ಬೆಳಗಾವಿಯಲ್ಲಿ ಕಿಡಿಗೇಡಿಗಳ ಅಟ್ಟಹಾಸ; ಕಾರಿನ ಮೇಲೆ ಕಲ್ಲೆಸೆದು ಮುಸುಕುಧಾರಿ ಪರಾರಿ
ಎಸ್ಪಿಎಂ ರಸ್ತೆಯಲ್ಲಿ ನಿನ್ನೆ (ಜ.3) ಮುಂಜಾನೆ 4.30ರ ಸುಮಾರಿಗೆ ಈ ಘಟನೆ ನಡೆದಿದೆ. ಉದ್ಯಮಿ ನಿತಿನ್ ಮಹಾಡಗೂತ್ಗೆ ಸೇರಿದ ಕಾರಿನ ಗಾಜು ಒಡೆದು ದುಷ್ಕರ್ಮಿ ಪರಾರಿಯಾಗಿದ್ದಾನೆ.
ಬೆಳಗಾವಿ: ಜಿಲ್ಲೆಯಲ್ಲಿ ಕಿಡಿಗೇಡಿಗಳು ಮತ್ತೆ ಅಟ್ಟಹಾಸ ಮೆರೆಯುತ್ತಿದ್ದಾರೆ ಅಪಾರ್ಟ್ಮೆಂಟ್ ಎದುರು ನಿಲ್ಲಿಸಿದ್ದ ಕಾರಿನ ಮೇಲೆ ಕಲ್ಲೆಸೆತ ಮುಸುಕುಧಾರಿ ಪರಾರಿಯಾಗಿದ್ದಾನೆ. ಎಸ್ಪಿಎಂ ರಸ್ತೆಯಲ್ಲಿ ನಿನ್ನೆ (ಜ.3) ಮುಂಜಾನೆ 4.30ರ ಸುಮಾರಿಗೆ ಈ ಘಟನೆ ನಡೆದಿದೆ. ಉದ್ಯಮಿ ನಿತಿನ್ ಮಹಾಡಗೂತ್ಗೆ ಸೇರಿದ ಕಾರಿನ ಗಾಜು ಒಡೆದು ದುಷ್ಕರ್ಮಿ ಪರಾರಿಯಾಗಿದ್ದಾನೆ. ಕಾರಿನ ಮೇಲೆ ಕಲ್ಲು ಎಸೆಯುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸಿಸಿ ಕ್ಯಾಮರಾ ದೃಶ್ಯಾವಳಿ ಸಮೇತ ಖಡೇಬಜಾರ್ ಠಾಣೆಗೆ ದೂರು ನೀಡಲಾಗಿದೆ.
ಇದ್ದಕ್ಕಿಂದ್ದಂತೆ ಕಾರಿನ ಮೇಲೆ ಕಲ್ಲು ಎಸೆಯಲು ಕಾರಣ ಇನ್ನು ತಿಳಿದುಬಂದಿಲ್ಲ. ಉದ್ಯಮಿ ನಿತಿನ್ ಮಹಾಡಗೂತ್ಗೆ ಸೇರಿದ ಕಾರಿನ ಮೇಲೆ ಮಾತ್ರ ದುಷ್ಕರ್ಮಿ ಕಲ್ಲು ಹಾಕಿದ್ದಾನಾ? ಅಥವಾ ಬೇರೆ ಕಾರುಗಳ ಮೇಲೆ ಎಸೆದಿದ್ದಾನ ಎಂದು ಇನ್ನು ತಿಳಿದುಬಂದಿಲ್ಲ. ಸದ್ಯ ಈ ಪ್ರಕರಣ ಖಡೇಬಜಾರ್ ಠಾಣೆಯಲ್ಲಿ ದಾಖಲಾಗಿದ್ದು, ಇನ್ನಷ್ಟು ಮಾಹಿತಿ ತಿಳಿದುಬರಬೇಕಿದೆ.
ಪುಂಡಾಟ ಮೆರೆದಿದ್ದ 38 ಆರೋಪಿಗಳ ಜಾಮೀನು ಅರ್ಜಿ ವಜಾ ಬೆಳಗಾವಿ ನಗರದಲ್ಲಿ ಈ ಹಿಂದೆ ಪುಂಡಾಟ ಮೆರೆದಿದ್ದ ಶ್ರೀರಾಮಸೇನೆ ಹಿಂದೂಸ್ತಾನ್ ಸಂಘಟನೆ ಅಧ್ಯಕ್ಷ ರಮಾಕಾಂತ್, ಎಂಇಎಸ್ನ ಮುಖಂಡ ಶುಭಂ ಶೆಳ್ಕೆ ಸೇರಿ 38 ಆರೋಪಿಗಳ ಜಾಮೀನು ಅರ್ಜಿ ವಜಾ ಮಾಡಲಾಗಿದೆ. ಬೆಳಗಾವಿಯ 8ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ಪುಂಡಾಟ ಮೆರೆದಿದ್ದ 38 ಆರೋಪಿಗಳ ಜಾಮೀನು ಅರ್ಜಿ ವಜಾ ಮಾಡಿದೆ.
ಇದನ್ನೂ ಓದಿ
ಮೈಸೂರು: ರೇಣುಕಾ ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನ ಕೂಡಿಹಾಕಿ ಟ್ರಸ್ಟಿಗಳ ಗಲಾಟೆ!
ಬಸ್ ಚಾಲನೆ ಮಾಡುವಾಗ ಚಾಲಕನಿಗೆ ಕಾಣಿಸಿಕೊಂಡ ಎದೆನೋವು; ಅದೃಷ್ಟವಶಾತ್ ಪ್ರಯಾಣಿಕರು ಪಾರು
Published On - 10:43 am, Tue, 4 January 22