ಬಯಲು ಕುಸ್ತಿಯಲ್ಲಿ ಜಗಜಟ್ಟಿಗಳ ಕಾಳಗ: ಪೈಲ್ವಾನ್​ಗಳ ಖದರ್​ಗೆ ಜನತೆ ಫಿದಾ!

ಬಳ್ಳಾರಿ: ಆ ಗ್ರಾಮದಲ್ಲಿ ಮನೆಗೊಬ್ರು ಪೈಲ್ವಾನ್​​ಗಳು.. ಊರಲ್ಲಿ ಏನ್​​ ತಪ್ಪಿದ್ರೂ, ಕುಸ್ತಿ ಪಂದ್ಯಾವಳಿ ಮಾತ್ರ ತಪ್ಪಲ್ಲ. ಹಾಗೇ, ಈ ಬಾರಿಯೂ ಕೂಡ ಖದರ್​ ಕುಸ್ತಿ ನಡೀತು. ಮಟ್ಟಿ ಮೇಲೆ, ಊರಿನ ಮಕ್ಕಳೆಲ್ಲ ಧೂಳೆಬ್ಬಿಸಿದ್ರು. ಅದೇನ್​​​ ಪಟ್ಟು.. ಅದೆಂತಹ ಹಿಡಿತ.. ಮಣ್ಣಿನ ಕೆಳಗೆ ಬಿದ್ದವನ ತೆಕ್ಕೆಗೆ ಹಿಡಿದುಕೊಂಡ್ರೇ ಮುಗೀತು. ಮಿಸುಕಾಡೋ ಮಾತೇಯಿಲ್ಲ. ನೆಲಕ್ಕೆ ಒಗೆಯದೆ ಬಿಡೋದೆ ಇಲ್ಲ. ಚೋಟಾ ಪೈಲ್ವಾನ್​​ರದ್ದು ಅದೇ ಗತ್ತು. ದೊಡ್ಡರ ಆಟವಂತೂ ಸಿಕ್ಕಾಪಟ್ಟೆ ಗಮ್ಮತ್ತು. ತಾಕತ್ತು ತೋರಿಸಿದ ಪೈಲ್ವಾನರು: ಅಂದಹಾಗೆ, ಬಳ್ಳಾರಿಯ ಹಗರಿಬೊಮ್ಮನಹಳ್ಳಿನಲ್ಲಿ ಭರ್ಜರಿ ಕುಸ್ತಿ […]

ಬಯಲು ಕುಸ್ತಿಯಲ್ಲಿ ಜಗಜಟ್ಟಿಗಳ ಕಾಳಗ: ಪೈಲ್ವಾನ್​ಗಳ ಖದರ್​ಗೆ ಜನತೆ ಫಿದಾ!
Follow us
ಸಾಧು ಶ್ರೀನಾಥ್​
|

Updated on: Feb 01, 2020 | 2:56 PM

ಬಳ್ಳಾರಿ: ಆ ಗ್ರಾಮದಲ್ಲಿ ಮನೆಗೊಬ್ರು ಪೈಲ್ವಾನ್​​ಗಳು.. ಊರಲ್ಲಿ ಏನ್​​ ತಪ್ಪಿದ್ರೂ, ಕುಸ್ತಿ ಪಂದ್ಯಾವಳಿ ಮಾತ್ರ ತಪ್ಪಲ್ಲ. ಹಾಗೇ, ಈ ಬಾರಿಯೂ ಕೂಡ ಖದರ್​ ಕುಸ್ತಿ ನಡೀತು. ಮಟ್ಟಿ ಮೇಲೆ, ಊರಿನ ಮಕ್ಕಳೆಲ್ಲ ಧೂಳೆಬ್ಬಿಸಿದ್ರು. ಅದೇನ್​​​ ಪಟ್ಟು.. ಅದೆಂತಹ ಹಿಡಿತ.. ಮಣ್ಣಿನ ಕೆಳಗೆ ಬಿದ್ದವನ ತೆಕ್ಕೆಗೆ ಹಿಡಿದುಕೊಂಡ್ರೇ ಮುಗೀತು. ಮಿಸುಕಾಡೋ ಮಾತೇಯಿಲ್ಲ. ನೆಲಕ್ಕೆ ಒಗೆಯದೆ ಬಿಡೋದೆ ಇಲ್ಲ. ಚೋಟಾ ಪೈಲ್ವಾನ್​​ರದ್ದು ಅದೇ ಗತ್ತು. ದೊಡ್ಡರ ಆಟವಂತೂ ಸಿಕ್ಕಾಪಟ್ಟೆ ಗಮ್ಮತ್ತು.

ತಾಕತ್ತು ತೋರಿಸಿದ ಪೈಲ್ವಾನರು: ಅಂದಹಾಗೆ, ಬಳ್ಳಾರಿಯ ಹಗರಿಬೊಮ್ಮನಹಳ್ಳಿನಲ್ಲಿ ಭರ್ಜರಿ ಕುಸ್ತಿ ಇದು. ವೆಂಕಟೇಶ್ವರ ಸ್ವಾಮಿಯ 63ನೇ ವರ್ಷದ ರಥೋತ್ಸವ ಅಂಗವಾಗಿ ಎರಡು ದಿನಗಳ ಅಂತರಾಜ್ಯ ಬಯಲು ಕುಸ್ತಿ ಪಂದ್ಯಾವಳಿಗೆ ನಿನ್ನೆ ಚಾಲನೆ ನೀಡಲಾಯ್ತು. ಸರ್ಕಾರಿ ಕಾಲೇಜ್ ಮೈದಾನದಲ್ಲಿ ಕುಸ್ತಿ ಪಂದ್ಯಾವಳಿಯಲ್ಲಿ, ನೂರಾರು ಪೈಲ್ವಾನರು ಮಟ್ಟಿ ಮೇಲೆ ಖದರ್​ ತೋರಿಸಿದ್ರು. ಮರಿ ಪೈಲ್ವಾನ್​​ಗಳು ಕೂಡ ತಾಕತ್ತು ತೋರಿಸಿದ್ರು.

ವೆಂಕಟೇಶ್ವರ ಸ್ವಾಮಿ ಜಾತ್ರೆ ಪ್ರಯುಕ್ತ ಪ್ರತಿ ವರ್ಷ ಕುಸ್ತಿ ಪಂದ್ಯಾವಳಿ ನಡೆಯುತ್ತೆ. ಇಲ್ಲಿನ ನಾಣಿಕೇರಿ ಜಟ್ಟಿಗಳ ತವರೂರಾಗಿದ್ದು, ಸಾಕಷ್ಟು ಪೈಲ್ವಾನರಿದ್ರು. ವಿಜಯನಗರ ಸಾಮ್ರಾಜ್ಯದ ಕಾಲದಿಂದಲೂ ಇಲ್ಲಿ ಕುಸ್ತಿ ಪಂದ್ಯ ನಡೆಯುತ್ತಿದ್ದು, ಪರಂಪರೆಯನ್ನ ಮುಂದುವರಿಸಿಕೊಂಡು ಹೋಗ್ತಿದ್ದಾರೆ. ಒಟ್ನಲ್ಲಿ, ಮಟ್ಟಿಯ ಮೇಲೆ ಪೈಲ್ವಾನ್​​​​ಗಳು ಪಟ್ಟು ಹಾಕ್ತಿದ್ರೆ, ಜನರೆಲ್ಲ ಕೇಕೆ ಚಪ್ಪಾಳೆ ಹಾಕ್ತಿದ್ರು. ಕುಸ್ತಿ ಕಾಳಗ ರೋಚಕವಾಗಿತ್ತು.

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