AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕತ್ತೆಗೂ ಬಂತು ಕಾಲ! ವಿಜಯನಗರ ಜಿಲ್ಲೆಯಲ್ಲಿ ಕತ್ತೆ ಖರೀದಿ ಭರಾಟೆ: ಲಕ್ಷ, ಲಕ್ಷ ಕೊಟ್ಟು ಖರೀದಿಗೆ ಮುಗಿಬಿದ್ದ ಜನ

ವಿಜಯನಗರ ಜಿಲ್ಲೆಯಲ್ಲಿ ಕತ್ತೆ ಖರೀದಿ ಜೋರಾಗಿದೆ. ಕತ್ತೆ ಹಾಲಿನ ಲಾಭ ನೋಡಿ ರೈತರು ಕತ್ತೆಗಳ ಖರೀದಿಗೆ ಮುಗಿಬಿದ್ದಿದ್ದಾರೆ. ತಿಂಗಳಿಗೆ 60 ರಿಂದ 70 ಸಾವಿರ ಲಾಭ ಪಡೆಯಬಹುದು ಎಂದು ಖರೀದಿಗೆ ಮುಂದಾಗಿದ್ದಾರೆ. ಜನ್ನಿ ಮಿಲ್ಕ್ ಎಂಬ ಕಂಪನಿ 3 ಲಕ್ಷ ಕೊಟ್ಟರೆ ಮೂರು ಕತ್ತೆಗಳು ಮತ್ತು ಮೂರು ಕತ್ತೆ ಮರಿ ಮಾರಾಟ ಮಾಡುತ್ತಿದೆ.

ಕತ್ತೆಗೂ ಬಂತು ಕಾಲ! ವಿಜಯನಗರ ಜಿಲ್ಲೆಯಲ್ಲಿ ಕತ್ತೆ ಖರೀದಿ ಭರಾಟೆ: ಲಕ್ಷ, ಲಕ್ಷ ಕೊಟ್ಟು ಖರೀದಿಗೆ ಮುಗಿಬಿದ್ದ ಜನ
ವಿಜಯನಗರ ಜಿಲ್ಲೆಯಲ್ಲಿ ಕತ್ತೆ ಖರೀದಿ
ವಿನಾಯಕ ಬಡಿಗೇರ್​
| Edited By: ಆಯೇಷಾ ಬಾನು|

Updated on:Sep 16, 2024 | 12:27 PM

Share

ವಿಜಯನಗರ, ಸೆ.16: ವಿಜಯನಗರ ಜಿಲ್ಲೆಯಲ್ಲಿ ಕತ್ತೆ (Donkey) ಖರೀದಿ ಭರಾಟೆ ಜೋರಾಗಿದೆ. ಲಕ್ಷ, ಲಕ್ಷ ಹಣ ಕೊಟ್ಟು ಜನ ಕತ್ತೆ ಖರೀದಿ ಮಾಡುತ್ತಿದ್ದಾರೆ. ಕತ್ತೆ ಹಾಲನ್ನು ಮಕ್ಕಳಿಗೆ ಕುಡಿಸಿದರೆ ಬುದ್ಧಿ ಚುರುಕಾಗುತ್ತೆ ಎಂದು ಹೇಳಲಾಗುತ್ತೆ. ಹೀಗಾಗಿ ಕತ್ತೆ ಹಾಲಿನ ಲಾಭ ನೋಡಿ ರೈತರು ಕತ್ತೆಗಳ ಖರೀದಿಗೆ ಮುಗಿಬಿದ್ದಿದ್ದಾರೆ. ತಿಂಗಳಿಗೆ 60 ರಿಂದ 70 ಸಾವಿರ ಲಾಭ ಪಡೆಯಬಹುದು ಎಂದು ರೈತರು ಕತ್ತೆ ಖರೀದಿಗೆ ಮುಂದಾಗಿದ್ದಾರೆ.

