ಬೆಳಗಾವಿ: ಯುವತಿ ನಾಪತ್ತೆ, ಅನ್ಯಕೋಮಿನ ಯುವಕ ಮನೆ ಮೇಲೆ ದಾಳಿ, ಈದ್ಗಾ ಗೋಪರಕ್ಕೆ ಹಾನಿ
ಬೆಳಗಾವಿ ತಾಲೂಕಿನ ಸಂತಿ ಬಸ್ತವಾಡದಲ್ಲಿ ನರ್ಸಿಂಗ್ ವಿದ್ಯಾರ್ಥಿನಿ ರಾಧಿಕಾ ಮುಚ್ಚಂಡಿ ನಾಪತ್ತೆಯಾಗಿದ್ದಾರೆ. ಅವರ ಕುಟುಂಬಸ್ಥರು ಸದ್ರುದ್ದೀನ್ ಬೇಪಾರಿ ಎಂಬುವರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಈ ಘಟನೆಯ ಬಳಿಕ ಗೋಪುರ ಮತ್ತು ದರ್ಗಾಗಳಿಗೆ ಹಾನಿಯಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಮತ್ತು ತನಿಖೆ ನಡೆಸುತ್ತಿದ್ದಾರೆ. ರಾಧಿಕಾಳನ್ನು ಶೀಘ್ರವಾಗಿ ಪತ್ತೆ ಹಚ್ಚುವಂತೆ ಕುಟುಂಬಸ್ಥರು ಆಗ್ರಹಿಸಿದ್ದಾರೆ.

ಬೆಳಗಾವಿ, ಮಾರ್ಚ್ 08: ನರ್ಸಿಂಗ್ ಓದುತ್ತಿದ್ದ ಯುವತಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅನ್ಯಕೋಮಿನ ಯುವಕನ ಮನೆ ಮೇಲೆ ಯುವತಿಯ ಸಂಬಂಧಿಕರು ಕಲ್ಲು ತೂರಿ ಅಟ್ಟಹಾಸ ಮೆರೆದಿರುವ ಘಟನೆ ಬೆಳಗಾವಿ (Belagavi) ತಾಲೂಕಿನ ಸಂತಿ ಬಸ್ತವಾಡ ಗ್ರಾಮದಲ್ಲಿ ನಡೆದಿದೆ. ಕಳೆದ ತಿಂಗಳು ಫೆಬ್ರವರಿ 19ರಂದು ಗ್ರಾಮದ ಯುವತಿ ರಾಧಿಕಾ ಮುಚ್ಚಂಡಿ ನಾಪತ್ತೆಯಾಗಿದ್ದಾರೆ. ಈ ಸಂಬಂಧ ಬೆಳಗಾವಿ ಗ್ರಾಮೀಣ ಪೊಲೀಸ್ (Police) ಠಾಣೆಯಲ್ಲಿ ಯುವತಿಯ ತಾಯಿ ದೂರು ದಾಖಲಿಸಿದ್ದಾರೆ.
15 ದಿನ ಕಳೆದರೂ ರಾಧಿಕಾ ಪತ್ತೆಯಾಗದ ಹಿನ್ನೆಲೆಯಲ್ಲಿ ಎದುರು ಮನೆಯ ಸದ್ರುದ್ದೀನ್ ಬೇಪಾರಿಯೇ ಆಕೆಯನ್ನು ಅಪಹರಿಸಿದ್ದಾನೆಂದು ಆತನ ಮನೆ ಮೇಲೆ ಯುವತಿಯ ಕುಟುಂಬಸ್ಥರು ಕಲ್ಲು ತೂರಾಟ ನಡೆಸಿದ್ದಾರೆ. ಅಲ್ಲದೇ, ಆತನ ಮನೆಯ ಬಾಗಿಲು, ಕಿಟಕಿ ಒಡೆದು ಒಳ ನುಗ್ಗಿ ಗಲಾಟೆ ಮಾಡಿದ್ದಾರೆ. ಮತ್ತು ಮನೆಯಲ್ಲಿದ್ದ ಪಾತ್ರೆ, ಸಾಮಗ್ರಿ ಒಡೆದಿದ್ದಾರೆ. ಗಲಾಟೆ ಬಳಿಕ ಯುವತಿ ಸಂಬಂಧಿಕರು ಪರಾರಿಯಾಗಿದ್ದಾರೆ. ಬೆಳಗಾವಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಅಂಕಲ್- ಆಂಟಿ ಲವ್ ಸ್ಟೋರಿಗೆ ಬಿಗ್ ಟ್ವಿಸ್ಟ್: ಒಬ್ಬನಿಗಾಗಿ ಇಬ್ಬರ ಮಹಿಳೆಯರ ಹೊಡೆದಾಟ
ಸದ್ರುದ್ದೀನ್ ಬೇಪಾರಿ ಮನೆ ಮೇಲೆ ದಾಳಿ ಬೆನ್ನಲ್ಲೇ 10ಕ್ಕೂ ಹೆಚ್ಚು ಯುವಕರ ಗ್ಯಾಂಗ್ ಶುಕ್ರವಾರ (ಮಾ.07) ರಂದು ಸಂತಿ ಬಸ್ತವಾಡ ಗ್ರಾಮದ ಹೊರ ವಲಯದಲ್ಲಿನ ಈದ್ಗಾದ ಗೋಪುರ, ದರ್ಗಾದ ಕಂಬಗಳಿಗೆ ಹಾನಿ ಮಾಡಿದ್ದಾರೆ. ಇದು, ಕಿಡಗೇಡಿಗಳ ಕೃತ್ಯವೆಂದು ಗ್ರಾಮಸ್ಥರಿಂದ ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.