ಬೇಸಿಗೆ ಆರಂಭಕ್ಕೂ ಮುನ್ನವೇ ಬಿಸಿಲಿಗೆ ತತ್ತರಿಸಿದ ಬಳ್ಳಾರಿ: ತಂಪುಪಾನೀಯಗಳ ಮೊರೆ ಹೋದ ಜನರು
ಬಳ್ಳಾರಿ ಜಿಲ್ಲೆಯಲ್ಲಿ ಈ ವರ್ಷ ಅಸಹನೀಯ ಬಿಸಿಲು ಅನುಭವಿಸಲಾಗುತ್ತಿದೆ. ಬೇಸಿಗೆ ಆರಂಭಕ್ಕೂ ಮುನ್ನವೇ 38° ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಗರ್ಭಿಣಿಯರು, ಮಕ್ಕಳು ಮತ್ತು ವೃದ್ಧರ ಮೇಲೆ ಬಿಸಿಲು ಹೆಚ್ಚು ಪರಿಣಾಮ ಬೀರಿದೆ. ಜಿಲ್ಲಾಡಳಿತವು ಬಿಸಿಲಿನ ತಾಪದಿಂದ ಜನರನ್ನು ರಕ್ಷಿಸಲು ಕ್ರಮ ಕೈಗೊಳ್ಳಬೇಕೆಂದು ಜನರು ಒತ್ತಾಯಿಸುತ್ತಿದ್ದಾರೆ.

ಬಳ್ಳಾರಿ, ಫೆಬ್ರವರಿ 24: ಗಣಿನಾಡು ಬಳ್ಳಾರಿ ಜಿಲ್ಲೆಯ ಬಿಸಿಲಿಗೆ (heatstroke) ತವರ ಮನೆ ಇದ್ದಂತೆ. ಕರ್ನಾಟಕದಲ್ಲಿ ಎಲ್ಲಾದರೂ ಒಂದು ಕಡೆ ಬಿಸಿಲು ಕಡಿಮೆ ಇರಬಹುದು ಆದರೆ ಇಲ್ಲಿ ಮಾತ್ರ ನೋ ಚಾನ್ಸ್. ವರ್ಷದ 12 ತಿಂಗಳು ಇಲ್ಲಿ ಬಿರು ಬೇಸಿಗೆ ಬಿಸಿಲು ಕಂಡು ಬರುತ್ತೆ. ಅದರಲ್ಲೂ ಈ ವರ್ಷವಂತು ಅದೆಷ್ಟು ಸೆಕೆ, ತಾಪಮಾನ, ಬಿಸಿಲ ಧಗೆ ತಾಳಲಾರದ ಜನರು ತಂಪುಪಾನೀಯಗಳ ಮೊರೆ ಹೋಗುತ್ತಿದ್ದಾರೆ.
38° ಸೆಲ್ಸಿಯಸ್ ತಾಪಮಾನಕ್ಕೆ ತತ್ತರಿಸಿದ ಗಣಿನಾಡಿನ ಮಂದಿ
ಬಳ್ಳಾರಿಯಲ್ಲಿ ಕಳೆದ ಎರಡು ವರ್ಷಗಳಿಗಿಂತ ಈ ವರ್ಷ ಅತೀ ಹೆಚ್ಚು ತಾಪಮಾನ ಅದು ಬೇಸಿಗೆ ಆರಂಭಕ್ಕೂ ಮುನ್ನವೇ ಕಂಡು ಬರುತ್ತಿದೆ. ಈಗಾಗಲೇ ಎರಡು ಮೂರು ದಿನಗಳಿಂದ ಬಳ್ಳಾರಿಯಲ್ಲಿ 37°, 38°, 39° ಡಿಗ್ರಿ ಸೆಲ್ಸಿಯಸ್ ವರಗೆ ತಾಪಮಾನ ದಾಖಲಾಗಿದೆ. ಹೀಗಾಗಿ ಬಿಸಿಲಿನ ಧಗೆಗೆ ಗಣಿನಾಡಿನ ಮಂದಿ ಬೆಂಡಾಗಿದ್ದಾರೆ. ಈಗಾಗಲೇ ಹವಾಮಾನ ಇಲಾಖೆ ಕೂಡ ಜಿಲ್ಲೆಯ ಜನರಿಗೆ ಬಿಸಿಲಿನ ತಾಪ ಮತ್ತಷ್ಟು ಹೆಚ್ಚಾಗುವ ಬಗ್ಗೆ ಸೂಚನೆ ನೀಡಿದೆ.
