Bengaluru Rains: ಬೆಂಗಳೂರಿನಲ್ಲಿ ಧಾರಾಕಾರ ಮಳೆ: ವಾಹನ ಸವಾರರು ಹೈರಾಣು, ಎಲ್ಲೆಡೆ ಟ್ರಾಫಿಕ್ ಜಾಮ್
ಸತತ ಕೆಲದಿನಗಳಿಂದ ಮಟ ಮಟ ಮಧ್ಯಾಹ್ನವೇ ಬೆಂಗಳೂರಿಗೆ ಎಂಟ್ರಿ ಕೊಡುತ್ತಿರುವ ಮಳೆರಾಯ ಇಂದು ಸಹ ದಿಢೀರ್ ಎಂಟ್ರಿ ನೀಡಿದ್ದ. ಶಾಂತಿನಗರ, ಮಡಿವಾಳ, ಪೀಣ್ಯ, ದಾಸರಹಳ್ಳಿ, ಬಾಗಲಗುಂಟೆ, ಶೆಟ್ಟಿಹಳ್ಳಿ, ಯಶವಂತಪುರ, ಮಲ್ಲಸಂದ್ರ ಸೇರಿ ಹಲವೆಡೆ ಭಾರೀ ಮಳೆ ಆಗಿದೆ. ಮಳೆಯಿಂದಾಗಿ ಹಲವೆಡೆ ಟ್ರಾಫಿಕ್ ಉಂಟಾಗಿದ್ದು ಸವಾರರು ಪರದಾಡಿದ್ದಾರೆ.
ಬೆಂಗಳೂರು, ಜೂನ್ 21: ಬೆಂಗಳೂರು (Bengaluru) ಸೇರಿದಂತೆ ರಾಜ್ಯದಲ್ಲಿ ಮತ್ತೆ ಮುಂಗಾರು ಚುರುಕುಗೊಂಡಿದೆ. ಹೀಗಾಗಿ ನಗರದಲ್ಲಿ ಕೆಲ ದಿನಗಳಿಂದ ಮಟ ಮಟ ಮಧ್ಯಾಹ್ನವೇ ಜೋರು ಮಳೆ (Rain) ಆಗುತ್ತಿದೆ. ಅದೇ ರೀತಿಯಾಗಿ ಇಂದು ಕೂಡ ನಗರದ ಹಲವೆಡೆ ಭಾರೀ ಮಳೆ ಆಗಿದೆ. ಕಾರ್ಪೊರೇಷನ್, ಮೆಜೆಸ್ಟಿಕ್, ಕೆ.ಆರ್.ಸರ್ಕಲ್, ಶಾಂತಿನಗರ, ಮಡಿವಾಳ, ಪೀಣ್ಯ, ದಾಸರಹಳ್ಳಿ, ಬಾಗಲಗುಂಟೆ, ಶೆಟ್ಟಿಹಳ್ಳಿ, ಯಶವಂತಪುರ, ಮಲ್ಲಸಂದ್ರ ಸೇರಿ ಹಲವೆಡೆ ಭಾರೀ ಮಳೆ ಆಗಿದೆ. ಮಳೆಯಿಂದಾಗಿ ಹಲವೆಡೆ ಟ್ರಾಫಿಕ್ ಉಂಟಾಗಿದ್ದು ಸವಾರರು ಪರದಾಡಿದ್ದಾರೆ.
ಕೇರಳ ಮತ್ತು ಕರ್ನಾಟಕ ಕರಾವಳಿ ಭಾಗದಲ್ಲಿ ಸುಳಿಗಾಳಿ ಮುಂದುವರೆದ ಹಿನ್ನಲೆ ಕರಾವಳಿ ಭಾಗದಲ್ಲಿ ಭಾರೀ ಮಳೆ ಸಾಧ್ಯತೆ ಇದೆ. ಕರ್ನಾಟಕ ಒಳನಾಡಿನ ಹಾಗೂ ಪಕ್ಕದ ಜಿಲ್ಲೆಗಳಿಗೆ ತೀವ್ರತೆಯೊಂದಿಗೆ ಭಾರೀ ಮಳೆ ಸಾಧ್ಯತೆ ಇದೆ. ಇವತ್ತಿನಿಂದ ಜೂನ್ 25ರವರೆಗೆ ಗಾಳಿ ಸಹಿತ ಭಾರೀ ಮಳೆಯೊಂದಿಗೆ ಭೂ ಕುಸಿತ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ಮಳೆ ಮೂನ್ಸುಚನೆ ನೀಡಿದೆ.
ಇದನ್ನೂ ಓದಿ: Bengaluru Rains: ಸಿಲಿಕಾನ್ ಸಿಟಿಗೆ ದಿಢೀರ್ ಎಂಟ್ರಿ ಕೊಟ್ಟ ವರುಣ: ರಿಚ್ಮಂಡ್ ಟೌನ್ ಸೇರಿ ಕೆಲವೆಡೆ ಮಳೆ
ಕರಾವಳಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದ್ದು, ಕರ್ನಾಟಕದ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ 40-50 ಕಿ.ಮೀ ಭಾರೀ ಗಾಳಿಯೊಂದಿಗೆ ಮಳೆ ಆಗಲಿದೆ. ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಗಾಳಿಯೊಂದಿಗೆ (40-50 kmph) ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಭಾರೀ ಮಳೆ ಮುನ್ಸೂನೆ: ಮುನ್ನೆಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಎಚ್ಚರಿಕೆ
ಬಾಗಲಕೋಟೆಯಲ್ಲಿ ನಾಲ್ಕು ದಿನ ಬಿಡುವು ಕೊಟ್ಟಿದ್ದ ಮಳೆರಾಯ ಇಂದು ಸತತ ಅರ್ಧ ಗಂಟೆ ಧಾರಾಕಾರ ಮಳೆ ಸುರಿದಿದೆ. ನಿರಂತರ ಮಳೆ ಹಿನ್ನೆಲೆ ಜನರು ಮನೆ ಬಿಟ್ಟು ಹೊರಬಾರದ ಸ್ಥಿತಿ ನಿರ್ಮಾಣವಾಗಿತ್ತು. ನಿರಂತರ ಮೋಡ ಕವಿದ ವಾತಾವರಣ ಕಂಡುಬಂದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:36 pm, Fri, 21 June 24