ಇಂದಿನಿಂದ 3 ದಿನ ರಾಯಚೂರು ಜಿಲ್ಲೆಯಾದ್ಯಾಂತ ಮೋಡ ಬಿತ್ತನೆ: ಬಳ್ಳಾರಿ ಜಿಂದಾಲ್ ಏರ್ಪೋರ್ಟ್ನಿಂದ ವಿಮಾನ ಹೊರಟ
ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳು ಬರಗಾಲದಿಂದ ತತ್ತರಿಸಿದ್ದು, ಸಚಿವ ಭೋಸರಾಜ್ ಅವರ ಫೌಂಡೇಷನ್ ವತಿಯಿಂದ ಇದೀಗ ರಾಯಚೂರಿನಲ್ಲಿ ಮೋಡ ಬಿತ್ತನೆ ಮಾಡಲಾಗುತ್ತಿದೆ. ಬಳ್ಳಾರಿಯ ಜಿಂದಾಲ್ ವಿಮಾನ ನಿಲ್ದಾಣದಿಂದ ಹೊರಟ ವಿಮಾನ ಮೂರು ದಿನಗಳ ಕಾಲ ರಾಯಚೂರು ಜಿಲ್ಲೆಯಾದ್ಯಾಂತ ಮೋಡ ಬಿತ್ತನೆ ಮಾಡಲಿದೆ.
ಬಳ್ಳಾರಿ, ನವೆಂಬರ್ 05: ಒಂದು ಕಡೆ ತೀವ್ರ ಬರಗಾಲ ಮತ್ತೊಂದು ಕಡೆ ರಾಜ್ಯದ ಬಹುತೇಕ ಜಲಾಶಯಗಳು ಖಾಲಿಯಾಗುತ್ತಿವೆ. ಈ ಮಧ್ಯೆ ತಮ್ಮ ತಮ್ಮ ಜಿಲ್ಲೆ ರೈತರ ರಕ್ಷಣೆಗಿಳಿದ ಜನಪ್ರತಿನಿಧಿಗಳು ಮೋಡ ಬಿತ್ತನೆಗೆ (Cloud seeding) ಮುಂದಾಗುತ್ತಿದ್ಧಾರೆ. ಸದ್ಯ ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳು ಬರಗಾಲದಿಂದ ತತ್ತರಿಸಿದ್ದು, ಸಚಿವ ಭೋಸರಾಜ್ ಅವರ ಫೌಂಡೇಷನ್ ವತಿಯಿಂದ ಇದೀಗ ರಾಯಚೂರಿನಲ್ಲಿ ಮೋಡ ಬಿತ್ತನೆ ಮಾಡಲಾಗುತ್ತಿದೆ. ಬಳ್ಳಾರಿಯ ಜಿಂದಾಲ್ ವಿಮಾನ ನಿಲ್ದಾಣದಿಂದ ಹೊರಟ ವಿಮಾನ ಮೂರು ದಿನಗಳ ಕಾಲ ರಾಯಚೂರು ಜಿಲ್ಲೆಯಾದ್ಯಾಂತ ಮೋಡ ಬಿತ್ತನೆ ಮಾಡಲಿದೆ.
ಭತ್ತ, ಮೆಣಸಿನಕಾಯಿ, ಹತ್ತಿ ಸೇರಿದಂತೆ ಬಹುತೇಕ ಬೆಳೆಗಳು ಒಂದು ಹಂತದವರೆಗೂ ಬೆಳೆದು ನಿಂತಿವೆ. ಈ ಬೆಳೆಗೆ ಇದೀಗ ಡಿಸೆಂಬರ್ ಅಂತ್ಯದವರೆಗೂ ನೀರು ಬೇಕು. ಹೀಗಾಗಿ ಅನ್ನದಾತ ಬೆಳೆಯನ್ನು ಉಳಿಸಿಕೊಳ್ಳಲು ಹರಸಹಾಸ ಪಡುತ್ತಿದ್ದಾನೆ. ಒಂದು ಕಡೆ ಟ್ಯಾಂಕರ್ ನೀರು ಹಾಕಿದರೆ, ಮತ್ತೊಂದು ಕಡೆ ಕಾಲುವೆ ನೀರು ಬರುತ್ತಿಲ್ಲವೆಂದು ಅನ್ನದಾತ ಪರದಾಡುತ್ತಿದ್ದಾರೆ.
