AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿ ವಿರುದ್ಧ ಅಪಪ್ರಚಾರ ಕೇಸ್: ಸಿಎಂ, ಡಿಸಿಎಂಗೆ ಜಾಮೀನು ನೀಡಿದ 42ನೇ ಎಸಿಎಂಎಂ ಕೋರ್ಟ್

ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ವಿರುದ್ಧ ಅಪಪ್ರಚಾರ ಮಾಡಿದ್ದಾರೆ ಎಂಬ ಕೇಸ್​ಗೆ ಸಂಬಂಧಿಸಿ ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ದೂರು ದ ಸಿಎಂ, ಡಿಸಿಎಂಗೆ ಜಾಮೀನು ನೀಡಿದ 42ನೇ ಎಸಿಎಂಎಂ ಕೋರ್ಟ್ ಜಾಮೀನು ಬಾಂಡ್​​ಗೆ ಸಹಿ ಹಾಕಿ ತೆರಳಿದ ಸಿಎಂ, ಡಿಸಿಎಂ

ಬಿಜೆಪಿ ವಿರುದ್ಧ ಅಪಪ್ರಚಾರ ಕೇಸ್: ಸಿಎಂ, ಡಿಸಿಎಂಗೆ ಜಾಮೀನು ನೀಡಿದ 42ನೇ ಎಸಿಎಂಎಂ ಕೋರ್ಟ್
ಡಿಕೆ ಶಿವಕುಮಾರ್, ಸಿದ್ದರಾಮಯ್ಯ
TV9 Web
| Edited By: ಆಯೇಷಾ ಬಾನು|

Updated on: Jun 01, 2024 | 12:26 PM

Share

ಬೆಂಗಳೂರು, ಜೂನ್.01: ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ವಿರುದ್ಧ ಅಪಪ್ರಚಾರ ಹಿನ್ನೆಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah), ಡಿಸಿಎಂ ಡಿ.ಕೆ.ಶಿವಕುಮಾರ್​​ಗೆ (DK Shivakumar) ಸಮನ್ಸ್ ನೀಡಲಾಗಿದೆ. ಸದ್ಯ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಈ ಪ್ರಕರಣದಲ್ಲಿ ಕೋರ್ಟ್ ಜಾಮೀನು ಮಂಜೂರು ಮಾಡಿದೆ. 42ನೇ ಎಸಿಎಂಎಂ ಜಡ್ಜ್ ಕೆ.ಎನ್.ಶಿವಕುಮಾರ್ ಅವರು ವಿಚಾರಣೆ ನಡೆಸಿದ್ದು ಸಿಎಂ, ಡಿಸಿಎಂ ಪರ ಎಎಜಿ ಎಸ್.ಎ.ಅಹಮದ್ ವಾದ ಮಂಡಿಸಿದರು ಹಾಗೂ ಬಿಜೆಪಿ ಪರ ವಕೀಲ ವಿನೋದ್ ಕುಮಾರ್ ಹಾಜರಾಗಿದ್ದರು.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ವಿಚಾರಣೆಗೆಂದು ಕೋರ್ಟ್​ಗೆ ಆಗಮಿಸಿದ್ದು ಕೋರ್ಟ್​​ನಲ್ಲಿ ಕೈಮುಗಿದು ಕೈ ಕಟ್ಟಿ ನಿಂತರು. ಈ ವೇಳೆ ಹಾಜರಿರುವವರು ಯಾರು ಎಂದು ಜಡ್ಜ್ ಕೇಳಿದ್ದು 2 ಮತ್ತು 3ನೇ ಆರೋಪಿ ಡಿಸಿಎಂ, ಸಿಎಂ ಹಾಜರಾಗಿದ್ದಾರೆ. ಆದರೆ ರಾಹುಲ್ ಗಾಂಧಿ ಮುಂದಿನ ವಿಚಾರಣೆಗೆ ಹಾಜರಾಗುತ್ತಾರೆ ಹಾಜರಾತಿಯಿಂದ ವಿನಾಯಿತಿ ಕೊಡಿ ಎಂದು ವಕೀಲ ಮನವಿ ಮಾಡಿದ್ದಾರೆ. ಇಂಡಿಯಾ ಒಕ್ಕೂಟದ ಮೀಟಿಂಗ್ ಇದೆ. ಹೀಗಾಗಿ ರಾಹುಲ್ ಗಾಂಧಿ ಹಾಜರಿಯಿಂದ ವಿನಾಯಿತಿ ಕೋರಿ ರಾಹುಲ್ ಗಾಂಧಿ ಪರ ನಿಶಿತ್ ಕುಮಾರ್ ಶೆಟ್ಟಿ ಮನವಿ ಮಾಡಿದ್ರು.

