Bengaluru Rurel News: ಕೆರೆಯಲ್ಲಿ ಈಜಲು ಹೋಗಿ ಮೂವರು ನೀರುಪಾಲು ಶಂಕೆ; ಓರ್ವನ ಶವ ಪತ್ತೆ
ಕೆರೆಯಲ್ಲಿ ಈಜಲು ಹೋಗಿ ಮೂವರು ನೀರುಪಾಲಾಗಿರುವ ಘಟನೆ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದ ಅಮಾನಿಕೆರೆಯಲ್ಲಿ ನಡೆದಿದೆ.
ಬೆಂಗಳೂರು ಗ್ರಾಮಾಂತರ: ಕೆರೆಯಲ್ಲಿ ಈಜಲು ಹೋಗಿ ಕೆರೆಯಲ್ಲಿ ಮೂವರು ಬಾಲಕರು ಸಾವನ್ನಪ್ಪಿರುವ ಘಟನೆ ದೇವನಹಳ್ಳಿ (Devanahalli) ತಾಲೂಕಿನ ವಿಜಯಪುರ (Vijaypura) ಪಟ್ಟಣದ ಅಮಾನಿಕೆರೆಯಲ್ಲಿ ನಡೆದಿದೆ. ಕಾರ್ತಿಕ್(16), ಧನುಷ್(15), ಗುರುಪ್ರಸಾದ್(6) ಮೃತ ಬಾಲಕರು. ಮೂವರು ನಿನ್ನೆ (ಜೂ.17) ಮಧ್ಯಾಹ್ನ ಶಾಲೆ ಮುಗಿಸಿ ಕೆರೆಯಲ್ಲಿ ಈಜಲು ತೆರಳಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಬಾಲಕರು ನಿನ್ನೆ ಮನೆಗೆ ಬಾರದ ಹಿನ್ನೆಲೆ ಇಡೀ ರಾತ್ರಿ ಬಾಲಕರಿಗಾಗಿ ಪೋಷಕರು ಹುಡುಕಾಟ ನಡೆಸಿದ್ದರು.
ಇಂದು (ಜೂ.18) ಬೆಳಿಗ್ಗೆ ಪೋಷಕರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದು, ಮೊದಲು ಕಾರ್ತಿಕ್ನ ಮೃತದೇಹ ಪತ್ತೆಯಾಗಿದೆ. ಇದೀಗ ಇನ್ನಿಬ್ಬರ ಮೃತದೇಹಗಳು ಕೂಡ ಪತ್ತೆಯಾಗಿವೆ. ಘಟನಾ ಸ್ಥಳದಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ನೀರಲ್ಲಿ ಮುಳುಗಿ ಯುವಕ ಸಾವು
ಚಿಕ್ಕಬಳ್ಳಾಪುರ: ಶ್ರೀನಿವಾಸಸಾಗರ ಜಲಾಶಯದಲ್ಲಿ ಮುಳುಗಿ ಯುವಕ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಶ್ರೀನಿವಾಸಸಾಗರ ಜಲಾಶಯದಲ್ಲಿ ನಡೆದಿದೆ. ಯುವಕ ಮಹಮ್ಮದ್ ಯಾಸೀನ್ ಮೃತ ದುರ್ದೈವಿ. ವಿಕೇಂಡ್ ಹಿನ್ನಲೆ ಸ್ನೇಹಿತರ ಜೊತೆ ಮಹಮ್ಮದ್ ಯಾಸೀನ್ ಪ್ರವಾಸಕ್ಕೆ ಬಂದಿದ್ದನು. ಈಜಾಡುತ್ತಿದ್ದಾಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
ಮಹಮ್ಮದ್ ಯಾಸೀನ್ ಬೆಂಗಳೂರಿನ ಶ್ಯಾಂಪುರ ನಿವಾಸಿಯಾಗಿದ್ದಾನೆ. ಯುವಕನನ್ನು ರಕ್ಷಿಸಿ ಆಸ್ಪತ್ರೆಗೆ ರವಾನಿಸಿದರೂ ಚಿಕೀತ್ಸೆ ಫಲಕಾರಿಯಾಗದೆ ಮಹಮ್ಮದ್ ಯಾಸೀನ್ ಸಾವನ್ನಪ್ಪಿದ್ದಾನೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿ ಪ್ರಕರಣ ನಡೆದಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:17 am, Sun, 18 June 23