AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Weekly Horoscope ವಾರ ಭವಿಷ್ಯ: ಮೇಷದಿಂದ ಮೀನ ವರೆಗಿನ ಒಂದಿಡೀ ವಾರದ ಶುಭಾಶುಭ ಫಲಗಳ ವಿವರ ಇಲ್ಲಿದೆ

ಈ ವಾರದಲ್ಲಿ ಯಾವ ರಾಶಿಗೆ ಏನು ಫಲ? ಒಂದಿಡೀ ವಾರದ ಶುಭಾಶುಭ ಫಲಗಳ ವಿವರ ಇಲ್ಲಿದೆ. ಈ ವಾರ ಭವಿಷ್ಯವು ಗೋಚಾರ ಫಲವನ್ನು ಅವಲಂಬಿಸಿದೆ. ಸಮಸ್ಯೆಗಳಿಗೆ ಪರಿಹಾರದ ವಿವರಗಳನ್ನೂ ನೀಡಲಾಗಿದೆ. ನೆಮ್ಮದಿಯ ಬಾಳು ನಿಮ್ಮದಾಗಲಿ.

Weekly Horoscope ವಾರ ಭವಿಷ್ಯ: ಮೇಷದಿಂದ ಮೀನ ವರೆಗಿನ ಒಂದಿಡೀ ವಾರದ ಶುಭಾಶುಭ ಫಲಗಳ ವಿವರ ಇಲ್ಲಿದೆ
ಭವಿಷ್ಯ
TV9 Web
| Updated By: ಆಯೇಷಾ ಬಾನು|

Updated on: Nov 29, 2021 | 6:46 AM

Share

ವಾರಭವಿಷ್ಯ: ತಾ.29-11-2021 ರಿಂದ ತಾ.05-12-2021 ರವರೆಗೆ.

ಮೇಷ: ಸಾಂಸಾರಿಕವಾಗಿ ನಿಮ್ಮ ಮನಸ್ಸು ಸದಾ ಯೋಚಿಸುವಂತಾಗಲಿದೆ. ಆಗಾಗ ಶುಭಮಂಗಲ ಕಾರ್ಯಗಳಿಗಾಗಿ ಓಡಾಟವು ಕಂಡು ಬರುವುದು. ದೈಹಿಕ ಆರೋಗ್ಯವು ಏರುಪೇರಾದರೂ ತಾತ್ಕಾಲಿಕವೆನ್ನಬಹುದು. ಸಾಂಸಾರಿಕವಾಗಿ ನೆಮ್ಮದಿ ಇದ್ದರೂ ಅನಾವಶ್ಯಕವಾಗಿ ಕಿರಿಕಿರಿ ತಪ್ಪಲಾರದು. ಅನೇಕ ವೇಳೆ ಸೃಜನಾತ್ಮಕವಾಗಿ ವಿಚಾರ ಮಾಡುವುದರಿಂದ ನಿಮ್ಮ ಸಮಸ್ಯೆಗಳು ಬಗೆಹರಿಯಲಿವೆ. ಆರೋಗ್ಯ ಭಾಗ್ಯಕ್ಕಾಗಿ ಆಹಾರ ಪದ್ಧತಿ ಹಾಗೂ ಶಾರೀರಿಕವಾಗಿ ಸ್ವತ್ಛತೆಗೆ ಹೆಚ್ಚಿನ ಗಮನ ಹರಿಸಬೇಕಾದೀತು. ಶುಭ ಸಂಖ್ಯೆ: 1 ಶುಭ ಬಣ್ಣ: ಆರೆಂಜ್

