AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಮ್ಮ ಮೆಟ್ರೋ’ಗಾಗಿ 150 ವರ್ಷ ಪುರಾತನ ಆಂಜನೇಯ ದೇಗುಲ ನೆಲಸಮ

ಆಂಜನೇಯ ದೇವಸ್ಥಾನ ಉಳಿಸಿಕೊಳ್ಳಲು ಸ್ಥಳೀಯರು ಪ್ರಯತ್ನ ಪಟ್ಟಿದ್ದರು. ಭಕ್ತರು ಪ್ರತಿಭಟನೆ ನಡೆಸಿದ್ದರು. ಆದರೆ ಯಾವುದಕ್ಕೂ ಜಗ್ಗದೆ ನಮ್ಮ ಮೆಟ್ರೋ ಸಾಗಿದೆ. ಭಾರಿ ಪೊಲೀಸ್ ಭದ್ರತೆ ನಡುವೆ ದೇವಸ್ಥಾನ ತೆರವು ಕಾರ್ಯ ನಡೆದಿದೆ. ಸ್ಥಳಕ್ಕೆ ಭೇಟಿ ನೀಡಿದ್ದ ಖುಷಿ ಕುಮಾರ್ ಸ್ವಾಮೀಜಿ, ಬಿಎಮ್​ಆರ್​ಸಿಎಲ್ ನಡೆಯನ್ನು ಖಂಡಿಸಿದ್ದಾರೆ.

‘ನಮ್ಮ ಮೆಟ್ರೋ’ಗಾಗಿ 150 ವರ್ಷ ಪುರಾತನ ಆಂಜನೇಯ ದೇಗುಲ ನೆಲಸಮ
ದೇಗುಲ ತೆರವು ಕಾರ್ಯಾಚರಣೆ
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​| Edited By: |

Updated on:Jul 03, 2026 | 1:06 PM

Share

ಬೆಂಗಳೂರು: ನಮ್ಮ ಮೆಟ್ರೋ ಕಾಮಗಾರಿಗಾಗಿ ಅತ್ಯಂತ ಪುರಾತನವಾದ 150 ವರ್ಷ ಹಳೆಯ ಆಂಜನೇಯ ಸ್ವಾಮಿ ದೇವಸ್ಥಾನ ನೆಲಸಮವಾಗಿದೆ. ಗಾರೇಭಾವಿ ಪಾಳ್ಯ ಆಂಜನೇಯನ ಗುಡಿಯ ಮೇಲೆ ಜೆಸಿಬಿಗಳು ಘರ್ಜನೆ ಮಾಡಿವೆ. 2ನೇ ಹಂತದ ಆರ್.ವಿ ರಸ್ತೆ ಯಿಂದ ಬೊಮ್ಮಸಂದ್ರ ಮಾರ್ಗದ ಮೆಟ್ರೋ ಕಾಮಗಾರಿಗಾಗಿ ಭಾರಿ ವಿರೋಧದ ನಡುವೆ ದೇವಸ್ಥಾನ ತೆರವು ಮಾಡಲಾಗುತ್ತಿದೆ.

ಆಂಜನೇಯ ದೇವಸ್ಥಾನ ಉಳಿಸಿಕೊಳ್ಳಲು ಸ್ಥಳೀಯರು ಪ್ರಯತ್ನ ಪಟ್ಟಿದ್ದರು. ಭಕ್ತರು ಪ್ರತಿಭಟನೆ ನಡೆಸಿದ್ದರು. ಆದರೆ ಯಾವುದಕ್ಕೂ ಜಗ್ಗದೆ ನಮ್ಮ ಮೆಟ್ರೋ ಸಾಗಿದೆ. ಭಾರಿ ಪೊಲೀಸ್ ಭದ್ರತೆ ನಡುವೆ ದೇವಸ್ಥಾನ ತೆರವು ಕಾರ್ಯ ನಡೆದಿದೆ. ಸ್ಥಳಕ್ಕೆ ಭೇಟಿ ನೀಡಿದ್ದ ಖುಷಿ ಕುಮಾರ್ ಸ್ವಾಮೀಜಿ, ಬಿಎಮ್​ಆರ್​ಸಿಎಲ್ ನಡೆಯನ್ನು ಖಂಡಿಸಿದ್ದಾರೆ.

Published On - 2:12 pm, Mon, 27 January 20

Follow Us
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು