AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Weekly Horoscope ವಾರ ಭವಿಷ್ಯ: ಮುಂದಿನ ವಾರದ ಭವಿಷ್ಯದಲ್ಲಿ ಯಾರ್ಯಾರಿಗೆ ಒಳಿತು?

ಈ ವಾರದಲ್ಲಿ ಯಾವ ರಾಶಿಗೆ ಏನು ಫಲ? ಒಂದಿಡೀ ವಾರದ ಶುಭಾಶುಭ ಫಲಗಳ ವಿವರ ಇಲ್ಲಿದೆ. ಈ ವಾರ ಭವಿಷ್ಯವು ಗೋಚಾರ ಫಲವನ್ನು ಅವಲಂಬಿಸಿದೆ. ಸಮಸ್ಯೆಗಳಿಗೆ ಪರಿಹಾರದ ವಿವರಗಳನ್ನೂ ನೀಡಲಾಗಿದೆ. ನೆಮ್ಮದಿಯ ಬಾಳು ನಿಮ್ಮದಾಗಲಿ.

Weekly Horoscope ವಾರ ಭವಿಷ್ಯ: ಮುಂದಿನ ವಾರದ ಭವಿಷ್ಯದಲ್ಲಿ ಯಾರ್ಯಾರಿಗೆ ಒಳಿತು?
ಭವಿಷ್ಯ
TV9 Web
| Edited By: |

Updated on: Nov 07, 2021 | 9:46 AM

Share

ಈ ವಾರದಲ್ಲಿ ಯಾವ ರಾಶಿಗೆ ಏನು ಫಲ? ಒಂದಿಡೀ ವಾರದ ಶುಭಾಶುಭ ಫಲಗಳ ವಿವರ ಇಲ್ಲಿದೆ. ಈ ವಾರ ಭವಿಷ್ಯವು ಗೋಚಾರ ಫಲವನ್ನು ಅವಲಂಬಿಸಿದೆ. ಸಮಸ್ಯೆಗಳಿಗೆ ಪರಿಹಾರದ ವಿವರಗಳನ್ನೂ ನೀಡಲಾಗಿದೆ. ನೆಮ್ಮದಿಯ ಬಾಳು ನಿಮ್ಮದಾಗಲಿ.

ವಾರ ಭವಿಷ್ಯ

ತಾ.08-11-2021 ರಿಂದ ತಾ.14-11-2021 ರವರೆವಿಗೆ.

ಮೇಷ ರಾಶಿ: ಅನೇಕ ಅವಕಾಶಗಳು ಒದಗಿ ಬರಲಿವೆ. ಬಿಡುವಿನಲ್ಲಿ ಹಾಳು ಹರಟೆ ಹೊಡೆಯದೆ, ಸೂಕ್ತ ಕೆಲಸಗಳನ್ನು, ಕೈ ಕೆಲಸಗಳನ್ನು, ಅಥವಾ ಯಾವುದೇ ಉತ್ತಮ ಕಾರ್ಯಗಳನ್ನು ಮಾಡಿ. ನನ್ನಿಂದಾಗದು ಎಂಬ ಮನೋಭಾವ ಬಿಟ್ಟು ಶ್ರಮವಹಿಸಿ.ಮುಂದೆ ಸಾಗಿ. ಮಕ್ಕಳ  ದ್ಯಾಭ್ಯಾಸದಲ್ಲಿ ಪ್ರಗತಿ. ಹೊಸ ಕೆಲಸಕ್ಕೆ ಕೈ ಹಾಕುತ್ತಿರುವ ಮಹಿಳೆಯರಿಗೆ ಶುಭವಾಗಲಿದೆ. ಪಾಲುದಾರರಿಂದ ಶುಭವಾಗಲಿದೆ.

