ಒಂದೇ ವಾರದಲ್ಲಿ 3 ಆನೆಗಳ ಕಳೇಬರ ಪತ್ತೆ: 20 ದಿನದೊಳಗೆ ಸೂಕ್ತ ಕಾರಣ ನೀಡುವಂತೆ ಆರ್​​ಎಫ್​ಓಗೆ ನೋಟಿಸ್

ಚಾಮರಾಜನಗರ ಜಿಲ್ಲೆಯ ಬಿಳಿಗಿರಿ ರಂಗನಾಥ ದೇವಾಲಯ ಹುಲಿಸಂರಕ್ಷಿತ ಪ್ರದೇಶ ಜೀವವೈವಿಧ್ಯತೆಗಳ ತಾಣ. ಹುಲಿ, ಆನೆ, ಕರಡಿ, ಕಾಡೆಮ್ಮೆ, ಚಿರತೆ ಜಿಂಕೆ ಮೊದಲಾದ ವನ್ಯಜೀವಿಗಳ ಆವಾಸಸ್ಥಾನವೂ ಆಗಿರುವ ಈ ಅರಣ್ಯದಲ್ಲಿ ಇತ್ತೀಚೆಗೆ ನಡೆದ ಆನೆಗಣತಿ ಪ್ರಕಾರ 619 ಆನೆಗಳಿವೆ. ಈ ದಟ್ಟಾರಣ್ಯದಲ್ಲಿ ಕೇವಲ ಮೂರ್ನಾಲ್ಕು ದಿನಗಳ ಅಂತರದಲ್ಲಿ ಮೂರು ಆನೆಗಳ ಕಳೇಬರಗಳು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಒಂದೇ ವಾರದಲ್ಲಿ 3 ಆನೆಗಳ ಕಳೇಬರ ಪತ್ತೆ: 20 ದಿನದೊಳಗೆ ಸೂಕ್ತ ಕಾರಣ ನೀಡುವಂತೆ ಆರ್​​ಎಫ್​ಓಗೆ ನೋಟಿಸ್
ಒಂದೇ ವಾರದಲ್ಲಿ 3 ಆನೆಗಳ ಕಳೇಬರಹ ಪತ್ತೆ: 20 ದಿನಗಳ ಒಳಗೆ ಸೂಕ್ತ ಕಾರಣ ನೀಡುವಂತೆ ಆರ್​​ಎಫ್​ಓಗೆ ನೋಟಿಸ್
Follow us
| Updated By: Digi Tech Desk

Updated on:Sep 04, 2024 | 5:29 PM

ಚಾಮರಾಜನಗರ, ಸೆಪ್ಟೆಂಬರ್​​ 04: ಬಿಳಿಗಿರಿ ರಂಗನಾಥ ದೇವಾಲಯ ಹುಲಿ (ಬಿ.ಆರ್‌.ಟಿ) ಸಂರಕ್ಷಿತ ಪ್ರದೇಶದಲ್ಲಿ ಕೇವಲ ಮೂರ್ನಾಲ್ಕು ದಿನಗಳ ಅಂತರದಲ್ಲಿ ಮೂರು ಆನೆಗಳ (elephants) ಕಳೇಬರ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಒಂದು ಆನೆಯಂತು ಸತ್ತು ಏಳೆಂಟು ತಿಂಗಳ ನಂತರ ಪತ್ತೆಯಾಗಿರುವುದು ಅರಣ್ಯ ಇಲಾಖೆಯ ಕಾರ್ಯವೈಖರಿಯನ್ನೇ ಪ್ರಶ್ನಿಸುವಂತಿದೆ‌. ಹಾಗಿದ್ದರೆ ಅರಣ್ಯದೊಳಗೆ ಸಮರ್ಪಕ ಗಸ್ತು ನಡೆಯುತ್ತಿಲ್ಲವೇ? ವನ್ಯಜೀವಿಗಳ ಬೇಟೆ ಕಾಡುಗಳ್ಳತನ ನಡೆಯುತ್ತಿದೆಯಾ ಎಂಬ ಪ್ರಶ್ನೆ ಕಾಡುತ್ತಿದೆ.

