ಸ್ವಯಂ ಅಪರಾಧವಾದರೂ ಅದನ್ನು ತಿಳಿದುಕೊಳ್ಳುವ ಮನಸ್ಸು ಬೇಕು
ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವಸಂತ ಋತುವಿನ ಚೈತ್ರ ಮಾಸ ಕೃಷ್ಣ ಪಕ್ಷದ ಷಷ್ಠೀ ತಿಥಿ, ಶನಿವಾರ ಬಹುದಿನದ ಕಲಹ ಮುಕ್ತಾಯ, ಸಾಮಾಜಿಕ ಕಾರ್ಯಕ್ಕೆ ಸಮ್ಮಾನ, ವಿವಾಹಕ್ಕೆ ಸಿದ್ಧತೆ ಇವೆಲ್ಲ ಇರಲಿದೆ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ಎನ್ನುವುದನ್ನು ತಿಳಿದುಕೊಳ್ಳಿ.

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ವಸಂತ, ಸೌರ ಮಾಸ: ಮೇಷ ಮಾಸ, ಮಹಾನಕ್ಷತ್ರ: ಅಶ್ವಿನೀ, ಮಾಸ: ಚೈತ್ರ, ಪಕ್ಷ: ಕೃಷ್ಣ, ವಾರ: ಶನಿ, ತಿಥಿ: ಷಷ್ಠೀ, ನಿತ್ಯನಕ್ಷತ್ರ: ಪೂರ್ವಾಷಾಢಾ, ಯೋಗ: ಶಿವ, ಕರಣ: ವಣಿಜ, ಸೂರ್ಯೋದಯ – 06:17 am, ಸೂರ್ಯಾಸ್ತ – 06:45 pm, ಇಂದಿನ ಶುಭಾಶುಭಕಾಲ: ರಾಹು ಕಾಲ 09:25 – 10:58, ಯಮಘಂಡ ಕಾಲ 14:05 – 15:39, ಗುಳಿಕ ಕಾಲ 06:18 – 07:51
ತುಲಾ ರಾಶಿ: ಭೂಮಿಯಿಂದ ಆದಾಯ ಮೂಲವನ್ನು ಹೆಚ್ಚಿಸಿಕೊಳ್ಳಲು ಯೋಜನೆ. ಬೇಗನೆ ಯಶಸ್ಸು ಸಿಗುವುದೆಂದು ದಾರಿ ಬದಲಿಸಬಾರದು. ಪ್ರಯತ್ನಗಳು ಬದಲಾಗಬೇಕು. ಜಮೀನಿಗೆ ಸಂಬಂಧಿಸಿದ ಸಮಸ್ಯೆಗಳು ಪರಿಹಾರ ಕಂಡುಕೊಳ್ಳಬಹುದು. ಕಲೆಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ನಿಮ್ಮ ಶಿಷ್ಟ ನಡವಳಿಕೆ ಇತರರಿಗೆ ಪ್ರೇರಣೆ ಆಗುತ್ತದೆ. ಎಲ್ಲ ಕಾರ್ಯಗಳಲ್ಲಿ ಯಶಸ್ಸು ದೊರಕುವ ಸಂಭವ. ಸ್ವತಂತ್ರವಾಗಿ ಇಂದಿನ ಕಾರ್ಯವನ್ನು ನೀವು ನಿರ್ವಹಿಸುವಿರಿ. ನೂತನ ವಾಹನವನ್ನು ಖರೀದಿಸುವಿರಿ. ಕುಟುಂಬದಲ್ಲಿ ಸಾಮರಸ್ಯವು ಕಾಣಿಸುವುದು. ಮನಸಿಗೆ ಹಿತವಾದ ಕೆಲಸವನ್ನು ಬಹಳ ಶ್ರದ್ಧೆಯಿಂದ ಮಾಡುವಿರಿ. ಉದ್ಯೋಗಕ್ಕಾಗಿ ಪರದಾಡುತ್ತಿರುವವರು ಉತ್ತಮ ಉದ್ಯೋಗವನ್ನು ಪಡೆದುಕೊಳ್ಳುವಿರಿ. ವ್ಯಾಪಾರಸ್ಥರು ಹೊಸತನ್ನು ಮಾಡಲು ಇಚ್ಛಿಸುವಿರಿ. ಈಗಿನ ಪರಿಸ್ಥಿತಿಯಲ್ಲಿ ಬದಲಾವಣೆ ಬೇಕೆನಿಸುವುದು. ನಿಮ್ಮ ಶ್ರಮದ ಬಗ್ಗೆ ಕಹಿಯಾದ ಮಾತುಗಳು ಕೇಳಿಬರಬಹುದು. ಸಾಮಾಜಿಕ ಕಾರ್ಯದಲ್ಲಿ ಅವಮಾನದ ಕಾರಣದಿಂದ ಅದನ್ನು ಮಾಡಲು ಹಿಂದೇಟು ಹಾಕುವಿರಿ. ವೇಗದಲ್ಲಿ ವಾಹನವನ್ನು ಚಲಾಯಿಸುವುದು ಬೇಡ.
