ಬೆಂಗಳೂರು ಕಾಲ್ತುಳಿತ: ದುರಂತಕ್ಕೆ ಕಾರಣವೇನು? ಮತ್ತಷ್ಟು ಸ್ಫೋಟಕ ಅಂಶಗಳು ಬಯಲಿಗೆ
ಬೆಂಗಳೂರಿನ ಇತಿಹಾಸದಲ್ಲೇ ಕರಾಳ ಅಧ್ಯಾಯ. ಆರ್‌ಸಿಬಿ ಸಂಭ್ರಮಾಚರಣೆಯಿಂದಾಗಿ ಕಪ್ಪು ಚುಕ್ಕೆ. ಚಿನ್ನಸ್ವಾಮಿ ಸ್ಟೇಡಿಯಿಂ ಬಳಿ ಕಾಲ್ತುಳಿತಕ್ಕೆ 11ಮಂದಿ ಸಾವಿಗೆ ಕಾರಣವೇನು? ಹೊಣೆ ಯಾರು? ವೈಫಲ್ಯ ಯಾರದು ಹೀಗೆ ಹಲವು ಪ್ರಶ್ನೆಗಳು ದೊಡ್ಡ ಚರ್ಚೆಗೆ ಕಾರಣವಾಗಿದೆ.ಪೊಲೀಸರ ಮುನ್ನೆಚ್ಚರಿಕೆ ಧಿಕ್ಕರಿಸಿ ಕಾರ್ಯಕ್ರಮ ಆಯೋಜಿಸಿದ್ದಕ್ಕೆ ಇಷ್ಟೆಲ್ಲಾ ಅವಾಂತರ ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ. ಇದೀಗ ಪ್ರಾಥಮಿಕ ತನಿಖೆಯಲ್ಲಿ ಕಾಲ್ತುಳಿತದ ಘೋರ ಘಟನೆಗೆ ಕಾರಣ ಏನೆಂದು ಮತ್ತಷ್ಟು ಸ್ಫೋಟಕ ಅಂಶಗಳು ಬಯಲಾಗಿವೆ. ಇದ್ರ ಎಕ್ಸ್‌ಕ್ಲೂಸಿವ್ ಮಾಹಿತಿ ಟಿವಿ9ಗೆ ಲಭ್ಯವಾಗಿದೆ.

ಬೆಂಗಳೂರು, (ಜೂನ್ 10): ಒಂದೆಡೆ ಸಿಎಂ ಸಿದ್ದರಾಮಯ್ಯ (Siddaramaiah), ಡಿಸಿಎಂ ಡಿಕೆ ಶಿವಕುಮಾರ್ (DK Shivakumar)ದೆಹಲಿಗೆ ತೆರಳಿ ಬೆಂಗಳೂರು ಕಾಲ್ತುಳಿತದ ದುರಂತದ ಕುರಿತು ರಾಹುಲ್ ಗಾಂಧಿಗೆ (Rahul gandhi) ಮಾಹಿತಿ ನೀಡಿದ್ದರೆ, ಇತ್ತ ಇದೇ ಆರ್ ಸಿಬಿ ವಿಜಯೋತ್ಸವ ವೇಳೆ ಸಂಭವಿಸಿದ ಕಾಲ್ತುಳಿತ (RCB victory parade stampede case) ದುರಂತಕ್ಕೆ ಪ್ರಮುಖವಾಗಿ 3 ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿದೆ. ಮೊಟ್ಟ ಮೊದಲ ಕಾರಣ ಏನು ಎನ್ನುವುದು ಬಯಲಾಗಿದೆ. ಆರ್‌ಸಿಬಿ ಆಟಗಾರರಿಗೆ ಸನ್ಮಾನ ನಡೆಯುತ್ತಿದ್ದ ವೇಳೆ ವಿಧಾನಸೌಧ ಮುಂದೆ ಸಹಸ್ರಾರು ಸಂಖ್ಯೆಯಲ್ಲಿ ಜನ ಸೇರಿದ್ದರು. ಆದ್ರೆ ಈ ವೇಳೆ ಓರ್ವ ಶಾಸಕ ಮತ್ತು ನಿರೂಪಕರು ಮಾಡಿದ್ದ ಆ ಘೋಷಣೆ ಅನಾಹುತಕ್ಕೆ ಮೊದಲು ದಾರಿ ಮಾಡಿಕೊಟ್ಟಿದೆ ಎನ್ನಲಾಗಿದೆ. ಇಷ್ಟೇ ಅಲ್ಲದೇ ಘಟನೆಗೆ ಇನ್ನೆರೆಡು ಪ್ರಮುಖ ಕಾರಣಗಳು ಸಿಕ್ಕಿವೆ.
