AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಕಾಲ್ತುಳಿತ: ದುರಂತಕ್ಕೆ ಕಾರಣವಾಯ್ತಾ ವಿಧಾನಸೌಧದ ಬಳಿ ಮಾಡಿದ ಆ ಘೋಷಣೆ?

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಹೊರಭಾಗದಲ್ಲಿ ಸಂಭವಿಸಿದ್ದ ಕಾಲ್ತುಳಿತದಲ್ಲಿ 11 ಆರ್​ಸಿಬಿ ಅಭಿಮಾನಿಗಳು ಉಸಿರುಚೆಲ್ಲಿದರೆ, 50ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ದುರಂತ ಸದ್ಯ ರಾಷ್ಟ್ರಮಟ್ಟದಲ್ಲಿ ಭಾರೀ ಸಂಚಲನ ಮೂಡಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಹೊಸ ವಿಚಾರಗಳು ಹೊರಬರುತ್ತಿವೆ. ಇದೀಗ ವಿಧಾನಸೌಧದ ಬಳಿಯ ಲೋಪಗಳ ಬಗ್ಗೆ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೆಂಗಳೂರು ಕಾಲ್ತುಳಿತ: ದುರಂತಕ್ಕೆ ಕಾರಣವಾಯ್ತಾ ವಿಧಾನಸೌಧದ ಬಳಿ ಮಾಡಿದ ಆ ಘೋಷಣೆ?
ಕಾಲ್ತುಳಿತ ಪ್ರಕರಣ
Kiran HV
| Updated By: ಗಂಗಾಧರ​ ಬ. ಸಾಬೋಜಿ|

Updated on:Jun 10, 2025 | 1:21 PM

Share

ಬೆಂಗಳೂರು, ಜೂನ್​ 10: ಆರ್​ಸಿಬಿ (RCB) ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾಲ್ತುಳಿತದಲ್ಲಿ ಸತ್ತ 11 ಜನರ ಸಾವಿಗೆ ಸಂಬಂಧಿಸಿದಂತೆ ನಿತ್ಯ ಒಂದಿಲ್ಲೊಂದು ಹೊಸ ಹೊಸ ಮಾಹಿತಿಗಳು ಹೊರಗೆ ಬರುತ್ತಿವೆ. ಇದೀಗ ವಿಧಾನಸೌಧದ (Vidhana Soudha) ಬಳಿಯ ಕಾರ್ಯಕ್ರಮದ ಲೋಪಗಳ ಬಗ್ಗೆ ಪೊಲೀಸ್ ಅಧಿಕಾರಿಗಳ ಪ್ರಾಥಮಿಕ ತನಿಖೆಯ ಮೌಖಿಕ ಮಾಹಿತಿ ಸರ್ಕಾರಕ್ಕೆ ಶಾಕ್​ ನೀಡಿದೆ. ವಿಧಾನಸೌಧದ ಬಳಿ ಸನ್ಮಾನ ಮಾತ್ರ, ಸ್ಟೇಡಿಯಂ ಕಡೆಗೆ ಹೋಗಿ ಎಂದು ಮೈಕ್​ನಲ್ಲಿ ಅನೌನ್ಸ್‌ಮೆಂಟ್​ ಮಾಡಿರುವುದು ಕೂಡ ದುರಂತಕ್ಕೆ ಕಾರಣವೆಂಬ ಮಾಹಿತಿ ಹೊರಬಿದ್ದಿದೆ.

ವಿಧಾನಸೌಧದಲ್ಲಿ ಸನ್ಮಾನ ಮಾತ್ರ, ಸ್ಟೇಡಿಯಂ ಕಡೆ ಹೋಗಿ, ಅಲ್ಲಿ ಸೆಲೆಬ್ರೇಶನ್​​ ಎಂದು ಓರ್ವ ಶಾಸಕ ಮತ್ತು ನಿರೂಪಕರಿಂದ ಮೈಕ್​​ನಲ್ಲಿ ಅನೌನ್ಸ್‌ಮೆಂಟ್​ ಮಾಡಲಾಗಿದೆ. ಹೀಗಾಗಿ ವಿಧಾನಸೌಧದ ಕಡೆ ಇದ್ದವರು ಸ್ಟೇಡಿಯಂ ಕಡೆ ನುಗ್ಗಲು ಅದೂ ಕಾರಣ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರು ಕಾಲ್ತುಳಿತ: ಯಾವುದೇ ನಿರ್ದೇಶನ ನೀಡದೇ ಪಿಐಎಲ್​ ವಿಚಾರಣೆ ಜೂ 12ಕ್ಕೆ ಮುಂದೂಡಿದ ಹೈಕೋರ್ಟ್

