AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೋಂಸ್ಟೇನಲ್ಲಿ ಯುವತಿ ಶವಪತ್ತೆ: ನಂದಿಬೆಟ್ಟಕ್ಕೆ ಕರೆದೊಯ್ದು ಕೊಲೆ ಮಾಡಿದ್ನಾ ಅಲಿ?

ಬಹುತೇಕರಿಗೆ ನಂದಿಬೆಟ್ಟ ವಾರಾಂತ್ಯದ ಪ್ರವಾಸ ತಾಣವಾಗಿದೆ. ನಗರಜೀವನದ ಜಂಜಾಟದಿಂದ ದೂರವಾಗಿ ಪ್ರಕೃತಿಯ ಮಡಿಲಲ್ಲಿ ಕೆಲ ಕ್ಷಣ ಕಳೆಯುವ ತಾಣವಾಗಿ ಮಾರ್ಪಟ್ಟಿದೆ. ಇಲ್ಲಿಗೆ ಹೆಚ್ಚಾಗಿ ಪ್ರೇಮಿಗಳು ಆಗಮಿಸುತ್ತಾರೆ. ಹೀಗಾಗಿ ಒಂದು ರೀತಿ ಲವರ್ಸ್​​ ಹಾಟ್​ ಸ್ಪಾಟ್​​ ಎಂದು ಹೇಳಲಾಗುತ್ತಿರುವ ನಂದಿಬೆಟ್ಟದಲ್ಲಿ ಯುವತಿ ಅನುಮಾಸ್ಪದವಾಗಿ ಯುವತಿಯೋರ್ವಳ ಶವ ಪತ್ತೆಯಾಗಿದೆ.

ಹೋಂಸ್ಟೇನಲ್ಲಿ ಯುವತಿ ಶವಪತ್ತೆ: ನಂದಿಬೆಟ್ಟಕ್ಕೆ ಕರೆದೊಯ್ದು ಕೊಲೆ ಮಾಡಿದ್ನಾ ಅಲಿ?
Ali And Surabhi
ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ
| Edited By: |

Updated on:Jun 29, 2026 | 5:36 PM

Share

ಮುಖ್ಯಾಂಶಗಳು

  • ನಂದಿಗಿರಿಧಾಮ ಬಳಿಯ ಹೋಂ ಸ್ಟೇನಲ್ಲಿ ಯುವತಿ ಸುರಭಿ ಶವ ಪತ್ತೆ
  • ಪ್ರಿಯಕರ ಕೇರಳ ಮೂಲದ ಕೊಯಿಕೊಡ ನಿವಾಸಿ ಸಂಜೀತ್ ಪ್ರಜ್ಞಾಹೀನ
  • ಸಾಯಿ ಸುರಭಿ ಸಾವಿನ ಸುತ್ತ ಅನುಮಾನದ ಹುತ್ತ

ಚಿಕ್ಕಬಳ್ಳಾಪುರ, (ಜೂನ್ 29): ಚಿಕ್ಕಬಳ್ಳಾಪುರದ ನಂದಿಬೆಟ್ಟದ (Nandi Betta) ಹೋಮ್‌ಸ್ಟೇ ಒಂದರಲ್ಲಿ ಯುವತಿಯೋರ್ವಳ ಶವ ಪತ್ತೆಯಾಗಿದೆ. ಪ್ರೇಯಸಿ ಸುರಭಿಯನ್ನು ಕೊಲೆ ಮಾಡಿದ ಬಳಿಕ ಪ್ರಿಯಕರ ಸಂಜಿತ್ ಅಲಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ. ಸದ್ಯ ಅಲಿಯನ್ನು ಚಿಕಿತ್ಸೆಗಾಗಿ  ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಸುರಭಿ ಲವ್ ಜಿಹಾದ್ ಗೆ ಬಲಿಯಾಗಿದ್ದಾಳೆ ಎನ್ನವ ಆರೋಪ ಕೇಳಿಬಂದಿದ್ದು, ಇನ್ನು ಸುರಭಿ ಸಾವನ್ನಪ್ಪಿದ ಹೋಮ್ ಸ್ಟೇಗೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ನಡೆಸಿದ್ದಾರೆ. ಬೆಂಗಳೂರು ಮೂಲದ ಸಾಯಿ ಸುರಭಿ ಹಾಗೂ ಕೇರಳದ ಕೋಝಿಕ್ಕೋಡ್ ನಿವಾಸಿ, ಕ್ಯಾಬ್ ಡ್ರೈವರ್ ಸಂಜೀತ್ ಅಲಿ ಕಳೆದ ಶನಿವಾರ ಮುದ್ದೇನಹಳ್ಳಿ ಬಳಿಯ ಹೋಂ ಸ್ಟೇಗೆ ಬಂದು ತಂಗಿದ್ದರು. ಇಂದು (ಜೂನ್ 29) ಚೆಕ್-ಔಟ್ ಸಮಯ ಮುಗಿದರೂ ರೂಮ್ ಬಾಗಿಲು ತೆರೆಯದಿದ್ದಾಗ ಸಿಬ್ಬಂದಿ ಬಂದು ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಲವ್ ಜಿಹಾದ್ ಕೊಲೆ ಎಂದ ತಾಯಿ

ಯುವತಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅಲ್ಲದೆ ಸ್ಥಳದಲ್ಲಿ ಕೆಲವು ಮಾತ್ರೆಗಳು ಪತ್ತೆಯಾಗಿದ್ದು, ವಿಷ ಸೇವಿಸಿರುವ ಸಾಧ್ಯತೆಗಳೂ ದಟ್ಟವಾಗಿವೆ. ರೂಮ್‌ನಲ್ಲಿ ಒಂದು ಡೈರಿ ಸಿಕ್ಕಿದ್ದು, ಅದರಲ್ಲಿ ಹಲವು ವಿಚಾರಗಳನ್ನು ಬರೆಯಲಾಗಿದೆ. ಇದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇನ್ನು ಸುರಭಿ ಸಾವಿನ ಬೆನ್ನಲ್ಲೇ ತಾಯಿ ಗೀತಾ ಮಾಧ್ಯಮಗಳ ಎದುರು ಕಣ್ಣೀರು ಹಾಕಿದ್ದು, ಇದೊಂದು ಲವ್ ಜಿಹಾದ್ ಕೊಲೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಡ್ರಗ್ಸ್ ಅಡಿಕ್ಟ್ ಮಾಡಿ ಕಿರುಕುಳ ನೀಡುತ್ತಿದ್ದನು ಎಂದು ಆರೋಪಿಸಿದ್ದಾರೆ.

ಮೃತ ಯುವತಿ ಸುರಭಿ ತಾಯಿ ಟಿ.ಆರ್.ಗೀತಾ ಪ್ರತಿಕ್ರಿಯಿಸಿದ್ದು, ಕೇರಳ ಮೂಲದ ಸಂಜಿತ್​ ಅಲಿ ಕ್ಯಾಬ್ ಡ್ರೈವರ್ ಆಗಿದ್ದ. ನನ್ನ ಮಗಳು ದಯಾನಂದ ಸಾಗರ್ ಕಾಲೇಜಿನಲ್ಲಿ ಓದುತ್ತಿದ್ದಳು. ಸಾಯಿ ಸುರಭಿ ಸ್ನೇಹಿತರ ಮೂಲಕ ಸಂಜಿತ್ ಪರಿಚಯ ಆಗಿದ್ದು, ಪ್ರೀತಿಸುವುದಾಗಿ ನನ್ನ ಮಗಳಿಗೆ ಸಂಜಿತ್​ ಅಲಿ ಕಿರುಕುಳ ಕೊಡುತ್ತಿದ್ದ. ಈ ಬಗ್ಗೆ ಕುಮಾರಸ್ವಾಮಿ ಲೇಔಟ್​ ಠಾಣೆಯಲ್ಲಿ ದೂರು ಕೊಟ್ಟಿದ್ದೆ.ಬಳಿಕ ಬನಶಂಕರಿ ಪೊಲೀಸರಿಗೆ ದೂರು ನೀಡಿದ್ದೆ. ಬಳಿಕ ಪೊಲೀಸರು ಸಹಾಯ ಮಾಡಿ ಮಗಳನ್ನು ನನ್ನ ಜೊತೆ ಕಳುಹಿಸಿದ್ದರು. ಸಂಜಿತ್ ಅಲಿ ನನ್ನ ಮಗಳಿಗೆ ಡ್ರಗ್ಸ್ ಅಡಿಕ್ಟ್ ಮಾಡಿದ್ದ. ಎರಡ್ಮೂರು ಕಡೆ ಚಿಕಿತ್ಸೆ ಕೊಡಿಸಿದ್ದೆ, ಈಗ ಆಕೆ ಆರೋಗ್ಯವಾಗಿದ್ದರು. ಆದ್ರೆ, ಇದೀಗ ಸಂಜಿತ್ ಅಲಿಯೇ ನನ್ನ ಮಗಳನ್ನು ಕೊಲೆ ಮಾಡಿದ್ದಾನೆ. ಮುದ್ದೇನಹಳ್ಳಿಯಲ್ಲಿ ಪಿಜಿಯೋಥೇರಾಪಿಸ್ಟ್ ಆಗಿ ಕೆಲಸ ಮಾಡ್ತಿದ್ದಳು. ಶನಿವಾರ ಸತ್ಸಂಗ ಇದೆ ಅಲ್ಲಿ ಇರುವುದಾಗಿ ಹೇಳಿದ್ದಳು. ನನ್ನ ಮಗಳನ್ನು ಪದೆ ಪದೆ ಹುಡುಕಿಕೊಂಡು ಬಂದು ಮರಳು ಮಾಡ್ತಿದ್ದ. ಅವನ ಮೇಲೆ ಕೇಸ್ ಗಳು ಇವೆ ಎಂದು ಆರೋಪಿಸಿದ್ದಾರೆ.