ವೃಶ್ಚಿಕ ರಾಶಿ: ದಾಂಪತ್ಯದಲ್ಲಿ ಒಡಕು ಬರುವ ಸಾಧ್ಯತೆ ಇದೆ. ನೇರ ಮಾತಿನಿಂದ ಕಲಹ. ದುಡುಕಿ ಅಪಯಶಸ್ಸನ್ನು ತಂದುಕೊಳ್ಳಬೇಡಿ. ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ತಕ್ಕ ಫಲ ದೊರಕುತ್ತದೆ. ಹಣದ ವಿಚಾರದಲ್ಲಿ ಆತಂಕವಿಲ್ಲ. ಸಮಾಜದಲ್ಲಿ ಗೌರವ ಪಡೆಯುವಿರಿ. ಶುಭಕಾರ್ಯಗಳ ಯತ್ನಗಳು ಯಶಸ್ವಿಯಾಗುತ್ತವೆ. ಸ್ನೇಹಿತರೊಂದಿಗೆ ಸಮಯ ಕಳೆಯುವ ಅವಕಾಶ ಸಿಗುತ್ತದೆ. ಇಂದು ನಿಮ್ಮ ಆತ್ಮವಿಶ್ವಾಸ ಇನ್ನಷ್ಟು ಬೆಳೆಯುತ್ತದೆ. ಅಗಲವು ದಿನಗಳ ಭೂವಿವಾದಕ್ಕೆ ಅಂತ್ಯ ಸಿಗಲಿದೆ. ಮಕ್ಕಳ ಜೊತೆಯಲ್ಲಿ ಸಂತಸದಿಂದ ಕಾಲಕಳೆಯುವಿರಿ. ಕುಟುಂಬದ ಹಿರಿಯರ ಜೊತೆಯಲ್ಲಿ ವಾಗ್ವಾದ ಇರುತ್ತದೆ. ಆತ್ಮೀಯರಿಗೆ ಆರ್ಥಿಕ ಸಹಾಯ ಮಾಡುವಿರಿ. ಬಹಳ ದಿನಗಳಿಂದ ಸ್ಥಗಿತಗೊಂಡ ಕೆಲಸಗಳೂ ಪೂರ್ಣಗೊಳ್ಳುತ್ತವೆ. ಸಣ್ಣ ವ್ಯಾಪಾರಿಗಳು ವ್ಯವಹಾರ ಹೆಚ್ಚಳದ ಬಗ್ಗೆ ಗಮನಹರಿಸಬೇಕು. ನೌಕರರ ಜೊತೆ ಆಪ್ತ ಸಮಾಲೋಚನೆ ಮಾಡುವಿರಿ. ಬಹಳ ದಿನಗಳಿಂದ ಕಾಣಿಸಿಕೊಳ್ಳದ ನೋವು ಕಾಣಿಸಿಕೊಳ್ಳಬಹುದು. ಚಿಂತಿತ ಕಾರ್ಯವನ್ನು ಪೂರೈಸಲು ನಿಮಗೆ ಬುದ್ಧಿಯು ಸೂಚಿಸದು. ಆಸ್ತಿಯನ್ನು ಪಡೆದುಕೊಳ್ಳಲು ನ್ಯಾಯಾಲಯಕ್ಕೆ ಹೋಗಬೇಕಾದೀತು.