ಮೂರ್ನಾಲ್ಕು ದಿನಗಳ ಅಂತರದಲ್ಲಿ ಮೂರು ಆನೆಗಳ ಕಳೇಬರಗಳು ಪತ್ತೆ

ಜಿಲ್ಲೆಯ ಬಿ.ಆರ್‌.ಟಿ ಹುಲಿಸಂರಕ್ಷಿತ ಪ್ರದೇಶ ಜೀವವೈವಿಧ್ಯತೆಗಳ ತಾಣ. ಹುಲಿ, ಆನೆ, ಕರಡಿ, ಕಾಡೆಮ್ಮೆ, ಚಿರತೆ ಜಿಂಕೆ ಮೊದಲಾದ ವನ್ಯಜೀವಿಗಳ ಆವಾಸಸ್ಥಾನವೂ ಆಗಿರುವ ಈ ಅರಣ್ಯದಲ್ಲಿ ಇತ್ತೀಚೆಗೆ ನಡೆದ ಆನೆಗಣತಿ ಪ್ರಕಾರ 619 ಆನೆಗಳಿವೆ. ಈ ದಟ್ಟಾರಣ್ಯದಲ್ಲಿ ಕೇವಲ ಮೂರ್ನಾಲ್ಕು ದಿನಗಳ ಅಂತರದಲ್ಲಿ ಮೂರು ಆನೆಗಳ ಕಳೇಬರಗಳು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಚಾಮರಾಜನಗರ: ಮತ್ತೊಂದು ಆನೆಯ ಕಳೇಬರ ಪತ್ತೆ; ಅರಣ್ಯಾಧಿಕಾರಿಗಳಲ್ಲಿ ಮೂಡಿದ ಅನುಮಾನ

ಬೈಲೂರು ವಲಯದ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಎರಡು ಹಾಗೂ ಯಳಂದೂರು ವಲಯದಲ್ಲಿ ಒಂದು ಆನೆಯ ಕಳೇಬರಹ ಪತ್ತೆಯಾಗಿದ್ದು ಈ ಪೈಕಿ ಬೈಲೂರು ವಲಯದಲ್ಲಿ ಒಂದು ಆನೆ ಸತ್ತು ಏಳೆಂಟು ತಿಂಗಳೇ ಆಗಿದೆ. ಮತ್ತೊಂದು ಆನೆ ಸತ್ತು ಇಪ್ಪತ್ತು ದಿನಗಳ ಮೇಲಾಗಿದೆ. ಹಾಗಯೇ ಯಳಂದೂರು ವಲಯದಲ್ಲಿ ಪತ್ತೆಯಾಗಿರುವ ಆನೆ ಮೃತಪಟ್ಟು ಹಲವು ಒಂದುವಾರ ಕಳೆದಿದೆ. ಎರಡು ಆನೆಗಳ ದಂತ ಹಾಗೂ ಅಸ್ತಿಪಂಜರಗಳು ಕಂಡುಬಂದಿವೆ.

ಮೇಲ್ನೋಟಕ್ಕೆ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಕರ್ತವ್ಯಲೋಪ 

ಒಂದು ಆನೆಯ ದೇಹ ಸಂಪೂರ್ಣ ಕೊಳೆತು ಹೋಗಿದ್ದು 8 ತಿಂಗಳು ಕಳೆದಿದೆ ಎಂಬ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ. ಇಷ್ಟು ದಿನಗಳಾದರೂ ಅರಣ್ಯ ಇಲಾಖೆಯ ಗಮನಕ್ಕೆ ಬಾರದೆ ಇರುವುದು ಅನುಮಾನಕ್ಕೆ ಎಡೆ ಮಾಡಿ ಕೊಟ್ಟಿದೆ. ಅರಣ್ಯ ಇಲಾಖಾ ಸಿಬ್ಬಂದಿಯ ಗಸ್ತಿನ ಬಗ್ಗೆ ಸಾಕಷ್ಟು ಅನುಮಾನ ವ್ಯಕ್ತವಾಗಿದೆ. ಅರಣ್ಯ ಸಿಬ್ಬಂದಿ ಸಮರ್ಪಕವಾಗಿ ಗಸ್ತು ನಡೆಸಿದ್ದರೆ, ಆನೆಗಳು ಮೃತಪಟ್ಟಿರುವುದು ಕಂಡುಬರುತ್ತಿತ್ತು. ಆದರೆ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಇಲ್ಲಿ ಕರ್ತವ್ಯಲೋಪ ಎಸಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ.

