150 ವರ್ಷ ಹಳೆಯ ಕಲ್ಲಿನ ಕಂಬ ಒಡೆದು ಹಾಕಿದ ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿ, ಸಸ್ಪೆಂಡ್ ಮಾಡುವಂತೆ ಒತ್ತಾಯ
ಬಳ್ಳಾರಿ ನಗರಕ್ಕೆ ಕಿರೀಟ ಪ್ರಾಯದಂತಿರುವ ಶ್ರೀ ಕನಕ ದುರ್ಗಮ್ಮ ದೇವಿ ದೇವಸ್ಥಾನದಲ್ಲಿ 150 ವರ್ಷ ಹಳೆಯ ಕಲ್ಲಿನ ಕಂಬ ಒಡೆದುಹಾಕಿದ ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿ, ಬೇಜವಾಬ್ದಾರಿಯನ್ನು ಸಸ್ಪೆಂಡ್ ಮಾಡುವಂತೆ ಒತ್ತಾಯ
ಅದು ಬಳ್ಳಾರಿ ಐತಿಹಾಸಿಕ ದೇವಸ್ಥಾನ.. ಆ ದೇವಸ್ಥಾನದಲ್ಲಿ 150 ವರ್ಷಗಳ ಹಿಂದಿನ ಕಲ್ಲಿನ ಕಂಬವನ್ನ, ಧಾರ್ಮಿಕ ದತ್ತ ಇಲಾಖೆ ಅಧಿಕಾರಿ ಒಡೆದು ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಜೊತೆಗೆ ದೇವಸ್ಥಾನದಲ್ಲಿ ಯಾವುದೇ ಅಭಿವೃದ್ಧಿ ಯೋಜನೆಗಳು ಬಂದ್ರು ಅಲ್ಲಿಯ ಕಮೀಟಿಗೆ ಮತ್ತು ಧರ್ಮದರ್ಶಿಗಳ ಗಮನಕ್ಕೆ ತರದೆ ತನಗೆ ತಿಳಿದಂತೆ ಮಾಡುತ್ತಿದ್ದಾರಂತೆ.. ಹೀಗಾಗಿ ಅಧಿಕಾರಿಯ ಬೇಜವಾಬ್ದಾರಿ ವರ್ತನೆಯಿಂದ ಕಮಿಟಿ ಸದಸ್ಯರು ಮತ್ತು ಧರ್ಮದರ್ಶಿಗಳು ಆಕ್ರೋಶಗೊಂಡಿದ್ದು ಆತನನ್ನ ಸಸ್ಪೆಂಡ್ ಮಾಡುವಂತೆ ಒತ್ತಾಯ ಮಾಡುತ್ತಿದ್ದಾರೆ ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ…
ಹೌದು, ಬಳ್ಳಾರಿ ನಗರಕ್ಕೆ ಕಿರೀಟ ಪ್ರಾಯದಂತಿರುವ ಶ್ರೀ ಕನಕ ದುರ್ಗಮ್ಮ ದೇವಿ ದೇವಸ್ಥಾನದಲ್ಲಿ, ಧಾರ್ಮಿಕ ದತ್ತಿ ಇಲಾಖೆ ಮತ್ತು ಧರ್ಮದರ್ಶಿಗಳ ನಡುವೆ ಜಟಾಪಟಿ ಶುರುವಾದಂತೆ ಕಾಣುತ್ತಿದೆ.. ದೇವಸ್ಥಾನದಲ್ಲಿ ಸುಮಾರು 150 ವರ್ಷಗಳ ಹಳೆಯದಾದ ಕಲ್ಲಿನ ಕಂಬವನ್ನ ಇಓ ಅಧಿಕಾರಿ ಹನುಮಂತಪ್ಪ ಅವರು ಧರ್ಮದರ್ಶಿ ಮತ್ತು ಅರ್ಚಕರ ಗಮನಕ್ಕೆ ತರದೆ ತನ್ನ ಮನಸ್ಸಿಗೆ ತಿಳಿದಂತೆ ಒಡೆದು ಹಾಕಿದ್ದಾರಂತೆ.
ಹೀಗಾಗಿ ದೇವಸ್ಥಾನ ಆಡಳಿತ ಮಂಡಳಿ ಮತ್ತು ಧರ್ಮದರ್ಶಿಗಳು ಅಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಇಂತಹ ಬೇಜಾವಬ್ದಾರಿ ಅಧಿಕಾರಿಯನ್ನ ಕೂಡಲೇ ಸಸ್ಪೆಂಡ ಮಾಡುವಂತೆ ಒತ್ತಾಯ ಮಾಡಿದ್ದಾರೆ.. ಇನ್ನು ಆ ಕಲ್ಲಿನ ಕಂಬಗಳನ್ನ ಒಡೆದು ತುಂಡು ಮಾಡಿ ಯಾವುದಕ್ಕೆ ಉಪಯೋಗ ಮಾಡುತ್ತಾರೆ ಅಂತಾನೂ ಹೇಳದೆ, ಆಡಳಿತ ಮಂಡಳಿಗೆ ಉತ್ತರ ಕೊಡದೆ ಅಹಂ ನಿಂದ ವರ್ತನೆ ಮಾಡುತಾರಂತೆ ಹೀಗಾಗಿ ಇಂತಹ ಅಧಿಕಾರಿ ನಮಗೆ ಬೇಡ ಇವರನ್ನು ಸಸ್ಪೆಂಡ್ ಮಾಡಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ..