ಸುರಭಿ ಸಾವಿನ ಬಗ್ಗೆ ಚಿಕ್ಕಬಳ್ಳಾಪುರ ಎಸ್ಪಿ ಹೇಳಿದ್ದಿಷ್ಟು

ಇನ್ನು ಈ ಬಗ್ಗೆ ಚಿಕ್ಕಬಳ್ಳಾಪುರ ಎಸ್ಪಿ ಕುಶಲ್ ಚೌಕ್ಸೆ ಪ್ರತಿಕ್ರಿಯಿಸಿದ್ದು, ಕೇರಳ ಮೂಲದ ಕೊಯಿಕೊಡ ನಿವಾಸಿ ಸಂಜೀತ್ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಸಾಯಿ ಸುರಭಿ ಸಾವಿನ ಬಗ್ಗೆ ಅನುಮಾನಗಳು ಇವೆ. ನೇಣು ಬಿಗಿದ ಸ್ಥಿತಿಯಲ್ಲಿ ಮೇಲ್ನೋಟಕ್ಕೆ ಸಾಯಿ ಸುರಭಿ ಶವ ಕಾಣಿಸಿದೆ. ನೇಣು ಹಾಕಿದ್ದ ಹಗ್ಗ ಕತ್ತರಿಸಲಾಗಿದೆ. ಕೊಲೆಯೊ ಆತ್ಮಹತ್ಯೆಯೊ ತನಿಖೆ ನಡೆಯುತ್ತಿದೆ. ಇಬ್ಬರು ಆತ್ಮಹತ್ಯೆಗೆ ಯತ್ನಿಸಿ ಸಾಯಿ ಸುರಭಿ ಸತ್ತಿದ್ದಾಳಾ ತನಿಖೆ ನಡೆಯುತ್ತಿದ್ದು, ಸಂಜೀತ್ ಗೆ ಪ್ರಜ್ಞೆ ಬಂದ ಮೇಲೆ ಸ್ಪಷ್ಟ ಮಾಹಿತಿ ಲಭ್ಯವಾಗುತ್ತದೆ. ಸಾಜಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪೋಟೊಗಳು ಇವರದೆ ಎನ್ನುವ ಮಾಹಿತಿ ಇದೆ. ಶನಿವಾರ ಹೋಮ್ ಸ್ಟೇ ನಲ್ಲಿ ತಂಗಿದ್ದರು. ಇಂದು ಕೇರ್ ಟೇಕರ್, ಚೆಕ್ ಹೌಟ್ ಗೆ ತಿಳಿಸಲು ಬಂದಾಗ ಪ್ರಕರಣ ಬಯಲಾಗಿದೆ. ನಂದಿಗಿರಿಧಾಮ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಳೆದ ಆರು ತಿಂಗಳ ಹಿಂದೆ ಕುಮಾರಸ್ವಾಮಿ ಲೇಯೊಟ್ ಠಾಣೆಯಲ್ಲಿ ಮಿಸ್ಸಿಂಗ್ ಪ್ರಕರಣ ಆಗಿತ್ತು ಎಂದು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:22 pm, Mon, 29 June 26

Follow Us