AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಂಪಿ 2ನೇ ದಿನದ ಉತ್ಸವ: ಮೇಳೈಸಿದ ಕಲಾ ತಂಡಗಳ ವೈಭವ

ಬಳ್ಳಾರಿ: ಕಣ್ಣು ಹಾಯಿಸಿದ ಕಡೆಯಲ್ಲಾ ಕಲರ್‌ಫುಲ್. ಎಲ್ಲೆಲ್ಲೂ ಮೇಳೈಸಿದ ಕಲಾ ತಂಡಗಳ ವೈಭವ. ಕಣ್ಣಿಗೆ ಹಬ್ಬ ನೀಡುತ್ತಿರುವ ವೇಷ ಭೂಷಣ ತೊಟ್ಟ ಕಲಾ ತಂಡಗಳ ನೃತ್ಯ. ನೃತ್ಯವನ್ನೂ ನೋಡ್ತಾ ಸಂಭ್ರಮಿಸುತ್ತಿರುವ ಕಲಾ ಪ್ರೇಮಿಗಳು. ಇದು ಒಂದ್ಕಡೆಯಾದ್ರೆ ಮತ್ತಷ್ಟು ಕಿಕ್ ನೀಡುತ್ತಿರುವ ಗುಂಡು ಎತ್ತುವ ಸ್ಪರ್ಧೆ, ಕುಸ್ತಿ ಪಂದ್ಯ. ಎಲ್ಲರ ಕೇಂದ್ರ ಬಿಂದುವಾಗಿರುವ ಎತ್ತಿನ ಬಂಡಿ ಜೋಡಿಸುವ ಸ್ಪರ್ಧೆ. ಸಾಂಪ್ರದಾಯಿಕ ಕುಸ್ತಿಗೆ ಸಚಿವ ಸಿ.ಟಿ.ರವಿ ಚಾಲನೆ: ಹಂಪಿ ಉತ್ಸವದ ಪ್ರಯುಕ್ತ ಹೊಸ ಮಲಪನಗುಡಿಯ ವಿದ್ಯಾರಣ್ಯ ಪೀಠದ ಹೈಸ್ಕೂಲ್ ಮೈದಾನದಲ್ಲಿ […]

ಹಂಪಿ 2ನೇ ದಿನದ ಉತ್ಸವ: ಮೇಳೈಸಿದ ಕಲಾ ತಂಡಗಳ ವೈಭವ
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​| Edited By: ಆಯೇಷಾ ಬಾನು|

Updated on:Nov 23, 2020 | 12:35 PM

Share

ಬಳ್ಳಾರಿ: ಕಣ್ಣು ಹಾಯಿಸಿದ ಕಡೆಯಲ್ಲಾ ಕಲರ್‌ಫುಲ್. ಎಲ್ಲೆಲ್ಲೂ ಮೇಳೈಸಿದ ಕಲಾ ತಂಡಗಳ ವೈಭವ. ಕಣ್ಣಿಗೆ ಹಬ್ಬ ನೀಡುತ್ತಿರುವ ವೇಷ ಭೂಷಣ ತೊಟ್ಟ ಕಲಾ ತಂಡಗಳ ನೃತ್ಯ. ನೃತ್ಯವನ್ನೂ ನೋಡ್ತಾ ಸಂಭ್ರಮಿಸುತ್ತಿರುವ ಕಲಾ ಪ್ರೇಮಿಗಳು. ಇದು ಒಂದ್ಕಡೆಯಾದ್ರೆ ಮತ್ತಷ್ಟು ಕಿಕ್ ನೀಡುತ್ತಿರುವ ಗುಂಡು ಎತ್ತುವ ಸ್ಪರ್ಧೆ, ಕುಸ್ತಿ ಪಂದ್ಯ. ಎಲ್ಲರ ಕೇಂದ್ರ ಬಿಂದುವಾಗಿರುವ ಎತ್ತಿನ ಬಂಡಿ ಜೋಡಿಸುವ ಸ್ಪರ್ಧೆ.

