ಬೆಳಗಾವಿ ಬಗ್ಗೆ ನಿಮಗೆಷ್ಟು ಗೊತ್ತು? ಈ ಜಿಲ್ಲೆ ಯಾವುದಕ್ಕೆಲ್ಲ ಪ್ರಸಿದ್ಧಿ ಪಡೆದಿದೆ ನೋಡಿ

ಎರಡನೇ ಅತೀ ದೊಡ್ಡ ಜಿಲ್ಲೆಯಂತಲೂ ಬೆಳಗಾವಿಯನ್ನ ಕರೆಯಲಾಗುತ್ತದೆ. 15 ತಾಲೂಕುಗಳಿದ್ದು, 18 ವಿಧಾನಸಭಾ ಕ್ಷೇತ್ರ ಮೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯನ್ನ ಬೆಳಗಾವಿ ಹೊಂದಿದೆ.

ಬೆಳಗಾವಿ ಬಗ್ಗೆ ನಿಮಗೆಷ್ಟು ಗೊತ್ತು? ಈ ಜಿಲ್ಲೆ ಯಾವುದಕ್ಕೆಲ್ಲ ಪ್ರಸಿದ್ಧಿ ಪಡೆದಿದೆ ನೋಡಿ
ಸುವರ್ಣ ವಿಧಾನಸೌಧ
Follow us
TV9 Web
| Updated By: sandhya thejappa

Updated on: Mar 04, 2022 | 4:09 PM

ಬೆಳಗಾವಿ: ಜಿಲ್ಲೆಯನ್ನು ಕರ್ನಾಟಕದ ಎರಡನೇ ರಾಜಧಾನಿ (Capital City) ಅಂತಾ ಕರೆಯುತ್ತಾರೆ. ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ಇದ್ದು, ವರ್ಷಕ್ಕೆ ಒಂದು ಬಾರಿ ಈ ಸುವರ್ಣ ವಿಧಾನಸೌಧದಲ್ಲಿ (suvarna vidhana soudha) ಅಧಿವೇಶನ ನಡೆಸಲಾಗುತ್ತದೆ. ಪ್ರತಿ ವರ್ಷ ಡಿಸೆಂಬರ್ನಲ್ಲಿ ಚಳಿಗಾಲದ ಅಧಿವೇಶನ ನಡೆಸಿ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಕುರಿತು ಚರ್ಚೆ ಮಾಡಲಾಗುತ್ತೆ. ಇನ್ನೂ 2011ರ ಜನಗಣತಿ ಪ್ರಕಾರ, ಜಿಲ್ಲೆಯಲ್ಲಿ 47 ಲಕ್ಷ 79 ಸಾವಿರ ಜನಸಂಖ್ಯೆ ಇದ್ದರೆ, ಇತ್ತೀಚೆಗೆ ನಡೆದ ಚುನಾವಣೆಯಲ್ಲಿನ ಜನಸಂಖ್ಯೆ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ 55 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇದೆ ಎನ್ನಲಾಗುತ್ತಿದೆ.

ಎರಡನೇ ಅತೀ ದೊಡ್ಡ ಜಿಲ್ಲೆ: ಎರಡನೇ ಅತೀ ದೊಡ್ಡ ಜಿಲ್ಲೆಯಂತಲೂ ಬೆಳಗಾವಿಯನ್ನ ಕರೆಯಲಾಗುತ್ತದೆ. 15 ತಾಲೂಕುಗಳಿದ್ದು, 18 ವಿಧಾನಸಭಾ ಕ್ಷೇತ್ರ ಮೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯನ್ನ ಬೆಳಗಾವಿ ಹೊಂದಿದೆ. ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿಯನ್ನ ಹಿಡಿದು ಈ ಬಾರಿ ಇತಿಹಾಸ ಬರೆದಿದೆ.