ಕಾಲ್ತುಳಿತಕ್ಕೆ ಘಟನೆಗೆ ಕಾರಣ ನಂ.1
ವಿಧಾನಸೌಧದಲ್ಲಿ ಸನ್ಮಾನ ಮಾತ್ರ, ಸ್ಟೇಡಿಯಂ ಕಡೆಗೆ ಹೋಗಿ ಅಂತಾ ಓರ್ವ ಶಾಸಕ, ನಿರೂಪಕರಿಂದ ಮೈಕ್ನನಲ್ಲಿ ಅನೌನ್ಸ್ ಮಾಡಿದ್ದರು. ಸ್ಟೇಡಿಯಂ ಕಡೆ ಹೋಗಿ ಅಂದಿದ್ರಿಂದ ನೂಕುನುಗ್ಗಲು ಉಂಟಾಗಿದೆ. ಸ್ಟೇಡಿಯಂ ಕಡೆಗೆ ಜನರು ಏಕಾಏಕಿ ನುಗ್ಗಲು ಕಾರಣವಾಗಿದೆ. ಈ ಲೋಪದ ಬಗ್ಗೆ ಪೊಲೀಸ್ ಅಧಿಕಾರಿಗಳ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಕಾಲ್ತುಳಿತ: ದುರಂತಕ್ಕೆ ಕಾರಣವಾಯ್ತಾ ವಿಧಾನಸೌಧದ ಬಳಿ ಮಾಡಿದ ಆ ಘೋಷಣೆ?
ಕಾಲ್ತುಳಿತ ಘಟನೆಗೆ ಕಾರಣ ನಂ.2
ಇನ್ನು ಕಾಲ್ತುಳಿತ ಘಟನೆಗೆ ಮತ್ತೊಂದು ಕಾರಣ ಏನು ಎನ್ನುವುದನ್ನು ನೋಡಿದರೆ, ಚಿನ್ನಸ್ವಾಮಿ ಸ್ಟೇಡಿಯಂ ಗೇಟ್ನನ್ನ ಓಪನ್ ಮಾಡದಂತೆ ಅಧಿಕಾರಿಯೊಬ್ರು ಸೂಚಿಸಿದ್ರು. ವಿಧಾನಸೌಧ ಕಾರ್ಯಕ್ರಮ ಮುಗಿಯೋವರೆಗೂ ಗೇಟ್ ತೆಗೆಯದಂತೆ, KSCA ಪದಾಧಿಕಾರಿಗಳಿಗೆ ಓರ್ವ ಅಧಿಕಾರಿ ಸೂಚನೆ ಕೊಟ್ಟಿದ್ರು. ಕರೆ ಮಾಡಿ IPS ಅಧಿಕಾರಿ ಓಪನ್ ಮಾಡದಂತೆ ಸೂಚಿಸಿದ್ರು. ಹೀಗಾಗಿ 3 ಗೇಟ್ ಮಾತ್ರ ಓಪನ್ ಮಾಡಿ 18 ಗೇಟ್ ಬಂದ್ ಮಾಡಲಾಗಿತ್ತು. ಮೂರು ಗೇಟ್ ಮಾತ್ರ ಓಪನ್ ಆಗಿದ್ರಿಂದ ನೂಕುನುಗ್ಗಲು. ಸ್ಟೇಡಿಯಂ ಬಳಿ ಬೆಳರಣಿಕೆಯಷ್ಟು ಪೊಲೀಸರ ನಿಯೋಜನೆ ಮಾಡಲಾಗಿತ್ತು. ವಿಧಾನಸೌಧದ ಬಳಿ ಹೆಚ್ಚಿನ ಪೊಲೀಸರ ನಿಯೋಜನೆ ಮಾಡಲಾಗಿತ್ತು.