ವೃಷಭ: ವೃತ್ತಿರಂಗದಲ್ಲಿ ಹೆಚ್ಚು ಕೆಲಸ ಬಂದರೂ ಅವೆಲ್ಲವನ್ನು ನಿಭಾಯಿಸುವ ಸಾಧ್ಯತೆ ಬರುತ್ತದೆ. ನೀರಸವಾದ ನಿರುದ್ಯೋಗಿಗಳ ದೈನಂದಿನ ಬದುಕಿನಲ್ಲಿ ಆಶಾಕಿರಣ ಮೂಡಿ ಬರುತ್ತದೆ. ಕಿಟಕಿ ಪ್ರೇಮಿಗಳಿಗೆ ಮದುವೆ ಅನಿವಾರ್ಯವಾಗಲಿದೆ. ವಿದ್ಯಾರ್ಥಿಗಳಾದವರು ದುಶ್ಚಟ ಹಾಗೂ ದುವ್ಯಸನಗಳ ಬಗ್ಗೆ ಜಾಗ್ರತೆ ವಹಿಸಬೇಕಾದೀತು. ಮದುವೆಯ ಮುಂಚಿನ ಪರೀಕ್ಷಾರ್ಥ ಹೊಂದಾಣಿಕೆಗಳು ಅವಿವಾಹಿತರಿಗೆ ಕಂಕಣಬಲಕ್ಕೆ ಪೂರಕವಾಗಲಿವೆ. ವ್ಯಾಪಾರ, ವ್ಯವಹಾರಗಳಲ್ಲಿ ಚೇತರಿಕೆಯು ವ್ಯಾಪಾರಸ್ಥರಿಗೆ ಸಮಾಧಾನ ತಂದೀತು. ಶುಭ ಸಂಖ್ಯೆ: 2 ಶುಭ ಬಣ್ಣ: ಗೋದಿ

ಮಿಥುನ: ಕಣ್ಣೆದುರೇ ನಡೆಯುವ ಮೋಸ, ವಂಚನೆಯನ್ನು ಎದುರಿಸುವ ಛಾತಿ ನಿಮಗೆ ಇಲ್ಲವಾದೀತು. ಸಾಮಾಜಿಕವಾಗಿ ಜನ ಮನ್ನಣೆಗೆ ಪಾತ್ರರಾಗುವಿರಿ. ವಿದ್ಯಾರ್ಥಿಗಳು ಮಿತ್ರರ ಸಹವಾಸದಿಂದ ಅಡ್ಡದಾರಿ ಹಿಡಿಯುವ ಪ್ರವೃತ್ತಿ ತೋರಿಬಾರದಂತೆ ಕಾಳಜಿ ವಹಿಸಿರಿ. ಸೋಲನ್ನು ಒಪ್ಪಿ ಗುರಿಯನ್ನು ಸಾಧಿಸಿದಲ್ಲಿ ಯಶಸ್ಸು ನಿಮ್ಮದಾದೀತು. ಗೃಹಗಳ ಪ್ರತಿಕೂಲತೆಯಿಂದ ಆಲಸಿಯಾದವನ ಕಾರ್ಯಶೀಲತೆ ಕ್ಷೀಣಿಸುತ್ತಲೇ ಹೋಗುತ್ತದೆ. ಅವಿವಾಹಿತರಿಗೆ ವೈವಾಹಿಕ ಸಂಬಂಧಿತ ಮಾತುಕತೆಗಳು ಕಂಕಣ ಬಲದಲ್ಲಿ ಪೂರ್ಣವಾಗಲಿವೆ. ಶುಭ ಸಂಖ್ಯೆ: 9 ಶುಭ ಬಣ್ಣ: ಬಿಳಿ

ಕಟಕ: ಐಶಾರಾಮಿ ಜೀವನದಿಂದ ದೈಹಿಕ ಪೀಡೆಗಳಿಗೆ ಒಳಗಾಗದಂತೆ ಕಾಳಜಿ ಇರಲಿ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಬಗ್ಗೆ ಶಿಸ್ತು ಪಾಲಿಸುವಂತೆ ಹೇಳುವ ಪ್ರಸಂಗ ಬರುತ್ತದೆ. ದುಂದುವೆಚ್ಚವನ್ನು ಮಾಡುವ ಸಂದರ್ಭದಲ್ಲಿ ವೆಚ್ಚದ ಮೇಲೆ ಕಡಿವಾಣ ಹಾಕುವುದನ್ನು ಕಲಿಯಬೇಕಾಗುವುದು. ಉದ್ಯೋಗಿಗಳು ಕೆಲಸದ ಮಹತ್ವವನ್ನು ತಿಳಿಯುವುದು ಲೇಸು. ಯುವಕ, ಯುವತಿಯರು ಪರಸ್ಪರ ಪ್ರೇಮದ ಸುಳಿಯಲ್ಲಿ ಸಿಲುಕಿಯಾರು. ಒಂಟಿಯಾದ ಯೋಗ್ಯ ವಯಸ್ಕರಿಗೆ ಮದುವೆಯ ಆಸರೆಯು ಬೇಕೆನಿಸುವುದು. ಶುಭ ಸಂಖ್ಯೆ: 8 ಶುಭ ಬಣ್ಣ: ಕೇಸರಿ

ಸಿಂಹ: ಹೊಸ ಚಿಂತನೆ, ಹೊಸ ಕಾರ್ಯಗಳ ಆರಂಭಗಳಿಗೆ ಇದು ಸೂಕ್ತವಾದ ಸಮಯವಾದೀತು. ವ್ಯಾಪಾರ, ವ್ಯವಹಾರಗಳಲ್ಲಿ ಹೂಡಿಕೆ, ದುಡುಕು ನಿರ್ಧಾರಗಳು ಆರ್ಥಿಕ ಸ್ಥಿತಿಯನ್ನು ಏರುಪೇರು ಮಾಡಲಿದೆ. ಸತ್ಯವನ್ನು , ಬಿಚ್ಚುಮಾತುಗಳನ್ನು ಹೇಳಿ ನಿಷ್ಠುರಕ್ಕೆ ಕಾರಣರಾಗದಂತೆ ಗಮನವನ್ನು ಹರಿಸಿರಿ. ಆರೋಗ್ಯ ಭಾಗ್ಯಕ್ಕಾಗಿ ನಿಗದಿಪಡಿಸಿದ ಸಮಯದಲ್ಲಿ ಆಹಾರ ಸೇವನೆ ಅಗತ್ಯವಿರುತ್ತದೆ. ಸಂಭಾವಿತರೆಂದು ತೋರಿಸಿಕೊಳ್ಳುವ ಹಿತಶತ್ರುಗಳಿಂದ ಮೋಸ ಹೋಗುವ ಪ್ರಸಂಗವು ಎದುರಾದೀತು. ಶುಭ ಸಂಖ್ಯೆ: 4 ಶುಭ ಬಣ್ಣ: ಕೆಂಪು

ಕನ್ಯಾ: ಭೂತಕಾಲದ ತಪ್ಪುಗಳಿಂದ ಪಾಠ ಕಲಿತು, ವರ್ತಮಾನ ಕಾಲದ ಕಡೆ ಲಕ್ಷ್ಯ ಹಾಕದೆ ಇರುವವರು ಮೂರ್ಖರಾದಾರು. ಕಾರ್ಯ ಕ್ಷೇತ್ರದ ಕಿಟಕಿ ಸದಾ ತೆರೆದಿರಲಿ. ನಿಮ್ಮ ಸಂಕುಚಿತತೆಯ ಅರಿವೂ ಉಂಟಾದೀತು. ಸಮಯ, ಅವಕಾಶಗಳನ್ನು ಒದಗಿಸುತ್ತದೆ. ಆದರೆ, ಸಾಧಿಸಬೇಕಾದುದನ್ನು ಸಮಯ ವ್ಯರ್ಥಮಾಡದೆ ಸಾಧಿಸಿದರೆ ಯಶಸ್ಸು ಹುಡುಕಿ ಕೊಂಡು ಬರಲಿದೆ. ವ್ಯಾಪಾರ, ವ್ಯವಹಾರಗಳಲ್ಲಿ ಲಾಭಕರವಾದ ಆದಾಯವಿದ್ದರೂ ಪೈಪೋಟಿಯ ವಾತಾವರಣವನ್ನು ಎದುರಿಸಬೇಕಾಗುತ್ತದೆ. ಶುಭ ಸಂಖ್ಯೆ: 6 ಶುಭ ಬಣ್ಣ: ತಿಳಿ ನೀಲಿ

