ಕೊಪ್ಪಳ: ರೈತರ ಎದೆಬಡಿತ ಹೆಚ್ಚಿಸಿದ ಜಿಂಕೆಗಳ ಹಾವಳಿ, ಸಾವಿರಾರು ರೂಪಾಯಿ ಖರ್ಚು ಮಾಡಿದ್ದ ಬೆಳೆ ಜಿಂಕೆಗಳ ಪಾಲು

ಕೊಪ್ಪಳ ಜಿಲ್ಲೆಯ ಯರೇಹಂಚಿನಾಳ ಗ್ರಾಮ ಸೇರಿದಂತೆ ಕುಕನೂರು, ಯಲಬರ್ಗಾ ತಾಲೂಕಿನ ಅನೇಕ ರೈತರು ಕಳೆದ ವರ್ಷ ಬರಗಾಲದಿಂದ ಬೆಳೆ ಕಳೆದುಕೊಂಡು ಕಂಗಾಲಾಗಿದ್ದರು. ಕಳೆದ ವರ್ಷ ಕೃಷಿಗಾಗಿ ಮಾಡಿದ ಸಾಲವನ್ನು ತೀರಿಸಲಿಕ್ಕಾಗದೇ ಇನ್ನೂ ಪರದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ, ಈ ವರ್ಷ ಜಿಂಕೆಗಳ ಕಾಟ ಇವರಿಗೆ ಸಂಕಷ್ಟ ತಂದೊಡ್ಡಿದೆ.

ಕೊಪ್ಪಳ: ರೈತರ ಎದೆಬಡಿತ ಹೆಚ್ಚಿಸಿದ ಜಿಂಕೆಗಳ ಹಾವಳಿ, ಸಾವಿರಾರು ರೂಪಾಯಿ ಖರ್ಚು ಮಾಡಿದ್ದ ಬೆಳೆ ಜಿಂಕೆಗಳ ಪಾಲು
ಜಿಂಕೆಗಳ ಓಟದಿಂದ ಹಾನಿಯಾಗಿರುವುದು.
Follow us
ಸಂಜಯ್ಯಾ ಚಿಕ್ಕಮಠ, ಕೊಪ್ಪಳ
| Updated By: Ganapathi Sharma

Updated on: Jun 21, 2024 | 2:20 PM

ಕೊಪ್ಪಳ, ಜೂನ್ 21: ಜಿಂಕೆಗಳು (Deer) ಕಣ್ಣಿಗೆ ಬಿದ್ದರೆ, ಅವುಗಳ ಚೆಲುವನ್ನು ನೋಡಬೇಕು ಎಂಬ ಆಶೆ ಎಲ್ಲರಿಗೂ ಬರುತ್ತದೆ. ಆದರೆ ಕೊಪ್ಪಳದ (Koppal) ಕೆಲವು ಗ್ರಾಮಗಳ ರೈತರಿಗೆ ಇದೀಗ ಆ ಜಿಂಕೆಗಳನ್ನು ನೋಡಿದರೆ ಪ್ರೀತಿ ಉಕ್ಕುವ ಬದಲು ಸಿಟ್ಟು ಹೆಚ್ಚಾಗುತ್ತಿದೆ. ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ ಎಂಬ ಹಾಗಾಗಿದೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ, ಕುಕುನೂರು ತಾಲೂಕಿನ ಅನೇಕ ಗ್ರಾಮಗಳ ರೈತರ ಸ್ಥಿತಿ. ಕಳೆದ ವರ್ಷ ಬರಗಾಲದಿಂದ ಕೈ ಸುಟ್ಟುಕೊಂಡಿದ್ದ ರೈತರಿಗೆ, ಈ ಬಾರಿ ಮುಂಗಾರು ಮಳೆ ಹೊಸ ಆಶಾಭಾವನೆ ಮೂಡಿಸಿದೆ. ಇದೇ ಕಾರಣಕ್ಕಾಗಿ ಮತ್ತೆ ಸಾವಿರಾರು ರೂಪಾಯಿ ಖರ್ಚು ಮಾಡಿ ಹೆಸರು ಬಿತ್ತನೆ ಮಾಡಿದ್ದಾರೆ. ಬೀಜ ಮೊಳಕೆ ಒಡೆದಿದ್ದು,ಚೆನ್ನಾಗಿ ಬೆಳೆ ಕೂಡಾ ಬರುತ್ತಿದೆ. ಆದರೆ, ರಾತೋರಾತ್ರಿ ಹೊಲಗಳಿಗೆ ದಾಂಗುಡಿ ಇಡುತ್ತಿರುವ ನೂರಾರು ಜಿಂಕೆಗಳು ಬೆಳೆಯನ್ನು ತಿಂದು ಹಾಳು ಮಾಡುತ್ತಿವೆ.