ಕೋರ್ಟ್ ಮುಂದೆ ಎಲ್ಲರೂ ಸಮಾನರು. ರಾಹುಲ್ ಗಾಂಧಿ ಇಂದು ಹಾಜರಾಗುವುದಾಗಿ ಹೇಳಿದ್ದರು. ಕೋರ್ಟ್​ಗೆ ಹಾಜರಾಗುವುದು ರಾಹುಲ್ ಗಾಂಧಿ ಕರ್ತವ್ಯ. ಚುನಾವಣೆ ನೆಪ ಹೇಳಿ ಗೈರು ಹಾಜರಾಗುವಂತಿಲ್ಲ ಎಂದು ಬಿಜೆಪಿ ಪರ ವಕೀಲ ವಿನೋದ್ ಕುಮಾರ್ ವಾದ ಮಾಡಿದ್ರು.

ಕೋರ್ಟ್ ಸಮನ್ಸ್ ನೀಡಿದಾಗ ಹಾಜರಾಗಬೇಕು. ಹಾಜರಾಗಿಲ್ಲದಿರುವುದರಿಂದ ವಿನಾಯಿತಿ ನೀಡಬಾರದು. ಮೊದಲ ಬಾರಿ ಗೈರು ಹಾಜರಾದಾಗ ವಿನಾಯಿತಿ ನೀಡಿದ್ದೀರಿ. ಇದು ಮೂರನೇ ಬಾರಿಗೆ ವಿನಾಯತಿ ಕೇಳುತ್ತಿದ್ದಾರೆ. ರಾಹುಲ್ ಗಾಂಧಿಗೆ ಬಂಧನದ ವಾರೆಂಟ್ ಹೊರಡಿಸಲು ವಿನೋದ್ ಕುಮಾರ್ ಮನವಿ ಮಾಡಿದ್ದಾರೆ.

ಈ ವೇಳೆ ವಾದ ಶುರು ಮಾಡಿದ ಅಹಮದ್, ಇತ್ತೀಚೆಗೆ ಸುಪ್ರೀಂ ಕೋರ್ಟ್ ಈ ಬಗ್ಗೆ ಆದೇಶ ನೀಡಿದೆ. ಹಾಜರಾತಿಯಿಂದ ವಿನಾಯಿತಿ ನೀಡಲು ಕೋರ್ಟ್ ಗೆ ಅಧಿಕಾರವಿದೆ. ಸಿಆರ್​ಪಿಸಿ ಸೆ.205 ಅಡಿ ವಿನಾಯಿತಿ ನೀಡಲು ಮನವಿ ಮಾಡಿದರು. ಎರಡನೇ ಬಾರಿಗೆ ವಿನಾಯಿತಿ ನೀಡಬಹುದೇ. ವಿನಾಯಿತಿ ನೀಡಲು ಕೋರ್ಟ್​​ಗೆ ಅಧಿಕಾರವಿದೆ. 4ನೇ ತಾರೀಖು ಮತ ಎಣಿಕೆ ಇರುವುದರಿಂದ ಬರಲಾಗುವುದಿಲ್ಲ. ಹಾಗಿದ್ದರೆ ಮೊದಲೇ ಬೇರೆ ದಿನಾಂಕ ತೆಗೆದುಕೊಳ್ಳಬೇಕಿತ್ತು. ಕೋರ್ಟ್​​ಗೆ ಬಂದು ಹೋಗಬಹುದಿತ್ತು. ಇದಕ್ಕೆ ಐದು ದಿನಗಳೇನು ಬೇಕಾಗಿಲ್ಲವಲ್ಲ ಎಂದು ಜಡ್ಜ್ ತಿಳಿಸಿದರು.

ಇದನ್ನೂ ಓದಿ: ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ: 2 ಅಧಿಕಾರಿಗಳು ಎಸ್​​ಐಟಿ ವಶಕ್ಕೆ 

ಈ ವೇಳೆ, ವಿನಾಯಿತಿ ಕೋರಿದ ಮೇಲೆ ಕೋರ್ಟ್ ಪರಿಗಣಿಸಬಹುದು. ಜೂ.7ರಂದು ರಾಹುಲ್ ಗಾಂಧಿ ಹಾಜರಾಗಲಿದ್ದಾರೆ ಎಂದು ಕಾಂಗ್ರೆಸ್ ಪರ ವಕೀಲ ಸಮಜಾಯಿಸಿ ನೀಡಿದರು. ಧ್ವನಿ ಏರಿಸಿದ ಬಿಜೆಪಿ ವಕೀಲ, ಎರಡ್ಮೂರು ಸಲ ವಿನಾಯಿತಿ ನೀಡಲು ಅವಕಾಶವಿಲ್ಲ. ಕೋರ್ಟ್​​ಗೆ ಹಾಜರಾಗಿ ಇನ್ನೂ ಜಾಮೀನು ಪಡೆದಿಲ್ಲ. ಮುಂದಿನ ಬಾರಿ ಇನ್ನೆಲ್ಲೋ ಸಭೆ ಇದೆ ಎಂದು ವಿನಾಯಿತಿ ಕೇಳಬಹುದು. ತಪ್ಪು ನಿಯಮ ಹೇಳಿ ವಿನಾಯತಿ ಕೇಳುತ್ತಿದ್ದಾರೆಂದು ವಾದ ಮಂಡಿಸಿದರು.

ಹಾಜರಾಗುವ ಮೊದಲು ಒಂದು ಬಾರಿಗೆ ವಿನಾಯತಿ ಕೇಳಬಹುದು. ಎರಡನೇ ಬಾರಿಗೆ ವಿನಾಯಿತಿ ನೀಡಬಹುದೇ ಎಂಬುದು ಪ್ರಶ್ನೆ ಎಂದು ಜಡ್ಜ್ ಕೇಳಿದರು.

ಜಾಮೀನು ಬಾಂಡ್​​ಗೆ ಸಹಿ ಹಾಕಿ ತೆರಳಿದ ಸಿಎಂ, ಡಿಸಿಎಂ

ಇನ್ನು ಸಿಎಂ, ಡಿಸಿಎಂ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು 42ನೇ ಎಸಿಎಂಎಂ ಕೋರ್ಟ್ ಜಾಮೀನು ನೀಡಿದೆ. ಹೀಗಾಗಿ ಜಾಮೀನು ಬಾಂಡ್​​ಗೆ ಸಹಿ ಹಾಕಿ ಸಿಎಂ, ಡಿಸಿಎಂ ತೆರಳಿದರು. ಮಧ್ಯಾಹ್ನ 3 ಗಂಟೆಗೆ ರಾಹುಲ್ ಗಾಂಧಿ ಬಗ್ಗೆ ಕೋರ್ಟ್ ಆದೇಶ ನೀಡಲಿದೆ. ವಿನಾಯಿತಿ ನೀಡಬೇಕೋ ಅಥವಾ ಅರೆಸ್ಟ್ ವಾರಂಟ್​​ ಜಾರಿ ಮಾಡಬೇಕೋ ಎಂಬ ಬಗ್ಗೆ ಆದೇಶ ನೀಡಲಿದೆ.

ರಾಹುಲ್ ಗಾಂಧಿ ಪರ ನಾಲ್ಕನೇ ವಕೀಲ ರಮೇಶ್ ಬಾಬು ವಾದ ಮಂಡಿಸಿದ್ದು ಈ ವಿವಾದದ ಬಗ್ಗೆ ನಿರ್ಧರಿಸಲು ಜೂ.7ಕ್ಕೆ ಮುಂದೂಡಿ ಎಂದು ಮನವಿ ಮಾಡಿದ್ರು. ಇಂದು ಏನಾದರೂ ಆದೇಶ ಮಾಡಬೇಕಲ್ಲ. 2ನೇ ಬಾರಿಗೆ ವಿನಾಯಿತಿ ನೀಡಬಹುದೇ ಎಂಬ ಪ್ರಶ್ನೆ ಇದೆ ಎಂದು ಜಡ್ಜ್ ಹೇಳಿದ್ದು ಜಾಮೀನು ರಹಿತ ವಾರಂಟ್ ನೀಡಬಾರದೆಂದು ‘ಸುಪ್ರೀಂ’ ತೀರ್ಪು ಉಲ್ಲೇಖಿಸಿ ವಕೀಲ ಬಿ.ಎನ್.ಜಗದೀಶ್ ವಾದ ಮಾಡಿದರು.