ಈ ಆನೆಗಳು ಮೇಲ್ನೋಟಕ್ಕೆ ಸ್ವಾಭಾವಿಕವಾಗಿ ಮೃತಪಟ್ಟಿವೆ ಎಂದು ಹೇಳಲಾಗುತ್ತಿದ್ದರು ಮರಣೋತ್ತರ ಪರೀಕ್ಷಾ ವರದಿ ಬಂದ ನಂತರವಷ್ಟೇ ನಿಖರ ಕಾರಣ ಗೊತ್ತಾಗಲಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಇದೀಗ ತಾನೆ ವರ್ಗಾವಣೆ ಆಗಿ ಬಂದಿರುವ ಡಿಸಿಎಫ್ ಶ್ರೀಪತಿ ತನಿಖೆ ನಡೆಸಲು ಮುಂದಾಗಿದ್ದಾರೆ. ಬೈಲೂರು ವಲಯದ ಆರ್.ಓ.ಎಫ್ ಹಾಗೂ ಸಿಬ್ಬಂದಿಗಳಿಗೆ ನೋಟಿಸ್ ಜಾರಿ ಮಾಡಿದ್ದು ಗಸ್ತಿನ ಕುರಿತು 20 ದಿನಗಳ ಒಳಗಡೆ ಸೂಕ್ತ ವರದಿ ನೀಡುವಂತೆ ಸೂಚಿಸಿದ್ದಾರೆ. ಈಗಾಗಲೇ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಆನೆಗಳ ಕಳೇಬರಹದ ಸ್ಯಾಂಪಲ್​ನ ಎಫ್.ಎಸ್.ಎಲ್​ಗೆ ಕಳುಹಿಸಲಾಗಿದ್ದು ವರದಿ ಬಂದ ಬಳಿಕ ಆನೆಗಳ ಸಾವಿಗೆ ನಿಖರ ಕಾರಣ ತಿಳಿಯಲಿದೆ.

ಇದನ್ನೂ ಓದಿ: ಮೈಸೂರು ದಸರಾ ಗಜಪಡೆಯಲ್ಲಿ ಗಮನ ಸೆಳೆಯುತ್ತಿವೆ ಬಂಡೀಪುರದ ಮೂರು ಆನೆಗಳು! ಏನಿವುಗಳ ವಿಶೇಷ?

ಅರಣ್ಯ ಇಲಾಖೆಯಲ್ಲಿ ಶೇಕಡಾ 30 ರಷ್ಟು ಸಿಬ್ಬಂದಿ ಕೊರತೆ ಇದ್ದು ಈ ಕಾರಣದಿಂದಲೇ ಸಮರ್ಪಕ ಗಸ್ತು ನಡೆಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿಯೇ ಅರಣ್ಯದೊಳಗೆ ನಡೆಯುವ ಯಾವುದೇ ಬೆಳವಣಿಗೆ ಇಲಾಖೆಯ ಗಮನಕ್ಕೆ ಬಾರದೆ ಹೋಗುವ ಸಾಧ್ಯತೆಗಳು ಇವೆ‌. ಹಾಗಾಗಿ ಸಾಕಷ್ಟು ಸಿಬ್ಬಂದಿ ನೇಮಕ ಮಾಡುವ ಮೂಲಕ ಅರಣ್ಯ ಸಂರಕ್ಷಣೆಗೆ ಇನ್ನಷ್ಟು ಪರಿಣಾಮಕಾರಿ ಕ್ರಮ ಕೈಗೊಳ್ಳುವ ಅಗತ್ಯ ಇದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:22 pm, Wed, 4 September 24