ಇದನ್ನೂ ಓದಿ
Image
Stampede: ಸರ್ಕಾರದ ಅಮಾನತು ಪ್ರಶ್ನಿಸಿ ಸಿಎಟಿಗೆ ಐಪಿಎಸ್​ ಅಧಿಕಾರಿ ಅರ್ಜಿ
Image
ದಯಾನಂದ್ ಅಮಾನತು: ಭಾವನಾತ್ಮಕ ಆಕ್ರೋಶ ಪೊಲೀಸರ ನೈತಿಕ ಸ್ಥೈರ್ಯ ಹೆಚ್ಚಿಸದು
Image
ಎಡಿಜಿಪಿ ದರ್ಜೆ ಅಧಿಕಾರಿ ಸಸ್ಪೆಂಡ್, ಕರ್ನಾಟಕ ಪೊಲೀಸ್ ಇತಿಹಾಸದಲ್ಲೇ ಮೊದಲು
Image
ಬೆಂಗಳೂರು ಕಾಲ್ತುಳಿತ ಕೇಸ್ ಸಿಐಡಿಗೆ, ಬೆಂಗಳೂರು ಕಮಿಷನರ್ ಅಮಾನತು..!

ಐಪಿಎಸ್‌ ಅಧಿಕಾರಿ ಓರ್ವರು ಕರೆ ಮಾಡಿ ವಿಧಾನಸೌಧದ ಮುಂದಿನ ಕಾರ್ಯಕ್ರಮ ಮುಗಿಸುವವರೆಗೂ ಚಿನ್ನಸ್ವಾಮಿ ಸ್ಟೇಡಿಯಂನ ಗೇಟ್​ ಓಪನ್ ಮಾಡಬಾರದು ಅಂತ ಕೆಎಸ್​​ಸಿಎ ಪದಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಆ ಮೂಲಕ ಮುಖ್ಯಮಂತ್ರಿಯನ್ನು ಮೆಚ್ಚಿಸುವಗೋಸ್ಕರ ಈ ಸೂಚನೆ ನೀಡಿದರು ಅಂತ ಹೇಳಲಾಗುತ್ತಿದೆ.

ಇದನ್ನೂ ಓದಿ: ಬೆಂಗಳೂರು ಕಾಲ್ತುಳಿತ ಕರ್ನಾಟಕ ಇತಿಹಾಸದ ಕರಾಳ ಅಧ್ಯಾಯವೆಂದ ಬಿವೈ ವಿಜಯೇಂದ್ರ: ಸಿಎಂಗೆ ಬಹಿರಂಗ ಪತ್ರ

ಸೂಚನೆ ಹಿನ್ನಲೆ ಕೇವಲ ಮೂರು ಗೇಟು ಮಾತ್ರ ಓಪನ್ ಆಗಿತ್ತು. ಉಳಿದ 18 ಗೇಟ್​ಗಳು ಬಂದಾಗಿತ್ತು. ವಿಧಾನಸೌಧದ ಬಳಿ ಸಚಿವರು, ಶಾಸಕರು ಮತ್ತು ಐವಿಪಿಗಳು ಇದ್ದ ಕಾರಣ ಅತೀ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿತ್ತು. ಆದರೆ ಸ್ಟೇಡಿಯಂ ಬಳಿ ಬೆಳರಣಿಕೆಯಷ್ಟು ಪೊಲೀಸರ ನಿಯೋಜನೆ ಮಾಡಲಾಗಿತ್ತು ಎಂಬ ಅಂಶಗಳು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ರಾಜಧಾನಿಯಲ್ಲಿ ಸಾಲು ಸಾಲು ಪ್ರತಿಭಟನೆ

ಇನ್ನು ಆರ್​ಸಿಬಿ ವಿಜಯೋತ್ಸವದಲ್ಲಿ ಕಾಲ್ತುಳಿತವನ್ನು ಖಂಡಿಸಿ ರಾಜ್ಯದಲ್ಲಿ ಸಾಲು ಸಾಲು ಪ್ರತಿಭಟನೆಗಳು ಮಾಡಲಾಗುತ್ತಿದೆ. ಸರ್ಕಾರದ ಬೇಜವ್ದಾರಿ ಖಂಡಿಸಿ ಎಬಿವಿಪಿ ಸಂಘಟನೆಯಿಂದ ರಾಜ್ಯಾದ್ಯಂತ ಪ್ರತಿಭಟನೆ ಮಾಡಲಾಗುತ್ತಿದೆ. ಮತ್ತೊಂದೆಡೆ ದಕ್ಷ ಪೊಲೀಸ್ ಅಧಿಕಾರಿಗಳ ತಲೆದಂಡ ವಿರೋಧಿಸಿ ಅಂಬೇಡ್ಕರ್ ಸೇನೆಯಿಂದ ತಮಟೆ ಚಳುವಳಿ ಮಾಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 1:20 pm, Tue, 10 June 25