ತುಲಾ: ಕೌಟುಂಬಿಕ ಜೀವನದಲ್ಲಿ ಏರಿಳಿತಗಳ ಅನುಭವ ತಂದು ಕೊಡಲಿದೆ. ಹಾಗೇ ಹೆಚ್ಚಿನ ಉಸ್ತುವಾರಿ ಅಗತ್ಯವಿದೆ. ಧಾರ್ಮಿಕ ಹಾಗೂ ಆಧ್ಯಾತ್ಮಿಕ ವಿಷಯದತ್ತ ಮನಸ್ಸು ಹೆಚ್ಚು ವಾಲುವುದು. ಆರ್ಥಿಕ ಸಂಗ್ರಹ ಬಹಳಷ್ಟಿರುತ್ತದೆ. ಸ್ತ್ರೀಯರಿಗೆ ಹಲವು ಖರ್ಚುಗಳು ಎದುರಾಗುತ್ತವೆ. ನೂತನ ವಧೂವರರಿಗೆ ಸಿಹಿವಾರ್ತೆ ಇದೆ. ಬಂಧುಮಿತ್ರರಿಂದ ಪ್ರಶಂಸೆಗೆ ಒಳಗಾಗುವಿರಿ. ಪ್ರಯತ್ನಿಸುವ ಅನೇಕ ಕೆಲಸಕಾರ್ಯಗಳಲ್ಲಿ ಸಾಫ‌ಲ್ಯ ಕಾಣುವಿರಿ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಆಸಕ್ತಿ ತಂದು ಕೊಡಲಿದೆ. ಶುಭ ಸಂಖ್ಯೆ: 1 ಶುಭ ಬಣ್ಣ: ಗುಲಾಬಿ

ವೃಶ್ಚಿಕ: ವೃತ್ತಿರಂಗದಲ್ಲಿ ಅನುಕರಣೆ ಸ್ವಂತಿಕೆಯ ಅಭಿವ್ಯಕ್ತಿಯಲ್ಲ. ಸಾವಕಾಶವಾಗಿ ತಮ್ಮದೇ ಆದ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಿರಿ. ಯಶಸ್ಸು ನಿಮ್ಮದಾದೀತು. ವಿವಾಹ ಬಂಧನಕ್ಕೆ ಒಳಗಾಗುವ ವಾತಾವರಣ ಯೋಗ್ಯವಯಸ್ಕರಿಗೆ ಒದಗಿ ಬರಲಿದೆ. ದಾಂಪತ್ಯದಲ್ಲಿ ಸಾಮರಸ್ಯದ ಬುನಾದಿ ಭದ್ರವಾಗಲಿದೆ. ಧಾರ್ಮಿಕ ಕ್ಷೇತ್ರದಲ್ಲಿ ದೇವರ ಸೇವೆ, ಪ್ರಸಿದ್ಧಿಗಾಗಿ ನಿಮ್ಮ ಧನವ್ಯಯವಾಗಲಿದೆ. ಆರೋಗ್ಯದ ಬಗ್ಗೆ ದೈಹಿಕ ತಪಾಸಣೆ ತೋರಿಬಂದೀತು. ಸತತ ಸಾಧನೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಪೂರಕವಾಗಲಿದೆ. ಶುಭ ಸಂಖ್ಯೆ: 3 ಶುಭ ಬಣ್ಣ: ಬೂದು