ಅದೃಷ್ಟ ಬಣ್ಣ: ಕೇಸರಿ ಶುಭ ಸಂಖ್ಯೆ : 9

ವೃಷಭ ರಾಶಿ: ಗುಟ್ಟಿನಿಂದ ಜೀವನ ಸುಖಮಯವಾಗುವುದು. ಯಾವುದೇ ಒತ್ತಡಕ್ಕೆ ಮಣಿದು ನಿಮ್ಮನ್ನು ನೀವು ನಾಶ ಮಾಡಿಕೊಳ್ಳಬೇಡಿ. ಮನಸ್ಸಿಟ್ಟು, ಮನಸಾರೆ.ಮುಂದೆ ಸಾಗಿದರೆ ನಿಮಗೇ ಒಳಿತು. ಯಾವುದೇ ಕಾರಣಕ್ಕೂ ಮೂರನೆಯವರ ಮಾತಿಕೆ ಕಿವಿಗೊಡದಿರಿ.ಆಮೀಷಕ್ಕೆ ಒಳಗಾಗಬೇಡಿ. ಹಣಕಾಸಿನ ವಿಚಾರದಲ್ಲಿಎಚ್ಚರಿಕೆಯಿಂದಿರಿ. ಒಳ್ಳೆಯ ನಿರ್ಧಾರ ನಿಮ್ಮದಾಗಲಿ. ಅದೃಷ್ಟ ಬಣ್ಣ: ಗುಲಾಬಿ ಶುಭ ಸಂಖ್ಯೆ : 3

ಮಿಥುನ ರಾಶಿ: ತವರು ಬಿಟ್ಟು ಬರುವಾಗ ಎಲ್ಲಾ ಹೆಣ್ಣುಮಕ್ಕಳಿಗೂ ಮನಸ್ಸು ಭಾರವಾಗುವುದು. ಸಹಜ. ಆದರೆ ಜೀವನ ಮುಂದೆ ಸಾಗಬೇಕಾದರೆ ಬದಲಾವಣೆ ಅಗತ್ಯ. ದೂರದ ಪ್ರಯಾಣ ಸಾಧ್ಯತೆ. ಆರೋಗ್ಯದಲ್ಲಿ ಏರುಪೇರಾಗುವುದರಿಂದ ಎಚ್ಚರಿಕೆ ಯಿಂದಿರಿ. ಮಕ್ಕಳ ಆಹಾರದ ಬಗ್ಗೆಯೂ ಎಚ್ಚರಿಕೆ ಇರಲಿ. ಅದೃಷ್ಟ ಬಣ್ಣ: ಹಸಿರು ಶುಭ ಸಂಖ್ಯೆ : 5

ಕಟಕ ರಾಶಿ: ಹಿತಶತೃಗಳು ಕಾಡಲಿದ್ದಾರೆ.  ನಿಮ್ಮನ್ನು ತುಳಿಯುವವರ ಬಗ್ಗೆ ಹೆಚ್ಚು ಚಿಂತೆ ಬೇಡ. ಏಕೆಂದರೆ ಅವರ ಬುದ್ದಿ ಮಟ್ಟವೂ ಕಾಲಿನ ಧೂಳಿಗೆ ಸಮನಾಗಿರುತ್ತದೆ. ಪ್ರಗತಿಯತ್ತ ಮನಸ್ಸು ಆಲೋಚಿಸಲಿ. ಆತ್ಮೀಯರೊಂದಿಗೆ ವ್ಯವಹಾರಕ್ಕೆ ಮುಂದಾಗುವಲ್ಲಿ ಅಗತ್ಯವಾಗಿ ಮುನ್ನೆಚ್ಚರಿಕೆ ಮಾಡಿಕೊಳ್ಳುವುದು ಸೂಕ್ತ. ಹೊಸ ಕೆಲಸಕ್ಕೆ ಒಳ್ಳೆಯ ಸಮಯ. ಅದೃಷ್ಟ ಬಣ್ಣ: ಬಿಳಿಪು ಶುಭ ಸಂಖ್ಯೆ : 6

ಸಿಂಹ ರಾಶಿ: ಪುಸ್ತಕ ಓದುವ ಹುಚ್ಚು ಇನ್ನಷ್ಟು ಹೆಚ್ಚಲಿದೆ. ಸ್ನೇಹಿತನನ್ನು ಈ ಮೂಲಕ ಕಾಣಲು ಇಚ್ಛಿಸುವ ನೀವು, ನಿಮ್ಮ ಮನಸ್ಸಿನ ನೋವು, ತಳಮಳ, ಗೊಂದಲಗಳನ್ನು ಕ್ರಮೇಣ ದೂರಾಗಲಿದೆ. ಮಕ್ಕಳವಿಚಾರದಲ್ಲಿ ಕೋಪಗೊಳ್ಳುವುದು ಬೇಡ. ಆದಷ್ಟು ಧ್ಯಾನ ಮಾಡಿ. ಬಂಧುಗಳ ಆಗಮನ ಸಾಧ್ಯತೆ. ಅದೃಷ್ಟ ಬಣ್ಣ: ಕೆಂಪು ಶುಭ ಸಂಖ್ಯೆ : 2

