AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈತ ಸನ್ನಿ ಲಿಯೋನಿ ಮಗನಾ ಅಥವಾ ಬೇರೆಯವರ ಮಗನಾ? ಜಾಗೋ ಹಿಂದೂ ಸಮಾವೇಶದಲ್ಲಿ ನಾಲಿಗೆ ಹರಿಬಿಟ್ಟ ಹಿಂದೂ ಮುಖಂಡ ಧನಂಜಯ್

ಕರ್ನಾಟಕದಲ್ಲಿ ಓರ್ವನ ತಾಯಿಯ ಪತಿ ಅಶ್ಲೀಲ ಇದ್ದಾನೆ, ಹೀಗಾಗಿ ಆತನ ತಾಯಿಯ ಪತಿ ಹುಡುಕಾಡಲು ಬಂದಿರುವೆ ಎಂದು ಕಾಂಗ್ರೆಸ್​ನ ಸತೀಶ್ ಜಾರಕಿಹೊಳಿ ವಿರುದ್ಧ ಹಿಂದೂ ಮುಖಂಡರೊಬ್ಬರು ನಾಲಗೆ ಹರಿಬಿಟ್ಟಿದ್ದಾರೆ.‘

ಈತ ಸನ್ನಿ ಲಿಯೋನಿ ಮಗನಾ ಅಥವಾ ಬೇರೆಯವರ ಮಗನಾ? ಜಾಗೋ ಹಿಂದೂ ಸಮಾವೇಶದಲ್ಲಿ ನಾಲಿಗೆ ಹರಿಬಿಟ್ಟ ಹಿಂದೂ ಮುಖಂಡ ಧನಂಜಯ್
ಧನಂಜಯ್ ಭಾತ್ ದೇಸಾಯಿ ಮತ್ತು ಸತೀಶ್ ಜಾರಕಿಹೊಳಿ
TV9 Web
| Updated By: Rakesh Nayak Manchi|

Updated on:Dec 18, 2022 | 8:40 AM

Share

ಬೆಳಗಾವಿ: ತಾಲೂಕಿನ ಕಡೋಲಿ ಗ್ರಾಮದಲ್ಲಿ ನಿನ್ನೆ ರಾತ್ರಿ ಬಿಜೆಪಿ ವತಿಯಿಂದ ಜಾಗೋ ಹಿಂದೂ ಸಮಾವೇಶ (Jago Hindu Samavesha) ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಹಿಂದೂ ರಾಷ್ಟ್ರ ಸೇನಾ ಅಧ್ಯಕ್ಷ ಧನಂಜಯ ಭಾಯ್ ದೇಸಾಯಿ, ಹಿಂದೂ (Hindu) ಪದ ಅಶ್ಲೀಲ ಎಂಬ ಹೇಳಿಕೆ ನೀಡಿದ್ದ ಕೆಪಿಸಿಸಿ ಕಾರ್ಯದರ್ಶಿ ಸತೀಶ್ ಜಾರಕಿಹೊಳಿ (Sathish Jarakiholi) ವಿರುದ್ಧ ನಾಲಗೆ ಹರಿಬಿಟ್ಟಿದ್ದಾರೆ. ಕರ್ನಾಟಕದಲ್ಲಿ ಓರ್ವನ ತಾಯಿಯ ಪತಿ ಅಶ್ಲೀಲ ಇದ್ದಾನೆ, ಹೀಗಾಗಿ ಆತನ ತಾಯಿಯ ಪತಿ ಹುಡುಕಾಡಲು ಬಂದಿರುವೆ. ವಿಧಾನಸಭೆಯ ಫಾರಂ ಮೇಲೆ ಹಿಂದೂ ಅಂತಾ ಬರೀತಾರೆ. ಬಳಿಕ ತಾವು ಹುಟ್ಟಿ ಬಂದ ತಾಯಿಯ ಗರ್ಭವನ್ನೇ ಅಶ್ಲೀಲ ಅಂತಾರೆ. ಈತ ಸನ್ನಿ ಲಿಯೋನಿ (Sunny Leone) ಮಗನಿದ್ದಾನಾ ಅಥವಾ ಬೇರೆಯವರ ಮಗನಿದ್ದಾನಾ ಎಂದು ಧನಂಜಯ್ ಪ್ರಶ್ನಿಸಿದ್ದಾರೆ.