ಧನು ರಾಶಿ: ಸಣ್ಣವರ ತಪ್ಪನ್ನು ಕ್ಷಮಿಸುವುದು ದೊಡ್ಡವರ ದೊಡ್ಡ ಗುಣ. ಮನೆಗೆ ಖರ್ಚು ಮಾಡುವಾಗ ನಿಮ್ಮ ಆರ್ಥಿಕಸ್ಥಿತಿಯನ್ನೂ ಗಮನಿಸಿ. ನೆರೆಹೊರೆಯವರ ಜೊತೆ ಸಣ್ಣ ವಿಚಾರಕ್ಕೆ ಜಗಳ ಆಗಬಹುದು. ಅನಿರೀಕ್ಷಿತ ವಾಗ್ವಾದಗಳಿಗೆ ಸಾಧ್ಯತೆ ಇದೆ. ಹಣದ ಕೊರತೆ ನಿವಾರಣೆಗೆ ಸಾಲದ ಪ್ರಯತ್ನ ಮಾಡಬಹುದು. ಕುಟುಂಬದಲ್ಲಿ ಹೊಸ ಬದಲಾವಣೆಗಳು ಕಾಣಿಸಬಹುದು. ಯೋಜಿತ ಕಾರ್ಯಗಳಲ್ಲಿ ವಿಳಂಬ ಉಂಟಾಗಬಹುದು. ನಿಮ್ಮ ನಿಶ್ಯಬ್ದತೆ ಹಲವಾರು ಬಿಕ್ಕಟ್ಟಿಗೆ ಪರಿಹಾರವಾಗಬಹುದು. ಭವಿಷ್ಯದ ಬಗ್ಗೆ ಕಾಳಜಿಯೂ ಗೊಂದಲೂ ಇರುತ್ತದೆ. ನಿಮ್ಮ ಮನೆಯ ನಿರ್ಮಾಣಕ್ಕೆ ಸೂಕ್ತ ಭೂಮಿಯನ್ನು ಆಯ್ಕೆ ಮಾಡುವಿರಿ. ಸಂಗಾತಿಯ ಬಗ್ಗೆ ಇದ್ದ ಬೇಸರವು ಮಾಯವಾಗಲಿದೆ. ಕೆಲಸದ ಬಗ್ಗೆ ಉತ್ಸಾಹದಿಂದ ಇರಬೇಕು. ಆತ್ಮವಿಶ್ವಾಸದ ಕೊರತೆಯಿಂದ ನಿಮ್ಮ ಕಾರ್ಯವು ವಿಳಂಬವಾಗಬಹುದು. ನೀವು ಉದ್ಯೋಗವನ್ನು ವಿನಮ್ರಭಾವದಿಂದ ನಡೆಸುವಿರಿ. ಮಕ್ಕಳ ಅತಿಯಾದ ಮಾತು ನಿಮಗೆ ಮುಜುಗರ ತಂದೀತು. ನಿಮ್ಮ ಶ್ರಮವು ನಿಷ್ಪ್ರಯೋಜಕ ಎನಿಸುವುದು. ದೂರಪ್ರಯಾಣದಿಂದ ನಿಮಗೆ ಖರ್ಚಾಗುವುದು ಗೊತ್ತಾಗದೇ ಹೋಗಬಹುದು.
ಮಕರ ರಾಶಿ: ಗೃಹನಿರ್ಮಾಣಕ್ಕೆ ಮಾಡಿದ ಸಾಲವು ಹೊರೆಯಾಗಬಹುದು. ಇನ್ನೊಬ್ಬರನ್ನು ನಿಂದಿಸುವುದು ಬೇಡ. ಅವರೇ ಅವರ ಕರ್ಮದ ಫಲವನ್ನು ಉಣ್ಣುವರು. ವ್ಯಾಪಾರಕ್ಕೆ ಸಂಬಂಧಿಸಿದಂತೆ ನಿಮ್ಮ ಯೋಜನೆಗಳನ್ನು ಕೈಗೊಳ್ಳಬೇಡಿ. ಗೆಳೆಯರ ಒಡನಾಟದಿಂದ ದೂರವಿರುವುದು ಉತ್ತಮ. ತಾತ್ಕಾಲಿಕ ಕೋಪದಿಂದ ನಿರ್ಧಾರ ತೆಗೆದುಕೊಳ್ಳಬೇಡಿ. ಮನೆಯಲ್ಲಿ ಒತ್ತಡದ ಪರಿಸ್ಥಿತಿ ಉಂಟಾಗಬಹುದು. ಸಂಬಂಧಗಳ ಎಚ್ಚರಿಕೆಯಿಂದ ಮುನ್ನಡೆಯಿರಿ. ತಾಳ್ಮೆಯ ನಡವಳಿಕೆ ಇಂದಿನ ದಿನ ಸುಗಮವಾಗಿಸುತ್ತದೆ. ಯಾರಿಂದಲೂ ಕೂಡಲೇ ಬದಲಾವಣೆಯನ್ನು ಬಯಸುವುದು ಬೇಡ. ಮನಸ್ಸು ಒಳ್ಳೆಯದಾದರೂ ದುಡುಕಿ ಮಾತನಾಡಿದರೆ ಕೆಟ್ಟದ್ದಾದೀತು. ಸಾಲದ ವ್ಯವಹಾರದಿಂದ ದೂರವಿರಿ. ಮಕ್ಕಳು ಉತ್ಸಾಹದಿಂದ ದಿನವನ್ನು ಪ್ರಾರಂಭಿಸಲಿದ್ದು ಅವರಿಗೆ ಕೊಡಬೇಕಾದ ತಿಳಿವಳಿಕೆಯನ್ನು ಆಗಲೇ ಕೊಡುವುದು ಉತ್ತಮ. ನಿರುಪಯೋಗಿ ವಸ್ತುಗಳನ್ನು ನೀವು ದೂರ ಮಾಡುವಿರಿ. ನಿರುದ್ಯೋಗವೇ ನಿಮಗೆ ಅಭ್ಯಾಸವಾಗುವ ಸಾಧ್ಯತೆ ಇದೆ. ಸ್ತ್ರೀಯರಿಗೆ ಪ್ರಯಾಣದಲ್ಲಿ ತೊಂದರೆ ಬರಬಹುದು.
ಕುಂಭ ರಾಶಿ: ಸ್ವಯಂ ಅಪರಾಧವಾದರೂ ಅದನ್ನು ತಿಳಿದುಕೊಳ್ಳುವ ಮನಸ್ಸೂ ಬೇಕು. ನಿಮ್ಮ ಗುರಿಯನ್ನು ಯಾರಾದರೂ ಬದಲಿಸಬಹುದು. ಗುರಿಯತ್ತ ನಿಮ್ಮ ಗಮನವನ್ನು ಇಟ್ಟುಕೊಳ್ಳಿ. ಹಿರಿಯರ ಆದೇಶದಂತೆ ಮನೆಯಲ್ಲಿ ಮಂಗಲ ಕಾರ್ಯವನ್ನು ಮಾಡುವಿರಿ. ಅನಿರೀಕ್ಷಿತ ಹಣನಷ್ಟಕ್ಕೆ ತಯಾರಿ ಇಟ್ಟುಕೊಳ್ಳಿ. ಕೆಲ ಪ್ರಮುಖ ಯೋಜನೆಗಳನ್ನು ಮುಂದೂಡಬೇಕಾಗಬಹುದು. ಸಣ್ಣ ಮಟ್ಟದ ಆರೋಗ್ಯ ಸಮಸ್ಯೆ ತೊಂದರೆ ನೀಡಬಹುದು. ಪ್ರಯಾಣಗಳಲ್ಲಿ ಅಸಹಜ ತೊಂದರೆಗಳು ಎದುರಾಗಬಹುದು. ಸ್ವಭಾವದ ಕಾರಣ ಕಾರ್ಯಗಳಲ್ಲಿ ಯಶಸ್ಸು ದೊರೆಯುವುದು. ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುವಿರಿ. ಪ್ರವಾಸ ಮಾಡಲು ಸಾದ್ಯವಾಗುವುದಿಲ್ಲ. ಉದ್ಯಮಿಗಳು ಹೂಡಿಕೆಯ ಬಗ್ಗೆ ಚಿಂತಾಮಗ್ನರಾಗುವರು. ಅಂದುಕೊಂಡಿದ್ದಕ್ಕಿಂತ ಖರ್ಚು ಅಧಿಕವಾಗಿದ್ದು ಗಳಿಕೆಯ ಬಗ್ಗೆ ಆಲೋಚಿಸುವಿರಿ. ಧಾರ್ಮಿಕ ಕಾರ್ಯದಲ್ಲಿ ತೊಡಗಿರುವವರಿಗೆ ಆದಾಯವು ಹೆಚ್ಚು ಇರಲಿದೆ. ಕುಟುಂಬದ ಪೋಷಣೆಯಲ್ಲಿ ಇಂದು ಸಹಭಾಗಿತ್ವ ಇರುವುದು.