ಎರಡನೇ ಬಾರಿಗೆ ವಿನಾಯಿತಿ ನೀಡಿದ ಪ್ರಸಂಗಗಳಿವೆ. ಹೀಗಾಗಿ ವಿನಾಯಿತಿ ನೀಡುವಂತೆ ಎಎಜಿ S.A.ಅಹಮದ್ ವಾದ ಮಾಡಿದ್ದು ವಿಚಾರಣೆ ಜೂ.7ಕ್ಕೆ ಮುಂದೂಡಲು ಮನವಿ ಮಾಡಿದ್ದಾರೆ. ಉದ್ಭವಿಸಿರುವ ಪ್ರಶ್ನೆ ಪರಿಹಾರವಾಗದೇ ಜೂ.7ಕ್ಕೆ ಮುಂದೂಡಲಾಗಲ್ಲ ಎಂದು ಜಡ್ಜ್ ಸ್ಪಷ್ಟವಾಗಿ ಹೇಳಿ ವಿಚಾರಣೆ ಮಧ್ಯಾಹ್ನ 3 ಗಂಟೆಗೆ ಮುಂದೂಡಿದ್ದಾರೆ.

ಕೋರ್ಟ್​ ಬಳಿ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿಯವರು ನಮ್ಮ ವಿರುದ್ಧ ಖಾಸಗಿ ದೂರು ಸಲ್ಲಿಸಿದ್ರು. ಸಿವಿಲ್ ಸ್ವರೂಪದ ಪ್ರಕರಣ ಇದಾಗಿದೆ. ನಾವು ಕಾನೂನು ಪಾಲಕರು, ಹಾಗಾಗಿ ಕೋರ್ಟ್​ಗೆ ಹಾಜರಾಗಿದ್ದೇವೆ. ಜಾಮೀನು ಪಡೆದಿದ್ದೇವೆ. ನನ್ನ ಹಾಗೂ ರಾಹುಲ್ ಗಾಂಧಿ ಅವರ ವಿರುದ್ಧ ದೂರು ಇತ್ತು. ರಾಹುಲ್ ಗಾಂಧಿಯವರು ಕೋರ್ಟ್​ಗೆ ಹಾಜರಾಗುತ್ತಾರೆ ಎಂದರು.

ರಾಹುಲ್ ಗಾಂಧಿ ವಿಚಾರಣೆಗೆ ಹಾಜರಾಗದಿದ್ರೆ ವಾರಂಟ್ ಜಾರಿಯಾಗುತ್ತೆ

ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅರ್ಜಿದಾರರ ಪರ ವಕೀಲ ವಿನೋದ್, 2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ 40% ಕಮಿಷನ್ ಆರೋಪ ಮಾಡಿತ್ತು. ಕಾಂಗ್ರೆಸ್ ಮಾಡಿದ ಆರೋಪ ಆಧಾರ ರಹಿತವಾಗಿದ್ದು ಹೀಗಾಗಿ ನಾವು ಕೋರ್ಟ್​​ನಲ್ಲಿ ದೂರು ದಾಖಲು ಮಾಡಿದ್ದೆವು. ಈಗ ಕೋರ್ಟ್ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ರಾಹುಲ್ ಗಾಂಧಿಗೆ ಇಂದು ವಿಚಾರಣೆಗೆ ಹಾಜರಾಗಲು ಹೇಳಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿಚಾರಣೆಗೆ ಹಾಜರಾಗಲೇಬೇಕು. ರಾಹುಲ್ ಗಾಂಧಿ ವಿಚಾರಣೆಗೆ ಹಾಜರಾಗದಿದ್ರೆ ವಾರಂಟ್ ಜಾರಿಯಾಗುತ್ತೆ ಎಂದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Follow Us
TV9 Web
TV9 Web

TV9 Kannada

Read More