ಭೀತಿ ಹೆಚ್ಚಳ
VIDEO: ಕ್ಯಾಚ್ ಕೈಬಿಟ್ಟ ಬೆನ್ನಲ್ಲೇ ರೋಹಿತ್ ಶರ್ಮಾನ ಹೊರಗೆ ಕಳಿಸಿದ ಪಾಂಡ್ಯ
VIDEO: ಕ್ಯಾಚ್ ಕೈಬಿಟ್ಟ ಬೆನ್ನಲ್ಲೇ ರೋಹಿತ್ ಶರ್ಮಾನ ಹೊರಗೆ ಕಳಿಸಿದ ಪಾಂಡ್ಯ
‘ಅವನ ನಟನೆ ನೋಡೋದೇ ಆನಂದ’; ರಾಕೇಶ್ ನೆನೆದು ಸೆಲೆಬ್ರಿಟಿಗಳ ಕಣ್ಣೀರು
‘ಅವನ ನಟನೆ ನೋಡೋದೇ ಆನಂದ’; ರಾಕೇಶ್ ನೆನೆದು ಸೆಲೆಬ್ರಿಟಿಗಳ ಕಣ್ಣೀರು
‘ನಾನು ಯಶ್ ಅಭಿಮಾನಿ ಅಲ್ಲ, ಆದರೆ ಆ ಹೀರೋ ನಂಗೆ ಆದರ್ಶ’; ಯಶ್ ತಾಯಿ
‘ನಾನು ಯಶ್ ಅಭಿಮಾನಿ ಅಲ್ಲ, ಆದರೆ ಆ ಹೀರೋ ನಂಗೆ ಆದರ್ಶ’; ಯಶ್ ತಾಯಿ
Daily Devotional: ಪಂಚಮುಖಿ ಹನುಮನ ಉಪಾಸನೆಯ ಹಿಂದಿನ ರಹಸ್ಯ ತಿಳಿಯಿರಿ
Daily Devotional: ಪಂಚಮುಖಿ ಹನುಮನ ಉಪಾಸನೆಯ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಕುಜ ಕರ್ಕಾಟಕ ರಾಶಿ, ಚಂದ್ರ ಮೀನ ರಾಶಿಯಲ್ಲಿ ಸಂಚಾರ
Daily horoscope: ಕುಜ ಕರ್ಕಾಟಕ ರಾಶಿ, ಚಂದ್ರ ಮೀನ ರಾಶಿಯಲ್ಲಿ ಸಂಚಾರ
ಬಾಗಲಕೋಟೆ ಸೇರಿ ರಾಜ್ಯದ 5 ರೈಲು ನಿಲ್ದಾಣಗಳನ್ನು ಉದ್ಘಾಟಿಸಲಿರುವ ಮೋದಿ
ಬಾಗಲಕೋಟೆ ಸೇರಿ ರಾಜ್ಯದ 5 ರೈಲು ನಿಲ್ದಾಣಗಳನ್ನು ಉದ್ಘಾಟಿಸಲಿರುವ ಮೋದಿ
ಸೊಸೆ ರಾಧಿಕಾ ನನಗೆ ಗುಡ್ ಎನ್ನಬೇಕು: ಸಿನಿಮಾ ಕನಸು ಹೇಳಿಕೊಂಡ ಯಶ್ ತಾಯಿ
ಸೊಸೆ ರಾಧಿಕಾ ನನಗೆ ಗುಡ್ ಎನ್ನಬೇಕು: ಸಿನಿಮಾ ಕನಸು ಹೇಳಿಕೊಂಡ ಯಶ್ ತಾಯಿ
ಅಧಿಕಾರ ಸ್ವೀಕರಿಸಿದ ನೂತನ ಡಿಜಿಪಿ ಡಾ. ಎಂ. ಎ ಸಲೀಂ
ಅಧಿಕಾರ ಸ್ವೀಕರಿಸಿದ ನೂತನ ಡಿಜಿಪಿ ಡಾ. ಎಂ. ಎ ಸಲೀಂ