ಬೆಂಗಳೂರು ಗ್ರಾಮಾಂತರ: ರಾಜಧಾನಿ ಪಕ್ಕದಲ್ಲೇ ಸುಮಾರು 5 ವರ್ಷಗಳಿಂದ ಜೀತ ಪದ್ದತಿಯಲ್ಲಿ ಕೆಲಸಕ್ಕಿದ್ದ 29 ಕಾರ್ಮಿಕರನ್ನು ರಕ್ಷಣೆ ಮಾಡಿದ್ದಾರೆ.
ಆನೇಕಲ್ ತಾಲೂಕಿನ ಕೂಗೂರು ಗ್ರಾಮದ ನಾರಾಯಣ ರೆಡ್ಡಿ ಎಂಬುವವರ ನೀಲಗಿರಿ ತೋಪಿನಲ್ಲಿ ಜೀತ ಪದ್ದತಿಯಲ್ಲಿ ಕೆಲಸಕ್ಕಿದ್ದರು. ಇವರು ತಮಿಳುನಾಡಿನ ಕೃಷ್ಣಗಿರಿಯ ಮೂಲದ ಕಾರ್ಮಿಕರಾಗಿದ್ದಾರೆ. ಹೇಳಿದ ಕೆಲಸ ಮಾಡಿಸಿಕೊಂಡು ಊಟ, ಬಟ್ಟೆ ನೀಡದೆ ಮಾಲೀಕ ನಾರಾಯಣ ರೆಡ್ಡಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.
ಖಚಿತ ಮಾಹಿತಿ ಮೇರೆಗೆ ಆನೇಕಲ್ ತಹಶೀಲ್ದಾರ್ ಹಾಗೂ ಸರ್ಜಾಪುರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಜೀತದಾಳುಗಳನ್ನು ರಕ್ಷಣೆ ಮಾಡಿದ್ದಾರೆ.