ಜಿಂಕೆಗಳ ಹಾವಳಿಗೆ ರೈತರು ಕಂಗಾಲು

ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಯರೇಹಂಚಿನಾಳ ಗ್ರಾಮ ಸೇರಿದಂತೆ ಜಿಲ್ಲೆಯ ಕುಕನೂರು, ಯಲಬರ್ಗಾ ತಾಲೂಕಿನ ಅನೇಕ ರೈತರು ಕಳೆದ ವರ್ಷ ಬರಗಾಲದಿಂದ ಬೆಳೆ ಕಳೆದುಕೊಂಡು ಕಂಗಾಲಾಗಿದ್ದರು. ಕಳೆದ ವರ್ಷ ಕೃಷಿಗಾಗಿ ಮಾಡಿದ ಸಾಲವನ್ನು ತೀರಿಸಲಿಕ್ಕಾಗದೇ ಇನ್ನೂ ಪರದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ, ಈ ವರ್ಷ ಮುಂಗಾರು ಮಳೆ ಉತ್ತಮವಾಗಿದ್ದರಿಂದ ರೈತರು ಸಂತಸ ಪಟ್ಟಿದ್ದಾರೆ. ಇದೇ ಕಾರಣಕ್ಕೆ ಮತ್ತೆ ಸಾವಿರಾರು ರೂಪಾಯಿ ಸಾಲ ಮಾಡಿ, ಹೆಸರು ಸೇರಿದಂತೆ ಅನೇಕ ಬೆಳೆಗಳನ್ನು ಬೆಳೆದಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಹೆಸರು ಬಿತ್ತನೆ ಮಾಡಿದ್ದ ರೈತರಿಗೆ ಉತ್ತಮ ಬೆಳೆ ಬಂದಿತ್ತು. ಇನ್ನು ಎರಡು ತಿಂಗಳು ಆದರೆ ಉತ್ತಮ ಫಸಲು ಬರುತ್ತದೆ. ಆದಾಯ ಬರುತ್ತದೆ ಎಂಬ ಕನಸನ್ನು ರೈತರು ಕಂಡಿದ್ದರು. ಆದರೆ ರೈತರ ಕನಸನ್ನು ಜಿಂಕೆಗಳು ನುಚ್ಚು ನೂರು ಮಾಡುತ್ತಿವೆ. ರಾತೋರಾತ್ರಿ ಕೃಷಿ ಜಮೀನಿಗೆ ನುಗ್ಗುತ್ತಿರುವ ಜಿಂಕೆಗಳ ಹಿಂಡು, ಜಮೀನಿನಲ್ಲಿರುವ ಹೆಸರು ಬೆಳೆಯನ್ನು ತಿಂದು ಹೋಗುತ್ತಿವೆ. ಜೊತೆಗೆ ಇಡೀ ಕೃಷಿ ಜಮೀನಿನ ತುಂಬೆಲ್ಲಾ ಓಡಾಡಿ, ಬೆಳೆಯನ್ನು ಹಾಳು ಮಾಡುತ್ತಿವೆ. ಇದು ರೈತರಿಗೆ ಮತ್ತೆ ಸಂಕಷ್ಟವನ್ನು ತಂದಿದೆ ಅಂತಿದ್ದಾರೆ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಅಂದಪ್ಪ ಕೋಳೂರು.

ಗಾಯದ ಮೇಲೆ ಬರೆ ಎಳೆಯುತ್ತಿರುವ ಜಿಂಕೆಗಳು

ಈಗಾಗಲೇ ಕೃಷಿ ಸಂಪರ್ಕ ಕೇಂದ್ರದಿಂದ ಬೀಜ ತಂದು ಬಿತ್ತನೆ ಮಾಡಿದ್ದ ರೈತರಿಗೆ ಮತ್ತೆ ಬಿತ್ತನೆಗಾಗಿ ಬೀಜವನ್ನು ಕೃಷಿ ಇಲಾಖೆಯವರು ನೀಡ್ತಿಲ್ಲ. ಇನ್ನೊಂದೆಡೆ ಈಗಾಗಲೇ ಬಿತ್ತನೆ ಮಾಡಿರೋ ಬೆಳೆ ಜಿಂಕೆಗಳ ಪಾಲಾಗುತ್ತಿದೆ. ಹೀಗಾಗಿ ಜಿಂಕೆಗಳಿಂದ ತಮ ಫಸಲಿಗೆ ರಕ್ಷಣೆ ಬೇಕು ಅಂತ ರೈತರು ಆಗ್ರಹಿಸುತ್ತಿದ್ದಾರೆ. ಇನ್ನು ಗದಗ ಜಿಲ್ಲೆಯ ಕಪ್ಪತಗುಡ್ಡ, ಲಕ್ಕುಂಡಿ ಸೇರಿದಂತೆ ಅನೇಕ ಬಾಗದಲ್ಲಿ ಹೆಚ್ಚಾಗಿರುವ ಜಿಂಕೆಗಳು, ಆಹಾರವನ್ನು ಅರಿಸಿಕೊಂಡು ಯಲಬರ್ಗಾ, ಕುಕುನೂರು ತಾಲೂಕಿನ ಅನೇಕ ಗ್ರಾಮಗಳ ಕೃಷಿ ಜಮೀನಿಗೆ ಬರ್ತಿವೆ. ರೈತರು ಇಲ್ಲದೇ ಇರೋ ಜಮೀನಿನಲ್ಲಿರುವ ಬಹುತೇಕ ಬೆಳೆಯನ್ನು ತಿಂದು ಹೋಗ್ತಿವೆ.

