AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೀಮಂತ ಮುಗಿಸಿ ಹೆಂಡ್ತಿಯನ್ನು ತವರು ಮನೆಗೆ ಕಳಿಸಿಕೊಟ್ಟು ಪತಿ ನಾಪತ್ತೆ, 1 ವರ್ಷವಾದರೂ ಸುಳಿವಿಲ್ಲ

ಸೀಮಂತ ಮಾಡಿ ಹೆಂಡತಿಯನ್ನು ತವರು ಮನೆಗೆ ಕಳುಹಿಸಿಕೊಟ್ಟ ಬಳಿಕ ಪತಿ ನಾಪತ್ತೆಯಾಗಿದ್ದಾರೆ. ಒಂದೂ ವರ್ಷವಾದರೂ ಗಂಡ ಮನೆಗೆ ಬಂದಿಲ್ಲವೆಂದು ಪತ್ನಿ ಕಂಗಾಲಾಗಿದ್ದಾರೆ.

ಸೀಮಂತ ಮುಗಿಸಿ ಹೆಂಡ್ತಿಯನ್ನು ತವರು ಮನೆಗೆ ಕಳಿಸಿಕೊಟ್ಟು ಪತಿ ನಾಪತ್ತೆ, 1 ವರ್ಷವಾದರೂ ಸುಳಿವಿಲ್ಲ
ಚಂದ್ರಶೇಖರ್, ಶೋಭಾ
ಮಹೇಶ್ ಇ, ಭೂಮನಹಳ್ಳಿ
ಮಹೇಶ್ ಇ, ಭೂಮನಹಳ್ಳಿ | Edited By: |

Updated on: Aug 03, 2023 | 10:54 AM

Share

ತುಮಕೂರು, (ಆಗಸ್ಟ್ 03): ಸೀಮಂತ ಮುಗಿಸಿ ಹೆಂಡತಿಯನ್ನು ತವರು ಮನೆಗೆ ಕಳಿಸಿಕೊಟ್ಟಿದ ಗಂಡ ನಾಪತ್ತೆಯಾಗಿದ್ದಾನೆ. ಇದೀಗ ಮತ್ತೊಂದೆಡೆ ಹೆಂಡತಿಗೆ ಮಗು ಜನಿಸಿದ್ದರೂ ಮುಖ ನೋಡುವುದಕ್ಕೂ ಬಂದಿಲ್ಲ. ಚಂದ್ರಶೇಖರ್ ಉಪನ್ಯಾಸಕರಾಗಿದ್ದರೆ, ಶೋಭಾ ಎಂಟೆಕ್ ಪದವೀಧರೆಯಾಗಿದ್ದು, ಶೋಭಾ ಸೀಮಂತ ಮುಗಿಸಿಕೊಂಡು ತವರು ಮನೆಗೆ ತೆರಳಿದ ಬಳಿಕ ಪತಿ ಚಂದ್ರಶೇಖರ್ ಕಾಣೆಯಾಗಿದ್ದಾನೆ. ಇದರಿಂದ ಕಂಗಾಲಾಗಿರುವ ಮಹಿಳೆ, ಈ ಬಗ್ಗೆ ತುಮಕೂರು ಜಿಲ್ಲೆ ಶಿರಾ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಕೊನೆಗೆ 9 ತಿಂಗಳ ಹಸುಗೂಸಿನೊಂದಿಗೆ ಗಂಡನ ಮನೆ ಮುಂದೆ ಧರಣಿ ಕಳಿತ್ತಿದ್ದಾಳೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಗಂಡ-ಹೆಂಡ್ತಿ ಜಗಳ: ಗಲಾಟೆಯಲ್ಲಿ ಪತ್ನಿ ಕೈ ಬೆರಳನ್ನೇ ಕಚ್ಚಿತಿಂದ ಪತಿ, ದೂರು ದಾಖಲು

ಪತ್ನಿಯನ್ನು ನೋಡಲೂ ಹೋಗಿಲ್ಲ. ಈಗ ಮಗು ಜನಿಸಿದರೂ ಮುಖ ನೋಡಲು ಹೋಗಿಲ್ಲ. ಒಂದು ವರ್ಷ ಕಳೆದರೂ ಪತ್ತೆ ಇಲ್ಲ. ಇದರಿಂದ ಆತಂಕಗೊಂಡ ಶೋಭಾ, ಮಹಿಳಾ ಸಾಂತ್ವನ ಕೇಂದ್ರ ಹಾಗೂ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಒಂದು ವರ್ಷವಾದರೂ ಗಂಡ ಸಿಗುತ್ತಿಲ್ಲ. ಇನ್ನು ಗಂಡನ ಮನೆಗೆ ಹೋದರೆ ಅತ್ತೆ ಮಾವ ಕೂಡ ಮನೆಯೊಳಗೆ ಬಿಟ್ಟುಕೊಳ್ಳುತ್ತಿಲ್ಲ. ನಾನು ಬಂದ ಕೂಡಲೇ ಮನೆ ಬೀಗ ಹಾಕಿಕೊಂಡು ಅತ್ತೆ-ಮಾವ ಕೂಡ ಎಸ್ಕೇಪ್ ಆಗುತ್ತಾರೆ ಎಂದು ಶೋಭಾ ಅಳಲು ತೋಡಿಕೊಂಡಿದ್ದಾರೆ.

ಇದೀಗ ಶೋಭಾ, ಸದ್ಯ 9 ತಿಂಗಳ ಹಸುಗೂಸಿನೊಂದಿಗೆ ಗಂಡನ ಮನೆ ಮುಂದೆ ಧರಣಿ ಕುಳಿತುಕೊಂಡಿದ್ದು, ತನ್ನ ಪತಿ ಸಿಗುವವರೆಗೂ ಧರಣಿಯಿಂದ ಮೇಲೇಳಲ್ಲ ಎನ್ನುತ್ತಿದ್ದಾರೆ. ಇನ್ನು ಶೋಭಾಗೆ ತಂದೆ ತಾಯಿ ಸಹ ಸಾಥ್ ನೀಡಿದ್ದಾರೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Follow Us
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