ರಾತ್ರೋರಾತ್ರಿ ಬೆಳಗಾವಿಗೆ ‘ಮಹಾ’ ನಾಯಕರ ಭೇಟಿ

ಬೆಳಗಾವಿ: ಕುಂದಾನಗರಿ ಕೊತ ಕೊತ ಕುದಿಯುತ್ತಿದೆ. ಮಹಾರಾಷ್ಟ್ರ ಸರ್ಕಾರ ಎಂಇಎಸ್ ಮುಖಂಡರಿಗೆ ಕುಮ್ಮಕ್ಕು ನೀಡುತ್ತಿದ್ದು, ಕ್ಯಾತೆ ತೆಗೆಯುತ್ತಿದ್ದಾರೆ. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಇದೇ ಹೊತ್ತಲ್ಲಿ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಡೆಯುತ್ತಿದ್ದು, ಅಲ್ಲಿನ ಜಿ.ಪಂ ಸದಸ್ಯರನ್ನ ಬೆಳಗಾವಿಯ ಖಾಸಗಿ ಹೋಟೆಲ್​ನಲ್ಲಿರಿಸಲಾಗಿದೆ. ಮಹಾ ಮಂತ್ರಿ ಹಸನ್ ಮುಶ್ರಿಪ್ ಬೆಳಗಾವಿಗೆ ಬಂದು ಎಂಇಎಸ್, ಶಿವಸೇನೆ ಮುಖಂಡರೊಂದಿಗೆ ಸಭೆ ಮಾಡಿದ್ದಾರೆ. ಸಭೆಯಲ್ಲಿ ಗಡಿ ವಿಚಾರದ ಕುರಿತು ಮಾತುಕತೆ ಮಾಡಿದ್ದಲ್ಲದೇ ಇದೇ ತಿಂಗಳು 22ರಂದು ಎನ್​ಸಿಪಿ ಮುಖ್ಯಸ್ಥ […]

ರಾತ್ರೋರಾತ್ರಿ ಬೆಳಗಾವಿಗೆ ‘ಮಹಾ’ ನಾಯಕರ ಭೇಟಿ
Follow us
ಸಾಧು ಶ್ರೀನಾಥ್​
|

Updated on:Jan 03, 2020 | 7:01 AM

ಬೆಳಗಾವಿ: ಕುಂದಾನಗರಿ ಕೊತ ಕೊತ ಕುದಿಯುತ್ತಿದೆ. ಮಹಾರಾಷ್ಟ್ರ ಸರ್ಕಾರ ಎಂಇಎಸ್ ಮುಖಂಡರಿಗೆ ಕುಮ್ಮಕ್ಕು ನೀಡುತ್ತಿದ್ದು, ಕ್ಯಾತೆ ತೆಗೆಯುತ್ತಿದ್ದಾರೆ. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಇದೇ ಹೊತ್ತಲ್ಲಿ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ನಡೆಯುತ್ತಿದ್ದು, ಅಲ್ಲಿನ ಜಿ.ಪಂ ಸದಸ್ಯರನ್ನ ಬೆಳಗಾವಿಯ ಖಾಸಗಿ ಹೋಟೆಲ್​ನಲ್ಲಿರಿಸಲಾಗಿದೆ.