ಇನ್ನು ದೇವಸ್ಥಾನ ಆವರಣದಲ್ಲಿರು ಸುಮಾರು 80 ರಿಂದ 90 ಕಂಬಗಳನ್ನ ರಕ್ಷಣೆ ಮಾಡುತ್ತಾ ಬರಲಾಗಿತ್ತು. ಆದರೆ ಈ ಅಧಿಕಾರಿ ಯಾರ ಗಮನಕ್ಕೂ ತರದೇ ಏಕಾಏಕಿ ಜೆಸಿಬಿ, ಹಿಟಾಚಿ ಮೂಲಕ ಒಡೆದು ಹಾಕಿದ್ದಾರೆ.. ಇನ್ನೂ ಅಂದಾಜು 25 ಲಕ್ಷ ಮೊತ್ತದಲ್ಲಿ ನಿರ್ಮಾಣವಾಗಿರುವ ತ್ಯಾಜ್ಯ ವಿಲೇವಾರಿ ಘಟಕದ ಖರ್ಚು ವ್ಯಚ್ಚವನ್ನ ಕೇಳಿದ್ರೆ.. ಯಾವುದೇ ಸಭೆಗೆ ಹಾಜರಾಗದೆ ಕೇಳಿದ್ದಕ್ಕೆ ಪ್ರತಿಕ್ರಿಯೆ ನೀಡದ ದರ್ಪ ತೋರುತ್ತಾರಂತೆ..
ಕಳೆದ ಐದು ವರ್ಷಗಳಿಂದಲೂ ಈ ಅಧಿಕಾರಿಯದ್ದು ಇದೇ ಗೋಳಾಗಿದೆ.. ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಿಗೆ ವ್ಯಯಿಸಿದ ಹಣದ ಬಗ್ಗೆ ಸಂಪೂರ್ಣ ತನಿಖೆ ಆಗಬೇಕು.. ಈತನ ಉಡಾಫೆ ತನಕ್ಕೆ ತಕ್ಕ ಶಾಸ್ತಿ ಆಗಬೇಕು ಅಂತ ಧರ್ಮದರ್ಶಿಗಳು ಒತ್ತಾಯ ಮಾಡಿದ್ದಾರೆ.. ಇನ್ನು ಈ ಬಗ್ಗೆ ಶಾಸಕ ಭರತ್ ರೆಡ್ಡಿ ಅವರನ್ನ ಕೇಳಿದ್ರೆ.. ಇದು ಆಡಳಿತ ಮಂಡಳಿ ಮತ್ತು ಅಧಿಕಾರಿಗಳ ನಡುವೆ ego ಅಡ್ಡ ಬಂದಿದೆ. ಹೀಗಾಗಿ ಈ ರೀತಿಯ ವರ್ತನೆ ಆಗಿದೆ, ಇಬ್ಬರನ್ನೂ ಕರೆದು ಮಾತಮಾಡುತ್ತೇನೆ ಅಂತಾರೆ ಶಾಸಕರಾದ ಭರತ್ ರೆಡ್ಡಿ.
ಒಟ್ಟಿನಲ್ಲಿ ಬಳ್ಳಾರಿ ನಗರಕ್ಕೆ ಕಿರೀಟದಂತಿರುವ ಕನಕ ದುರ್ಗಾದೇವಿ ದೇವಸ್ಥಾನದಲ್ಲಿ ಆಡಳಿತ ಮಂಡಳಿ ಮತ್ತು ಅಧಿಕಾರಿಗಳ ನಡುವೆ ಜಟಾಪಟಿ ಶುರುವಾಗಿದ್ದು.. ಆದಷ್ಟು ಬೇಗ ಶಮನವಾಗಿ ದೇವಸ್ಥಾನ ಅಭಿವೃದ್ಧಿ ಆಗಬೇಕು, ಅದರಿಂದ ಇಲ್ಲಿಗೆ ಆಗಮಿಸುವ ಭಕ್ತಾದಿಗಳಿಗೆ ಅನುಕೂಲವಾಗಲಿ ಎಂಬುದೇ ನಮ್ಮ ಆಶಯ…
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