ಧನು: ಘಟಿಸಬಹುದಾದ ಸಮಸ್ಯೆಗಳು ಹಂತ ಹಂತವಾಗಿ ತಮ್ಮಷ್ಟಕ್ಕೆ ತಾವೇ ಇಲ್ಲದಂತಾಗುತ್ತವೆ. ನಿರುದ್ಯೋಗಿಗಳು ಒದಗಿಬಂದ ಉದ್ಯೋಗ ಲಾಭವನ್ನು ಸ್ವೀಕರಿಸುವ ಮನೋಭಾವವನ್ನು ತೋರಿಸಬೇಕಾಗುತ್ತದೆ. ನಿಮ್ಮ ನೆರೆಹೊರೆಯವರ ಯೋಗಕ್ಷೇಮದಲ್ಲಿ ಆಸಕ್ತಿ ವಹಿಸುವ ಸಂದರ್ಭಗಳು ಬರಲಿವೆ. ಪ್ರತಿಷ್ಠಿತರ ಭೇಟಿ ಕಾರ್ಯಾನುಕೂಲಕ್ಕೆ ಸಾಧಕವಾಗಲಿದೆ. ದೈಹಿಕ ಹಾಗೂ ಮಾನಸಿಕ ದೃಢತೆ ಮುಂದಿನ ಮುನ್ನಡೆಗೆ ಸಹಕಾರಿಯಾಗಲಿದೆ. ಶುಭ ಸಂಖ್ಯೆ: 8 ಶುಭ ಬಣ್ಣ: ಕಂದು

ಮಕರ: ನಿರುದ್ಯೋಗಿಗಳಿಗೆ ಅನಿಶ್ಚಿತತೆ ದೂರವಾಗಲಿದೆ. ಆಕಸ್ಮಿಕ ರೀತಿಯಲ್ಲಿ ಖರ್ಚು-ವೆಚ್ಚಗಳು ಆತಂಕ ತಂದರೂ ಧನಾಗಮನದಿಂದ ಅನುಕೂಲವಾದೀತು. ದೈಹಿಕ, ಆರ್ಥಿಕ ಹಾಗೂ ಮಾನಸಿಕ ವಿಷಯಗಳನ್ನು ಸುವ್ಯವಸ್ಥೆಯಲ್ಲಿ ಇಟ್ಟುಕೊಳ್ಳಬೇಕಾದರೆ ಮರ್ಕಟ ಮನಸ್ಸನ್ನು ಕಡಿವಾಣ ಹಾಕಿ ಹಿಡಿದಿಟ್ಟುಕೊಳ್ಳಬೇಕಾಗುತ್ತದೆ. ಕೌಟುಂಬಿಕವಾಗಿ ಪರಸ್ಪರ ಕೊಡುವ ಮನೋಭಾವನೆಯಿಂದ ಒಂದು ಥರದ ಹೇಳಲಾಗದ ಸಮಾಧಾನ ಸಿಗಲಿದೆ. ಸಾರ್ವಜನಿಕ ಸೇವಾಕಾರ್ಯಗಳಲ್ಲಿ ಆಸಕ್ತಿ ತೋರಿಬಂದೀತು. ಶುಭ ಸಂಖ್ಯೆ: 7 ಶುಭ ಬಣ್ಣ: ಹಸಿರು

ಕುಂಭ: ಬದಲಾವಣೆ ಜೀವನದ ನಿಯಮ. ಬದಲಾಗುತ್ತಿರುವ ಬಾಳಿನೊಡನೆ ಹೊಂದಿಕೊಂಡು ಹೋಗಬೇಕಾಗುತ್ತದೆ. ಇಲ್ಲವಾದರೆ ಮಾನಸಿಕ ನೆಮ್ಮದಿಯನ್ನು ಕಳೆದುಕೊಂಡು ಕುಳಿತಿರಬೇಕಾಗುತ್ತದೆ. ಕಾರ್ಯಕ್ಷೇತ್ರದ ಜವಾಬ್ದಾರಿಯನ್ನು ನೀವೇ ಹೊರಬೇಕಾದೀತು. ಮನೆಯಲ್ಲಿ ಚಿಕ್ಕ ಮಕ್ಕಳ ತುಂಟ ನಗೆಯಿಂದ ನಿಮ್ಮ ಮನಸ್ಸು , ಹೃದಯ ಅರಳಬಹುದಾಗಿದೆ. ಹಿರಿಯರ ಬಾಳಿನ ಅನುಭವ ನಿಮಗೆ ಪಾಠವಾದೀತು. ಕನ್ಯಾಪಿತೃಗಳ ಪ್ರಯತ್ನಬಲ ಸದ್ಯದಲ್ಲೇ ಸಾಧಕವಾಗಲಿದೆ. ಶುಭ ಸಂಖ್ಯೆ: 5 ಶುಭ ಬಣ್ಣ: ನೀಲಿ