ಕನ್ಯಾ ರಾಶಿ: ಅದೃಷ್ಟ ಕೂಡಿಬರುವ ವಾರ. ನಿಮ್ಮ ಯೋಚನೆಗಳು ಬೇರೆಯವರಿಗೆ ಮನದಟ್ಟಾಗಬಹುದು, ಹಾಗಂತ ಅವರಿಂದ ಫಲ ನಿರೀಕ್ಷಿಸುವಂತಿಲ್ಲ. ಕೆಲ ವಿಚಾರಗಳಿಗೆ ನಿಮಗೆ ಈಗ ಪರೀಕ್ಷೆಗಳು ಎದುರಾಗಲಿದ್ದು, ಅದನ್ನುಹೇಗೆ ನಿಭಾಯಿಸುವಿರಿ ಎಂಬುದರ ಮೇಲೆ ರಿಸಲ್ಟ್ಇರುತ್ತೆ. ಮಕ್ಕಳಿಂದ ಪೋಷಕರಿಗೆ ಸಂತಸ ತರಲಿ. ಅದೃಷ್ಟ ಬಣ್ಣ: ಬೂದು ಶುಭ ಸಂಖ್ಯೆ : 7

ತುಲಾ ರಾಶಿ: ನಿಮ್ಮ ಶಕ್ತಿ, ಉತ್ಸಾಹ ಇನ್ನೂ ಹೆಚ್ಚಲಿದೆ. ನಾಯಕನ ಸ್ಥಾನಕ್ಕೇರುವ ಸಾಧ್ಯತೆ. ಹೊಸ ಕೆಲಸಕ್ಕೆ ಇದು ಸಕಾಲವಲ್ಲ. ಅದರಲ್ಲೂ ವ್ಯವಹಾರದ ವಿಚಾರಗಳಿಗೆ ಕೈ ಹಾಕಲೇಬೇಡಿ. ಕಷ್ಟದಿಂದ ಸತತ ಪ್ರಯತ್ನದಿಂದ ಸ್ವಲ್ಪ ಮಟ್ಟಿಗೆ ಹಣ ಉಳಿತಾಯ. ವಾರಂತ್ಯದಲ್ಲಿ ಅನಿರೀಕ್ಷಿತ ಬೆಳವಣಿಗೆಗಳು ಕಾಣಲಿದ್ದೀರಿ. ಅದೃಷ್ಟ ಬಣ್ಣ: ಹಳದಿ ಶುಭ ಸಂಖ್ಯೆ : 3

ವೃಶ್ಚಿಕ ರಾಶಿ: ಪ್ರೇಮ ನಿವೇದನೆಗೆ ಈವಾರ ತಕ್ಕುದಲ್ಲ. ಏಳುಬೀಳುಗಳು ಈ ವಾರ ಹೆಚ್ಚಿದ್ದು, ಶತ್ರಗಳ ಹತ್ತಿರ ಸುಳಿಯಲೇಬೇಡಿ. ಹೊಸ ಸ್ನೇಹಿತರ ಪರಿಚಯದಿಂದ ಸಂತೋಷ ಇರಲಿದ್ದು, ನಿಮ್ಮ ನಡುವೇಯೇ ಸ್ನೇಹಿತರಂತಿರುವ ಶತ್ರುಗಳ ಬಗ್ಗೆ ಎಚ್ಚರ ಅಗತ್ಯ. ಹೊಸ ಕೆಲಸಕ್ಕೆ ಉತ್ತಮ ವಾರ. ಅದೃಷ್ಟ ಬಣ್ಣ: ಕಂದು ಶುಭ ಸಂಖ್ಯೆ : 8

ಧನಸ್ಸು ರಾಶಿ: ಸಿಟ್ಟು, ಬಡಿತದಿಂದ ಎಲ್ಲವೂ ಸರಿಹೋಗುವುದಿಲ್ಲ. ಪ್ರೀತಿಯಿಂದ ಕೆಲ ಸಮಸ್ಯೆಗಳನ್ನು ಸರಿಪಡಿಸಿದರೆ ಅದು ಕಂಡಿತವಾಗಿಯೂ ಸರಿಹೋಗುತ್ತದೆ. ದೂರ ಪ್ರಯಾಣದಿಂದ ಆಯಾಸ. ಆರೋಗ್ಯದಲ್ಲಿ ಏರುಪೇರು.ಬಂಧುಗಳ ಕಿರಿಕಿರಿ.