ಬೆಳಗಾವಿಯಲ್ಲಿ ಗಡಿ ವಿವಾದ ಮಾತ್ರ ಹಲವು ದಶಕಗಳಿಂದ ಇದೆ. ಈ ವಿಚಾರ ಸುಪ್ರೀಂ ಕೋರ್ಟ್ ಅಂಗಳದಲ್ಲಿದೆ. ಬಹುಭಾಷಿಕರು ನೆಲೆಸಿರುವ ಕುಂದಾನಗರಿಯು ವೈವಿಧ್ಯಮಯ ಸಂಪ್ರದಾಯ, ವಿಭಿನ್ನ ಹಬ್ಬ-ಆಚರಣೆಗಳಿಗೂ ಸಾಕ್ಷಿಯಾಗುತ್ತದೆ. ಖಾದ್ಯಗಳ ವಿಚಾರಕ್ಕೆ ಬಂದರೆ ಸುಪ್ರಸಿದ್ಧ ಕುಂದಾ-ಕರದಂಟು ಜಗತ್ತಿಗೆ ಪ್ರಸಿದ್ಧಿ ಪಡೆದಿವೆ. ಉಡುಗೆ-ತೊಡುಗೆಯಲ್ಲಿ ಇತರೆ ಜಿಲ್ಲೆಗಳಿಗಿಂತ ಬೆಳಗಾವಿ ತುಸು ವಿಭಿನ್ನವಾಗಿದೆ. ಇಲ್ಲಿ ಕುಂದಾ, ನಂತರ ಗೋಕಾಕ ಕರದಂಟು ಪ್ರಸಿದ್ಧಿ ಪಡೆದಿದೆ.

ಮುಂಬೈ ಮಾದರಿಯಲ್ಲಿ ಜೀವನ ಶೈಲಿ: ಬೆಳಗಾವಿ ಜಿಲ್ಲೆ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯದ ಗಡಿಗೆ ಹೊಂದಿಕೊಂಡಿದ್ದು, ಮುಂಬೈ ಮಾದರಿಯಲ್ಲಿ ಇಲ್ಲಿನ ಜೀವನ ಶೈಲಿ ಇದೆ. ಕನ್ನಡದ ಜತೆಗೆ ಮರಾಠಿ, ಹಿಂದಿ, ಉರ್ದು, ಕೊಂಕಣಿ ಹೀಗೆ ಎಲ್ಲ ಭಾಷಿಕರು ಜಿಲ್ಲೆಯಲ್ಲಿ ನೆಲೆಸಿದ್ದಾರೆ. ವಿಜಯದಶಮಿ ಸಂದರ್ಭದಲ್ಲಿ ಬೆಳಗಾವಿಯಲ್ಲಿ ದುರ್ಗಾಮಾತಾ ದೌಡ್ ಆಚರಿಸಲಾಗುತ್ತದೆ. ಒಂಬತ್ತು ದಿನಗಳ ಕಾಲ ಸಾವಿರಾರು ಪುರುಷ-ಮಹಿಳೆಯರು ಸೇರಿ ಪ್ರತಿ ಬಡಾವಣೆಗಳಿಗೆ ಪಥಸಂಚಲನ ನಡೆಸುತ್ತಾರೆ. ಬಿಳಿ ಬಟ್ಟೆ ಧರಿಸಿ ಸೊಂಟಕ್ಕೆ ಕೇಸರಿ ಬಟ್ಟೆ, ಕೇಸರಿ ಪೇಟದಲ್ಲಿ ಜನರು ಮಿಂಚುತ್ತಾರೆ. ರಾಜ್ಯದಲ್ಲೇ ಗಣೇಶ ಹಬ್ಬವನ್ನ ಬೆಳಗಾವಿಯಲ್ಲಿ ವಿಭಿನ್ನವಾಗಿ ಆಚರಿಸಲಾಗುತ್ತದೆ. ನಗರದಲ್ಲೇ 500ಕ್ಕೂ ಅಧಿಕ ಅತಿ ಎತ್ತರದ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗುತ್ತದೆ. ಇತ್ತ ಶಿವಾಜಿ ಜಯಂತಿ ಕೂಡ ಅದ್ದೂರಿಯಾಗಿ ಆಚರಣೆ ಮಾಡಿಕೊಂಡು ಬರುತ್ತಿದ್ದು, ಶಿವಜಯಂತಿ ದಿನಾಂಕದ ಇಡೀ ರಾತ್ರಿ ಮೆರವಣಿಗೆ ಮಾಡಲಾಗುತ್ತದೆ.

