AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೋಳಿ ಹಬ್ಬದ ದಿನವೇ ಮಹಾರಾಷ್ಟ್ರದಲ್ಲಿ ಕಿಡಿಗೇಡಿಗಳ ಪುಂಡಾಟ: ಕರ್ನಾಟಕ ಬಸ್ ಮೇಲೆ ಬಾಟಲಿ ತೂರಾಟ

ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಇಚಲಕರಂಜಿಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ಬಸ್ ಮೇಲೆ ಕಲ್ಲು ತೂರಾಟ ಮಾಡಿರುವಂತಹ ಘಟನೆ ನಡೆದಿದೆ. ಆ ಮೂಲಕ ಮತ್ತೆ ಗಡಿಯಲ್ಲಿ ಮಹಾರಾಷ್ಟ್ರ ಪುಂಡರು ಕ್ಯಾತೆ ಶುರು ಮಾಡಿದ್ದಾರೆ. ಚಿಕ್ಕೋಡಿ ಮತ್ತು ಇಚಲಕರಂಜಿ ನಡುವೆ ಸಂಚರಿಸುತ್ತಿದ್ದ ಬಸ್‌ಗೆ ಕಲ್ಲು ತೂರಾಟದಿಂದ ಹಿಂಬದಿಯ ಗಾಜು ಪುಡಿಪುಡಿಯಾಗಿದೆ.

ಹೋಳಿ ಹಬ್ಬದ ದಿನವೇ ಮಹಾರಾಷ್ಟ್ರದಲ್ಲಿ ಕಿಡಿಗೇಡಿಗಳ ಪುಂಡಾಟ: ಕರ್ನಾಟಕ ಬಸ್ ಮೇಲೆ ಬಾಟಲಿ ತೂರಾಟ
ಹೋಳಿ ಹಬ್ಬದ ದಿನವೇ ಮಹಾರಾಷ್ಟ್ರದಲ್ಲಿ ಕಿಡಿಗೇಡಿಗಳ ಪುಂಡಾಟ: ಕರ್ನಾಟಕ ಬಸ್ ಮೇಲೆ ಬಾಟಲಿ ತೂರಾಟ
Sahadev Mane
| Edited By: |

Updated on: Mar 14, 2025 | 6:15 PM

Share

ಬೆಳಗಾವಿ, ಮಾರ್ಚ್​​ 14: ಮತ್ತೆ ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿದೆ. ಹೋಳಿ (holi) ಹಬ್ಬದ ದಿನವೇ ಕರ್ನಾಟಕ, ಮಹಾರಾಷ್ಟ್ರ ಬಸ್​​ಗೆ (bus) ಮಹಾರಾಷ್ಟ್ರದಲ್ಲಿ ಪುಂಡರು ಬಾಟಲಿ ಹೊಡೆದಿದ್ದಾರೆ. ಬಸ್​​ಗಳ ಗಾಜು ಪುಡಿ ಪುಡಿಯಾಗಿದ್ದರೆ, ಇತ್ತ ಘಟನೆ ಕುರಿತು ದೂರು ಕೂಡ ದಾಖಲಾಗಿದೆ. ಇತ್ತ ಬೆಳಗಾವಿಯಲ್ಲಿ ಕನ್ನಡವೇ ಆಡಳಿತ ಭಾಷೆ ಅಂತಾ ಡಿಸಿ ಮೊಹಮ್ಮದ್ ರೋಷನ್ ಖಡಕ್ ಆಗಿ ಹೇಳಿದ್ದಾರೆ.

