ಬೆಂಗಳೂರಿನಲ್ಲಿ ವರುಣಾರ್ಭಟಕ್ಕೆ ಅವಾಂತರ: ಜಲಾವೃತಗೊಂಡ ಅಂಡರ್‌ಪಾಸ್; ಧರೆಗುರುಳಿದ ಮರಗಳು
Bangaluru Rain: ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಯಿಂದ ನಗರದ ಹಲವೆಡೆ ರಸ್ತೆಗಳು ಜಲಾವೃತಗೊಂಡು ಸಂಚಾರ ಅಸ್ತವ್ಯಸ್ತಗೊಂಡಿದೆ. ಪೀಣ್ಯ ಮೇಲ್ಸೇತುವೆ, ಹೆಬ್ಬಾಳ ರಿಂಗ್ ರಸ್ತೆ, ಅಂಡರ್‌ಪಾಸ್‌ಗಳಲ್ಲಿ ನೀರು ತುಂಬಿ ವಾಹನ ಸವಾರರು ಪರದಾಡಿದರು. ಜೋರು ಗಾಳಿ ಮಳೆಗೆ ವಿಜ್ಞಾನ ನಗರ, ವಿದ್ಯಾಸೌಧ ಬಳಿ ಮರಗಳು ಧರೆಗುರುಳಿವೆ. ಇಲ್ಲಿವೆ ನೋಡಿ ಫೋಟೋಸ್.
Updated on:Sep 30, 2026 | 7:40 PM

ಬೆಂಗಳೂರಿನ ಹಲವೆಡೆ ವರುಣ ಅಬ್ಬರಿಸಿದ್ದಾನೆ. ನಗರದಲ್ಲಿ ಬೆಳಿಗ್ಗೆಯಿಂದ ಮೋಡಕವಿದ ವಾತಾವರಣವಿತ್ತು. ಆದರೆ ಸಂಜೆ ಆಗುತ್ತಿದ್ದಂತೆ ಮಳೆ ಸುರಿದೆ. ಧಾರಾಕಾರ ಮಳೆಗೆ ನಗರದ ರಸ್ತೆಗಳು ಜಲಾವೃತಗೊಂಡು ಕರೆಯಂತಾಗಿವೆ. ಮಳೆಯಿಂದಾಗಿ ವಾಹನ ಸವಾರರು ಪರದಾಡಿದ್ದಾರೆ.

ಧಾರಾಕಾರ ಮಳೆಯಿಂದಾಗಿ ಪೀಣ್ಯ ಮೇಲ್ಸೇತುವೆಯಲ್ಲಿ ಭಾರಿ ಪ್ರಮಾಣದ ನೀರು ನಿಂತಿದ್ದು, ಸಂಚಾರ ನಿಧಾನಗತಿಯಲ್ಲಿದೆ; ಎಚ್ಚರಿಕೆಯಿಂದ ಚಲಿಸುವಂತೆ ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ. (PC: blrcitytraffic)

ಜೋರು ಗಾಳಿ ಮಳೆಗೆ ವಿಜ್ಞಾನ ನಗರ ಬಳಿ ಬೃಹತ್ ಮರವೊಂದು ಧರೆಗುರುಳಿದೆ. ಮರ ಬಿದ್ಧ ಪರಿಣಾಮ ಕಗ್ಗದಾಸಪುರ ಕಡೆಗೆ ವಾಹನ ಸಂಚಾರ ಸಂಪೂರ್ಣ ಮಂದಗತಿಯಲ್ಲಿದೆ. (PC: blrcitytraffic)

ಹೆಬ್ಬಾಳ ರಿಂಗ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್: ಯೋಗೀಶ್ವರನಗರ ಬಳಿ ಮಳೆ ನೀರು ಶೇಖರಣೆಯಾಗಿದ್ದು, ಹೆಬ್ಬಾಳ ರಿಂಗ್ ರಸ್ತೆ ಕಡೆಗೆ ವಾಹನಗಳು ಸಾಲುಗಟ್ಟಿ ನಿಧಾನವಾಗಿ ಸಾಗುತ್ತಿವೆ. (PC: blrcitytraffic)

ಅಂಡರ್‌ಪಾಸ್, ಫ್ಲೈಓವರ್‌ಗಳಲ್ಲಿ ಜಲಾವೃತ: ಯಲಹಂಕದ ವಿದ್ಯಾಶಿಲ್ಪ ರೈಲ್ವೆ ಕೆಳಸೇತುವೆ, ರಾಷ್ಟ್ರೋತ್ಥಾನ ಮೇಲ್ಸೇತುವೆ, ಚೌಡಪ್ಪ ಲೇಔಟ್ ಹಾಗೂ ಥಣಿಸಂದ್ರ ರಸ್ತೆಗಳಲ್ಲಿ ಮಳೆ ನೀರು ತುಂಬಿ ಸಂಚಾರ ಅಸ್ತವ್ಯಸ್ತಗೊಂಡಿದೆ. (PC: blrcitytraffic)

ವಿದ್ಯಾಸೌಧ ಶಾಲೆ ಬಳಿ ಬೃಹತ್ ಮರವೊಂದು ಧರೆಗುರುಳಿದೆ. ರೇನ್‌ಬೋ ಆಸ್ಪತ್ರೆಯಿಂದ ಕಾರ್ತಿಕ್ ನಗರ, ಯಲಹಂಕ ಬಿಎಸ್‌ಎಫ್‌ನಿಂದ ವಿಮಾನ ನಿಲ್ದಾಣ ರಸ್ತೆ ಹಾಗೂ ಮಹದೇವಪುರದಿಂದ ಲೋರಿ ಜಂಕ್ಷನ್‌ವರೆಗೆ ರಸ್ತೆ ಮೇಲೆ ನೀರು ನಿಂತು ಸವಾರರು ಪರದಾಡಿದರು. (PC: blrcitytraffic)
Published On - 7:39 pm, Wed, 30 September 26

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್, ವೈಯಿಸ್ ಓವರ್, ಎಡಿಟಿಂಗ್ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.
Read More