ಕೆಚ್ಚೆದೆಯ ನಾಡು ಎಂದೇ ಪ್ರಸಿದ್ಧಿ: ಬೆಳಗಾವಿಗೆ ಮೊದಲು ವೇಣುಗ್ರಾಮ ಅಂತಾ ಹೆಸರಿತ್ತು. ಬಳಿಕ ಬೆಳಗಾವಿಯಾಗಿ ಮಾರ್ಪಡುತ್ತದೆ. ಇನ್ನೂ ಬೆಳಗಾವಿ ಅಂದರೆ ನೆನಪಾಗುವುದು ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಕಿತ್ತೂರಿನ ರಾಣಿ ಚೆನ್ನಮ್ಮ ಸಂಗೊಳ್ಳಿ ರಾಯಣ್ಣ. ಸ್ವಾತಂತ್ರ್ಯ ಹೋರಾಟದ ಕೆಚ್ಚೆದೆಯ ನಾಡು ಎಂದೇ ಪ್ರಸಿದ್ಧಿಯನ್ನ ಬೆಳಗಾವಿ ಪಡೆದಿದ್ದರೆ, ಇಲ್ಲಿ ಬೆಳವಡಿ ಮಲ್ಲಮ್ಮನ ಹೋರಾಟದ ಸ್ಥಳವೂ ಇದೆ. ಕದಂಬರ ರಾಜಧಾನಿಯಾಗಿದ್ದ ಹಲಸಿ ಕೂಡ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿರುವುದು ಮತ್ತೊಂದು ವಿಶೇಷ.

ಪ್ರಸಿದ್ಧಿ ಪಡೆದಿರುವ ಮಿಲಿಟರಿ ಟ್ರೈನಿಂಗ್ ಸೆಂಟರ್: ಬೆಳಗಾವಿ ಜಿಲ್ಲೆ ರಾಜ್ಯದಲ್ಲಿ ಮಾತ್ರವಲ್ಲ, ದೇಶದಲ್ಲೇ ಮತ್ತೊಂದು ವಿಚಾರಕ್ಕೆ ಪ್ರಸಿದ್ಧಿಯನ್ನ ಪಡೆದಿದೆ. ಅದೇ ಮಿಲಿಟರಿ ಟ್ರೈನಿಂಗ್ ಸೆಂಟರ್. ನಗರದ ಕ್ಯಾಂಪ್ ಪ್ರದೇಶದಲ್ಲಿ ಮರಾಠ ರೆಜಿಮೆಂಟ್ ಇದೆ. ಇಲ್ಲಿ ನೂತನವಾಗಿ ಮಿಲಿಟರಿಗೆ ಸೇರಿಕೊಳ್ಳುವ ಯುವಕರಿಗೆ ತರಬೇತಿಯನ್ನ ನೀಡಿ ಸೈನಿಕರಾಗಿ ಸಜ್ಜುಗೊಳಿಸುವ ಕೆಲಸ ಮಾಡುತ್ತಾರೆ. ಇದರ ಜತೆಗೆ ಕೋಬ್ರಾ ಕಮಾಂಡೋ ಸೆಂಟರ್ ಹಾಗೂ ಇನ್ನಿತರ ಮಿಲಟರಿ ತರಬೇತಿ ಕೇಂದ್ರಗಳು ಕೂಡ ಜಿಲ್ಲೆಯಲ್ಲಿವೆ. ಒಂದು ವಿಮಾನ ನಿಲ್ದಾಣ ಕೂಡ ಜಿಲ್ಲೆಯಲ್ಲಿದ್ದು, ಮೊದಲು ವಾಯುನೆಲೆ ಸಿಬ್ಬಂದಿಗಳು ಮಾತ್ರ ಇದನ್ನ ಬಳಕೆ ಮಾಡುತ್ತಿದ್ದು, ಇದೀಗ ಸಾರ್ವಜನಿಕ ವಿಮಾನಗಳು ಕೂಡ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಹಾರಾಟ ಮಾಡುತ್ತಿವೆ.