ಮೀನ ರಾಶಿ: ಮಾತಿನಿಂದಾದ ಸಣ್ಣ ತಪ್ಪೂ ದೊಡ್ಡದಾಗಿರುತ್ತದೆ. ಇಂದು ನೀವು ಬಯಸಿದ ಕೆಲಸವನ್ನು ಪೂರ್ಣಗೊಳಿಸುವುದರಿಂದ ಸಂತೋಷ ಇರುತ್ತದೆ. ಕೊಡಬೇಕಾದ ವಸ್ತುವನ್ನು ಇಟ್ಟುಕೊಳ್ಳುವುದು ಬೇಡ. ಉದ್ಯೋಗಸ್ಥರಿಗೆ ಬಡ್ತಿಯ ಸಾಧ್ಯತೆ ಇದೆ. ಇಂದು ಮನಸ್ಸು ಅಸ್ಥಿರವಾಗಿರುವ ಸಾಧ್ಯತೆ ಇದೆ. ಸಂಬಂಧಿಕರು ಮತ್ತು ಸ್ನೇಹಿತರೊಂದಿಗೆ ಸಂಘರ್ಷ ಉಂಟಾಗದಂತೆ ಎಚ್ಚರಿಕೆ ವಹಿಸುವುದು ಉತ್ತಮ. ಮಾತಿನಿಂದಲೂ ಕಲಹಗಳು ಉಂಟಾಗುವ ಸಾಧ್ಯತೆ ಇದೆ. ಕೌಟುಂಬಿಕ ವಾತಾವರಣ ಸಂತೋಷದಿಂದ ಕೂಡಿರುತ್ತದೆ. ಈ ಅನ್ಯೋನ್ಯತೆಯನ್ನು ಕಾಪಾಡಿಕೊಳ್ಳುಬೇಕು. ಉದ್ಯೋಗದಲ್ಲಿ ಸಣ್ಣ ಪುಟ್ಟ ಬದಲಾವಣೆಗಳು ಎದುರಾಗುತ್ತವೆ. ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸಿ. ಸಮಾನ ಚಿಂತನಶೀಲರ ನಡುವೆ ಸಖ್ಯವಾಗುವುದು. ಇನ್ನೊಬ್ಬರಿಂದ ಸಹಕಾರವನ್ನು ಬಯಸುವುದಿಲ್ಲ. ನಿಮ್ಮಷ್ಟಕ್ಕೆ ಕಾರ್ಯದಲ್ಲಿ ಮಗ್ನರಾಗಿರುವಿರಿ. ಸಂಧಾನಕ್ಕೆ ಕರೆದರೆ ಮಾತ್ರ ಹೋಗಿ. ಮನಸ್ಸಿನ ಸೋಮಾರಿತನವು ನಿಮ್ಮ ಕಾರ್ಯವನ್ನು ಹಿಂದಿಕ್ಕುವುದು.