AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

25 ವರ್ಷಗಳ ಬಳಿಕ ಮೈದುಂಬಿ ಹರಿಯುತ್ತಿರುವ ದಕ್ಷಿಣ ಕಾಶಿ ಶಿವಗಂಗೆಯಲ್ಲಿ ಹುಟ್ಟುವ ಕುಮುದ್ವತಿ ನದಿ

ದಕ್ಷಿಣ ಕಾಶಿ ಶಿವಗಂಗೆಯಲ್ಲಿ ಹುಟ್ಟುವ ಆ ನದಿ ಸುಮಾರು 25 ವರ್ಷಗಳ ನಂತರ ಮೈದುಂಬಿ ಹರಿಯುತ್ತಿದೆ. ನದಿ ಹರಿಯುತ್ತಿರುವ ಹಿನ್ನೆಲೆ ರೈತರ ಮೊಗದಲ್ಲಿ ಸಂತಸ ಮನೆ ಮಾಡಿದ್ದು, ಹರ್ಷ ವ್ಯಕ್ತಪಡಿಸುತ್ತಿದ್ದಾರೆ.

25 ವರ್ಷಗಳ ಬಳಿಕ ಮೈದುಂಬಿ ಹರಿಯುತ್ತಿರುವ ದಕ್ಷಿಣ ಕಾಶಿ ಶಿವಗಂಗೆಯಲ್ಲಿ ಹುಟ್ಟುವ ಕುಮುದ್ವತಿ ನದಿ
Kumudvati River
TV9 Web
| Edited By: |

Updated on: Oct 27, 2022 | 6:46 PM

Share

ದುಮುಕ್ಕಿತ್ತಿರುವ ನದಿ ನೀರು. ಕಣ್ಣು ಹಾಸಿದಷ್ಟು ಉದ್ದ ಕಾಣುವವ ನದಿ. ತನ್ನ ಒಡದಲ್ಲಿ ಹರ್ಷದಿಂದ ಹರಿಯುವ ನೀರು, ಅಬ್ಬಬ್ಬಾ ಆ ದೃಶ್ಯಗಳನ್ನ ನೋಡೋಕೆ ನಯನ ಮನೋಹರವಾಗಿ ಕಾಣುತ್ತದೆ. ಇಂತಹ ವೈಭವ ದೂರದ ಪಶ್ಚಿಮ ಘಟ್ಟ, ಅಥವಾ ಜೀವನದಿಗಳ ಪ್ರದೇಶವನ್ನ, ಬೆಂಗಳೂರಿನ ಪಕ್ಕದ್ದಲ್ಲೇ ಇರುವ ನೆಲಮಂಗಲದಲ್ಲಿ ಹುಟ್ಟಿ ಹುರಿಯುತ್ತಿರುವ ನದಿ ಇದು.

ಹೌದು.. ದಕ್ಷಿಣ ಕಾಶಿ ಎಂದೆ ಪ್ರಖ್ಯಾತಿ ಪಡೆದಿರುವ ಶಿವಗಂಗೆ ಬೆಟ್ಟದಲ್ಲಿ ಕುಂಭಾವತಿಯಲ್ಲಿ ಹುಟ್ಟುವ ಕುಮುದ್ವತಿ ನದಿ ಸುಮಾರು 25 ವರ್ಷಗಳ‌ ನಂತರ ತುಂಬಿ ಹರಿಯುತ್ತಿದೆ. ನೆಲಮಂಗಲ ತಾಲೂಕಿನ ಹಲವು ಭಾಗಗಳಲ್ಲಿ ಹರಿಯುತ್ತದೆ. ಸೋಲದೇವನ ಹಳ್ಳಿಯ ಹಿನ್ನೀರಿನ ಕೆರೆಗೆ ಸೇರುತ್ತದೆ. ಅಲ್ಲದೇ ಈ ಹಿಂದೆ ಚೋಳ ರಾಜರು ಕಟ್ಟಿಸಿದ ಕೆರೆ ಇದಾಗಿದ್ದು ಕುಮುದ್ವತಿ ನದಿ ಹಾಗೂ ಅರ್ಕಾವತಿ ನದಿ ಸೇರುವ ಸಂಗಮ ಕ್ಷೇತ್ರವೆಂದು ಖ್ಯಾತಿ ಹೊಂದಿದೆ.

ಈಗಾಗಲೇ ಮಳೆ‌ಪ್ರಮಾಣ ಹೆಚ್ಚಾದ್ದರಿಂದ ಕೆರೆ ಕುಂಟೆ ತುಂಬಿ ಕೊಡಿ ಹರಿಯುತ್ತಿವೆ. ಶಿವಗಂಗೆಯಲ್ಲಿ ಉದ್ಭವಿಸಿ ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಅರ್ಕಾವತಿ ಸೇರುವ ಈ ನದಿ ಕಾವೇರಿ ನದಿಯ ಉಪನದಿಯಾಗಿದೆ‌‌. ಅಂದಿನ ಕಾಲದಲ್ಲಿ ಬೆಂಗಳೂರಿಗೆ ತಿಪ್ಪಗೊಂಡನಹಳ್ಳಿಯಿಂದ ಕುಡಿಯುವ ನೀರು ಸರಬರಾಜು ಆಗುತ್ತಿದ್ದ ವೇಳೆ ಕುಮುದ್ವತಿ ಸಹ ಹರಿಯುತ್ತಿತ್ತು. ಯಾವಾಗ ಕುಮುದ್ವತಿ ಹಾಗೂ ಅರ್ಕಾವತಿ ನದಿ ಒಡಲು ಬರಿದಾಯಿತೋ ಆಗ ಬೆಂಗಳೂರಿಗೆ ನೀರು ಸರಬರಾಜು ಸಹ ನಿಂತೋಯ್ತು.

ಅಷ್ಟೆ ಅಲ್ಲ ನೆಲಮಂಗಲ ಹಾಗೂ ಮಾಗಡಿ ಪ್ರದೇಶದಲ್ಲಿ ನದಿ ನೀರನ್ನ ಅವಲಂಬಿಸಿ ಅದೆಷ್ಟೋ ರೈತರು ಕೃಷಿ ಮಾಡುತ್ತಿದ್ದರು, ಆದ್ರೆ ನದಿ ನೀರು ಅವಲಂಬಿತ ಕೃಷಿ ಸಹ ನಿಂತು ಹೋಗಿತ್ತು. ಆದ್ರೆ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಕುಮುದ್ವತಿ ನದಿ ನೀರು ತುಂಬಿ ಹರಿಯುತ್ತಿದ್ದು ಇನ್ನೂ ಮೂರ್ನಾಲ್ಕು ವರ್ಷಗಳ ಕಾಲ ಕೃಷಿ ಚಟುವಟಿಕೆಗಳು ನಿರಾಯಾಸವಾಗಿ ಸಾಗಲಿವೆ ಎಂತಾರೆ ಸ್ಥಳೀಯರು.

ಸದ್ಯ ಬತ್ತಿ ಹೋಗಿದ್ದ ನದಿ ಒಡಲು ಅಧಿಕ ಮಳೆಯಿಂದ ತುಂಬಿ ಹರಿಯುತ್ತಿದ್ದು ಸ್ಥಳೀಯ ರೈತರಲ್ಲಿ ಸಂತಸ ಹೆಚ್ಚಳವಾಗಿದೆ.

ವರದಿ: ವಿನಾಯಕ್ ಗುರವ್ ಟಿವಿ9 ನೆಲಮಂಗಲ