ಬೆಳಗಾವಿ ಜಿಲ್ಲೆಯಲ್ಲಿ ಏಳು ನದಿಗಳು ಹರಿದು ಹೋಗುತ್ತಿದ್ದು, ಕೃಷ್ಣಾ, ಘಟಪ್ರಭಾ, ಮಲಪ್ರಭಾ, ವೇದಗಂಗಾ, ದೂದಗಂಗಾ, ಹಿರಣ್ಯಕೇಶಿ, ಮಾರ್ಕಂಡೇಯ ನದಿಗಳು ಇವೆ. ಜಿಲ್ಲೆಯಲ್ಲಿ ಪ್ರವಾಸಿ ತಾಣಗಳಿಗೂ ಎನೂ ಕಮ್ಮಿ ಇಲ್ಲ. ಉತ್ತರ ಕರ್ನಾಟಕದ ಶಕ್ತಿ ಪೀಠ ಸವದತ್ತಿಯ ಶ್ರೀಕ್ಷೇತ್ರ ಯಲ್ಲಮ್ಮ ದೇವಸ್ಥಾನ, ಚಿಂಚಲಿ ಮಾಯಕ್ಕ, ಸೊಗಲ ಸೋಮೇಶ್ವರ, ಗೊಡಚಿ ವೀರಭದ್ರೇಶ್ವರ ದೇವಸ್ಥಾನ ಪ್ರಸಿದ್ಧಿ ಪಡೆದಿವೆ. ಇತ್ತ ಗೋಕಾಕ್ ಫಾಲ್ಸ್, ಪಶ್ಚಿಮ ಘಟ್ಟಗಳಲ್ಲಿ ಹುಟ್ಟುವ ಅನೇಕ ಸಣ್ಣಪುಟ್ಟ ಪಾಲ್ಸ್ಗಳು, ನವೀಲು ತೀರ್ಥ ಜಲಾಶಯ, ಗೊಡಚಿನಮಲ್ಕಿ ಫಾಲ್ಸ್ ಪ್ರಸಿದ್ಧ ಪ್ರವಾಸಿ ತಾಣಗಳಾಗಿವೆ. ಜಿಲ್ಲೆಯಲ್ಲಿ ಹೆಚ್ಚಾಗಿ ಕಬ್ಬು ಬೆಳೆಯುತ್ತಾರೆ. ಸದ್ಯ 22 ಸಕ್ಕರೆ ಕಾರ್ಖಾನೆಗಳು ಬೆಳಗಾವಿಯಲ್ಲಿರುವುದು ಈ ಭಾಗದ ರೈತರಿಗೆ ಹೆಚ್ಚು ಅನುಕೂಲಕರವಾಗಿದೆ.

ವರದಿ: ಸಹದೇವ ಮಾನೆ

ಇದನ್ನೂ ಓದಿ

ಬೆಂಗಳೂರಿನಲ್ಲಿ ಮೆಗಾ ಜ್ಯುವೆಲ್ಲರಿ ಪಾರ್ಕ್ ಸ್ಥಾಪನೆ; ರಾಜ್ಯದ ಬೇರೆ ಭಾಗಗಳಲ್ಲಿ ಯಾವೆ ಉದ್ಯಮಗಳಿಗೆ ಅನುಮೋದನೆ ನೀಡಲಾಗಿದೆ?

ಚಾಮರಾಜನಗರ: ಗುಮ್ಮಕಲ್ಲು ಗುಡ್ಡದಲ್ಲಿ ಟಿಪ್ಪರ್‌ ಮೇಲೆ ಬಂಡೆಗಳ ಕುಸಿತ; ಬಂಗಾಳ ಮೂಲದ ಕಾರ್ಮಿಕರು ಸಾವನ್ನಪ್ಪಿರುವ ಶಂಕೆ

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