ಮತ್ತೆ ಗಡಿಯಲ್ಲಿ ಮಹಾ ಪುಂಡರು ಕ್ಯಾತೆ

ಹೌದು! ಮೊನ್ನೆಯಷ್ಟೇ ಮರಾಠಿಯಲ್ಲಿ ಮಾತನಾಡಲಿಲ್ಲ ಅಂತಾ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಬಸ್ ಕಂಡೆಕ್ಟರ್ ಮೇಲೆ ಹಲ್ಲೆ ನಡೆದು ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಒಂದು ವಾರಗಳ ಕಾಲ ಉಭಯ ರಾಜ್ಯಗಳಿಗೆ ಬಸ್ ಸಂಚಾರ ಬಂದ್ ಆಗಿ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೆ ಗಡಿಯಲ್ಲಿ ಮಹಾ ಪುಂಡರು ಕ್ಯಾತೆ ಶುರು ಮಾಡಿದ್ದಾರೆ. ಹೋಳಿ ಹಬ್ಬದ ದಿನವೇ ಮಹಾರಾಷ್ಟ್ರದಲ್ಲಿ ಕಿಡಿಗೇಡಿಗಳು ಪುಂಡಾಟ ಪ್ರದರ್ಶಿಸಿದ್ದಾರೆ.

ಇದನ್ನೂ ಓದಿ: ಬಸ್ ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ್ದ ಮತ್ತೊಬ್ಬನ ಬಂಧನ: ನಾಲಗೆ ಹರಿಬಿಟ್ಟ MES ಮುಖಂಡ

ಇದನ್ನೂ ಓದಿ
Image
ಬಸ್ ಕಂಡಕ್ಟರ್ ಮೇಲೆ ಹಲ್ಲೆ, ಮತ್ತೊಬ್ಬನ ಬಂಧನ: ನಾಲಗೆ ಹರಿಬಿಟ್ಟ MES ಮುಖಂಡ
Image
ಪರಿಸ್ಥಿತಿ ಉದ್ವಿಗ್ನ: ಮಹಾರಾಷ್ಟ್ರ-ಕರ್ನಾಟಕ ನಡುವೆ ಬಸ್​ ಸೇವೆ ಸ್ಥಗಿತ!
Image
ಕಂಡಕ್ಟರ್ ಮೇಲೆ ಹಲ್ಲೆ ಪ್ರಕರಣ: ಬೆಳಗಾವಿ ಗಡಿಯಲ್ಲಿ ನಿಜಕ್ಕೂ ನಡೆದಿದ್ದೇನು?
Image
ಹಲ್ಲೆಗೆ ಮೊದಲು ಭಾಷೆಗೆ ಸಂಬಂಧಿಸಿದ ತಗಾದೆ ಶುರುವಾಗಿದ್ದು ಸತ್ಯ: ಪೊಲೀಸ್

ಇಂದು ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಇಂಚಲಕರಂಜಿಯಲ್ಲಿ ಕಿಡಿಗೇಡಿಗಳು ಪುಂಡಾಟ ಮೆರದಿದ್ದಾರೆ. ಪುಂಡರ ಗುಂಪೊಂದು ಏಕಾಏಕಿ ಕರ್ನಾಟಕ ಬಸ್ ಮೇಲೆ ಬಾಟಲಿ ತೂರಾಟ ಮಾಡಿದ್ದಾರೆ. ನಿತ್ಯ ಇಚಲಕರಂಜಿ ಚಿಕ್ಕೋಡಿ ರಾಯಬಾಗ ಜಮಖಂಡಿ ನಡುವೆ ಸಂಚರಿಸುತ್ತಿದ್ದ ಬಸ್ ಇದಾಗಿದ್ದು ಇಂದು ಬೆಳಗ್ಗೆ ಎಂಟು ಗಂಟೆ ಸುಮಾರಿಗೆ ಬಸ್ ಮೇಲೆ ಬಾಟಲ್ ತೂರಿದ್ದು ಬೆಳಕಿಗೆ ಬಂದಿದೆ. ಇದರಿಂದ ರಾಯಬಾಗ ಡಿಪೋದ ಒಂದು ಕರ್ನಾಟಕ ಬಸ್​​ನ ಗಾಜು ಪುಡಿ ಪುಡಿ ಆಗಿದ್ದರೆ, ಮತ್ತೊಂದೆಡೆಗೆ ಮಹಾರಾಷ್ಟ್ರದ 6 ಬಸ್ ಗಳು ಸಹ ಜಖಂಗೊಂಡಿವೆ.