ಮಹಾ ಮಂತ್ರಿ ಹಸನ್ ಮುಶ್ರಿಪ್ ಬೆಳಗಾವಿಗೆ ಬಂದು ಎಂಇಎಸ್, ಶಿವಸೇನೆ ಮುಖಂಡರೊಂದಿಗೆ ಸಭೆ ಮಾಡಿದ್ದಾರೆ. ಸಭೆಯಲ್ಲಿ ಗಡಿ ವಿಚಾರದ ಕುರಿತು ಮಾತುಕತೆ ಮಾಡಿದ್ದಲ್ಲದೇ ಇದೇ ತಿಂಗಳು 22ರಂದು ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್​ರನ್ನು ಕರೆತರಲು ಚರ್ಚಿಸಿದ್ದಾರೆ ಎನ್ನಲಾಗ್ತಿದೆ. ಯಾವಾಗ ಈ ವಿಚಾರ ಕನ್ನಡಪರ ಸಂಘಟನೆ ಕಾರ್ಯಕರ್ತರಿಗೆ ಗೊತ್ತಾಯ್ತೋ ಮಹಾರಾಷ್ಟ್ರ ಸಚಿವ ರಾತ್ರೋರಾತ್ರಿ ಕಾಲ್ಕಿತ್ತಿದ್ದಾನೆ. ಪೊಲೀಸ್ ಭದ್ರತೆಯಲ್ಲಿ ಕೆಎಸ್​ಆರ್​ಟಿಸಿ ಬಸ್​ನಲ್ಲಿ ಕೊಲ್ಲಾಪುರಕ್ಕೆ ತೆರಳಿದ್ದಾನೆ. ತಕ್ಷಣ ಎಂಇಎಸ್ ಮುಖಂಡರು, ಕನ್ನಡಪರ ಸಂಘಟನೆ ಕಾರ್ಯಕರ್ತರ ವಿರುದ್ಧ ಡಿಸಿಗೆ ದೂರು ನೀಡಿದ್ರು. ಇದೇ ಸಂದರ್ಭದಲ್ಲಿ ಎಂಇಎಸ್ ಪುಂಡರು ನಾಡದ್ರೋಹಿ ಘೋಷಣೆ ಕೂಗಿದ್ದು, ಪ್ರಶ್ನಿಸಿದ ಮಾಧ್ಯಮದವರಿಗೂ ಆವಾಜ್ ಹಾಕಿ ಪುಂಡಾಟ ಮೆರೆದಿದ್ದಾರೆ.

ಮಹಾರಾಷ್ಟ್ರದ ಮುಖಂಡರು ಬೆಳಗಾವಿಗೆ ಕದ್ದು ಮುಚ್ಚಿ ಬಂದು ಹೋಗ್ತಿರೋ ವಿಚಾರ ಗೊತ್ತಾಗ್ತಿದ್ದಂತೆ ನಗರ ಪೊಲೀಸ್ ಆಯುಕ್ತರು ಎಚ್ಚೆತ್ತುಕೊಂಡ್ರು. ಪೊಲೀಸ್ ಕಮಿಷನರ್ ಲೋಕೇಶ್ ಕುಮಾರ್ ಮತ್ತು ಎಸ್​ಪಿ ಲಕ್ಷ್ಮಣ ನಿಂಬರಗಿ ಜಂಟಿ ಸುದ್ದಿಗೋಷ್ಠಿ ನಡೆಸಿ, ಚುನಾವಣೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮುಖಂಡರು ಬೆಳಗಾವಿಗೆ ಬಂದಿದ್ರು. ಈ ವೇಳೆ, ಗಡಿ ವಿಚಾರದ ಕುರಿತು ಯಾವುದೇ ಚರ್ಚೆಯಾಗಿಲ್ಲ ಅಂತಾ ಹೇಳಿದ್ರು. ಇತ್ತ ಗಡಿಯಲ್ಲಿ ಸೂಕ್ತ ಬಂದೋಬಸ್ತ್ ಮಾಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಹೇಳಿದ್ರು.

ಸದ್ಯ ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್​ರನ್ನು ಕರೆಸಲು ಮುಂದಾಗಿರುವ ಎಂಇಎಸ್​ಗೆ ಅನುಮತಿ ನೀಡಬಾರದು ಅಂತಾ ಕನ್ನಡಪರ ಸಂಘಟನೆಗಳು ಒತ್ತಾಯಿಸಿವೆ. ಇದ್ರ ಜೊತೆಗೆ ರಾತ್ರೋರಾತ್ರಿ ಬಂದು ಹೋಗ್ತಿರೋ ಮಹಾರಾಷ್ಟ್ರದ ಮುಖಂಡರ ಮೇಲೂ ಪೊಲೀಸರು ನಿಗಾ ವಹಿಸಬೇಕು ಅಂತಾ ಆಗ್ರಹಿಸಿವೆ. ಇದ್ರಿಂದ ಬೆಳಗಾವಿ ಈಗ ಕೊತ ಕೊತ ಕುದಿಯುತ್ತಿದೆ.

Published On - 7:00 am, Fri, 3 January 20

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