ಸ್ಫೋಟಗೊಂಡ ಕಲ್ಲು ತಗುಲಿ ತಂದೆ ಜತೆ ತೆರಳಿದ್ದ ಬಾಲಕ ಸ್ಥಳದಲ್ಲೇ ದುರ್ಮರಣ
ಬೆಳಗಾವಿ: ಕ್ರಷರ್ನಲ್ಲಿ ಸ್ಫೋಟಗೊಂಡ ಕಲ್ಲು ತಗುಲಿ 10 ವರ್ಷದ ಬಾಲಕ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಅಥಣಿ ಪಟ್ಟಣ ಹೊರವಲಯದ ಬುಟಾಳಿ ಬಳಿ ಸಂಭವಿಸಿದೆ. ನಂದಗಾವ ಗ್ರಾಮದ ಮಹಾವೀರ್ ನಾಗನೂರ್(10) ಮೃತ ಬಾಲಕ. ಬುಟಾಳಿ ಸ್ಟೋನ್ ಕ್ರಷರ್ ಬಳಿ ತಂದೆಯೊಂದಿಗೆ ಮಹಾವೀರ್ ನಾಗನೂರ್ ತೆರಳಿದ್ದ. ಕ್ರಷರ್ನಲ್ಲಿ ಕೆಲವು ಕಲ್ಲುಗಳನ್ನು ಬ್ಲಾಸ್ಟ್ ಮಾಡುತ್ತಿದ್ದರು. ಈ ವೇಳೆ ಸ್ಫೋಟಗೊಂಡ ಕಲ್ಲು ಬಡಿದು ಬಾಲಕ ಮೃತಪಟ್ಟಿದ್ದಾನೆ. ಘಟನೆ ನಡೆಯುತ್ತಿದ್ದಂತೆ ಸ್ಥಳದಿಂದ ಸ್ಟೋನ್ ಕ್ರಷರ್ ಮಾಲೀಕ ಮತ್ತು ಕಾರ್ಮಿಕರು ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಅಥಣಿ […]
ಬೆಳಗಾವಿ: ಕ್ರಷರ್ನಲ್ಲಿ ಸ್ಫೋಟಗೊಂಡ ಕಲ್ಲು ತಗುಲಿ 10 ವರ್ಷದ ಬಾಲಕ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಅಥಣಿ ಪಟ್ಟಣ ಹೊರವಲಯದ ಬುಟಾಳಿ ಬಳಿ ಸಂಭವಿಸಿದೆ. ನಂದಗಾವ ಗ್ರಾಮದ ಮಹಾವೀರ್ ನಾಗನೂರ್(10) ಮೃತ ಬಾಲಕ.
ಬುಟಾಳಿ ಸ್ಟೋನ್ ಕ್ರಷರ್ ಬಳಿ ತಂದೆಯೊಂದಿಗೆ ಮಹಾವೀರ್ ನಾಗನೂರ್ ತೆರಳಿದ್ದ. ಕ್ರಷರ್ನಲ್ಲಿ ಕೆಲವು ಕಲ್ಲುಗಳನ್ನು ಬ್ಲಾಸ್ಟ್ ಮಾಡುತ್ತಿದ್ದರು. ಈ ವೇಳೆ ಸ್ಫೋಟಗೊಂಡ ಕಲ್ಲು ಬಡಿದು ಬಾಲಕ ಮೃತಪಟ್ಟಿದ್ದಾನೆ. ಘಟನೆ ನಡೆಯುತ್ತಿದ್ದಂತೆ ಸ್ಥಳದಿಂದ ಸ್ಟೋನ್ ಕ್ರಷರ್ ಮಾಲೀಕ ಮತ್ತು ಕಾರ್ಮಿಕರು ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.