ಮೀನ: ಆರ್ಥಿಕವಾಗಿ ಸಂಪನ್ಮೂಲಗಳನ್ನು ಪ್ರಕಟಿಸಲು ಹೆಚ್ಚು ಹೆಚ್ಚು ಶ್ರಮವನ್ನು ಕೈಗೊಳ್ಳಬೇಕಾದೀತು. ಸಮತೋಲನ ಜೀವನವನ್ನು ನಡೆಸಿಕೊಂಡು ಹೋಗಲು ಅಧ್ಯಾತ್ಮಿಕತೆಯ ಚಿಂತನೆ ಅನಿವಾರ್ಯವಾದೀತು. ವಿದ್ಯಾರ್ಥಿಗಳ ಓದಿನ ಪ್ರಾಪ್ತಿ ಮುಂದಿನ ಭವಿಷ್ಯಕ್ಕೆ ಸಾಧಕವಾಗಲಿದೆ. ಕಾರ್ಯಕ್ಷೇತ್ರದಲ್ಲಿ ಅವಿವೇಕಿಗಳ ಮಾತಿಗೆ ಕಿವಿಗೊಡದಿರಿ. ನಿಮ್ಮ ಮಕ್ಕಳಿಂದ ನಿಮ್ಮ ಗೌರವವು ಹೆಚ್ಚಾಗಲಿದೆ. ಅವಿವಾಹಿತರಿಗೆ ಅದೃಷ್ಟಬಲವು ಖುಲಾಯಿಸಲಿದೆ. ಶುಭ ಸಂಖ್ಯೆ: 3 ಶುಭ ಬಣ್ಣ: ಹಳದಿ

Dina Bhavishya

ಡಾ.ಬಸವರಾಜ ಗುರೂಜಿ ವೈದಿಕ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಸಂಪರ್ಕ ಸಂಖ್ಯೆ: 9972848937