ಅದೃಷ್ಟ ಬಣ್ಣ: ಗೋದಿ ಬಣ್ಣ ಶುಭ ಸಂಖ್ಯೆ : 7

ಮಕರ ರಾಶಿ: ಬದುಕಿನ ಸೂತ್ರಗಳು ನಾವಂದುಕೊಂಡಂತೆ ನಡೆಯುವುದಿಲ್ಲ. ಕ್ಷಣವೂ ಬದಲಾವಣೆಗಳು ಕಾಣುತ್ತವೆ. ಬದಲಾವಣೆ ಎನ್ನುವುದೇ ಜಗದ ನಿಯಮ ಅಲ್ಲವೇ. ಹಾಗಾಗಿ ಕಾಲ ಬಂದಂತೆ ಅದಕ್ಕೆತಕ್ಕಂತೆ ಸರಿ ನಿರ್ಧಾರದೊಂದಿಗೆ ಮುಂದೆ ಸಾಗಿ. ಅದೃಷ್ಟ ಬಣ್ಣ: ಕಪ್ಪು ಶುಭ ಸಂಖ್ಯೆ : 4

ಕುಂಭ ರಾಶಿ: ಇಷ್ಟು ದಿನದ ಪ್ರಯತ್ನಕ್ಕೆ ಉತ್ತಮ ರಿಸಲ್ಟ್ ಪಡೆದಿದ್ದೀರಿ. ಇನ್ನು ಮುಂದೆ ಬದುಕಿನಲ್ಲ ಬದಲಾವಣೆಯ ಪರ್ವ ಹರಿಯಲಿದೆ. ಅವಕಾಶಗಳು ಇನ್ನೂ ಹೆಚ್ಚಲಿದ್ದು ಆಶಾವಾದಿಗಳಾಗಿರಿ.ಉತ್ತಮ ರಿಸಲ್ಟ್‌ನಿಂದ ಹಿಗ್ಗದೆ,ಇದೇಪರಿಶ್ರಮವನ್ನು ಮುಂದುವರಿಸಿದರೆ ಇನ್ನೂ ಉತ್ತಮ ಸ್ಥಾನಕ್ಕೇರಬಹುದು. ಅದೃಷ್ಟ ಬಣ್ಣ: ತಿಳಿ ಹಸಿರು ಶುಭ ಸಂಖ್ಯೆ : 1

ಮೀನ ರಾಶಿ: ದೂರಾದವರನ್ನು ದೂರ ಇರಲು ಬಿಟ್ಟುಬಿಡಿ. ಅದನ್ನು ಸರಿ ಪಡಿಸುವುದಕ್ಕೆ ಮುಂದಾಗದಿರಿ. ಇದರಿಂದ ನಿಮ್ಮ ಆತ್ಮಗೌರವಕ್ಕೆ ಧಕ್ಕೆಯಾಗ ಬಹುದು. ನಿಮ್ಮ ಸ್ಥಾನದ ಬಗ್ಗೆ ಅವರಿಗೆ ಅರಿವಾದಾಗ ಅವರೇ ನಿಮ್ಮ ಬಳಿ ಬರುತ್ತಾರೆ. ಸಿಹಿ ಸುದ್ದಿ ಕೇಳುವಿರಿ. ವಿಧ್ಯಾರ್ಥಿಗಳಿಗೆ ಶುಭ ವಾರ. ಅದೃಷ್ಟ ಬಣ್ಣ: ಗುಲಾಬಿ ಶುಭ ಸಂಖ್ಯೆ : 9

Dina Bhavishya

ಡಾ.ಬಸವರಾಜ ಗುರೂಜಿ ವೈದಿಕ ಜ್ಯೋತಿಷಿ. ಸಂಪರ್ಕ ಸಂಖ್ಯೆ: 9972848937

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು