ಗರ್ಭಪಾತ ದಂಧೆ; ಬಾಗಲಕೋಟೆ ಜಿಲ್ಲೆಯ ಪ್ರತಿಷ್ಟಿತ ಆಸ್ಪತ್ರೆಗಳ ಮೇಲೆ ಕೇಂದ್ರ ತಂಡ ದಾಳಿ

ಬಾಗಲಕೋಟೆ ಜಿಲ್ಲೆಯಲ್ಲಿ ಸದ್ದಿಲ್ಲದೆ ಗರ್ಭಪಾತ ದಂಧೆ ವ್ಯಾಪಕವಾಗಿ ನಡೆಯುತ್ತಿದೆ. ಇತ್ತೀಚೆಗೆ ಆಯಾ ಒಬ್ಬಳು ಮಹಾರಾಷ್ಟ್ರ ಮೂಲದ‌ ಮಹಿಳೆಯ ಗರ್ಭಪಾತ ಮಾಡಿ ಅವಳ ಸಾವಿಗೆ ‌ಕಾರಣಳಾಗಿದ್ದಳು. ಆ ಪಾತಕಿ ಈಗ ಅಂದರ್ ಆಗಿದ್ದಾಳೆ. ಅದು ಮಾಸುವ ಮುನ್ನವೇ ಮತ್ತಿಬ್ಬರು ವೈದ್ಯೆಯರು ಗರ್ಭಪಾತ ದಂಧೆ ಸುಳಿಯಲ್ಲಿ ಸಿಲುಕಿದ್ದಾರೆ. ಖಚಿತ‌ ಮಾಹಿತಿ‌ ಮೇರೆಗೆ ಕೇಂದ್ರ ತಂಡ ದಾಳಿ ನಡೆಸಿದೆ.

ಗರ್ಭಪಾತ ದಂಧೆ; ಬಾಗಲಕೋಟೆ ಜಿಲ್ಲೆಯ ಪ್ರತಿಷ್ಟಿತ ಆಸ್ಪತ್ರೆಗಳ ಮೇಲೆ ಕೇಂದ್ರ ತಂಡ ದಾಳಿ
ಬಾಗಲಕೋಟೆ ಜಿಲ್ಲೆಯ ಪ್ರತಿಷ್ಟಿತ ಆಸ್ಪತ್ರೆಗಳ ಮೇಲೆ ಕೇಂದ್ರ ತಂಡ ದಾಳಿ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 24, 2024 | 10:13 PM

ಬಾಗಲಕೋಟೆ, ಜು.24: ಬಾಗಲಕೋಟೆ ಜಿಲ್ಲೆಯ ಮುಧೋಳ ಹಾಗೂ ಬಾದಾಮಿ ಪಟ್ಟಣದಲ್ಲಿನ ಪ್ರತಿಷ್ಟಿತ ಆಸ್ಪತ್ರೆಗಳ ಆಸ್ಪತ್ರೆಗಳ ಮೇಲೆ ದೆಹಲಿಯ ಕೇಂದ್ರ ಪ್ರಸವಪೂರ್ವ ಭ್ರೂಣ ಪತ್ತೆ ನಿಷೇಧ ತಂಡ ದಾಳಿ ಮಾಡಿದೆ. ಮೊನ್ನೆ ರಾತ್ರಿಯೇ ಜಿಲ್ಲೆಗೆ ಆಗಮಿಸಿದ ಹತ್ತು ಜನರ ತಂಡ ಖಚಿತ‌ ಮಾಹಿತಿ‌ ಮೇರೆಗೆ ದಾಳಿ ನಡೆಸಿದೆ. ಈ ವೇಳೆ ಮುಧೋಳ ನಗರದ ಮಲಘಾಣ್ ಆಸ್ಪತ್ರೆ ಮೇಲೆ ದಾಳಿ ಮಾಡಲಾಗಿದ್ದು, ಡಾ.ಆಶಾ ಮಲಘಾಣ್  ಎಂಬುವವರು ಸ್ಕ್ಯಾನಿಂಗ್ ಸೆಂಟರ್ ಬಳಕೆ‌ ಮಾಡುತ್ತಿದ್ದಾರೆ. ಅದರ ಮೂಲಕ ಬ್ರೂಣ ಸ್ಕ್ಯಾನಿಂಗ್, ನಂತರ ಗರ್ಭಪಾತ ಮಾಡುತ್ತಾರೆ ಎಂದು ದೆಹಲಿ ತಂಡಕ್ಕೆ ಖಚಿತ‌ ಮಾಹಿತಿ ಬಂದಿದೆ. ಇದರಿಂದ ಆಸ್ಪತ್ರೆ ಮೇಲೆ ದಾಳಿ ಮಾಡಿ ಸ್ಕ್ಯಾನಿಂಗ್ ಸೆಂಟರ್ ಸೀಜ್ ಮಾಡಿ, ಪ್ರಮುಖ ಮಾಹಿತಿ ಕಲೆ‌ ಹಾಕಿದೆ.  ಈ ಕುರಿತು ಮಾತನಾಡಿದ ಡಾ.ಆಶಾ ಮಲಘಾಣ್, ‘ನಾವು ತಪಾಸಣೆ ಮಾಡೋದಿಲ್ಲ, ಸ್ಕ್ಯಾನ ಅರ್ಹ ವೈದ್ಯರು ಮಾಡುತ್ತಾರೆ ಎಂದಿದ್ದಾರೆ. ಆದರೆ‌, ಅವರೇ ಬ್ರೂಣಲಿಂಗ ಪತ್ತೆ ಮಾಡೋದು ಕಂಡು ಬಂದಿದೆಯಂತೆ.

ಇದರ ಜೊತೆಗೆ ಬಾದಾಮಿ ಪಟ್ಟಣದಲ್ಲಿ ರೇಣುಕಾ ಆಸ್ಪತ್ರೆ ಮೇಲೆ ದಾಳಿ‌ ಮಾಡಲಾಗಿದೆ. ಇಲ್ಲಿ ಕವಿತಾ ಶಿವನಾಯ್ಕರ್ ಬಾದಾಮಿ ಸರಕಾರಿ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ತಜ್ಞೆಯಾಗಿದ್ದಾರೆ. ಇದರ ಜೊತೆಗೆ ರೇಣುಕಾ ಖಾಸಗಿ ಆಸ್ಪತ್ರೆ ನಡೆಸುತ್ತಿದ್ದು, ಅಲ್ಲಿಯೂ ಸ್ಕ್ಯಾನಿಂಗ್ ಮಷಿನ್ ಹಾಗೂ ಕೊಠಡಿ ಸೀಜ್ ಮಾಡಲಾಗಿದೆ. ಆಸ್ಪತ್ರೆಯಲ್ಲಿ ಬ್ರೂಣ ಸ್ಕ್ಯಾನ್ ‌ಮಾಡಿ ಗರ್ಭಪಾತ ದಂಧೆ ಮಾಡಿರೋದು ಮೇಲ್ನೋಟಕ್ಕೆ ಖಚಿತವಾಗಿದೆಯಂತೆ. ತಾಲ್ಲೂಕಾಸ್ಪತ್ರೆ ವೈದ್ಯೆಯಾಗಿ ತಾಲ್ಲೂಕಾಸ್ಪತ್ರೆ ಕರ್ತವ್ಯದ ಅವಧಿಯಲ್ಲೇ ಖಾಸಗಿ ಆಸ್ಪತ್ರೆಯಲ್ಲಿ ಬ್ರೂಣಪತ್ತೆ ಕಾರ್ಯ ‌ಮಾಡುತ್ತಿದ್ದರು ಎಂಬ ಮಾಹಿತಿ ಇದೆ. ಇನ್ನು ಘಟನೆ  ಬಗ್ಗೆಆಪಾದಿತೆ ವೈದ್ಯೆ ಕವಿತಾ ಶಿವನಾಯ್ಕರ್ ಮಾತನಾಡಿ, ‘ನಾನು ತಾಲ್ಲೂಕಾಸ್ಪತ್ರೆ ಬಿಡುವಿನ ವೇಳೆ ಮಾತ್ರ ಇಲ್ಲಿಗೆ ಬರುತ್ತೇನೆ. ಇದನ್ನು ಬೇರೆಯವರು ನೋಡಿಕೊಳ್ತಾರೆ. ನಾವು ಭ್ರೂಣ ಪತ್ತೆಯಾಗಲಿ, ಗರ್ಭಪಾತವಾಗಲಿ ಮಾಡಿಲ್ಲ ಎಂದು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:ರಾಜ್ಯದಲ್ಲಿ ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ ತಡೆಯಲು ಹೊಸ ಪ್ಲ್ಯಾನ್‌: ಸುಳಿವು ನೀಡಿದವರಿಗೆ ಬಹುಮಾನ

ದಾಳಿಗೊಳಗಾದ ಆಸ್ಪತ್ರೆಗೆ ಸಂಬಂಧಿಸಿದಂತೆ ದೂರು ನೀಡಲು ಮುಂದಾದ ಡಿಹೆಚ್​ಓ

ಜೊತೆಗೆ ಗುಳೇದಗುಡ್ಡ ಪಟ್ಟಣದ ಬನಶಂಕರಿ ಆಸ್ಪತ್ರೆ ಮೇಲೂ ದಾಳಿ ನಡೆಸಲಾಗಿದೆ. ಬಾದಾಮಿ, ಗುಳೇದಗುಡ್ಡ ಹಾಗೂ ಮುಧೋಳ ಮೂರು ಆಸ್ಪತ್ರೆ ಮೇಲಿನ ಕೆಪಿಎಮ್​ಇ ಆ್ಯಕ್ಟ್ ಪರವಾನಿಗೆ ಪರಿಶೀಲನೆ ‌ನಡೆಸುತ್ತೇವೆ. ದಾಳಿಗೊಳಗಾದ ಆಸ್ಪತ್ರೆಗೆ ಸಂಬಂಧಿಸಿದಂತೆ ದೂರು ನೀಡಲು ಡಿಹೆಚ್​ಓ ಮುಂದಾಗಿದ್ದಾರೆ. ಒಟ್ಟಿನಲ್ಲಿ ಜಿಲ್ಲೆಯಲ್ಲಿ ಗರ್ಭಪಾತ ದಂಧೆ ಸದ್ದಿಲ್ಲದೆ ಜೋರಾಗಿ ನಡೆಯುತ್ತಿದ್ದು, ಅಧಿಕಾರಿಗಳು ಇಂತವರ ವಿರುದ್ಧ ಕಠಿಣ ಕ್ರಮ‌ಕೈಗೊಳ್ಳಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗಣೇಶ ಚತುರ್ಥಿಯ ಮಹತ್ವ, ಪೂಜೆಗಳನ್ನು ಹೇಗೆ ಮಾಡಬೇಕು? ಈ ವಿಡಿಯೋ ನೋಡಿ
ಗಣೇಶ ಚತುರ್ಥಿಯ ಮಹತ್ವ, ಪೂಜೆಗಳನ್ನು ಹೇಗೆ ಮಾಡಬೇಕು? ಈ ವಿಡಿಯೋ ನೋಡಿ
Nithya Bhavishya: ಗಣೇಶ ಚತುರ್ಥಿ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ಗಣೇಶ ಚತುರ್ಥಿ ದಿನದ ರಾಶಿ ಭವಿಷ್ಯ ತಿಳಿಯಿರಿ
ರೇಣುಕಾಸ್ವಾಮಿ ಶವ ಎಸೆದ ಕಿಡಿಗೇಡಿಗಳ ಚಲನವಲನ ಸಿಸಿಟಿವಿಯಲ್ಲಿ ಸೆರೆ
ರೇಣುಕಾಸ್ವಾಮಿ ಶವ ಎಸೆದ ಕಿಡಿಗೇಡಿಗಳ ಚಲನವಲನ ಸಿಸಿಟಿವಿಯಲ್ಲಿ ಸೆರೆ
ರುದ್ರಾಕ್ಷಿ ಮಣಿಗಳಿಂದಲೇ ಸಿದ್ಧವಾಯ್ತು 20 ಅಡಿ ಎತ್ತರದ ಗಣೇಶನ ವಿಗ್ರಹ
ರುದ್ರಾಕ್ಷಿ ಮಣಿಗಳಿಂದಲೇ ಸಿದ್ಧವಾಯ್ತು 20 ಅಡಿ ಎತ್ತರದ ಗಣೇಶನ ವಿಗ್ರಹ
ಸಿನಿಮಾ ನಿರ್ದೇಶಕ ನಾಗಶೇಖರ್ ಕಾರು ಅಪಘಾತ: ಇಲ್ಲಿದೆ ವಿಡಿಯೋ
ಸಿನಿಮಾ ನಿರ್ದೇಶಕ ನಾಗಶೇಖರ್ ಕಾರು ಅಪಘಾತ: ಇಲ್ಲಿದೆ ವಿಡಿಯೋ
ಫುಟ್ಬಾಲ್​ ಲೋಕದಲ್ಲಿ ಹೊಸ ಇತಿಹಾಸ ನಿರ್ಮಿಸಿದ ಕ್ರಿಸ್ಟಿಯಾನೊ ರೊನಾಲ್ಡೊ
ಫುಟ್ಬಾಲ್​ ಲೋಕದಲ್ಲಿ ಹೊಸ ಇತಿಹಾಸ ನಿರ್ಮಿಸಿದ ಕ್ರಿಸ್ಟಿಯಾನೊ ರೊನಾಲ್ಡೊ
181 ರನ್ ಸಿಡಿಸಿ ಕ್ರಿಕೆಟ್ ದೇವರ ದಾಖಲೆ ಮುರಿದ ಮುಶೀರ್ ಖಾನ್
181 ರನ್ ಸಿಡಿಸಿ ಕ್ರಿಕೆಟ್ ದೇವರ ದಾಖಲೆ ಮುರಿದ ಮುಶೀರ್ ಖಾನ್
ಹಬ್ಬಕ್ಕೆಂದು ಬೆಂಗಳೂರು ಬಿಟ್ಟು ಊರಿನತ್ತ ಹೊರಟ ಜನ: ಮೆಜೆಸ್ಟಿಕ್​ ಫುಲ್ ರಶ್
ಹಬ್ಬಕ್ಕೆಂದು ಬೆಂಗಳೂರು ಬಿಟ್ಟು ಊರಿನತ್ತ ಹೊರಟ ಜನ: ಮೆಜೆಸ್ಟಿಕ್​ ಫುಲ್ ರಶ್
ವಿಜಯವಾಡದಲ್ಲಿ ಭಾರೀ ಪ್ರವಾಹ; ಬುಡಮೇರು ಬಳಿ ಮುಳುಗಿದ ಗ್ರಾಮಗಳು
ವಿಜಯವಾಡದಲ್ಲಿ ಭಾರೀ ಪ್ರವಾಹ; ಬುಡಮೇರು ಬಳಿ ಮುಳುಗಿದ ಗ್ರಾಮಗಳು
ಹೇಮಾ ಸಮಿತಿ ರೀತಿ ಕನ್ನಡದಲ್ಲೂ ಆಗಬೇಕು ಎಂಬ ಮಾತಿಗೆ ರಕ್ಷಿತ್ ಪ್ರತಿಕ್ರಿಯೆ
ಹೇಮಾ ಸಮಿತಿ ರೀತಿ ಕನ್ನಡದಲ್ಲೂ ಆಗಬೇಕು ಎಂಬ ಮಾತಿಗೆ ರಕ್ಷಿತ್ ಪ್ರತಿಕ್ರಿಯೆ