ಬಳ್ಳಾರಿ: ಹೊಸಪೇಟೆ ತಾಲೂಕಿನ ಹಂಪಿ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗಲಾಟೆಯಾಗಿದೆ. ಮದ್ಯದ ನಶೆಯಲ್ಲಿ ಇದ್ದ ಯುವಕರು ತಮ್ಮ ಶರ್ಟ್ ಬಿಚ್ಚಿ ತೂರಾಡುತ್ತಾ ಗಲಾಟೆ ಮಾಡಿದ್ದಾರೆ. ಬ್ಯಾರಿಕೇಡ್‌ಗಳನ್ನು ತಳ್ಳಿ ವೇದಿಕೆಯತ್ತ ನುಗ್ಗಲು ಯತ್ನ ಮಾಡಿದ್ದಾರೆ. ಹಾಗಾಗಿ ನಶೆಯಲ್ಲಿದ್ದವರನ್ನು ನಿಯಂತ್ರಿಸಲು ಲಘು ಲಾಠಿಚಾರ್ಜ್ ನಡೆದಿದೆ.
ಉತ್ಸವದಲ್ಲಿ ಸಿಂಗರ್ ನೀತಿ ಮೋಹನ್ ಹಾಡಿಗೆ ಪ್ರೇಕ್ಷಕರು ಹುಚ್ಚೆದ್ದು ಕುಣಿದಿದ್ದಾರೆ. ಜೋಶ್ಗೆ ಮೈಮೇಲಿನ ಬಟ್ಟೆ ಬಿಚ್ಚಿ ತೂರಾಡುತ್ತ ಕುಳಿದಾಡಿದ್ದಾರೆ ಇದರಿಂದ ಮುಂದೆ ಕುಳಿತಿದ್ದ ಯುವತಿ ಮಹಿಳೆಯರಿಗೆ ಇರಿಸುಮುರಿಸಾಗಿದೆ. ಬ್ಯಾರಿಕೇಡ್‌ಗಳನ್ನು ತಳ್ಳಿ ವೇದಿಕೆಯತ್ತ ನುಗ್ಗಲು ಕೆಲ ಯುವಕರು ಪ್ರಯತ್ನಿಸಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಕೆಲ ಯುವಕರನ್ನು ವಶಕ್ಕೆ ಪಡೆದಿದ್ದಾರೆ.