ಆರಂಭದಲ್ಲಿ ಕರ್ನಾಟಕ ಬಸ್​ಗೆ ಪುಂಡರು ಗಡಿ ವಿವಾದ ವಿಚಾರಕ್ಕೆ ಕಲ್ಲು ತೂರಾಟ ನಡೆಸಿದ್ದಾರೆ ಎಂಬ ಗಾಳಿ ಸುದ್ದಿ ರಭಸವಾಗಿ ಹರಡಿತ್ತು. ಆದರೆ ಹೋಳಿ ಹಬ್ಬದ ಪ್ರಯುಕ್ತ ಎರಡು ಗುಂಪುಗಳ ಗಲಾಟೆಯಿಂದ ಈ ಘಟನೆ ನಡೆದಿದೆ. ಈ ಬಗ್ಗೆ ಇಂಚಲಕರಂಜಿ ಶಿವಾಜಿ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಪ್ರಕರಣ ಸಂಬಂಧ 20 ಜನ ಕೀಡಗೇಡಿಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ ಅಂತಾ ಬೆಳಗಾವಿ ಎಸ್ಪಿ ಡಾ.ಭೀಮಾಶಂಕರ್ ಗುಳೇದ್ ಮಾಹಿತಿ ನೀಡಿದ್ದಾರೆ. ಇನ್ನೂ ಘಟನೆ ಕುರಿತು ಬಸ್ ಡ್ರೈವರ್ ಕೂಡ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಬೆಳಗಾವಿಯಲ್ಲಿ ಕನ್ನಡವೇ ಸಾರ್ವಭೌಮ: ಡಿಸಿ ಮೊಹಮ್ಮದ್ ರೋಷನ್

ಇನ್ನೂ ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿ ಬೂದಿ ಮುಚ್ಚಿದ ಕೆಂಡದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತ ಮರಾಠಿಯಲ್ಲಿ ದಾಖಲೆಗಳನ್ನ ನೀಡುವಂತೆ ಕೆಲ ಕಿಡಗೇಡಿಗಳು ಬೆಳಗಾವಿಯಲ್ಲಿ ಕಿರಿಕ್ ಮಾಡ್ತಿದ್ದು, ಅವರಿಗೆ ಬೆಳಗಾವಿ ಡಿಸಿ ಮೊಹಮ್ಮದ್ ರೋಷನ್ ಖಡಕ್ ಸಂದೇಶ ನೀಡಿದ್ದಾರೆ. ಬೆಳಗಾವಿಯಲ್ಲಿ ಕನ್ನಡವೇ ಸಾರ್ವಭೌಮ. ಇಲ್ಲಿ ಕನ್ನಡವೇ ಆಡಳಿತ ಭಾಷೆಯಿದೆ, ಇರುತ್ತೆ ಅಂತಾ ಕನ್ನಡಿಗರಿಗೆ ಅಭಯ ನೀಡಿದ್ದಾರೆ.