ಜನ್ನಿ ಮಿಲ್ಕ್ ಎಂಬ ಕಂಪನಿ 3 ಲಕ್ಷ ಕೊಟ್ಟರೆ ಮೂರು ಕತ್ತೆಗಳು ಮತ್ತು ಮೂರು ಕತ್ತೆ ಮರಿ ಕೊಡ್ತಿದೆ. ಜನ್ನಿ ಮಿಲ್ಕ್ ಕಂಪನಿಯ ರಾಜ್ಯದ ಏಕೈಕ ಕಚೇರಿ ಹೊಸಪೇಟೆಯಲ್ಲಿದೆ. ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಮೂಲ ಕಚೇರಿ ಹೊಂದಿದೆ. ಈ ಕಂಪನಿ 500 ರೂ. ಬಾಂಡ್ ಮೇಲೆ ಅಗ್ರಿಮೆಂಟ್ ಮಾಡಿಸಿಕೊಂಡು 3 ಲಕ್ಷಕ್ಕೆ ಮೂರು ಕತ್ತೆಗಳು 3 ಮರಿ ಕತ್ತೆಗಳು ಕೊಡ್ತಿದೆ.

ಕತ್ತೆಗಳ ಹಾಲಿಗೆ ಭಾರಿ ಡಿಮ್ಯಾಂಡ್ ಇದೆ. ಒಂದು ಕತ್ತೆ ಒಂದು ದಿನಕ್ಕೆ ಎರಡು ಲೀಟರ್ ಹಾಲು ಕೊಡುತ್ತಿದೆ. ಒಂದು ಲೀಟರ್ ಕತ್ತೆ ಹಾಲಿನ ಬೆಲೆ 2736 ರೂ. ಒಂದು ಕತ್ತೆ ದಿನಕ್ಕೆ ಎರಡು ಲೀಟರ್ ಹಾಲು ಕೊಡುತ್ತದೆ. ತಿಂಗಳಿಗೆ 60-70 ಸಾವಿರ ರೂಪಾಯಿ ಲಾಭ ಬರುತ್ತಿದೆ ಎಂದು ರೈತರು ತಿಳಿಸಿದ್ದಾರೆ. ಮೂರು ಕತ್ತೆಗಳು, ಮೂರು ಕತ್ತೆ ಮರಿಗಳು ಸೇರಿ ಒಂದು ಯೂನಿಟ್ ಅಂತ ಹೇಳ್ತಾರೆ. ಇದ್ರಂತೆ 20 ಯುನಿಟ್ ಈಗಾಗಲೇ ಮಾರಾಟ ಮಾಡಲಾಗಿದೆ. ಸದ್ಯ ಕತ್ತೆ ಹಾಲಿನ ಲಾಭ ನೋಡಿ, ರೈತರು ಕತ್ತೆಗಳ ಖರೀದಿ ಭರಾಟೆಯಲ್ಲಿ ಜೋರಾಗಿಯೇ ತೋಡಗಿದ್ದಾರೆ. ರಾಜಸ್ಥಾನ ಮತ್ತು ಹೊರ ರಾಜ್ಯಗಳಿಂದ ಕತ್ತೆಗಳನ್ನು ಇಂಪೋರ್ಟ್ ಮಾಡಿಕೊಳ್ಳಲಾಗುತ್ತಿದೆ.

ಇದನ್ನೂ ಓದಿ: ಟಿವಿ9 ಇಂಪ್ಯಾಕ್ಟ್​: ಮೈಸೂರಿನ ಹಾಸ್ಟೆಲ್‌ ವಿದ್ಯಾರ್ಥಿನಿಯರಿಗೆ ಸಿಕ್ತಿದೆ ಹೊಟ್ಟೆ ತುಂಬಾ ಊಟ

ಇನ್ನು ಮತ್ತೊಂದೆಡೆ ಈ ಬಗ್ಗೆ ಕೆಲ ರೈತರು ಇದರ ಬಗ್ಗೆ ನಮಗೆ ಅನುಮಾನ ಇದೆ ಅಂತ ಹೇಳಿದ್ದಾರೆ. ಹಾಗೂ ಇನ್ನೂ ಕೆಲವರು ಇದು ನಮಗೆ ಲಾಭವಿದೆ ಎಂದಿದ್ದಾರೆ. ಇನ್ನೂಕತ್ತೆಗಳ ಖರೀದಿಗೆ ರೈತರು ಮುಗಿ ಬೀಳುತ್ತಿದ್ದಂತೆ ನಾವು ಶೀಘ್ರದಲ್ಲೇ ಸೋಪಿನ ಫ್ಯಾಕ್ಟರಿ ಲಾಂಚ್ ಮಾಡುತ್ತೇವೆ ಎಂದು ಜಿನ್ನಿ ಮಿಲ್ಕ್ ಮ್ಯಾನೇಜರ್ ಹೇಳಿದ್ದಾರೆ.

ಜನ್ನಿ ಮಿಲ್ಕ್ ಕಂಪನಿ ಯಾವುದೇ ಪರವಾನಿಗೆ ಪಡೆದಿಲ್ಲ. ಟ್ರೇಡ್ ಲೈಸನ್ಸ್ ಪಡೆದಿಲ್ಲಾ, ನಾವು ಇದರ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಲು ತಿಳಿಸಿದ್ದೇವೆ. ಎಲ್ಲಾ ಮಾಹಿತಿ ಕೇಳಿದ್ದೇವೆ. ನಾವು ಮಾಹಿತಿ ಕೊಡ್ತಿವಿ ಅಂತ ಹೇಳಿದ್ದಾರೆ. ಈ ಬಗ್ಗೆ ಎಚ್ಚರದಿಂದಿರಬೇಕು ಎಂದು ವಿಜಯನಗರ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:10 pm, Mon, 16 September 24

Follow Us
ಎಸ್ ಜಾನಕಿ ಅವರಿಗೆ ಗೌರವ ವಂದನೆ ಸಮರ್ಪಣೆ: ವಿಡಿಯೋ ನೋಡಿ
ಎಸ್ ಜಾನಕಿ ಅವರಿಗೆ ಗೌರವ ವಂದನೆ ಸಮರ್ಪಣೆ: ವಿಡಿಯೋ ನೋಡಿ
ಎಸ್ ಜಾನಕಿ ಅವರಿಗಿದ್ದ ನೋವೇನು? ಭಾರತಿ ವಿಷ್ಣುವರ್ಧನ್ ಮಾತು
ಎಸ್ ಜಾನಕಿ ಅವರಿಗಿದ್ದ ನೋವೇನು? ಭಾರತಿ ವಿಷ್ಣುವರ್ಧನ್ ಮಾತು
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಭಾವುಕರಾದ ಗಾಯಕ ವಿಜಯ್ ಪ್ರಕಾಶ್
ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಭಾವುಕರಾದ ಗಾಯಕ ವಿಜಯ್ ಪ್ರಕಾಶ್
ಎಸ್​​. ಜಾನಕಿ ನಿಧನಕ್ಕೆ ಲಂಡನ್​​ನಿಂದಲೇ ಇಳಯರಾಜ್ ಸಂತಾಪ
ಎಸ್​​. ಜಾನಕಿ ನಿಧನಕ್ಕೆ ಲಂಡನ್​​ನಿಂದಲೇ ಇಳಯರಾಜ್ ಸಂತಾಪ
ಜಾನಕಮ್ಮಗೆ ಮೈಸೂರಿನ ನಂಟು ಹೇಗೆ? ನವೀನ್ ಕೇರ್​ಟೇಕರ್ ಆಗಿದ್ಯಾಕೆ?
ಜಾನಕಮ್ಮಗೆ ಮೈಸೂರಿನ ನಂಟು ಹೇಗೆ? ನವೀನ್ ಕೇರ್​ಟೇಕರ್ ಆಗಿದ್ಯಾಕೆ?
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಯುವ ಕಾಂಗ್ರೆಸ್​​ನಿಂದ ಸೈಕಲ್ ಜಾಥಾ
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಯುವ ಕಾಂಗ್ರೆಸ್​​ನಿಂದ ಸೈಕಲ್ ಜಾಥಾ