ಚಡ್ಡಿಯಲ್ಲಿ ಬಂದು ಒಣಗಲು ಹಾಕಿದ್ದ ಬಟ್ಟೆಗಳನ್ನು ಕದ್ದು ಓಡಿದ ಭೂಪ
ಚಡ್ಡಿಯಲ್ಲಿ ಬಂದು ಒಣಗಲು ಹಾಕಿದ್ದ ಬಟ್ಟೆಗಳನ್ನು ಕದ್ದು ಓಡಿದ ಭೂಪ
‘ಸು ಫ್ರಮ್ ಸೋ’ ನಿರ್ದೇಶಕರಿಗೆ ತಾಯಿಯಿಂದ ಸಿಕ್ತು ಬೆಸ್ಟ್ ಪ್ರತಿಕ್ರಿಯೆ
‘ಸು ಫ್ರಮ್ ಸೋ’ ನಿರ್ದೇಶಕರಿಗೆ ತಾಯಿಯಿಂದ ಸಿಕ್ತು ಬೆಸ್ಟ್ ಪ್ರತಿಕ್ರಿಯೆ
ಬಿಳಿ ಪಂಚೆ ಧರಿಸಿ ಚೋಳಪುರಂ ದೇವಸ್ಥಾನಕ್ಕೆ ಭೇಟಿ ಕೊಟ್ಟ ಪ್ರಧಾನಿ ಮೋದಿ
ಬಿಳಿ ಪಂಚೆ ಧರಿಸಿ ಚೋಳಪುರಂ ದೇವಸ್ಥಾನಕ್ಕೆ ಭೇಟಿ ಕೊಟ್ಟ ಪ್ರಧಾನಿ ಮೋದಿ
ಮೈಸೂರಿನಲ್ಲೇ ಡ್ರಗ್ಸ್​ ತಯಾರಿಕಾ ಘಟಕ: ಸ್ಫೋಟಕ ಅಂಶ ಬಾಯ್ಬಿಟ್ಟ ಪೆಡ್ಲರ್
ಮೈಸೂರಿನಲ್ಲೇ ಡ್ರಗ್ಸ್​ ತಯಾರಿಕಾ ಘಟಕ: ಸ್ಫೋಟಕ ಅಂಶ ಬಾಯ್ಬಿಟ್ಟ ಪೆಡ್ಲರ್
ಆರಂಭಿಕನಾಗಿ ಕಣಕ್ಕಿಳಿದು 6 ಸಿಕ್ಸ್ ಸಿಡಿಸಿದ ಗ್ಲೆನ್ ಮ್ಯಾಕ್ಸ್​ವೆಲ್
ಆರಂಭಿಕನಾಗಿ ಕಣಕ್ಕಿಳಿದು 6 ಸಿಕ್ಸ್ ಸಿಡಿಸಿದ ಗ್ಲೆನ್ ಮ್ಯಾಕ್ಸ್​ವೆಲ್
7 ರನ್​ಗಳ ಅವಶ್ಯಕತೆ: ಪಂದ್ಯದ ಫಲಿತಾಂಶ ಬದಲಿಸಿದ 2 ಅದ್ಭುತ ಕ್ಯಾಚ್​ಗಳು
7 ರನ್​ಗಳ ಅವಶ್ಯಕತೆ: ಪಂದ್ಯದ ಫಲಿತಾಂಶ ಬದಲಿಸಿದ 2 ಅದ್ಭುತ ಕ್ಯಾಚ್​ಗಳು
ಗೂಗಲ್ ಮ್ಯಾಪ್ ನಂಬಿ ಹೋದ ಕಾರು ಸೇತುವೆ ಮೇಲಿಂದ ಬಿತ್ತು, ಮುಂದೇನಾಯ್ತು?
ಗೂಗಲ್ ಮ್ಯಾಪ್ ನಂಬಿ ಹೋದ ಕಾರು ಸೇತುವೆ ಮೇಲಿಂದ ಬಿತ್ತು, ಮುಂದೇನಾಯ್ತು?
ಹರಿದ್ವಾರದ ಮಾನಸ ದೇವಿ ದೇವಸ್ಥಾನದಲ್ಲಿ ಕಾಲ್ತುಳಿತ, ಆರು ಮಂದಿ ಸಾವು
ಹರಿದ್ವಾರದ ಮಾನಸ ದೇವಿ ದೇವಸ್ಥಾನದಲ್ಲಿ ಕಾಲ್ತುಳಿತ, ಆರು ಮಂದಿ ಸಾವು
ಮನೆ ಕೌಂಪೌಂಡ್ ಹಾರಿ ಬಂದು ನಾಯಿ ಹೊತ್ತೊಯ್ದ ಚಿರತೆ
ಮನೆ ಕೌಂಪೌಂಡ್ ಹಾರಿ ಬಂದು ನಾಯಿ ಹೊತ್ತೊಯ್ದ ಚಿರತೆ
ಟೇಕ್ ಆಫ್ ಆಗುವಾಗ ಅಮೆರಿಕನ್ ಏರ್​​ಲೈನ್ಸ್ ವಿಮಾನದಲ್ಲಿ ಬೆಂಕಿ
ಟೇಕ್ ಆಫ್ ಆಗುವಾಗ ಅಮೆರಿಕನ್ ಏರ್​​ಲೈನ್ಸ್ ವಿಮಾನದಲ್ಲಿ ಬೆಂಕಿ