ಇದನ್ನೂ ಓದಿ: ವಿತರಕರಿಂದ ಅಕ್ಕಿ ಸತ್ಯಾಗ್ರಹ: ನ.10 ರಿಂದ ಪಡಿತರ ಅಂಗಡಿಗಳು ಕ್ಲೋಸ್ ಆಗುವುದು ಗ್ಯಾರಂಟಿ, ಫ್ರೀಡಂ ಪಾರ್ಕಿನಲ್ಲಿ ಹೋರಾಟ
ಈ ಮಧ್ಯೆ ಆಕ್ಟೋಬರ್ ನವೆಂಬರ್ನಲ್ಲಿ ಬರಬಹುದಾದ ಹಿಂಗಾರು ಮಳೆ ಕೂಡ ಬಹುತೇಕ ಕೈಕೊಡುವ ಲಕ್ಷಣ ಕಾಣುತ್ತಿದೆ. ಹೀಗಾಗಿ ರಾಯಚೂರಿನ ಬೋಸರಾಜ್ ಫೌಂಡೇಷನ್ ವತಿಯಿಂದ ಶಾಸಕ ಕೋಳಿವಾಡ ಅವರ ಪಿಕೆಕೆ ಸಂಸ್ಥೆಯ ಸಹಕಾರದೊಂದಿಗೆ ಮೋಡ ಬಿತ್ತನೆ ಕಾರ್ಯ ಮಾಡಲಾಗುತ್ತಿದೆ. ಬಳ್ಳಾರಿ ಜಿಂದಾಲ್ ವಿಮಾನದಿಂದ ಹೊರಡುವ ವಿಮಾನ ಮೂರು ದಿನಗಳ ಕಾಲ ರಾಯಚೂರು ಜಿಲ್ಲೆಯಾದ್ಯಾಂತ ಮೋಡ ಬಿತ್ತನೆ ಮಾಡುತ್ತಿದೆ.
ಈಗಾಗಲೇ ಹಾವೇರಿ, ಬೆಳಗಾವಿಯಲ್ಲಿ ಮೋಡ ಬಿತ್ತನೆ ಮಾಡಿದ್ದು, ಬಹುತೇಕ ಯಶಸ್ವಿಯಾಗಿದೆ. ಹೀಗಾಗಿ ಇದೀಗ ರಾಯಚೂರು ಜಿಲ್ಲೆಯಲ್ಲಿ ಮೋಡ ಬಿತ್ತನೆ ಕಾರ್ಯ ಮಾಡುತ್ತಿದ್ದೇವೆ ಇಲ್ಲಿಯೂ ಯಶಸ್ವಿಯಾಗುತ್ತದೆ ಎನ್ನುತ್ತಾರೆ ಶಾಸಕ ಪ್ರಕಾಶ ಕೋಳಿವಾಡ. ಮೋಡ ಬಿತ್ತನೆಯಿಂದ ಮಳೆಯಾಗುವ ಸಾಧ್ಯತೆ ಇದೆಯೆಂದು ವೈಜ್ಞಾನಿಕವಾಗಿಯೂ ಸಾಭಿತಾಗಿದೆ. ಹೀಗಾಗಿ ರಾಯಚೂರು ರೈತರ ಹಿತಕ್ಕಾಗಿ ಇದೀಗ ಮೋಡ ಬಿತ್ತನೆ ಮಾಡಲಾಗುತ್ತಿದೆ.
ಇದನ್ನೂ ಓದಿ: ಹುಲಿ ಉಗುರು ವಿವಾದ: ಶಾಸಕ ಭರತ್ ರೆಡ್ಡಿ ಹುಲಿ ಉಗುರಿನ ಪೆಂಡೆಂಟ್ ಧರಿಸಿರುವ ಪೋಟೋ ವೈರಲ್
ಮೋಡ ಬಿತ್ತನೆಗಾಗಿ ಪ್ರತ್ಯೇಕವಾದ ಟೆಕ್ನಿಕ್ಲಲ್ ತಂಡವೊಂದು ಬಂದಿದೆ. ಕಳೆದೊಂದುವರೆ ತಿಂಗಳಿಂದ ವಾತಾವರಣವನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿದ್ದು, ಇಂದಿನಿಂದ ಮೂರು ದಿನಗಳ ಕಾಲ ಆಕಾಶದಲ್ಲಿ ಮೋಡಗಳ ಜೊತೆ ಕೃತಕ ಮೋಡ ಬಿತ್ತನೆ ಮಾಡೋ ಮೂಲಕ ಮಳೆ ಬರುವಂತೆ ಮಾಡುತ್ತಾರಂತೆ.
ತುಂಗಭದ್ರಾ ಜಲಾಶಯ ಈ ಬಾರಿ ನಿರೀಕ್ಷಿತ ಮಟ್ಟದಲ್ಲಿ ತುಂಬಿಲ್ಲ. ಹೀಗಾಗಿ ಬಳ್ಳಾರಿ ವಿಜಯನಗರ ಕೊಪ್ಪಳವಷ್ಟೇ ಅಲ್ಲದೇ ತಳ ಭಾಗದಲ್ಲಿರೋ ರಾಯಚೂರಿಗೂ ಕಾಲುವೆಗಳ ಮೂಲಕ ನಿರೀಕ್ಷಿತ ಮಟ್ಟದಲ್ಲಿ ನೀರು ತಲುಪುತ್ತಿಲ್ಲ. ಹೀಗಾಗಿ ಅನ್ನದಾತ ಹರಸಾಹಸ ಪಡುತ್ತಿದ್ದಾರೆ. ಇದೀಗ ಮೋಡ ಬಿತ್ತೆನಯಿಂದಾದರು ಮಳೆಯಾಗುತ್ತದೆಯೇ ಕಾದು ನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.