ಇದನ್ನೂ ಓದಿ: ಆಂಧ್ರ, ತೆಲಂಗಾಣ, ಮಹಾರಾಷ್ಟ್ರದಲ್ಲಿ ಹಕ್ಕಿಜ್ವರ: ಕರ್ನಾಟಕದಲ್ಲಿ ಅಲರ್ಟ್, ಬೇರೆ ರಾಜ್ಯದ ಕೋಳಿಗಳಿಗೆ ನಿರ್ಬಂಧ
ವಾತಾವರಣದಲ್ಲಿ ಅತೀ ಹೆಚ್ಚು ಬಿಸಿ ಗಾಳಿ ಸಾಧ್ಯತೆ ಇದ್ದು, ಜನ ಜಾಗೃತಿಯಿಂದಿರಲು ಸೂಚನೆ ನೀಡಲಾಗಿದೆ. ಇನ್ನು ಸೆಕೆ ತಾಳಲಾರದೆ ಜನ ತಂಪುನೀಯಗಳ ಮೊರೆ ಹೋಗುತ್ತಿದ್ದಾರೆ. ಕಲ್ಲಂಗಡಿ, ಎಳೆನೀರು, ಜ್ಯೂಸ್ ನಂತಹ ತಂಪು ಪಾನೀಯಗಳನ್ನ ಸೇವಿಸಿ ಬಿಸಿಲ ಧಗೆಗೆ ತಮ್ಮನ್ನ ತಾವು ಕಾಪಾಡಿಕೊಳ್ಳುತ್ತಿದ್ದಾರೆ. ಇನ್ನು ಬಿಸಿಲಿನ ಶಾಕಕ್ಕೆ ಡೀಹೈಡ್ರೇಷನ್, ಬೆವರು ಸಾಲಿ, ಕಣ್ಣು ಉರಿ, ಆಯಾಸ, ತಲೆ ನೋವು ಮುಂತಾದ ಕಾರಣಗಳಿಗೆ ಆಸ್ಪತ್ರೆ ದಾಖಲಾಗುತ್ತಿದ್ದಾರೆ. ಹೀಗಾಗಿ ಜನ ಮನೆ ಬಿಟ್ಟು ಹೊರ ಬರಲು ಹೆದರುವ ಪರಿಸ್ಥಿತಿ ಬಂದಿದೆ. ಬಳ್ಳಾರಿ ಜನರು ಕೂಡ ಬೇಸಿಗೆ ಆರಂಭಕ್ಕೂ ಮುನ್ನ ಈ ವರ್ಷವೇ ಅತೀ ಹೆಚ್ಚು ಬಿಸಿಲು ಕಂಡು ಬರುತ್ತಿದೆ. ಇನ್ನು ಬೇಸಿಗೆಯಲ್ಲ ನಮ್ಮನ್ನ ದೇವರೆ ಕಾಪಾಡಬೇಕು, ಊಟ ಬಿಟ್ಟು ಕೇವಲ ತಂಪುಪಾನೀಯಗಳ ಮೇಲೆ ಜೀವನ ಮಾಡುತ್ತಿದ್ದೆವೆ ಎನ್ನುತ್ತಾರೆ.