ಸಿನಿಮಾ ಬಿಡುಗಡೆ ಸಮಯದಲ್ಲಿ ನಟ ಕಿರಣ್ ರಾಜ್​ ಕಾರು ಅಪಘಾತ ಆಗಿದ್ದು ನಿಜವೇ?
ಸಿನಿಮಾ ಬಿಡುಗಡೆ ಸಮಯದಲ್ಲಿ ನಟ ಕಿರಣ್ ರಾಜ್​ ಕಾರು ಅಪಘಾತ ಆಗಿದ್ದು ನಿಜವೇ?
ಸಿಎಂ ಕುರ್ಚಿ ಖಾಲಿ ಇಲ್ಲ: ನಾನೇ ಮುಂದುವರಿಯುತ್ತೇನೆ ಎಂದ ಸಿದ್ದರಾಮಯ್ಯ
ಸಿಎಂ ಕುರ್ಚಿ ಖಾಲಿ ಇಲ್ಲ: ನಾನೇ ಮುಂದುವರಿಯುತ್ತೇನೆ ಎಂದ ಸಿದ್ದರಾಮಯ್ಯ
ವಿಡಿಯೋ: ಊರಿನ ಗಣೇಶೋತ್ಸವದಲ್ಲಿ ಭಾಗಿಯಾದ ರಕ್ಷಿತ್ ಶೆಟ್ಟಿ
ವಿಡಿಯೋ: ಊರಿನ ಗಣೇಶೋತ್ಸವದಲ್ಲಿ ಭಾಗಿಯಾದ ರಕ್ಷಿತ್ ಶೆಟ್ಟಿ
ಬೈಕ್​ನಲ್ಲಿ ಹೋಗುತ್ತಿದ್ದಾಗ ಚರಂಡಿಗೆ ಬಿದ್ದ ವ್ಯಕ್ತಿ; ವಿಡಿಯೋ ವೈರಲ್
ಬೈಕ್​ನಲ್ಲಿ ಹೋಗುತ್ತಿದ್ದಾಗ ಚರಂಡಿಗೆ ಬಿದ್ದ ವ್ಯಕ್ತಿ; ವಿಡಿಯೋ ವೈರಲ್
ಮಹಿಳೆಗೆ CM ಯೋಗ; ಕೋಡಿಶ್ರೀ ಭವಿಷ್ಯದ ಬಗ್ಗೆ ಹೆಬ್ಬಾಳ್ಕರ್ ಗರಂ ಆಗಿದ್ಯಾಕೆ?
ಮಹಿಳೆಗೆ CM ಯೋಗ; ಕೋಡಿಶ್ರೀ ಭವಿಷ್ಯದ ಬಗ್ಗೆ ಹೆಬ್ಬಾಳ್ಕರ್ ಗರಂ ಆಗಿದ್ಯಾಕೆ?
ಸಿಎಂ ಬದಲಾವಣೆ ಆಗುವುದಾದರೆ ನಾನೂ ಸ್ಪರ್ಧಿಸುವೆ: ಶಾಮನೂರು ಶಿವಶಂಕರಪ್ಪ
ಸಿಎಂ ಬದಲಾವಣೆ ಆಗುವುದಾದರೆ ನಾನೂ ಸ್ಪರ್ಧಿಸುವೆ: ಶಾಮನೂರು ಶಿವಶಂಕರಪ್ಪ
ಹಾಸನ: ಊರಿಗೆ ನುಗ್ಗಿದ ಗಜಪಡೆ, ದಿಕ್ಕಾಪಾಲಾಗಿ ಓಡಿದ ಗ್ರಾಮಸ್ಥರು
ಹಾಸನ: ಊರಿಗೆ ನುಗ್ಗಿದ ಗಜಪಡೆ, ದಿಕ್ಕಾಪಾಲಾಗಿ ಓಡಿದ ಗ್ರಾಮಸ್ಥರು
‘ನಾನು ಆರೋಗ್ಯವಾಗಿದ್ದೇನೆ’; ಹೆಲ್ತ್​ ಅಪ್​ಡೇಟ್ ಕೊಟ್ಟ ಕಿರಣ್ ರಾಜ್
‘ನಾನು ಆರೋಗ್ಯವಾಗಿದ್ದೇನೆ’; ಹೆಲ್ತ್​ ಅಪ್​ಡೇಟ್ ಕೊಟ್ಟ ಕಿರಣ್ ರಾಜ್
ಆ್ಯಪಲ್ ಐಫೋನ್ 16 ಪ್ರೊ ಮ್ಯಾಕ್ಸ್ ರೇಟ್ ಕೇಳಿದ್ರೆ ಬೆಚ್ಚಿ ಬೀಳ್ತಿರಾ!!
ಆ್ಯಪಲ್ ಐಫೋನ್ 16 ಪ್ರೊ ಮ್ಯಾಕ್ಸ್ ರೇಟ್ ಕೇಳಿದ್ರೆ ಬೆಚ್ಚಿ ಬೀಳ್ತಿರಾ!!
7 ಸಿಕ್ಸ್​ಗಳೊಂದಿಗೆ ಸ್ಪೋಟಕ ಹಾಫ್ ಸೆಂಚುರಿ ಸಿಡಿಸಿದ ಪೊಲಾರ್ಡ್
7 ಸಿಕ್ಸ್​ಗಳೊಂದಿಗೆ ಸ್ಪೋಟಕ ಹಾಫ್ ಸೆಂಚುರಿ ಸಿಡಿಸಿದ ಪೊಲಾರ್ಡ್