ಬೆಳಗಾವಿ, ಖಾನಾಪುರ ತಾಲೂಕಿನಲ್ಲಿ ಮರಾಠಿ ಭಾಷೆಯಲ್ಲಿ ದಾಖಲೆ ಕೊಡ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಆದರೆ ಈ ಆರೋಪವನ್ನ ಜಿಲ್ಲಾಡಳಿತ ಸ್ಪಷ್ಟವಾಗಿ ತಳ್ಳಿ ಹಾಕಿದೆ. ಎರಡು ವಾರದ ಹಿಂದೆ ಕೇಂದ್ರದಿಂದ ಭಾಷಾ ಅಲ್ಪಸಂಖ್ಯಾತ ಆಯೋಗದ ಸಹಾಯಕ ಆಯುಕ್ತರು ಬೆಳಗಾವಿಗೆ ಭೇಟಿ ನೀಡಿದ್ದರು. ‌ಆಗ ಕೆಲ ಎಂಇಎಸ್ ಪುಂಡರು ‌ಮರಾಠಿ ಭಾಷೆಯಲ್ಲಿ ದಾಖಲೆ ಒದಗಿಸುವಂತೆ ಮನವಿ ಮಾಡಿದ್ದರು. ಇದು ಜಿಲ್ಲಾಡಳಿತದ ಗಮನಕ್ಕೂ ಬಂದಿತ್ತು. ಆದರೆ ಕಾನೂನಿನ ಸಲಹೆ ಪಡೆದು ಕ್ರಮವಹಿಸುವುದಾಗಿ ಜಿಲ್ಲಾಡಳಿತ ಆಯೋಗಕ್ಕೆ ತಿಳಿಸಿತ್ತು.‌ ಇದನ್ನೆ ಕೆಲವರು ಗೊಂದಲ ಸೃಷ್ಟಿಸುವ ಕೆಲಸವನ್ನ ಮಾಡಿದ್ದಾರೆ. ‌ಆದರೆ ಬೆಳಗಾವಿಯಲ್ಲಿ ಕನ್ನಡವೇ ಆಡಳಿತ ಭಾಷೆ ಇದೇ ಇರುತ್ತದೆ ಅಂತಾ ಗಟ್ಟಿಯಾಗಿ ಡಿಸಿ ಮೊಹಮ್ಮದ್ ರೋಷನ್ ಹೇಳಿದ್ದಾರೆ.

ಇದನ್ನೂ ಓದಿ: ಬೆಳಗಾವಿ ಗಡಿಯಲ್ಲಿ ಪರಿಸ್ಥಿತಿ ಉದ್ವಿಗ್ನ: ಮಹಾರಾಷ್ಟ್ರ-ಕರ್ನಾಟಕ ನಡುವೆ ಬಸ್​ ಸೇವೆ ಸ್ಥಗಿತ

ಒಟ್ಟಿನಲ್ಲಿ ಮಹಾರಾಷ್ಟ್ರದಲ್ಲಿ ಕರ್ನಾಟಕ ಬಸ್​​ಗೆ ಬಾಟಲಿ ಎಸೆತ ಪ್ರಕರಣವನ್ನ ಅಲ್ಲಿರುವ ಪೊಲೀಸರು ಗಂಭೀರವಾಗಿ ತೆಗೆದುಕೊಂಡು ತನಿಖೆಯನ್ನ ನಡೆಸ್ತಿದ್ದಾರೆ. ಯಾವ ಕಾರಣಕ್ಕಾಗಿ ಘಟನೆ ನಡೆದಿದೆ ಅನ್ನೋದರ ಬಗ್ಗೆ ಮಾಹಿತಿ ಪಡೆಯುತ್ತಿದ್ದು, ಭಾಷಾ ವಿಚಾರಕ್ಕೆ ಆಗಿಲ್ಲ ಅನ್ನೋದು ಮಹಾರಾಷ್ಟ್ರ ಪೊಲೀಸರ ಮಾಹಿತಿ. ಆದರೂ ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿ ಗಡಿ ವಿವಾದ ಬೂದಿಮುಚ್ಚಿದ ಕೆಂಡದಂತಿದೆ. ಹೀಗಾಗಿ ಉಭಯ ರಾಜ್ಯಗಳ‌ ಉದ್ವಿಗ್ನ ವಾತಾವರಣ ಸೃಷ್ಟಿಯಾಗದಂತೆ ಗಡಿಗೆ ಹೊಂದಿಕೊಂಡ ಜಿಲ್ಲೆ ಹಿನ್ನೆಲೆ ಅಧಿಕಾರಿಗಳು, ಪೊಲೀಸರು ಮತ್ತು ಸರ್ಕಾರ ಎಚ್ಚರವಹಿಸಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.