ಇಂತಹ ಪೂರ್ನ್ ಸ್ಟಾರ್‌ಗಳು ಎಲ್ಲಿಂದ ಬರ್ತಾರೆ? ಇಂತವರನ್ನು ವಿಧಾನಸಭೆಗೆ ಕಳಿಸಿ ನಮ್ಮ ಸಮಾಜ ನಾಚುವ ಹಾಗೇ ಏಕೆ ಮಾಡುತ್ತಿದ್ದೇವೆ. ಅಶ್ಲೀಲ ಧರ್ಮದಲ್ಲಿ ಹುಟ್ಟಿದೆ ಎಂದು ಅವರಿಗೇಕೆ ಅನಿಸುತ್ತಿದೆ? ಈ ಬಗ್ಗೆ ತನಿಖೆಗೆ ಕರ್ನಾಟಕ ಸರ್ಕಾರ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಒಂದು ಸಮಿತಿ ರಚನೆ ಮಾಡಲಿ. ಅವನ ತಂದೆ ತಾಯಿಯ ಮದುವೆಯಿಂದ ಮೊದಲ ರಾತ್ರಿವರೆಗೆ ಅವನ ತಂದೆಯೇ ನುಗ್ಗಿದ್ದನೋ ಬೇರೆಯವರು ನುಗ್ಗಿದ್ದರೋ ಎನ್ನುವುದನ್ನು ತನಿಖೆ ಮಾಡಲಿ ಎಂದು ಹೇಳಿದರು.

ಇದನ್ನೂ ಓದಿ: ಬಿಜೆಪಿ ನಾಯಕರ ಕಿತ್ತಾಟದಲ್ಲಿ ಆಪರೇಷನ್ ಕಮಲದ ಹಣ ಬಯಲಿಗೆ, ಕಾಂಗ್ರೆಸ್​ನಿಂದ ಲೋಕಾಯುಕ್ತಕ್ಕೆ ದೂರು

ಹಿಂದೂ ಹಿತದ ಬಗ್ಗೆ ಯಾರೋ ಮಾತನಾಡುತ್ತಾರೆಯೋ ಅವರೇ ದೇಶ ನಡೆಸಬೇಕು ಎಂದು ಸಂಕಲ್ಪ ಮಾಡಿ. ಹಿಂದೂ ಹಿತದ ಬಗ್ಗೆ ಯೋಚಿಸುವವರೇ ಪ್ರಧಾನಿ, ಮುಖ್ಯಮಂತ್ರಿ, ಸಂಸದ, ಶಾಸಕ, ನಗರಸೇವಕ, ಪಂಚಾಯತಿ ಸದಸ್ಯರಾಗಬೇಕು. ಹಿಂದೂ ಶಬ್ದ ಸನಾತನ ಧರ್ಮ ಗೌರವಿಸುವವರು ನಮ್ಮ ರಾಜಕೀಯ ಪ್ರತಿನಿಧಿ ಆಗಬೇಕು. ಕರ್ನಾಟಕ, ಮಹಾರಾಷ್ಟ್ರ ಸೇರಿ ಯಾವುದೇ ರಾಜ್ಯದ ವಿಧಾನಸಭೆ ಇರಲಿ ಹಿಂದೂ ಶಾಸಕರಾಗಬೇಕು. ಮುಂಬರುವ ದಿನಗಳಲ್ಲಿ ಹಿಂದೂ ರಾಷ್ಟ್ರ ನಿರ್ಮಾಣ ಆಗಬೇಕು ಎಂದು ಧನಂಜಯ್ ಹೇಳಿದರು.

ರಾಹುಲ್ ಗಾಂಧಿ ಭಾರತ್ ಜೋಡೋ ಅಲ್ಲ ಭಾರತ್ ತೋಡೋ ಯಾತ್ರೆ ಮಾಡುತ್ತಿದ್ದಾರೆ. ಯಾವಾಗ ಚೀನಾ ಪರ ಮಾತನಾಡ್ತಾರೆ, ಯಾವಾಗ ಅಮೇರಿಕ, ಸಾವರ್ಕರ್ ವಿರುದ್ಧ ಮಾತನಾಡುತ್ತಾರೆ ಗೊತ್ತಾಗಲ್ಲ. ಭಾರತ ವಿರೋಧಿ ವ್ಯಕ್ತಿತ್ವ, ಇಸ್ಲಾಮಿಕ್ ಜಿಹಾದಿ, ಲವ್ ಜಿಹಾದ್, ಪಿಎಫ್ಐ ಬೆಂಬಲಿಸುವರು ರಾಹುಲ್ ಗಾಂಧಿ ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು.

ಚುನಾವಣೆಯಲ್ಲಿ ಸೋಲಿಸಲು ಬಿಜೆಪಿ ಟಾರ್ಗೆಟ್ ಮಾಡಿದ ಹಿಟ್​​ಲಿಸ್ಟ್​ನಲ್ಲಿ ಕಾಂಗ್ರೆಸ್​ನ ಪ್ರಬಲ ನಾಯಕರಲ್ಲೊಬ್ಬರಾಗಿರುವ ಸತೀಶ್ ಜಾರಕಿಹೊಳಿ ಇದ್ದಾರೆ. ಹಿಂದೂ ಪದದ ಬಗ್ಗೆ ವಿವಾದ ಸೃಷ್ಟಿಸಿದ ಇವರ ವಿರುದ್ಧ ಹಿಂದೂಗಳನ್ನು ಒಗ್ಗೂಡಿಸಲು ಬಿಜೆಪಿ ಕಡೋಲಿ ಗ್ರಾಮದಲ್ಲಿ ಜಾಗೋ ಹಿಂದೂ ಸಮಾವೇಶ ನಡೆಸಿತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:39 am, Sun, 18 December 22