ಇನ್ನು ಇಂತಹದೊಂದು ಸಮಸ್ಯೆ ಈ ವರ್ಷ ಮಾತ್ರ ಆಗಿರೋದು ಅಲ್ಲ. ಕಳೆದ ಕೆಲ ವರ್ಷಗಳಿಂದ ನಿರಂತರವಾಗಿ ಈ ಬಾಗದಲ್ಲಿ ಜಿಂಕೆಗಳ ಹಾವಳಿ ಹೆಚ್ಚಾಗಿದೆ. ಹೀಗಾಗಿ ಕೊಪ್ಪಳದಲ್ಲಾಗಲಿ, ಸುತ್ತಮುತ್ತಲಿನ ಜಿಲ್ಲೆಯಲ್ಲಾಗಲಿ, ಜಿಂಕೆ ಪಾರ್ಕ್ ನಿರ್ಮಾಣ ಮಾಡಬೇಕು. ಅವುಗಳು ಒಂದಡೆ ಇರಲು ವ್ಯವಸ್ಥೆ ಮಾಡಿ, ಅವುಗಳಿಗೆ ಆಹಾರ, ನೀರಿನ ವ್ಯವಸ್ಥೆ ಮಾಡಿದರೆ, ಅವು ಆಹಾರಕ್ಕಾಗಿ ರೈತರ ಜಮೀನಿಗೆ ಬರೋದಿಲ್ಲ ಅಂತ ರೈತರು ಆಗ್ರಹಿದ್ದಾರೆ. ಈ ಹಿಂದೆ ಕೂಡಾ ಈ ಬಗ್ಗೆ ಹತ್ತಾರು ಬಾರಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದಾರೆ. ಆದ್ರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ರೈತರು ಹೇಳುತ್ತಿದ್ದಾರೆ.

ಇದನ್ನೂ ಓದಿ: ಆಧಾರ್​​ಗಾಗಿ ಜನರ ಪರದಾಟ, ರಾಜ್ಯಾದ್ಯಂತ 116 ಆಧಾರ್ ಕೇಂದ್ರಗಳು ಬಂದ್

ಇನ್ನು ಕೊಪ್ಪಳ ಜಿಲ್ಲೆಯಲ್ಲಿ ಜಿಂಕೆ ಪಾರ್ಕ್ ಮಾಡಲು ರಾಜ್ಯ ಸರ್ಕಾರಕ್ಕೆ ಈ ಹಿಂದೆಯೇ ಅರಣ್ಯ ಇಲಾಖೆ ಪ್ರಸ್ತಾವವನ್ನು ಕಳುಹಿಸಿದೆ ಎನ್ನಲಾಹಿದೆ. ಆದರೆ ಇನ್ನು ರಾಜ್ಯ ಸರ್ಕಾರದಿಂದ ಜಿಂಕೆ ಪಾರ್ಕ್​​ಗೆ ಅನೂಮೋದನೆಯಾಗಿಲ್ಲ ಎನ್ನುತ್ತಿದ್ದಾರೆ ಅರಣ್ಯ ಇಲಾಖೆಯ ಅಧಿಕಾರಿಗಳು. ಆದರೆ, ಪ್ರತಿವರ್ಷ ಜಿಂಕೆಗಳ ಹಾವಳಿಯಿಂದ ರೈತರು ಬೆಳೆ ಕಳೆದುಕೊಳ್ಳುವ ಮೂಲಕ ಸಂಕಷ್ಟಕ್ಕೆ ತುತ್ತಾಗುತ್ತಿದ್ದಾರೆ. ಇನ್ನಾದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ರೈತರ ಸಮಸ್ಯೆ ಬಗೆಹರಿಸುವ ಕೆಲಸ ಮಾಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