ಕೊರೊನಾ ಅಟ್ಟಹಾಸದ ನಡುವೆ ಸರ್ಕಾರಕ್ಕೆ ಶಾಕ್, ರಾಜೀನಾಮೆ ಪತ್ರ ಹಿಡಿದ ವೈದ್ಯರು

Ayesha Banu

|

Updated on:May 21, 2020 | 4:03 PM

ಹಾಸನ: ಕೊರೊನಾ ಅಟ್ಟಹಾಸದ ನಡುವೆಯೇ ಸರ್ಕಾರಕ್ಕೆ ವೈದ್ಯರು ಶಾಕ್ ಕೊಟ್ಟಿದ್ದಾರೆ. ರಾಜ್ಯದ 550 ಗುತ್ತಿಗೆ ವೈದ್ಯರು ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಸೇವೆಯಲ್ಲಿದ್ದರೂ ಖಾಯಂ ಮಾಡಿಲ್ಲ ಹಾಗೂ ವೇತನ ಹೆಚ್ಚಳ ಮಾಡಿಲ್ಲ, ಸೇವಾ ಭದ್ರತೆ ವದಗಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮೂಹಿಕ ರಾಜೀನಾಮೆ ನೀಡುವ ಮೂಲಕ ಸರ್ಕಾರಕ್ಕೆ ಒತ್ತಡ ಹೇರಲು ವೈದ್ಯರು ಮುಂದಾಗಿದ್ದಾರೆ. ಹಾಸನದ 35 ವೈದ್ಯರು ಸೇರಿ ರಾಜ್ಯದ 550 ವೈದ್ಯರ ಈ ರೀತಿಯ ನಿರ್ಧಾರ ಕೈಗೊಂಡಿದ್ದು, ಕೂಡಲೆ ತಮ್ಮ ಬೇಡಿಕೆ ಈಡೇರಿಕೆಗೆ […]

ಕೊರೊನಾ ಅಟ್ಟಹಾಸದ ನಡುವೆ ಸರ್ಕಾರಕ್ಕೆ ಶಾಕ್, ರಾಜೀನಾಮೆ ಪತ್ರ ಹಿಡಿದ ವೈದ್ಯರು

ಹಾಸನ: ಕೊರೊನಾ ಅಟ್ಟಹಾಸದ ನಡುವೆಯೇ ಸರ್ಕಾರಕ್ಕೆ ವೈದ್ಯರು ಶಾಕ್ ಕೊಟ್ಟಿದ್ದಾರೆ. ರಾಜ್ಯದ 550 ಗುತ್ತಿಗೆ ವೈದ್ಯರು ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಸೇವೆಯಲ್ಲಿದ್ದರೂ ಖಾಯಂ ಮಾಡಿಲ್ಲ ಹಾಗೂ ವೇತನ ಹೆಚ್ಚಳ ಮಾಡಿಲ್ಲ, ಸೇವಾ ಭದ್ರತೆ ವದಗಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮೂಹಿಕ ರಾಜೀನಾಮೆ ನೀಡುವ ಮೂಲಕ ಸರ್ಕಾರಕ್ಕೆ ಒತ್ತಡ ಹೇರಲು ವೈದ್ಯರು ಮುಂದಾಗಿದ್ದಾರೆ.

ಹಾಸನದ 35 ವೈದ್ಯರು ಸೇರಿ ರಾಜ್ಯದ 550 ವೈದ್ಯರ ಈ ರೀತಿಯ ನಿರ್ಧಾರ ಕೈಗೊಂಡಿದ್ದು, ಕೂಡಲೆ ತಮ್ಮ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದ್ದಾರೆ. ಈ ಹಿಂದೆ 3 ವರ್ಷ ಸೇವೆ ಮಾಡಿದ ಗುತ್ತಿಗೆ ವೈದ್ಯರನ್ನು ಖಾಯಂ ಮಾಡಲಾಗುತ್ತಿತ್ತು. ಅದೇ ನಿಯಮ ಅನುಸರಿಸಿ ಸೇವೆ ಖಾಯಂ ಮಾಡಿ ಎಂದಿದ್ದಾರೆ.

ತಮ್ಮ ಬೇಡಿಕೆಗೆ ಸರ್ಕಾರ ಸ್ಪಂದಿಸದಿರೋದ್ರಿಂದ ಮನನೊಂದು ರಾಜೀನಾಮೆ ನೀಡೋದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಹಾಗೂ ಕೊವಿಡ್ ಕಂಟಕದ ವೇಳೆ ಜೀವದ ಹಂಗು ತೊರೆದು ಎಲ್ಲ ವೈದ್ಯರು ಖಾಯಂ ವೈದ್ಯರಷ್ಟೇ ಶ್ರದ್ಧೆಯಿಂದ ಕರ್ತವ್ಯ ಮಾಡುತ್ತಿದ್ದೇವೆ. ಆದರೂ ತಮ್ಮನ್ನ ಕಡೆಗಣಿಸಲಾಗಿದೆ ಎಂದು ವೈದ್ಯರು ರಾಜೀನಾಮೆ ಪತ್ರದಲ್ಲಿ ತಮ್ಮ ನೋವನ್ನು ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada