Belagavi session: ಬೆಳಗಾವಿ ಅಧಿವೇಶನದ ಮೊದಲ ದಿನ ಏನೇನು ನಡೆಯಿತು? ಇಲ್ಲಿದೆ ಪೂರ್ಣ ವಿವರ

ಬೆಳಗಾವಿ ಅಧಿವೇಶನ 2023: ವಿಧಾನಸಭೆಯ ಚಳಿಗಾಲದ ಅಧಿವೇಶನ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸೋಮವಾರ ಆರಂಭವಾಯಿತು. ಅಧಿವೇಶನದ ಮೊದಲ ದಿನ ವಿಧಾನಸಭೆ ಹಾಗೂ ವಿಧಾನ ಪರಿಚತ್​ನಲ್ಲಿ ಏನೇನಾಯ್ತು ಎಂಬ ಪೂರ್ಣ ವಿವರ ಇಲ್ಲಿದೆ.

Belagavi session: ಬೆಳಗಾವಿ ಅಧಿವೇಶನದ ಮೊದಲ ದಿನ ಏನೇನು ನಡೆಯಿತು? ಇಲ್ಲಿದೆ ಪೂರ್ಣ ವಿವರ
ಬೆಳಗಾವಿ ಅಧಿವೇಶನದ ಸಂದರ್ಭದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸ್ಪೀಕರ್ ಯುಟಿ ಖಾದರ್ ಅವರನ್ನು ಭೇಟಿಯಾದರು
Follow us
TV9 Web
| Updated By: Ganapathi Sharma

Updated on: Dec 04, 2023 | 7:00 PM

ಬೆಳಗಾವಿ, ಡಿಸೆಂಬರ್ 4: ವಿಧಾನಮಂಡಲದ ಚಳಿಗಾಲದ ಅಧಿವೇಶನ (Belagavi session 2023) ಸೋಮವಾರ ಬೆಳಗಾವಿಯ ಸುವರ್ಣಸೌಧದಲ್ಲಿ (Suvarna Vidhana Soudha) ಆರಂಭವಾಗಿದ್ದು, 10 ದಿನಗಳ ನಡೆಯಲಿರುವ ಕಲಾಪದ ಮೊದಲ ದಿನ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು. ಸಚಿವರು, ಶಾಸಕರು, ವಿಪಕ್ಷ ನಾಯಕರು, ಶಾಸಕರು ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿದರು. ಆದರೆ, ಸಂತಾಪ ಸೂಚನೆ ವೇಳೆ ವಿಪಕ್ಷ ನಾಯಕ ಆರ್. ಅಶೋಕ್ ಬಳಕೆ ಮಾಡಿರೋ ಪದಗಳಿಗೆ ಕಾಂಗ್ರೆಸ್ ಶಾಸಕ ಎನ್​.ಹೆಚ್ ಕೋನರೆಡ್ಡಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಿಪಕ್ಷ ನಾಯಕರು ಸಂತಾಪ ಸೂಚಿಸುವ ವೇಳೆ ಉಗ್ರ ಚಟುವಟಿಕೆಯಲ್ಲಿ ತೊಡಗಿದ್ದ ಅಂತಾ ಪದ ಬಳಕೆ ಮಾಡಿದ್ದು ಸರಿಯಲ್ಲ. ಇದನ್ನು ಕಡತದಿಂದ ತೆಗೆದು ಹಾಕಬೇಕು ಅಂತಾ ಆಗ್ರಹಿಸಿದರು.

ಇದಕ್ಕೂ ಮುನ್ನ ವಿಪಕ್ಷ ನಾಯಕ ಆರ್. ಅಶೋಕ್​ರನ್ನು ಸದನಕ್ಕೆ ಪರಿಚಯಿಸಬೇಕು ಅಂತಾ ಪಟ್ಟು ಹಿಡಿದರು. ಕಾಂಗ್ರೆಸ್ ಶಾಸಕರೇ ಆಗಿರೋ ರಾಯರೆಡ್ಡಿ ವಿಪಕ್ಷ ಸದಸ್ಯರಂತೆ ವರ್ತಿಸಿದರು. ರಾಯರೆಡ್ಡಿ ಬೇಡಿಕೆಯಿಂದ ಸಿಡಿಮಿಡಿಗೊಂಡ ಸ್ಪೀಕರ್ ಖಾದರ್, ಆರ್. ಅಶೋಕ್ ವಿಪಕ್ಷ ನಾಯಕ ಅಂತಾ ಸಣ್ಣ ಮಕ್ಕಳಿಗೂ ಗೊತ್ತಿದೆ ಅಂದರು. ಈ ವೇಳೆ ನಾವು ನಿಲುವಳಿ ನೋಟಿಸ್ ಕೊಟ್ಟಿದ್ದೇವೆ ಎಂದಷ್ಟೇ ವಿಪಕ್ಷ ನಾಯಕರ ಆರ್. ಅಶೋಕ್ ಹೇಳಿದರು.

ರಾಜ್ಯದಲ್ಲಿ ಬರಗಾಲ ಪರಿಸ್ಥಿತಿ ಬಗ್ಗೆ ಚರ್ಚೆಗೆ ಅವಕಾಶ ಕೊಡಬೇಕು ಅಂತಾ ವಿಪಕ್ಷ ಬಿಜೆಪಿ ನಿಯಮ 60ರಡಿ ನಿಲುವಳಿ ಮಂಡಿಸಿದೆ. ಇದರ ಬಗ್ಗೆ ಪಸ್ತಾಪಿಸಿದ ವಿಪಕ್ಷ ನಾಯಕ ಆರ್. ಅಶೋಕ್, ಬರಗಾಲದ ಬಗ್ಗೆ ಚರ್ಚೆಗೆ ನಿಳುವಳಿ ಮಂಡಿಸಿದ್ದೇವೆ. ಪ್ರಶ್ನೋತ್ತರಕ್ಕೂ ಮುನ್ನ ಪ್ರಸ್ತಾಪಿಸಲು ಅವಕಾಶ ಕೊಡಬೇಕು ಅಂತಾ ಪಟ್ಟು ಹಿಡಿದರು.

ವಿಪಕ್ಷ ನಾಯಕರ ಮಾತಿಗೆ ಸಿಡಿಮಿಡಿಗೊಂಡ ಸ್ಪೀಕರ್ ಯುಟಿ ಖಾದರ್, ರೋಗವನ್ನೂ ನೀವೇ ಹೇಳೊದು- ಮದ್ದೂ ನೀವೇ ಮಾಡೋದಾದ್ರೆ ನಾವು ಎಂತಕ್ಕೆ ಇಲ್ಲಿರೋದು ಅಂತಾ ಖಡಕ್ ಆಗೇ ಕೇಳಿದರು.

ಇದರ ಬೆನ್ನಲ್ಲೇ ಎದ್ದು ನಿಂತ ಶಾಸಕ ಬಸನಗೌಡ ಯತ್ನಾಳ್, ಇಂದಿನಿಂದಲೇ ಉತ್ತರಕರ್ನಾಟಕ ಭಾಗದ ಸಮಸ್ಯೆ ಬಗ್ಗೆ ಚರ್ಚೆಯಾಗಬೇಕು. ಇಲ್ಲದಿದ್ದರೆ ಧರಣಿ ಕೂರುತ್ತೇನೆ ಅಂತಾ ಎಚ್ಚರಿಸಿದರು.

ಕಲಾಪಕ್ಕೆ ಹಾಜರಾದ ಬಿಆರ್ ಪಾಟೀಲ್

ಇವತ್ತಿನ ಕಲಾಪದ ಅಚ್ಚರಿ ಅಂದರೆ, ಸರ್ಕಾರದ ವಿರದ್ಧವೇ ಸಮರ ಸಾರಿರುವ ಕಾಂಗ್ರೆಸ್ ಶಾಸಕ ಬಿಆರ್ ಪಾಟೀಲ್ ಕಲಾಪಕ್ಕೆ ಹಾಜರಾಗಿದ್ದಾರೆ. ತಮ್ಮ ಮೇಲೆ ಬಂದಿರೋ ಆರೋಪದ ಬಗ್ಗೆ ತನಿಖೆ ನಡೆಯೋವರೆಗೂ ನಾನು ವಿಧಾನಸಭಾ ಕಲಾಪಕ್ಕೆ ಹಾಜರಾಗುವುದಿಲ್ಲ ಎಂದು ಸಿಎಂಗೆ ಬರೆದಿದ್ದ ಪತ್ರದಲ್ಲೇ ಅವರು ಉಲ್ಲೇಖಿಸಿದ್ದರು. ಆದ್ರೆ ಇವತ್ತಿನ ಕಲಾಪಕ್ಕೆ ಬಿ.ಆರ್. ಪಾಟೀಲ್ ಹಾಜರಾಗಿದ್ದಾರೆ.

ಇತ್ತ ವಿಧಾನಸಭೆ ಕ್ಯಾಂಟೀನ್​ನಲ್ಲಿ ಸಚಿವ ಕೃಷ್ಣಭೈರೇಗೌಡ ಕೈಚಳಕ ತೋರಿಸಿದ್ದಾರೆ. ಆಡಳಿತಪಕ್ಷದ ಮೊಗಸಾಲೆ ಕ್ಯಾಂಟೀನ್​ನಲ್ಲಿ ತಾವೇ ಕಾಫಿ ತಯಾರಿಸಿ ಕುಡಿದಿದ್ದಾರೆ.

ಇದನ್ನೂ ಓದಿ: ವಿಧಾನಸಭೆ ಕ್ಯಾಂಟೀನ್​ನಲ್ಲಿ ಸಚಿವರ ಕೈ ಚಳಕ: ತಾವೇ ಕಾಫಿ ತಯಾರಿಸಿ ಸವಿದ ಕೃಷ್ಣಭೈರೇಗೌಡ

ವಿಧಾನಪರಿಷತ್​ನಲ್ಲಿ ವಿದ್ಯುತ್​ ಪೂರೈಕೆ ವಿಚಾರವಾಗಿ ಗದ್ದಲ, ವಾಗ್ವಾದ ನಡೆಯಿತು. ರೈತರಿಗೆ ಸೂಕ್ತ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ ಎಂದು ಬಿಜೆಪಿ ಸದಸ್ಯ ಛಲವಾದಿ ನಾರಾಯಣಸ್ವಾಮಿ ಆಕ್ರೋಶ ಹೊರಹಾಕಿದರು. ಇದಕ್ಕೆ ಉತ್ತರ ಕೊಟ್ಟ ಸಚಿವ ಪ್ರಿಯಾಂಕ್ ಖರ್ಗೆ, ಸಮಸ್ಯೆ ಇದ್ದಿದ್ದು ನಿಜ. ಈಗ ದಿನಕ್ಕೆ 7 ತಾಸು ವಿದ್ಯುತ್ ಕೊಡ್ತಿದ್ದೇವೆ ಅಂತಾ ಹೇಳಿದರು.

ಬರದ ವಿಚಾರವಾಗಿ ಚರ್ಚೆಯಲ್ಲಿ ಭಾಗವಹಿಸಿದ್ದ ಕೋಟಾ ಶ್ರೀನಿವಾಸ ಪೂಜಾರಿ ಹುಲಿ ಉಗುರಿನ ಪ್ರಕರಣವನ್ನು ಪ್ರಸ್ತಾಪಿಸಿದ್ರು. ರಾಜ್ಯದಲ್ಲಿ ಬೀಕರವಾದ ಬರ ಇದೆ. ಆದ್ರೆ ಸರ್ಕಾರ ಹುಲಿ ಉಗುರಿನ ಹಿಂದೆ ಬಿದ್ದಿತ್ತು ಅಂತಾ ಕುಟುಕಿದ್ದಾರೆ.

ಚಳಿಗಾಲದ ಅಧಿವೇಶನದ ಮೊದಲ ದಿನ ಕಲಾಪದಲ್ಲೇ ಗದ್ದಲ ಗಲಾಟೆ ನಡೆದಿದೆ. ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಸಕಲ ಸಿದ್ಧತೆ ಮಾಡಿರೋ ವಿಪಕ್ಷ ಬಿಜೆಪಿ, ಜೆಡಿಎಸ್ ನಾಯಕರು, ಹಲವು ಪ್ರಮುಖ ವಿಚಾರಗಳನ್ನ ಮುಂದಿಟ್ಟು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ಲ್ಯಾನ್ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್