ಬಳ್ಳಾರಿ ಬಿಸಿಲಿನ ಧಗೆಗೆ ಜನ ಹೈರಾಣಾಗಿದ್ದು ಮಧ್ಯಾಹ್ನದ ವೇಳೆ ಮನೆಯಿಂದ ಹೊರ ಬರುವುದಕ್ಕೂ ಚಿಂತಿಸುವಂತಾಗಿದೆ. ಸೆಕೆ ತಾಳಲಾರದೆ ತೆಲೆ ಮೇಲೆ ಟವೆಲ್, ಛತ್ರಿ ಹಿಡಿದು ಹೊರ ಬರುವಂತಾಗಿದೆ. ಈಗಾಗಲೇ ಬಿಸಿಲಿನ ಸೆಕೆ ತಾಳಲಾರದೆ ಸುಸ್ತು, ಜ್ವರ ಮುಂತಾದ ಕಾಯಿಲೆಗಳಿಗೆ ತುತ್ತಾಗಿ ಬಳ್ಳಾರಿಯ ವಿಮ್ಸ್, ಜಿಲ್ಲಾ ಆಸ್ಪತ್ರೆಗೆ ರೋಗಿಗಳು ಬರುತ್ತಿದ್ದಾರೆ.
ಇನ್ನು ಟ್ರಾಫಿಕ್ ಸಿಗ್ನಲ್ ಬಳಿ ಗ್ರೀನ್ ಮ್ಯಾಟ್ ಹಾಕಿ ಬಿಸಿಲಿನ ಸೆಕೆಯಿಂದ ಜನ ಸ್ಪಲ್ಪ ತಪ್ಪಿಸಿಕೊಳ್ಳಲು ಜಿಲ್ಲಾಡಳಿತ ಅನುವು ಮಾಡಿಕೊಡಬೇಕು. ಅಲ್ಲಿ ನೀರಿನ ಕುಟೀರಗಳನ್ನ ಸ್ಥಾಪಿಸಿ ಜನರ ದಾಹ ತೀರಿಸುವ ಕೆಲಸ ಮಾಡಬೇಕು ಎನ್ನುವುದು ಜನರ ಒತ್ತಾಯವಾಗಿದೆ. ಜೊತೆಗೆ ಬಿಸಿಲ ಧಗೆಯಿಂದ ದಾಹಕ್ಕೆ ತಂಪುಪಾನೀಯಗಳ ಮೊರೆ ಹೋದ ಜನರಿಗೆ ಬೆಲೆ ಏರಿಕೆ ಕೂಡ ಶಾಕ್ ನೀಡುತ್ತಿದೆ. ಬೆಲೆ ಏರಿಕೆಯಾದರೂ ಬಿಸಿಲಿನಿಂದ ಸುಧಾರಿಸಿಕೊಳ್ಳಬೇಕಾದರೆ ಇವುಗಳನ್ನ ಸೇವನೆ ಮಾಡಬೇಕು ಎನ್ನುತ್ತಾರೆ ಆಟೋ ಡ್ರೈವರ್ ಕುಮಾರ.
ಇದನ್ನೂ ಓದಿ: ನೀರಿನ ಬಗ್ಗೆ ತುಂಗಭದ್ರಾ ಜಲಾಶಯ ಅಚ್ಚುಕಟ್ಟು ಪ್ರದೇಶದ ರೈತ ಬಾಂಧವರಿಗೆ ಮಹತ್ವದ ಸೂಚನೆ
ಒಟ್ಟಿನಲ್ಲಿ ಬಿಸಿಲಿನ ತಾಪಕ್ಕೆ ಹೈರಾಣಾಗಿರುವ ಗಣಿ ಮಂದಿ ಮಳೆಗಾಗಿ ಪ್ರಾರ್ಥನೆ ಮಾಡುತ್ತಿದ್ದಾರೆ. ಈ ಹಿಂದೆ ಯಾವ ವರ್ಷವು ಇಷ್ಟು ಪ್ರಮಾಣದಲ್ಲಿ ಬಿಸಿಲು ಇರಲಿಲ್ಲ. ಈ ವರ್ಷ ಮಾತ್ರ ಅಬ್ಬಾ ಅದೆಂತಾ ಬಿಸಿಲು ಎನ್ನುತ್ತಿದ್ದಾರೆ. ಬೇಸಿಗೆ ಆರಂಭಕ್ಕೂ ಮುನ್ನವೇ ಹಿಂತ ಪರಿಸ್ಥಿತಿ ಇದೆ ಮುಂದೆ ಹೇಗೆ ಅಂತಾ ಚಿಂತಿಸುವಂತಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:26 pm, Mon, 24 February 25