ಸಾಂಪ್ರದಾಯಿಕ ಕುಸ್ತಿಗೆ ಸಚಿವ ಸಿ.ಟಿ.ರವಿ ಚಾಲನೆ: ಹಂಪಿ ಉತ್ಸವದ ಪ್ರಯುಕ್ತ ಹೊಸ ಮಲಪನಗುಡಿಯ ವಿದ್ಯಾರಣ್ಯ ಪೀಠದ ಹೈಸ್ಕೂಲ್ ಮೈದಾನದಲ್ಲಿ ನಡೆದ 135 ಕೆ.ಜಿ. ಭಾರದ ಕಲ್ಲು ಎತ್ತುವ ಸ್ಪರ್ಧೆ ಸಖತ್ ಕಿಕ್ ನೀಡ್ತು. ನವಿರೇಳಿಸುವ ರೀತಿಯಲ್ಲಿ ನಡೆದ ಗುಂಡು ಎತ್ತುವ ಸ್ಪರ್ಧೆ ನೆರೆದಿದ್ದವರಿಗೆ ಸಖತ್ ಕಿಕ್ ನೀಡ್ತು. ಇದಾದ ನಂತರ ನಡೆದ ಕುಸ್ತಿ, ಉತ್ಸವಕ್ಕೆ ಮತ್ತಷ್ಟು ರಂಗು ನೀಡ್ತು. ಸಾಂಪ್ರದಾಯಿಕ ಕುಸ್ತಿಗೆ ಸಚಿವ ಸಿ.ಟಿ.ರವಿ ಚಾಲನೆ ನೀಡಿದರು. ಅಖಾಡಕ್ಕೆ ಧುಮಿಕಿದ ಕುಸ್ತಿ ಪಟುಗಳು ಗೆಲುವಿಗಾಗಿ ಸೆಣಸಾಡಿದ್ರು. ಇದರಲ್ಲಿ ಎಲ್ಲದಕ್ಕಿಂತ ಹೆಚ್ಚು ಗಮನ ಸೆಳೆದಿದ್ದು ಅಂದ್ರೆ ಎತ್ತಿನಗಾಲಿ ಜೋಡಿಸುವ ಸ್ಪರ್ಧೆ. ಕಡಿಮೆ ಸಮಯದಲ್ಲಿ ಎತ್ತಿನ ಗಾಡಿಯ ಚಕ್ರಗಳನ್ನು ಬಿಚ್ಚಿ ಮತ್ತು ಜೋಡಿಸುವ ಸ್ಪರ್ಧೆ ಸಖತ್ ಕಿಕ್ ನೀಡ್ತು.

ಇನ್ನೂ ಈ ಬಾರಿ ಹಂಪಿ ಉತ್ಸವದ ಕೇಂದ್ರ ಬಿಂದುವಾಗಿದ್ದು, ಜನಪದ ವಾಹಿನಿ. ಹಂಪಿಯ ರಾಜಬೀದಿಯಲ್ಲಿ ವಿಜಯನಗರ ಕಾಲದ ವೈಭವವನ್ನು ಬಿಂಬಿಸುವ ಈ ಕಾರ್ಯಕ್ರಮದಲ್ಲಿ ಮಹಿಳಾ ಡೊಳ್ಳು ಕುಣಿತ, ಪಾಳ್ಯಗಾರ ವೇಷ, ಹಗಲು ವೇಷ, ವೀರಗಾಸ್ಯ, ನಂದಿಧ್ವಜ, ಕರಡಿ ಮಜಲು, ಕೀಲು ಕುದುರೆ, ಸೇರಿದಂತೆ ನೂರಕ್ಕೂ ಹೆಚ್ಚು ಕಲಾ ತಂಡಗಳ ಒಂದೂವರೆ ಗಂಟೆಗಳ ಕಾಲ ಮೆರವಣಿಗೆ ನಡೆಯಿತು. ಭುವನೇಶ್ವರಿ ಮೆರವಣಿಗೆ ಎಲ್ಲರ ಗಮನ ಸೆಳೆಯಿತು.

ಜನರನ್ನ ರಂಜಿಸಿದ ಸಾಂಸ್ಕೃತಿಕ ಕಾರ್ಯಕ್ರಮ: ರಾತ್ರಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದ ಸಾವಿರಾರು ಜನರನ್ನ ರಂಜಿಸಿತು. ವೇದಿಕೆಗೆ ಕಾಲಿಟ್ಟ ಬೆಂಗಳೂರು ಮೂಲದ ನೃತ್ಯ ತಂಡಗಳು ಜನರನ್ನು ಹುಚ್ಚೆದ್ದು ಕುಣಿಯವಂತೆ ಮಾಡಿದವು. ಇದರ ಜೊತೆ ಜೋಗತಿ ನೃತ್ಯ, ದುರ್ಗಿಯ ನೃತ್ಯ ರೂಪಕ, ಭರತ ನಾಟ್ಯ , ಗೀತಗಾಯನ ಜನರ ಗಮನ ಸೆಳೆಯಿತು. ನಂತರ ವೇದಿಕೆಗೆ ಬಂದ ಬಾಲಿವುಡ್ ಖ್ಯಾತ ಗಾಯಕಿ ನೀತಿ ಮೋಹನ್ ಒಂದಕ್ಕಿಂತ ಒಂದು ಹಿಟ್ ಸಾಂಗ್‌ಗಳನ್ನು ಹಾಡೋ ಮೂಲಕ ಜನರನ್ನು ರಂಜಿಸಿದ್ರು.

ಒಟ್ನಲ್ಲಿ ಒಂದ್ಕಡೆ ಕಲೆ ಸಾಹಿತ್ಯ ಸಂಬಂಧಿಸಿದ ಕಾರ್ಯಕ್ರಮಗಳು ಮತ್ತೊಂದೆಡೆ ಸಿನಿಮಾ ಹಾಡು ಸೇರಿದಂತೆ ಹತ್ತು ಹಲವು ನೃತ್ಯ ಮತ್ತು ಸಂಗೀತ ಕಾರ್ಯಕ್ರಮಗಳು ಹಂಪಿ ಉತ್ಸವದ ರಂಗನ್ನು ಹೆಚ್ಚಿಸಿದೆ. ಈ ಬಾರಿಯ ಹಂಪಿ ಉತ್ಸವ ನೆರೆದ ಸಾವಿರಾರು ಜನರಿಗೆ ಸಖತ್ ಕಿಕ್ ಕೊಟ್ಟಿದ್ದು ಮಾತ್ರ ಸುಳ್ಳಲ್ಲ.

Published On - 2:50 pm, Sun, 12 January 20

Follow Us
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

‘ಸತ್ಯ ಇನ್ ಲವ್’, ‘ಜೋಗಯ್ಯ’ ವಿಗ್ ನನಗೆ ಇಷ್ಟ ಆಗಿರಲಿಲ್ಲ: ಶಿವರಾಜ್​ಕುಮಾರ್
‘ಸತ್ಯ ಇನ್ ಲವ್’, ‘ಜೋಗಯ್ಯ’ ವಿಗ್ ನನಗೆ ಇಷ್ಟ ಆಗಿರಲಿಲ್ಲ: ಶಿವರಾಜ್​ಕುಮಾರ್
ಬೆಂಗಳೂರಿನಲ್ಲಿ ಗುಂಡಿ ಮುಕ್ತ ರಸ್ತೆಗೆ ಕೃಷ್ಣಭೈರೇಗೌಡ ಪಣ
ಬೆಂಗಳೂರಿನಲ್ಲಿ ಗುಂಡಿ ಮುಕ್ತ ರಸ್ತೆಗೆ ಕೃಷ್ಣಭೈರೇಗೌಡ ಪಣ
ದೊಮ್ಮಸಂದ್ರ ಫ್ಲೈಓವರ್ ಕಾಮಗಾರಿ ವಿಳಂಬಕ್ಕೆ ಕೃಷ್ಣಬೈರೇಗೌಡ ಅಸಮಾಧಾನ
ದೊಮ್ಮಸಂದ್ರ ಫ್ಲೈಓವರ್ ಕಾಮಗಾರಿ ವಿಳಂಬಕ್ಕೆ ಕೃಷ್ಣಬೈರೇಗೌಡ ಅಸಮಾಧಾನ
ಮಂಗಳೂರು MRPL ಸ್ಪೋಟ: 2 ಕಿ.ಮೀ ದೂರದಲ್ಲಿರುವ ಚರ್ಚ್​​​ಗೆ ಹಾನಿ
ಮಂಗಳೂರು MRPL ಸ್ಪೋಟ: 2 ಕಿ.ಮೀ ದೂರದಲ್ಲಿರುವ ಚರ್ಚ್​​​ಗೆ ಹಾನಿ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