ಕಾಲ್ತುಳಿತ ಘಟನೆಗೆ ಕಾರಣ ನಂ.3
ಕಾಲ್ತುಳಿತ ಘಟನೆಗೆ ಕಾರಣ ನಂಬರ್ 3 ಏನು ಎನ್ನುವುದು ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿದೆ. ಅದೇನು ಎಂದು ನೋಡೋದಾದ್ರೆ, ಐಎಎಸ್ VS ಐಪಿಎಸ್ ಅಧಿಕಾರಿಗಳ ನಡುವೆ ಮುಸುಕಿನ ಗುದ್ದಾಟವೂ ಕಾಲ್ತುಳಿತ ದುರಂತಕ್ಕೆ ಕಾರಣವಾಗಿರುವ ಮಾತುಗಳು ಕೇಳಿಬರ್ತಿವೆ. ಭದ್ರತೆ ಕಷ್ಟ ಇದೆ ಅಂದ್ರು ಹಠ ಮಾಡಿ ಇವೆಂಟ್ ಮಾಡಿದ್ರಾ ಐಎಎಸ್ ಅಧಿಕಾರಿ ಅನ್ನೋ ಪ್ರಶ್ನೆ ಎದ್ದಿದೆ. ತಮ್ಮನಿಗೆ ಕಾರ್ಯಕ್ರಮದ ಗುತ್ತಿಗೆ ನೀಡಲು ಹಠಕ್ಕೆ ಬಿದ್ದು ಇವೆಂಟ್ ಮಾಡಿದ್ರಾ ಎಂಬ ಆರೋಪ ಕೇಳಿಬಂದಿದೆ. ತಮ್ಮ ಲಾಭಕ್ಕಾಗಿ ಸಹೋದರನಿಗೆ ಐಎಎಸ್ ಅಧಿಕಾರಿ ಕಾರ್ಯಕ್ರಮ ಜವಾಬ್ದಾರಿ ವಹಿಸಿದ್ರಾ ಅನ್ನೋ ಪ್ರಶ್ನೆ ಎದ್ದಿದೆ.
ಇನ್ನು ಇಷ್ಟೆಲ್ಲಾ ಆದರೂ ಸರ್ಕಾರ ಐಎಪಿಎಸ್ ಅಧಿಕಾರಿಗಳನ್ನ ಮಾತ್ರ ಅಮಾನತ್ತು ಮಾಡಲಾಗಿದೆ. ಡಿಪಿಎಆರ್ ಕಾರ್ಯದರ್ಶಿ ಸತ್ಯವತಿ ಅವರದೂ ಇಲ್ಲಿ ಲೋಪ ಕಾಣುತ್ತಿದೆ. ಅವರ ಮೇಲೆ ಕ್ರಮವೇಕಿಲ್ಲ ಎಂದು ಚರ್ಚೆಯಾಗುತ್ತಿದೆ.
ಇನ್ನು ಭಾರತೀಯ ಪೊಲೀಸ್ ಒಕ್ಕೂಟದಿಂದ ಅಮಾನತು ವಾಪಸ್ ಪಡೆಯುವಂತೆ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆಯಲಾಗಿದೆ. ಕಾಲ್ತುಳಿತ ಘಟನೆ ಬೆನ್ನಲ್ಲೇ ಸರ್ಕಾರ ಎಚ್ಚೆತ್ತಿದ್ದು, ಇನ್ಮುಂದೆ ಸಾವಿರಾರು ಜನ ಸೇರುವ ಕಾರ್ಯಕ್ರಮಕ್ಕೆ ಆರೋಗ್ಯ ಇಲಾಖೆ ಅನುಮತಿ ಕಡ್ಡಾಯಗೊಳಿಸಿ ಗೈಡ್‌ಲೈನ್ಸ್ ಪ್ರಕಟಿಸಿದೆ.
ಈ ಮಧ್ಯೆ ಹೈಕೋರ್ಟ್‌ಗೆ ಇವತ್ತು ಸರ್ಕಾರ ವಸ್ತುಸ್ಥಿಯ ವರದಿ ನೀಡಲಿದ್ದು, ಘಟನೆಗೆ ಕಾರಣವೇನು? ಲೋಪ ಯಾರದ್ದು? ಏನೆಲ್ಲಾ ಕ್ರಮ ಕೈಗೊಳ್ಳಲಾಗಿತ್ತು ಇನ್ನಿತರ ವಿವರಗಳನ್ನು ಒದಗಿಸಲಿದ್ದು ಕುತೂಹಲ ಕೆರಳಿಸಿದೆ. ಇನ್ನೊಂದೆಡೆ ಚಿನ್ನಸ್ವಾಮಿ ಸ್ಟೇಡಿನಲ್ಲಿ ಅಕ್ಟೋಬರ್ 30 ರಿಂದ ನವೆಂಬರ್ 2 ರವರೆಗೆ ನಡೆಯಬೇಕಿದ್ದ ಮಹಿಳಾ ಏಕದಿನ ವಿಶ್ವಕಪ್ ಪಂದ್ಯಗಳನ್ನು ಸ್ಥಳಾಂತರ ಮಾಡಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.